ನಾಯಿ ಹಾಗು ಪ್ರತಿ ಬಾರಿ ಅರಣ್ಯಕ್ಕೆ ಹೋದಾಗಲೂ ನಮಗೆ ಹೊಸ ಹೊಸ ಅನುಭವ ಆಗುವುದು ಸರ್ವೇ ಸಾಮಾನ್ಯ. ಅನಿರೀಕ್ಷಿತವಾದ, ಊಹಿಸಲೂ ಸಾಧ್ಯವಾಗದ ಎಷ್ಟೋ ಪ್ರಸಂಗಗಳು ನಡೆಯುತ್ತವೆ. ಕಾಡಿನಲ್ಲಿ ನಡೆಯುವ ಪ್ರಾಣಿಗಳ ಕಾದಟವಂತು ಮುಖದಲ್ಲಿ ಬೆವರಿಳಿಸುವುದಂತು ಸತ್ಯ. ಕಾನನದಲ್ಲಿ ಹುಲಿರಾಯನು ಮೋಡಗಳಂತೆ ಚಲಿಸಿದರೆ, ಬೆಕ್ಕಿನ ಜಾತಿಗೆ ಸೇರಿಸ ಚಿರತೆಗಳು ಮಂಜಿನಂತೆ ಸಾಗುತ್ತವೆ.
ಇನ್ನು ಚಿರತೆಗಳು ಅತ್ಯಂತ ಗುಪ್ತಚರ ಜೀವಿಗಳಾಗಿದ್ದು, ಅವುಗಳ ಮೈ ಬಣ್ಣ ಚಿನ್ನ ಹಾಗು ಹೂವಿನ ಆಕಾರದಲ್ಲಿ ಕಪ್ಪು ಚುಕ್ಕೆಗಳನ್ನು ಹೊಂದಿರುತ್ತದೆ. ಈ ಪ್ರಾಣಿಯ ಮುಖ್ಯ ಗುಣವೇನೆಂದೆರೆ ಇವುಗಳಯ ಯಾವ ಪರಿಸರಕ್ಕೂ ಹೊಂದಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ.
ಕೊರೆತುವ ಚಳಿ ಪ್ರದೇಶದಿಂದ ಹಿಡಿದು ಸುಡುವ ಬಿಸಿಲಿನ ಪ್ರದೇಶದವರೆಗೂ ಎಲ್ಲ ಜಾಗಗಳಲ್ಲಿ ಚಿರತೆಗಳು ಬದುಕಬಲ್ಲವು. ಎಲ್ಲದಿಕ್ಕಿಂತ ಹೆಚ್ಚಾಗಿ ಸುಮಾರು 10 ದಿನದವರೆಗೂ ಕೂಡ ನೀರಿಲ್ಲದೆ ಬದುಕುವ ತಾಕತ್ತು ಈ ಪ್ರಾಣಿಗಿದೆ. ಸಾಮಾನ್ಯವಾಗಿ ಈ ಚಿರತೆ ಎಂಬ ಪ್ರಾಣಿ ಒಂಟಿ ಜೀವಿ.
ಇದರ ಚೆಟುವಟಿಕೆ ಇರುಳಿನ ಸಮಯದಲ್ಲಿ ಹೆಚ್ಚಾಗಿದ್ದು, ಸರಾಗವಾಗಿ ಮರಗಳನ್ನು ಹತ್ತ ಬಲ್ಲವು. ಗಂಟೆಗೆ 58 ಕಿಲೋಮೀಟರ್ ವೇಗವಾಗಿ ಓಡು ಈ ಚಿರತೆಯಂತಹ ನಿಗೂಢ ಪ್ರಾಣಿ ಬೇರೆ ಇಲ್ಲವೆಂದೇ ಹೇಳಬಗುದು. ಹುಲಿಯ ಹಾವ ಭಾವಗಳನ್ನು ಊಹಿಸಬಹುದು, ಆದರೆ ಚಿರತೆಯ ಹಾವಭಾವಗಳನ್ನು ಊಹಿಸುವುದು ಅಸಾಧ್ಯ. ಸದ್ಯ ಈಗ ಚಿರತೆ ಹಾಗು ನಾಯಿ ನಡುವೆ ನಡೆದ ಕಾಳಗ ನೋಡಿ.