ಕನ್ನಡ ಚಿತ್ರರಂಗದ ಜನಪ್ರಿಯ ನಟ ಯಶ್ ರವರು ಇಂದು ಕೇವಲ ಚಂದನವನಕ್ಕೆ ಮಾತ್ರ ಸೀಮಿತ ನಟನಾಗಿಲ್ಲ. ಹೌದು ಅವರ ಸಿನಿಮಾಗಳಿಗೆ ಪರಭಾಷೆಯಲ್ಲಿಯೂ ದೊಡ್ಡ ಮಟ್ಟದ ಡಿಮಾಂಡ್ ಸೃಷ್ಟಿಯಾಗಿದ್ದು ಸದ್ಯ ಕೆಜಿಎಫ್ ಸರಣಿ ಚಿತ್ರಗಳಿಂದ ಸ್ಯಾಂಡಲ್ವುಡ್ನ ಚಹರೆಯನ್ನೇ ಬದಲಿಸಿದ ನಟ ಯಶ್ ತಮ್ಮ ಹೊಸ ಸಿನಿಮಾ ಯಾವುದು ಎಂಬುದನ್ನು ಇನ್ನೂ ಕೂಡ ಘೋಷಣೆ ಮಾಡಿಲ್ಲ.
ಈ ನಡುವೆ ಬರ್ತ್ಡೇ ಆಚರಣೆಗೂ ಬ್ರೇಕ್ ಹಾಕಿ ದುಬೈನಲ್ಲಿ ಕುಟುಂಬ ಮತ್ತು ಸ್ನೇಹಿತರ ಜೊತೆ ಕಾಲ ಕಳೆಯುತ್ತಿದ್ದಾರೆ. ಹೌದು ಜನವರಿ 8 ಬಂತೆಂದರೆ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳಿಗೆ ಅದೆನೋ ಪುಳಕ ಎನ್ನಬಹುದು. ನೆಚ್ಚಿನ ನಟನ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಬಹುದಲ್ಲ ಎಂಬ ಸಂಭ್ರಮ ಅವರಿಗೆ. ಆದರೆ ಈ ಸಲ ಅದ್ಯಾವುದಕ್ಕೂ ಆಸ್ಪದ ಕೊಡದ ಯಶ್ ರವರು ಮಹತ್ವದ ಕೆಲಸದಲ್ಲಿ ಬಿಜಿಯಾಗಿದ್ದೇನೆ. ಅದಕ್ಕೆ ನಿಮ್ಮ ಸಹಕಾರ ಇರಲಿ. ಶೀಘ್ರದಲ್ಲಿ ನಿಮ್ಮ ಮುಂದೆ ಆಗಮಿಸುತ್ತೇನೆ ಎಂದಿದರು.
ತೆರೆಮರೆಯಲ್ಲಿಯೇ ಆ ಕೆಲಸದಲ್ಲಿ ತೊಡಗಿಸಿಕೊಂಡಿರುವ ಯಶ್ ಅಭಿಮಾನಿಗಳಿಗೆ ಪತ್ರದ ಮೂಲಕ ವಿನಂತಿಸಿಕೊಂಡಿದ್ದರು. ಸದ್ಯ ಪತ್ನಿ ರಾಧಿಕಾ ಪಂಡಿತ್ ಸೇರಿ ಕುಟುಂಬಸ್ಥರು ಹಾಗೂ ಸ್ನೇಹಿತರ ಜತೆ ಸೇರಿ ನಟ ಯಶ್ ದುಬೈಗೆ ಹಾರಿದ್ದು ಈ ಸಲದ ಬರ್ತ್ಡೇಯನ್ನು ಅಲ್ಲಿಯೇ ಸೆಲೆಬ್ರೇಟ್ ಮಾಡಿಕೊಂಡಿದ್ದಾರೆ. ಆ ದುಬೈ ಸುತ್ತಾಟದ ಒಂದಷ್ಟು ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು ದೈಬೈನಲ್ಲಿ ಯಶ್ ರವರು ಯಾವ ರೀತಿ ಹುಟ್ಟು ಹಬ್ಬ ಆಚರಿಕೊಂಡರು ಎಂದು ಈ ಲೇಖನಿ ಕೆಳಗೆ ಹಂಚಿಕೊಂಡಿರುವ ವಿಡಿಯೋದಲ್ಲಿ ನೋಡಬಹುದು.
ಇನ್ನು ನಟ ಯಶ್ ತಮ್ಮ ಬರ್ತ್ಡೇ ದಿನ ಮುಂದಿನ ಸಿನಿಮಾ ಘೋಷಣೆ ಮಾಡಲಿದ್ದಾರೆ ಎನ್ನಲಾಗಿತ್ತು. ಆದರೆ ಸದ್ಯಕ್ಕೆ ಆ ಯಾವ ಲಕ್ಷಣಗಳು ಕಾಣಿಸಲಿಲ್ಲ. ಸಾಮಾಜಿಕ ಜಾಲತಾಣದಲ್ಲಿ CDP ಕ್ರಿಯೇಟ್ ಮಾಡಿದ ಅಭಿಮಾನಿಗಳು ಶುಭ ಕೋರುತ್ತ ಮುಂದಿನ ಸಿನಿಮಾ ಘೋಷಣೆ ಯಾವಾಗ ಎಂದು ಕೇಳುತ್ತಿದ್ದಾರಾದರೂ ಯಶ್ ಕಡೆಯಿಂದ ಸಿನಿಮಾ ಅಪ್ಡೇಟ್ ಮಾತ್ರ ಲಭ್ಯವಾಗಲಿಲ್ಲ. ಈ ನಡುವೆ ಸಿನಿಮಾ ವಿಚಾರವಾಗಿ ಕೆಲ ವದಂತಿಗಳು ಹರಿದಾಡುತ್ತಿವೆಯಾದರೂ ಆ ಸುದ್ದಿಗಳು ಕೂಡ ಅಧಿಕೃತವಾಗಿಲ್ಲ.
ಸದ್ಯ ಪತ್ರದ ಮೂಲಕ ಯಶ್ ಸ್ಪಷ್ಟನೆ ನೀಡಿದ್ದು ಪ್ರೀತಿಯ ಅಭಿಮಾನಿಗಳಿಗೆ ನಮಸ್ಕಾರ. ನಿಮ್ಮ ಕಲ್ಮಶವಿಲ್ಲದ ಪ್ರೀತಿ ಸಾಟಿಯೇ ಇಲ್ಲದ ಅಭಿಮಾನ ನನ್ನ ಹೃದಯ ತುಂಬುವಂತೆ ಮಾಡಿದೆ. ನನಗೆ ಗೊತ್ತು ನೀವೆಲ್ಲಾ ಕಾಯುತ್ತಿದ್ದೀರ. ಹುಟ್ಟಿದ ದಿನ ತುಂಬಾ ವಿಶೇಷ ಅಂತ ನನಗೆ ಅನ್ನಿಸೋಕೆ ಶುರುವಾಗಿದ್ದೇ ಇತ್ತೀಚಿನ ವರ್ಷಗಳಲ್ಲಿ. ಯಾವಾಗ ನೀವು ನನ್ನ ದಿನವನ್ನು ನಿಮ್ಮ ದಿನವನ್ನಾಗಿಸಿಕೊಂಡು ಆಚರಿಸಿ ವಿಜೃಂಭಿಸೋಕೆ ಶುರು ಮಾಡಿದ್ದರಿಂದ.
ನಾನು ಕೂಡ ಈ ವರ್ಷದ ಹುಟ್ಟುಹಬ್ಬದಂದು ನಿಮ್ಮನ್ನ ನೋಡಬೇಕು ನಿಮ್ಮೊಂದಿಗೆ ಸಮಯ ಕಳೆಯಬೇಕು ಅಂದುಕೊಂಡಿದ್ದೆ. ಆದರೆ ಜಗದಗಲದ ನಿರೀಕ್ಷೆಯಲ್ಲಿರುವ ನಿಮ್ಮ ಮುಂದೆ ನಿಲ್ಲಲು ಇನ್ನೂ ಸ್ವಲ್ಪವೇ ಸ್ವಲ್ಪ ಸಮಯ ಕೊಡಿ.
ನಿಮಗಾಗಿ ವಿಭಿನ್ನವಾಗಿರೋದೆನನ್ನೋ ನಿಮ್ಮ ಮುಂದೆ ತರಲು ಶ್ರದ್ಧೆಯಿಂದ ಕೆಲಸ ಮಾಡುತ್ತಿದ್ದೇನೆ. ಅಲ್ಲಿಯವರೆಗೂ ನಿಮ್ಮ ತಾಳ್ಮೆ ಮತ್ತು ಪ್ರೀತಿಯೇ ನನಗೆ ಈ ವರ್ಷದ ಹುಟ್ಟುಹಬ್ಬದ ನಿಮ್ಮ ಉಡುಗೊರೆ ಕ್ಷಮಿಸಿ. ಈ ವರ್ಷದ ಹುಟ್ಟುಹಬ್ಬಕ್ಕೆ ನಿಮ್ಮ ಜೊತೆ ಇರಲು ಸಾಧ್ಯವಾಗುತ್ತಿಲ್ಲ. ಆದರೆ ಆದಷ್ಟು ಬೇಗ ನಿಮಗೆ ಸಿಗುತ್ತೇನೆ ಮತ್ತು ನಿಮ್ಮ ಕಾಯುವಿಕೆಯನ್ನು ಅರ್ಥಪೂರ್ಣವಾಗಿಸುತ್ತೇನೆ. ನಿಮ್ಮ ಪ್ರೀತಿಯ ಯಶ್ ಎಂದು ಯಶ್ ಪತ್ರ ಬರೆದಿದ್ದರು.