ಜೀಕನ್ನಡ (Zee Kannada) ವಾಹಿನಿಯ ಸರಿಗಮಪ(SA RI GA MA PA) ಸಿಂಗಿಂಗ್ ರಿಯಾಲಿಟಿ ಶೋನಿಂದ (Reality Show) ಅನೇಕ ಪ್ರತಿಭೆಗಳಿಗೆ ದೊಡ್ಡ ಅವಕಾಶ ಸಿಕ್ಕಿದೆ ಎನ್ನಬಹುದು. ಹಲವಾರು ಸೀಸನ್ಗಳ (Season) ಮೂಲಕ ಸಾಕಷ್ಟು ಗಾಯಕರ(Singers) ಬದುಕು ಬದಲಾಗಿದ್ದು ಈ ಕಾರ್ಯಕ್ರಮದಲ್ಲಿ ಸ್ಪರ್ಧಿಸಿ ಗಮನ ಸೆಳೆದ ನಂತರ ಸಿನಿಮಾದಲ್ಲೂ ಕೂಡ ಹಾಡುವ ಅವಕಾಶ ಪಡೆದು ಮಿಂಚಿದವರು ಹಲವರಿದ್ದಾರೆ ಎನ್ನಬಹುದು. ಈಗ ಸರಿಗಮಪ ಲಿಟ್ಲ್ ಚಾಂಪ್ಸ್ (SARIGAMAPA Little Champs) 19ನೇ ಸೀಸನ್ ನಡೆಯುತ್ತಿದ್ದು ಈ ಬಾರಿ ಕೂಡ ಅನೇಕ ಪ್ರತಿಭಾವಂತ ಮಕ್ಕಳು ವೇದಿಕೆ ಏರಿದ್ದಾರೆ.
ಹೌದು ಪ್ರತಿ ಸಂಚಿಕೆ (Episode) ಕೂಡ ರಂಜನೀಯವಾಗಿದ್ದು ಪುಟಾಣಿ ಗಾಯಕ-ಗಾಯಕಿಯರ ಕಂಠಸಿರಿಗೆ ಕಿರುತೆರೆ ವೀಕ್ಷಕರು ಫಿದಾ ಆಗುತ್ತಿದ್ದಾರೆ. ಆ ಪೈಕಿ ದಿಯಾ ಹೆಗಡೆ(Diya Hegde) ಹೆಚ್ಚು ಗಮನ ಸೆಳೆಯುತ್ತಿದ್ದು ತನ್ನದೇ ರೀತಿಯಲ್ಲಿ ಪದಗಳನ್ನು ಜೋಡಿಸಿ ಹಾಡುವ ಆಕೆಯ ಪ್ರತಿಭೆಗೆ ಜಡ್ಜ್ಗಳು ಕೂಡ ಚಪ್ಪಾಳೆ ತಟ್ಟಿದ್ದಾರೆ ಎನ್ನಬಹುದು. ಇನ್ನು ಪ್ರತಿ ವೀಕೆಂಡ್ನಲ್ಲಿ ಸರಿಗಮಪ ಲಿಟ್ಲ್ ಚಾಂಪ್ಸ್ ಕಾರ್ಯಕ್ರಮ ಪ್ರಸಾರ ಆಗುತ್ತಿದ್ದು ದಿಯಾ ಹೆಗಡೆ ಹೈಲೈಟ್ ಆಗಿದ್ದಾಳೆ. ಈ ಕಾರ್ಯಕ್ರಮವನ್ನು ನಡೆಸಿಕೊಡುತ್ತಿರುವ ನಿರೂಪಕಿ ಅನುಶ್ರೀ ಕುರಿತಾಗಿಯೇ ದಿಯಾ ಹಾಡು ಹೇಳಿದ್ದು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸೆನ್ಸೆಷನ್ ಮೂಡಿಸಿತ್ತು.
ಹೌದು ನಾನು ಮುದುಕಿಯಾದರೇನಂತೆ ನಾ ಇನ್ನೂ ಇರಾಕಿ.. ನನ್ನ ಮಗನ ಮಗನ ಮಗನ ಮದುವೆ ಮಾಡಾಕಿ ಹಾಡನ್ನು ದಿಯಾ ಹೆಗಡೆ ಹೇಳಿದ್ದು ಆದರೆ ಹಾಡಿಗೆ ತನ್ನದೇ ಶೈಲಿಯಲ್ಲಿ ಹೊಸ ಲಿರಿಕ್ಸ್ ಸೇರಿಸಿಕೊಂಡಿದ್ದು ತನಗೆ ಅನುಶ್ರೀ ಸೊಸೆಯಾಗಬೇಕು ಎಂದು ಆಕೆ ಹೇಳಿದ್ದು ಇದನ್ನು ಕೇಳಿ ಕಾರ್ಯಕ್ರಮದಲ್ಲಿದ್ದ ಎಲ್ಲರೂ ಅಚ್ಚರಿಯಿಂದ ನೋಡಿದ್ದಾರೆ. ಇನ್ನು ಸರಿಗಮಪ ವೇದಿಕೆಯಲ್ಲಿ ದೊಡ್ಮನೆ ವೈಭವ ನಡೆದಿದ್ದು ಕಾರ್ಯಕ್ರಮಕ್ಕೆ ನಟ ಶಿವರಾಜ್ ಕುಮಾರ್ (Shivajkumar) ಮುಖ್ಯ ಅಥಿತಿಯಾಗಿ ಬಂದಿದ್ದರು. ಈ ವೇಳೆ ದಿಯಾ ಹೆಗ್ಡೆ ಮತ್ತೊಮ್ಮೆ ಗಮನ ಸೆಳೆದಿದ್ದಳು.
ಅಚ್ಚು ಮೆಚ್ಚಿನ ಅಣ್ಣವೊಬ್ಬರು ಕನ್ನಡ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿದ್ದಾರೆ ಏನ್ ಸಡಗರ ಎಂದು ಹೇಳಿ ಗಮನ ಸೆಳೆದಿದ್ದಳು. ನಂತೆ ಅಪ್ಪು ಕುವೆಂಪು ಗಾಯಕಿ ಚಿತ್ರ ಹೇಗೆ ಪ್ರತಿ ವಾರ ಎಲ್ಲರ ಮೇಲೂ ಪದ ಕಟ್ಟಿ ಅವರ ಹೆಸರಿನ ಅರ್ಥ ಹೇಳಿ ಎಲ್ಲರ ಫೇವರೇಟ್ ಆಗಿದ್ದಾಳೆ. ಇನ್ನು ಈ ಪುಟಾಣಿಯದ್ದು ಒಂದು ಯೂಟ್ಯೂಬ್ ಚಾನಲ್ ಕೂಡ ಇದ್ದು ಇಲ್ಲಿ ವಿಶೇಷ ವಿಡಿಯೋಗಳನ್ನು ಹಾಕುತ್ತಲೇ ಇರುತ್ತಳೆ. ಸದ್ಯ ಇದೀಗ ದಿಯಾ ಒಂದು ಪುಟಾಣಿ ಕಥೆ ಹೇಳಿದ್ದು ಅದು ಯಾವುದು ಅಂತೀರ? ಕೆಳಗಿನ ವಿಡಿಯೋ ನೋಡಿ.