ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಜನಸಾಮಾನ್ಯರಿಗೆ ಆಘಾತ ಅಕ್ಕಿ ಬೆಲೆ ಗಗನಕ್ಕೆ, ನೋಡಿ ಇಂದಿನ ದರ.

58
ಇರಾನ್, ಇರಾಕ್ ಹಾಗೂ ಸೌದಿ ಅರೇಬಿಯಾದಂತಹ ರಾಷ್ಟ್ರಗಳಿಂದ ಹೆಚ್ಚುತ್ತಿರುವ ಬೇಡಿಕೆ ಹಾಗೂ ದೇಶಾದ್ಯಂತ ಅನೇಕ ರಾಜ್ಯಗಳಲ್ಲಿ ಭತ್ತದ ಬೆಳೆ ಇಳುವರಿಯಲ್ಲಿ ಇಳಿಕೆಯಾಗಿರುವ ಹಿನ್ನೆಲೆಯಲ್ಲಿ ಎಲ್ಲ ವಿಧದ ಅಕ್ಕಿಯ ಬೆಲೆಗಳಲ್ಲಿ ಏರಿಕೆಯಾಗುತ್ತಿದೆ. ಪ್ರಪಂಚದಾದ್ಯಂತ ನಡೆಯುತ್ತಿರುವ ಬೆಳವಣಿಗೆಗಳೊಂದಿಗೆ, ಭಾರತದಲ್ಲಿ ಸ್ವಲ್ಪ ಸಮಯದವರೆಗೆ ಕೆಲವು ರೀತಿಯ ವಸ್ತುಗಳ ಬೆಲೆಗಳು ಹೆಚ್ಚಾಗುತ್ತಿವೆ. ರಷ್ಯಾ-ಉಕ್ರೇನ್ ಯುದ್ಧದ ಪರಿಸ್ಥಿತಿಯಿಂದಾಗಿ ಇಂಧನ ಮತ್ತು ಗೋಧಿಯ ಬೆಲೆಗಳು ಮುಖ್ಯವಾಗಿ ಹೆಚ್ಚಾಗಿದೆ. ಈಗ ಅಕ್ಕಿ ಸರದಿ.ಸಾಮಾನ್ಯವಾಗಿ ಕೆ.ಜಿ.ಗೆ 1 ಅಥವಾ 2 ರೂ. ಏರಿಕೆಯಾಗುತ್ತಿದ್ದುದು, ಇದೇ ಮೊದಲ ಬಾರಿಗೆ ಕೇವಲ ಎರಡು ತಿಂಗಳಲ್ಲಿ ಕೆ.ಜಿ.ಗೆ 8-10 ರೂ.ವರೆಗೆ ಏರಿಕೆಯಾಗಿದೆ.
ಜುಲೈ ಕೊನೆ ವಾರದಲ್ಲಿ ಇದ್ದ ಅಕ್ಕಿ ದರಕ್ಕೂ, ಈಗಿನ ದರಕ್ಕೂ ಸಾಕಷ್ಟು ವ್ಯತ್ಯಾಸವಿದ್ದು, ಅಸಹಜ ರೀತಿಯಲ್ಲಿ ಬೆಲೆ ಏರಿಕೆಯಾಗಿದೆ.ಚೀನಾದ ನಂತರ ಭಾರತವು ಪ್ರಪಂಚದಲ್ಲಿ ಎರಡನೇ ಅತಿ ದೊಡ್ಡ ಅಕ್ಕಿ ಉತ್ಪಾದಕವಾಗಿದೆ. ವಿಶ್ವದ ಶೇಕಡ 40ರಷ್ಟು ಭತ್ತವನ್ನು ಇಲ್ಲಿಯೇ ಬೆಳೆಯಲಾಗುತ್ತದೆ. ಈ ವರ್ಷ, ಬೇಡಿಕೆಯ ಹೆಚ್ಚಳ ಮತ್ತು ಭತ್ತದ ಕೃಷಿಯಲ್ಲಿ ಇಳಿಕೆಯಿಂದಾಗಿ, ಅಕ್ಕಿ ಬೆಲೆಗಳು ಗಗನಕ್ಕೇರಿದೆ. ಸೆಪ್ಟೆಂಬರ್ 2 ರ ವೇಳೆಗೆ, ಭತ್ತದ ಕೃಷಿ ಪ್ರದೇಶವು 5.6 ರಷ್ಟು ಕುಸಿದು 383.99 ಲಕ್ಷ ಹೆಕ್ಟೇರ್‌ಗಳಿಗೆ ತಲುಪಿದೆ. ಕಳೆದ ವರ್ಷ 406.89 ಲಕ್ಷ ಹೆಕ್ಟೇರ್‌ನಲ್ಲಿ ಭತ್ತ ಬೆಳೆಯಲಾಗಿತ್ತು. ನೆರೆಯ ಬಾಂಗ್ಲಾದೇಶವು ಅಕ್ಕಿ ಮೇಲಿನ ಆಮದು ಸುಂಕವನ್ನು ಕಡಿತಗೊಳಿಸಿದ ನಂತರ ಭಾರತದಲ್ಲಿ ಅಕ್ಕಿ ಬೆಲೆಗಳು ಹೆಚ್ಚಿಸಿವೆ.
ನಮ್ಮ ದೇಶದಲ್ಲಿ ಒಂದು ವಾರದೊಳಗೆ ಅಕ್ಕಿ ಬೆಲೆ ಶೇ.5ರಷ್ಟು ಹೆಚ್ಚಾಗಿದೆ. ಅಕ್ಕಿ ರಫ್ತಿಗೆ ಪರಿಸ್ಥಿತಿಗಳು ಅನುಕೂಲಕರವಾಗಿರುವುದರಿಂದ, ಭಾರತದಲ್ಲಿ ಬೆಲೆಗಳು ಇದ್ದಕ್ಕಿದ್ದಂತೆ ಹೆಚ್ಚಾಗುತ್ತಿವೆ. ಇಟಿ ವರದಿಯ ಪ್ರಕಾರ, ನೆರೆಯ ಬಾಂಗ್ಲಾದೇಶವು ಅಕ್ಕಿ ಮೇಲಿನ ಆಮದು ಸುಂಕವನ್ನು 25 ಪ್ರತಿಶತದಿಂದ 15.25 ಪ್ರತಿಶತಕ್ಕೆ ಇಳಿಸಿದೆ. ಪರಿಣಾಮವಾಗಿ, ಕಳೆದ ವಾರದಲ್ಲಿ ಭಾರತದಲ್ಲಿ ಅಕ್ಕಿ ಬೆಲೆ ಸುಮಾರು 5 ಪ್ರತಿಶತದಷ್ಟು ಹೆಚ್ಚಾಗಿದೆ. ಆಮದು ಸುಂಕ ಕಡಿತವು ಬಾಂಗ್ಲಾದೇಶದಿಂದ ಅಕ್ಕಿಗೆ ಬೇಡಿಕೆಯನ್ನು ಹೆಚ್ಚಿಸುವ ನಿರೀಕ್ಷೆಯಿದೆ. ನವೆಂಬರ್‌ನಲ್ಲಿ ಭತ್ತದ ಹೊಸ ಬೆಳೆ ಬರಲಿದೆ. ಆದರೆ, ಅತಿವೃಷ್ಟಿಯಿಂದಾಗಿ ಈ ಬಾರಿ ನಿರೀಕ್ಷಿತ ಪ್ರಮಾಣದಲ್ಲಿ ಭತ್ತದ ಉತ್ಪಾದನೆಯಾಗುವುದು ಅನುಮಾನ. ಹೀಗಾಗಿ, ಮುಂದಿನ ದಿನಗಳಲ್ಲಿ ಬೆಲೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಗಳಿವೆ. ಬೆಲೆ ಏರಿಕೆಗೆ ಜಿಎಸ್‌ಟಿ ಹೊರೆಯೂ ಕಾರಣ ಎನ್ನುತ್ತಾರೆ ವರ್ತಕರು.
ಉತ್ತರ ಪ್ರದೇಶ, ಮಧ್ಯಪ್ರದೇಶ, ಕರ್ನಾಟಕ, ಪಶ್ಚಿಮ ಬಂಗಾಳ ಮತ್ತು ಬಿಹಾರದಿಂದ ಬಾಂಗ್ಲಾದೇಶಕ್ಕೆ ಅಕ್ಕಿ ರಫ್ತಾಗುತ್ತಿದೆ. ಬಾಂಗ್ಲಾದೇಶವು ಮುಖ್ಯವಾಗಿ ಸಾಂಬಾ ಮಸೂರಿ, ಸೋನಂ ಮತ್ತು ಕೋಲಂ ಅಕ್ಕಿಯನ್ನು ಆಮದು ಮಾಡಿಕೊಳ್ಳುತ್ತದೆ. ಕಳೆದ ವಾರದಲ್ಲಿ ಈ ರೀತಿಯ ಬೆಲೆಗಳು 3-4 ಪ್ರತಿಶತದಷ್ಟು ಹೆಚ್ಚಾಗಿದೆ ಎಂಬುದು ಗಮನಾರ್ಹ. ಪಶ್ಚಿಮ ಬಂಗಾಳ ರಾಜ್ಯವು ಬಾಂಗ್ಲಾದೇಶಕ್ಕೆ ಹತ್ತಿರದಲ್ಲಿದೆ. ಮಿನಿಕೇಟ್ ಅಕ್ಕಿಯನ್ನು ಹೆಚ್ಚಾಗಿ ಈ ರಾಜ್ಯದಿಂದ ರಫ್ತು ಮಾಡಲಾಗುತ್ತದೆ. ಬಾಂಗ್ಲಾದೇಶದಲ್ಲಿ ಹೆಚ್ಚಿದ ಬೇಡಿಕೆಯಿಂದಾಗಿ ಪಶ್ಚಿಮ ಬಂಗಾಳದಲ್ಲಿ ಮಿನಿಕಾಟ್ ಬೆಲೆಗಳು ಶೇಕಡಾ 5 ರಷ್ಟು ಏರಿಕೆಯಾಗಿದೆ. ಈ  ಬಗ್ಗೆ ರೈಸ್ ವಿಲ್ಲಾದ ಸಿಇಒ ಸೂರಜ್ ಅಗರ್ವಾಲ್ ಮಾತನಾಡಿದರು. ಬಾಂಗ್ಲಾದೇಶ ಸರ್ಕಾರವು ಅಕ್ಕಿ ಆಮದಿನ ಮೇಲಿನ ಸುಂಕವನ್ನು ಕಡಿತಗೊಳಿಸುವುದಾಗಿ ಘೋಷಿಸಿದ ನಂತರ ಭಾರತದಲ್ಲಿ ಬೆಲೆಗಳು ಹಠಾತ್ತಾಗಿ ಶೇಕಡಾ 4 ರಷ್ಟು ಏರಿಕೆಯಾಗಿದೆ ಎಂದು ಅವರು ಹೇಳಿದರು. ಬಾಂಗ್ಲಾದೇಶವು ಭಾರತದಿಂದ ಮತ್ತು ವಿಯೆಟ್ನಾಂನಿಂದ ಅಕ್ಕಿಯನ್ನು ಖರೀದಿಸುತ್ತದೆ ಎಂದು ಸೂರಜ್ ಉಲ್ಲೇಖಿಸಿದ್ದಾರೆ.