ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಅಲ್ಲು ಅರ್ಜುನ್ ಪತ್ನಿ ಸ್ನೇಹಾಗೆ ಅಲ್ಲು ಅರ್ಜುನ್ ತಾಯಿ ವಿಧಿಸಿದ್ದ ಷರತ್ತು ವೈರಲ್

196
ತೆಲುಗು ಸೂಪರ್ ಸ್ಟಾರ್, ಟಾಲಿವುಡ್ ಸ್ಟೈಲಿಶ್ ಸ್ಟಾರ್, ದಕ್ಷಿಣ ಭಾರತದ ಖ್ಯಾತ ನಟರಲ್ಲಿ ಒಬ್ಬರಾದ ಅಲ್ಲು ಅರ್ಜುನ್ ಅವರಿಗೆ ಅಬಾಲವೃದ್ಧರವರೆಗೂ ಫ್ಯಾನ್ಸ್ ಫಾಲೋವರ್ಸ್ ಇದ್ದಾರೆ. ದಕ್ಷಿಣ ಭಾರತ ಚಿತ್ರರಂಗದ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಸ್ಟಾರ್ ಆಗಿರುವ ನಾಯಕ ನಟ ಎಂದರೆ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ರವರು. 1982 ರಲ್ಲಿ ಚೆನ್ನೈ ನಲ್ಲಿ ಜನಿಸಿದ ಅಲ್ಲು ಅರ್ಜುನ್ ಅವರಿಗೆ ಇದೀಗ 38 ವರ್ಷವಾದರೂ ಸಹ ಹದಿನೆಂಟು ವರುಷದ ಹುಡುಗನಂತೆ ಕುಣಿದು ಕುಪ್ಪಳಿಸುತ್ತಾರೆ.
ತೆಲುಗು ಸ್ಟೈಲಿಶ್​ ಸ್ಟಾರ್​ ಅಲ್ಲು ಅರ್ಜುನ್ ಹಾಗೂ ಪತ್ನಿ ಸ್ನೇಹಾ ರೆಡ್ಡಿ ದಾಂಪತ್ಯಕ್ಕೆ 11ರ ಸಂಭ್ರಮ ಪೂರೈಸಿದ್ದು ಈ ಹಿನ್ನೆಲೆಯಲ್ಲಿ ವಿವಾಹ ವಾರ್ಷಿಕೋತ್ಸವದ ಕೇಕ್‌ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು ಅದು ಸಿಕ್ಕಾಪಟ್ಟೆ ಫೇಮಸ್ ಕೂಡ ಆಗಿತ್ತು. ಈ ನಡುವೆ ಅವರಿಬ್ಬರ ಪರಿಚಯ ಮೊದಲು ಎಲ್ಲಿ ಆಗಿದೆ ಎಂಬ ಬಗ್ಗೆ ವದಂತಿ ಹರಿದಾಡಿದೆ. ಅಲ್ಲು ಅರ್ಜುನ್ ಮತ್ತು ಸ್ನೇಹಾ ರೆಡ್ಡಿ ಅವರು ಕಾಮನ್ ಫ್ರೆಂಡ್ಸ್ ಮೂಲಕ ಮದುವೆಯಲ್ಲಿ ಮೊದಲು ಭೇಟಿಯಾದರು. ಈ ಸಮಯದಲ್ಲಿ, ಇಬ್ಬರೂ ತಮ್ಮ ಫೋನ್‌ ನಂಬರ್‌ ವಿನಿಮಯ ಮಾಡಿಕೊಂಡರು ಮತ್ತು ಪರಸ್ಪರ ಅರ್ಥಮಾಡಿಕೊಂಡ ನಂತರ ಅಂತಿಮವಾಗಿ ಮದುವೆಯಾಗಲು ನಿರ್ಧರಿಸಿದರು.
ಸ್ನೇಹಾ ಆ ಸಮಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿ ಅಮೆರಿಕಾದಿಂದ ಭಾರತಕ್ಕೆ ಬಂದಿದ್ದರು. ಆಕೆಗೆ ಅಲ್ಲು ಬಗ್ಗೆ ಆಗಲೇ ತಿಳಿದಿತ್ತು. ಏಕೆಂದರೆ ಆ ಹೊತ್ತಿಗೆ ಅಲ್ಲು ದಕ್ಷಿಣ ಚಿತ್ರರಂಗದ ಪ್ರಸಿದ್ಧ ನಟನಾಗಿ ಹೊರಹೊಮ್ಮಿದ್ದರು.ಸ್ನೇಹಾ ರೆಡ್ಡಿ ಹೈದರಾಬಾದ್‌ನ ಖ್ಯಾತ ಉದ್ಯಮಿಯೊಬ್ಬರ ಪುತ್ರಿ. ಆರಂಭದಲ್ಲಿ, ಅಲ್ಲು ಅರ್ಜುನ್ ಕುಟುಂಬ ಸದಸ್ಯರು ಈ ಸಂಬಂಧವನ್ನು ಒಪ್ಪಲಿಲ್ಲ. ಆದರೆ, ಬಹಳ ಮನವೊಲಿಕೆಯ ನಂತರ ನಟನ ತಂದೆ ಸ್ನೇಹಾಳ ತಂದೆಗೆ ಮದುವೆಯ ಪ್ರಪೋಸ್‌ ಮುಂದಿಟ್ಟರು. ಆದರೆ ಸ್ನೇಹಾಳ ತಂದೆ ಯಾವುದೇ  ಕಾರಣಕ್ಕೂ ಈ ಸಂಬಂಧಕ್ಕೆ ಸಿದ್ಧರಿರಲಿಲ್ಲ. ಅಲ್ಲು ಅರ್ಜುನ್ ಜೊತೆಗೆ ಸ್ನೇಹಾ ರೆಡ್ಡಿ ಕೂಡ ತಮ್ಮ ತಂದೆಯ ಮನ ಒಲಿಸಲು ತುಂಬಾ ಪ್ರಯತ್ನಿಸಿದರು.
ಈ ಸಮಯದಲ್ಲಿ, ಇಬ್ಬರೂ ಬಹಳಷ್ಟು ಶ್ರಮ ಪಡಬೇಕಾಯಿತು. ಅಂತಿಮವಾಗಿ, ಅಲ್ಲು ಅರ್ಜುನ್ ಬಗ್ಗೆ ಸ್ನೇಹಾ ಅವರ ತಂದೆಯ ಆಲೋಚನೆ ಬದಲಾಯಿತು. ಅವಳ ಸರಳತೆಯಿಂದ ಪ್ರಭಾವಿತನಾದ ಅವರು ನಂತರ ಮದುವೆಗೆ ಒಪ್ಪಿದರು. ಮಾರ್ಚ್ 6, 2011 ರಂದು, ಇಬ್ಬರೂ ಹಿಂದೂ ಸಂಪ್ರದಾಯದಂತೆ ಹೈದರಾಬಾದ್‌ನಲ್ಲಿ 7 ಸುತ್ತುಗಳನ್ನು ತೆಗೆದುಕೊಂಡರು. ಮದುವೆಯಾದ ಮೂರು ವರ್ಷಗಳ ನಂತರ 3 ಏಪ್ರಿಲ್ 2014 ರಂದು ಅಲ್ಲು ಅರ್ಜುನ್ ತಂದೆಯಾದರು. ಅವರ ಮನೆಯಲ್ಲಿ ಮಗ ಅಲ್ಲು ಅಯಾನ್ ಜನಿಸಿದ ಎರಡು ವರ್ಷಗಳ ನಂತರ, ಅಂದರೆ 2016 ರಲ್ಲಿ, ಅವರ ಮಗಳು ಅಲ್ಲು ಅರ್ಹಾ ಅರ್ಜುನ್ ಅವರ ಎರಡನೇ ಮಗುವಾಗಿ ಮನೆಗೆ ಬಂದರು.
ಸದ್ಯ ಇದೀಗ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅವರ ಪತ್ನಿ ಸ್ನೇಹಾ ರೆಡ್ಡಿ ಅವರಿಗೆ ಭಾರೀ ಡಿಮ್ಯಾಂಡ್ ಇದೇ ಅಂತಾನೇ ಹೇಳಬಹುದು. ಹೌದು ಇನ್ಸ್ಟಾಗ್ರಾಮ್ನಲ್ಲಿ ಸ್ನೇಹಾ ಅಲ್ಲು ರೆಡ್ಡಿಗೆ 4 ಮಿಲಿಯನ್ ಫಾಲೋವರ್ಸ್ ಇದ್ದು ಸ್ನೇಹಾ ಚಿತ್ರರಂಗದ ಕೆಲಸದಲ್ಲಿ ಭಾಗಿಯಾದೇ ಇದ್ದರೂ ಕೂಡ ಅವರಿಗೆ ಇಷ್ಟು ದೊಡ್ಡಮಟ್ಟದ ಅಭಿಮಾನಿ ವರ್ಗವಿರುವುದು ವಿಶೇಷ. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಅವರು ಗಂಡ ಅಲ್ಲು ಅರ್ಜುನ್ ಮಕ್ಕಳಾದ ಅಯಾನ್ ಅರ್ಹಾ ಫೋಟೋಗಳನ್ನ ಆಗಾಗ ಹಂಚಿಕೊಳ್ಳುತ್ತಿರುತ್ತಾರೆ.  ಸ್ಟಾರ್ ನಟನ ಪತ್ನಿಯಾಗಿ ಸ್ನೇಹಾ ಸಾಕಷ್ಟು ಜನರನ್ನು ಸಂಪಾದನೆ ಮಾಡಿಕೊಂಡಿದ್ದಾರೆ.2020ರಲ್ಲಿ ಸ್ನೇಹಾ ಅವರ ಇನ್‌ಸ್ಟಾಗ್ರಾಮ್‌ನಲ್ಲಿ 1 ಮಿಲಿಯನ್ ಫಾಲೋವರ್ಸ್ ಇದ್ದರು. ಆದರೆ ಇದೀಗ ಕಡಿಮೆ ಸಮಯದಲ್ಲಿ 3 ಮಿಲಿಯನ್ ಮಂದಿ ಹೆಚ್ಚಾಗಿದ್ದು ಸಾರ್ವಜನಿಕ ಜೀವನದಿಂದ ಸ್ನೇಹಾ ದೂರವಿರುತ್ತಾರೆ, ಅಪರೂಪಕ್ಕೆ ಗಂಡನ ಸಿನಿಮಾ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಾರೆ ಇನ್ನು ಕುಟುಂಬದ ಎಲ್ಲ ಸಮಾರಂಭಗಳಲ್ಲಿಯೂ ಪತಿ ಜೊತೆ ತೆರಳುತ್ತಾರೆ.
ಸ್ನೇಹಾ ರೆಡ್ಡಿಯವರಿಗೆ ಅಲ್ಲು ಅರ್ಜುನ್ ತಾಯಿ ಒಂದು ಕಂಡೀಷನ್ ಹಾಕಿದ್ದರಂತೆ. ಆ ಶರತ್ತಿಗೆ ಸ್ನೇಹಾ ಒಪ್ಪಿಗೆ ಕೊಟ್ಟ ನಂತರ ಅಲ್ಲು ತಾಯಿ ಖುಷಿಯಿಂದ ಮದುವೆಗೆ ಒಪ್ಪಿದ್ದಾರೆ. ಅಂದಹಾಗೆ ಆ ಕಂಡೀಷನ್ ಏನು ಅಂದರೆ ಅಲ್ಲು ಅರ್ಜುನ್ ಅವರ ತಾಯಿ ಕೂಡ ಯೋಚಿಸಿ ಈ ಕಂಡೀಷನ್ ಹಾಕಿದ್ದಾರೆ ಎಂದು ಗೊತ್ತಾಗಿದೆ.
ಸ್ನೇಹಾ ತುಂಬಾ ಸುಂದರಿಯಾಗಿದ್ದು ಅದಕ್ಕೇ ಮದುವೆಯ ನಂತರ ಮಕ್ಕಳಾಗುವುದು ತಡವಾಗುತ್ತದೆ ಎಂದು ಹೆದರಿದ್ದರು. ಆದ ಕಾರಣ ಅಲ್ಲು ತಾಯಿ ಮದುವೆಯಾದ ಕೂಡಲೇ ಮಕ್ಕಳಾಗಲಿ ಎಂದು ತಮಾಷೆಯಾಗಿ ಹೇಳಿದ್ದು ಈ ಆದೇಶವನ್ನು ಪಾಲಿಸಿದ ಸ್ನೇಹ ಕೂಡ ತಕ್ಷಣ ಮಕ್ಕಳನ್ನು ಕೊಟ್ಟಿದ್ದಾರೆ. ಮೊದಲ ಮಗುವಿಗೆ ಜನ್ಮ ನೀಡಿ ಅತ್ತೆಯ ಕೈಗೆ ಕೊಟ್ಟಿದ್ದು ಇದು ನಿಜವೋ ಸುಳ್ಳೋ ಗೊತ್ತಿಲ್ಲ ಆದರೆ ಈಗ ಅಲ್ಲು ಅರ್ಜುನ್ ಅವರ ಕುಟುಂಬ ಬಹಳ ಸಂತೋಷವಾಗಿದೆ.