ಸಾಮಾನ್ಯವಾಗಿ ಮೊಂದಲಿಂದಲೂ ಕೂಡ ಆನೆಗಳ(Elephants) ಮೇಲೆ ನಮ್ಮ ದೇಶದಲ್ಲಿ (Country) ವಿಶೇಷವಾದ ಪೂಜನೀಯ (Venerable) ಸ್ಥಾನವನ್ನು ಹೊಂದಿದ್ದೇವೆ. ನಮ್ಮ ಹಿಂದು ಧರ್ಮದ (Hinduism) ಹಲವಾರು ದೇವಾಲಯಗಳಲ್ಲಿ (Temples) ಆನೆಯನ್ನು ಕಾಣ ಬಹುದು. ಆನೆ ಕಂಡರೆ ಮಕ್ಕಳಿಂದ (children’s) ಹಿಡಿದು ವಯ್ಯಸ್ಸಾದವರೆಗೂ ಬಹಳ ಪ್ರಿಯವಾದ ಪ್ರಾಣಿ(Animal).
ಯಾಕೆಂದರೆ ಇದು ಯಾರಿಗೂ ಕೂಡ ಮಾಡದ ಸಾದು ಪ್ರಾಣಿಯಾಗಿದೆ. ಆನೆಗಳು ಬಹಳ ಬೃಹತ್ ಆಕಾರದ ದೇಹವನ್ನು ಹೊಂದಿದ್ದು ತಲೆ (Head) ಸಾಕಷ್ಟು ದೊಡ್ಡದಾಗಿದೆ ದಪ್ಪ ಮತ್ತು ಶಕ್ತಿಯುತ ಕಾಲುಗಳು (Legs) ಹಾಗೂ ಕಿವಿಗಳು(Ears) ಪ್ರಭಾವಶಾಲಿ ಗಾತ್ರಗಳನ್ನು ತಲುಪುತ್ತವೆ. ಆದರೆ ಇದರ ಕಣ್ಣುಗಳು(Eyes) ಮಾತ್ರ ಇದಕ್ಕೆ ವಿರುದ್ಧವಾಗಿದ್ದು ಬಹಳ ಸಣ್ಣದಾಗಿರುತ್ತವೆ.
ಇನ್ನೂ ಈ ಆನೆಗೂ ನಮ್ಮ ಪರಂಪರೆಗೂ ಮುಗಿಯದ ನಂಟು ಅಂತಾನೇ ಹೇಳಬಹುದು. ಹೌದು ಹಿಂದಿನ ಕಾಲದಲ್ಲಿ ರಾಜ(Kings) ಮಹರಾಜರು ಯುದ್ದ ಮಾಡಲು ಈ ಆನೆಯನ್ನು ಬಳಸುತ್ತಿದ್ದರು. ಇನ್ನು ಅರಣ್ಯಗಳಲ್ಲಿಯೂ(Forests) ಕೂಡ ಮರದ ದಿಮ್ಮಿಗಳ ಸಾಗಣೆಯಲ್ಲಿ ಆನೆಗಳನ್ನು ವ್ಯಾಪಕವಾಗಿ ಬಳಸುತ್ತಾರೆ.ವಿಶ್ವ ವಿಖ್ಯಾತ ದಸರಾ ಮೆರವಣಿಗೆಯಲ್ಲಿ ಜಂಬೂ ಸವಾರಿ ನೋಡಲು ದೇಶ ವಿದೇಶಗಳಿಂದ ಪ್ರವಾಸಿಗರು ಮೈಸೂರಿಗೆ (Mysore) ಬರುತ್ತಾರೆ.ಹಾಗೆಯೇ ತ್ರಿಚೂರಿನ ಪೂರಂ ಉತ್ಸವದಲ್ಲಿ ಆನೆಗಳ ಮೇಳವೇ ನಡೆಯುತ್ತದೆ.
ಕಳೆದ ಮೂರು ತಲೆಮಾರುಗಳಿಂದ ಆನೆಯ ಸಂತತಿಯು ಶೇಕಡ 50 ಕ್ಕಿಂತ ಹೆಚ್ಚು ಅಳಿದು ಹೋಗಿದ್ದು, ಸುಮಾರು 60-75 ವರ್ಷಗಳಿಂದ ಆನೆಗಳನಸಂಖ್ಯೆ ಗಣನೀಯವಾಗಿ ಇಳಿಮುಖವಾಗಿದೆ. ಆನೆಗಳು ಮೂಲತಃ ನೆಲೆವಾಸದ ವಿನಾಶ ಅರಣ್ಯ ನಾಶ ಮತ್ತು ಅರಣ್ಯಗಳ ತುಂಡು ತುಂಡಾಗಿ ವಿಭಜನೆ ಆಗಿರುವುದರಿಂದ ಅಪಾಯಕ್ಕೀಡಾಗಿದೆ. ಆನೆಗಳ ಸಂಚಾರ ಮಾರ್ಗಕ್ಕೆ ಅಡಚಣೆಯ ಕಾರಣದಿಂದಾಗಿ ಅವುಗಳ ಓಡಾಟಕ್ಕೆ ತೊಂದರೆ ಆಗಿ ಮನುಷ್ಯ ಮತ್ತು ಆನೆಯ ಸಂಘರ್ಷ ಪದೇ ಪದೇ ಉಂಟಾಗುತ್ತಿದೆ.
ಇನ್ನು ಕೆಲವೊಂದು ಕಾಡಿನ ಆನೆಗಳು ನಾಡಿಗೆ ಬಂದು ತಮ್ಮ ಆಡುವ ಪಂಡುಡಾಟಗಳನ್ನು ಹಾಗೂ ಕಬ್ಬಿನ ಗದ್ದೆಗಳನ್ನು ನಾಶ ಮಾಡುವುದನ್ನು ನೋಡಿದ್ದೆವೆ. ಸದ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗಿದ್ದು ಬೈಕು ಕಾರು ಹಾಗೂ ಸೈಕಲ್ ಸವಾರ ಮೇಲೆ ಆನೆ ಹೇಗೆ ದಾಳಿ ಮಾಡಿದೆ ನೀವೆ ನೋಡಿ.