ವಾರ್ತಾ ಮಂಜರಿ
Trending Stories, Viral News, Gossips & Everything in Kannada

ನಿಮ್ಮ ಆಸ್ತಿಯ ಪಹಣಿ ಪತ್ರ ತಾತ, ಮುತ್ತಾತನ ಹೆಸರಲ್ಲಿ ಇದ್ರೆ ಸಿಹಿಸುದ್ದಿ…ಇಲ್ಲಿದೆ ಹೊಸ ನಿಯಮ

533
ಕಂದಾಯ ಇಲಾಖೆ ಶೀಘ್ರದಲ್ಲಿ ಆರಂಭಿಸಲಿರುವ ಸಹಾಯವಾಣಿಗೆ ಕರೆ ಮಾಡಿದ 72 ಗಂಟೆಯೊಳಗಾಗಿ ಪಿಂಚಣಿದಾರರಿಗೆ ಮಂಜೂರಾತಿ ಪತ್ರ ತಲುಪಿಸುವ ಯೋಜನೆ ಜಾರಿ ತರಲಾಗುವ ವ್ಯವಸ್ಥೆಯನ್ನು ನೀಡುವ ಯೋಜನೆಯನ್ನು ಕಂದಾಯ ಸಚಿವ ಆರ್‌. ಅಶೋಕ್‌ ಈ ಹಿಂದೆ ಮಾಧ್ಯಮಗೋಷ್ಠಿ ಒಂದರಲ್ಲಿ ತಿಳಿಸಿದ್ದರು.
ವಿವಿಧ ವರ್ಗಗಳಿಗೆ ನೀಡುವ ಮಾಸಾಶನ ಯೋಜನೆಗಳು ಸರಿಯಾಗಿ ತಲುಪುತ್ತಿಲ್ಲ, ವಿಳಂಬವಾಗುತ್ತಿದೆ ಎಂಬ ದೂರುಗಳು ಕೇಳಿ ಬರುತ್ತಿವೆ. ಈ ಹಿನ್ನೆಲೆಯಲ್ಲಿ ಮನೆ ಬಾಗಿಲಿಗೆ ಪಿಂಚಣಿ ಯೋಜನೆ ಮಂಜೂರಾತಿ ಪತ್ರ ನೀಡುವ ಯೋಜನೆ ಆರಂಭಿಸಲು ಉದ್ದೇಶಿಸಿದ್ದು, ಇದಕ್ಕಾಗಿ ಹೊಸ ಸಾಫ್ಟ್‌ವೇರ್‌ ರೂಪಿಸಲಾಗುತ್ತಿದೆ ಯಂತೆ. ರಾಜ್ಯದಲ್ಲಿ ಆರಂಭಿಸಿರುವ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ ದೊರಕಿದ ಹಿನ್ನೆಲೆಯಲ್ಲಿ ಮನೆ ಬಾಗಿಲಿಗೆ ರೈತರ ಆಯ್ದ ದಾಖಲೆಗಳನ್ನು ತಲುಪಿಸುವ ಕಾರ್ಯ ಮಾಡಲಾಗಿದೆ.
ಇತ್ತೀಚೆಗೆ ಕಂದಾಯ ದಾಖಲೆಗಳನ್ನು ರೈತರ  ಮನೆ ಬಾಗಿಲಿಗೆ ತಲುಪಿಸುವ ಯೋಜನೆಯಡಿ ಪಹಣಿ, ಜಾತಿ, ಆದಾಯ ಪ್ರಮಾಣ ಪತ್ರ ಹಾಗೂ ಅಟ್ಲಾಸ್‌ ದಾಖಲೆಗಳನ್ನು ನೀಡಲಾಗುತ್ತಿದ್ದು, ಸುಮರು 60 ಲಕ್ಷ ಕುಟುಂಬಗಳಿಗೆ ತಲುಪಿಸಿದೆ. 5 ವರ್ಷಕ್ಕೊಮ್ಮೆ ಈ ರೀತಿ ದಾಖಲೆ ನೀಡಬೇಕೆಂಬ ನಿಯಮದ ಅನ್ವಯ ಕೊಡಲಾಗಿದೆ. ಇದಕ್ಕೆ ಸುಮಾರು 15 ಕೋಟಿ ರೂ. ವೆಚ್ಚವಾಗಲಿದೆ. ಇದರಿಂದಾಗಿ ದಾಖಲೆಗಳನ್ನು ನೀಡುವುದರಿಂದ ಬಡವರು, ದಲಿತರಿಗೆ ತಮ್ಮ ಆಸ್ತಿಯ ವಿವರ ತಿಳಿದುಕೊಳ್ಳಲು ಸಾಧ್ಯವಾಗಿದೆ. ಪಹಣಿ ದಾಖಲೆಗಳ ಅವಧಿ ಮಾತ್ರ ಒಂದು ವರ್ಷವಾಗಿರುತ್ತದೆ. ಧಾರವಾಡ: ಪಹಣಿ ಸೇರಿದಂತೆ ತಮ್ಮ ಜಮೀನಿನ ಇತರೆ ದಾಖಲೆಗಳನ್ನು ಪಡೆದುಕೊಳ್ಳಲು ರೈತರು ನಿತ್ಯ ಪರದಾಡುತ್ತಿರುವುದು ಸಾಮಾನ್ಯವಾಗಿತ್ತು. ಈ ಬಗ್ಗೆ ಸಾಕಷ್ಟುದೂರುಗಳೂ ಸಹ ಇದ್ದವು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಜಾರಿಗೆ ತಂದ ಕಂದಾಯ ದಾಖಲೆ ಮನೆ ಬಾಗಿಲಿಗೆ ನೂತನ ಯೋಜನೆ ಜಿಲ್ಲೆಯಲ್ಲಿ ಯಶಸ್ವಿ ಕಂಡಿದೆ.
ತಾತ ಮುತ್ತಾತನ ಕಾಲದ ಜಮೀನಿಗೆ ಸಂಬಂಧಿಸಿ ಸಬ್ಸಿಡಿ ಸೇರಿದಂತೆ ಅನೇಕ ಸೌಲಭ್ಯ ಪಡೆಯಲು ಆ ಜಮೀನಿನವರು ಯಾವಗಲು ವಂಚಿತರಾಗುತ್ತಾರೆ ಅಂತವರನ್ನು ಗಮನವಿರಿಸಿ ಪಿತ್ರಾರ್ಜಿತ ಆಸ್ತಿಯನ್ನು ತಮ್ಮ ಹೆಸರಿಗೆ ವರ್ಗಾಯಿಸಲು ಹೊಸ ಯೋಜನೆಯೊಂದನ್ನು ಜಾರಿಗೆ ತರಲಾಗಿದೆ. ಪೌತಿ ಕಾತೆ ಯೋಜನೆಯ ಹೆಸರಾಗಿದೆ.ಕೃಷಿ ಜಮೀನಿನ ಮಾಲಿಕರು, ಅಕಾಲಿಕ ಮರಣಹೊಂದಿದ ನಂತರ ಅವರ ವಾರಸುದಾರರು ಜಮೀನನ್ನು ತಮ್ಮ ಹೆಸರಿಗೆ ಮಾಡಿಕೊಳ್ಳುವುದು ಸಹಜ. ಆದರೆ ಕೆಲವು ರೈತರು ಮುಂದೆ ಬದಲಾವಣೆ ಮಾಡಿಕೊಂಡರಾಯಿತು ಎಂದು ನಿರ್ಲಕ್ಷ ಮಾಡಿಬಿಡುತ್ತಾರೆ. ಇತ್ತೀಚೆಗೆ ದಿನಕ್ಕೊಂದು ಕಾನೂನುಗಳು ಬರುತ್ತಿರುವುದರಿಂದ ಜಮೀನಿನನ್ನು ಪೌತಿಖಾತೆಯಡಿ ಬದಲಾವಣೆ ಮಾಡಿಕೊಳ್ಳುವುದು ಅಗತ್ಯವಾಗಿದೆ.
ಪಿತ್ರಾರ್ಜಿತ ಆಸ್ತಿಯನ್ನು ವಾರಸುದಾರರು ತಮ್ಮ ಹೆಸರಿನಲ್ಲಿ ಬಹಳಷ್ಟು ರೈತರು ಬದಲಾವಣೆ ಮಾಡಿಕೊಂಡಿಲ್ಲ. ಹಿರಿಯರ ಮರಣ ಪ್ರಮಾಣ ಪತ್ರ ಇಲ್ಲದೆ ಜಮೀನಿನ ಖಾತೆ ವರ್ಗಾವಣೆ ಸಾಧ್ಯವಾಗುತ್ತಿಲ್ಲ. ಪೂರ್ವಿಕರ ಮರಣ ಪ್ರಮಾಣ ಪತ್ರಗಳನ್ನು ಕಾನೂನಾತ್ಮಕವಾಗಿ ಪಡೆಯಲು ಮಾಹಿತಿಯ ಕೊರತೆಯಿರುವುದರಿಂದ ಕೆಲವು ರೈತರು ತಮ್ಮ ಹೆಸರಿನಲ್ಲಿ ವರ್ಗಾವಣೆ ಮಾಡಿಕೊಂಡಿಲ್ಲ.  ನಿಯಮದ ಪ್ರಕಾರ ಗ್ರಾಮಗಳಲ್ಲಿ ವ್ಯಕ್ತಿ ಸತ್ತ 28 ದಿನಗಳೊಳಗೆ ಸಂಬಂಧಪಟ್ಟ ಗ್ರಾಮ ಲೆಕ್ಕಿಗರೇ ಮರಣ ಪ್ರಮಾಣ ಪತ್ರ ನೀಡಬೇಕು.  ಒಂದು ವರ್ಷದೊಳಗಿದ್ದರೆ ತಹಶೀಲ್ದಾರ ನೀಡಬಹುದು. ಒಂದು ವರ್ಷ ಮೇಲ್ಪಟ್ಟ ಪ್ರಕರಣಗಳಿದ್ದರೆ ಜೆಎಂಎಫ್ ನ್ಯಾಯಾಲಯದ ಮೂಲಕವೇ ದಾವೆ ಹೂಡಿ ಮರಣ ಪ್ರಮಾಣ ಪತ್ರ ಪಡೆದು ಪೌತಿ ಖಾತೆಗೆ ಅರ್ಜಿ ಸಲ್ಲಿಸಬೇಕು.
ಕೃಷಿ ಜಮೀನಿನ ಮಾಲಿಕರು ಮರಣಹೊಂದಿದ ನಂತರ ಪೌತಿ ಖಾತೆಯಡಿ ಜಮೀನಿ ವರ್ಗಾವಣೆ ಮಾಡಿಕೊಳ್ಳದಿದ್ದರೆ ಜಮೀನುಗಳ ಸ್ವಾಧೀನ ಹೊಂದಿದ್ದರೂ ಉಪಯೋಗವಿಲ್ಲದಂತಾಗುತ್ತದೆ. ಬ್ಯಾಂಕುಗಳಿಂದ ಸಾಲಸೌಲಭ್ಯ ಪಡೆಯುವುದಕ್ಕಾಗುವುದಿಲ್ಲ. ಪ್ರಕೃತಿ ವಿಕೋಪದಿಂದಾಗಿ ಬೆಳೆನಷ್ಟವಾದರೆ ಬೆಳೆವಿಮೆಯಾಗಲಿ ಅಥವಾ ಬೆಳೆನಷ್ಟ ಪರಿಹಾರ ಪಡೆಯುವುದಕ್ಕಾಗುವುದಿಲ್ಲ. ಖಾತೆ ಬದಲಾವಣೆ ಮಾಡದಿದ್ದರೆ ಮುಂದೆ ಹೊಸ ಹೊಸ ಕಾನೂನು ಬಂದು ಕಚೇರಿಗಳಿಗೆ ಹಲವಾರು ಸಲ ಅಲದಾಡುವ ಸಂದರ್ಭ ಬರಬಹುದು. ಜಮೀನಿನ ವಾರಸುದಾರ ಮರಣ ಹೊಂದಿದ ನಂತರ ಸರ್ಕಾರ ಸೂಚಿಸಿರುವ ಮೂಲಗಳ ಪ್ರಕಾರ ಮರಣಹೊಂದಿದ ಮಾಲಿಕನ ಪ್ರಮಾಣ ಪತ್ರ ಮತ್ತು ವಂಶವೃಕ್ಷ ಪಡೆದು ನಮೂನೆ-1 ರಲ್ಲಿ ಅರ್ಜಿ ದಾಖಲಿಸಬೇಕು.
ಒಂದುವೇಳೆ ವಂಶವೃಕ್ಷ ಲಭ್ಯವಿರದಿದ್ದರೆ ಅರ್ಜಿದಾರರು ಕುಟುಂಬದ ಮಾಹಿತಿಯನ್ನು ನ್ಯಾಯಾಲಯದಲ್ಲಿ ನೋಟರಿ ಮಾಡಿಸಬೇಕು. ಮರಣ ಹೊಂದಿದ ವ್ಯಕ್ತಿ ಸಾವನ್ನಪ್ಪಿ ಹಲವಾರು ವರ್ಷಗಳಾಗಿ ನೋಂದಣಿಯಾಗದಿದ್ದರೆ ಸಂಬಂಧಪಟ್ಟ ನ್ಯಾಯಾಲಯದಲ್ಲಿ ಮರಣದ ಕುರಿತು ಆದೇಶ ಪಡೆದು ತಹಶೀಲ್ದಾರ ಕಚೇರಿಯಲ್ಲಿ ಮರಣ ಪ್ರಮಾಣ ಪತ್ರ ಪಡೆದು ಅರ್ಜಿ ಸಲ್ಲಿಸಬೇಕು.
ಪೌತಿ ಖಾತೆ ಮಾಡಿಕೊಳ್ಳಲು ಅರ್ಜಿ ನಮೂನೆ-1 ರಾಜ್ಯದ ಎಲ್ಲಾ ನಾಡಕಚೇರಿಗಳಲ್ಲಿ ಸಿಗುತ್ತವೆ. ತಹಶೀಲ್ದಾರ ಕಚೇರಿಯ ಎದುರುಗಡೆಯಿರುವ ಝರಾಕ್ಸ್ ಅಂಗಡಿಗಳಲ್ಲಿಯೂ ಪೌತಿ ಖಾತೆ ಅರ್ಜಿ ನಮೂನೆ 1 ಸಿಗುತ್ತದೆ. ಅರ್ಜಿ ಪಡೆದು ಅದಕ್ಕೆ ಬೇಕಾದ ಅಗತ್ಯ ದಾಖಲೆಗಳನ್ನು ಸಂಗ್ರಹಿಸಿ ಪೌತಿಖಾತೆಗೆ ಅರ್ಜಿ ಸಲ್ಲಿಸಬೇಕು. ಈಬಗ್ಗೆ ವೀಡಿಯೋ ಮಾಹಿತಿಗೆ ಕೆಳಗಿನ ಲಿಂಕ್ ಬಳಸಿ.‌