ಚಿತ್ರರಂಗದಲ್ಲಿ ಸದ್ಯ ಟ್ರೋಲ್ ಮತ್ತು ಸಿನಿಮಾ ವಿಚಾರಕ್ಕೆ ಸಾಕಷ್ಟು ಸುದ್ದಿಯಾಗುತ್ತಿರುವ ನಟಿ ಅಂದರೇ ಅದು ರಶ್ಮಿಕಾ ಮಂದಣ್ಣ. ಹೌದು ಒಂದಲ್ಲಾ ಒಂದು ವಿಚಾರಕ್ಕೆ ಪ್ರತೀ ಬಾರಿ ಸದ್ದು ಮಾಡುವ ರಶ್ಮಿಕಾ ಸಿನಿಮಾ ವಿಚಾರಕ್ಕಿಂತಲೂ ಒಂದಷ್ಟು ಕಿರಿಕ್ಗಳಿಂದಲೇ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿ ಟ್ರೋಲ್ ಆಗುತ್ತಾರೆ.
ಇನ್ನು ಪುಷ್ಪ ಚಿತ್ರದ ಪ್ರಚಾರ ಕಾರ್ಯಕ್ಕೆ ಬೆಂಗಳೂರಿಗೆ ಬಂದಿದ್ದ ಸಂದರ್ಭದಲ್ಲೂ ರಶ್ಮಿಕಾ ಮಂದಣ್ಣ ಸಾಕಷ್ಟು ಟ್ರೋಲ್ ಆಗಿದ್ದರು. ಕನ್ನಡ ಸರಿ ಮಾತನಾಡದ ವಿಚಾರದಿಂದ ಹಿಡಿದು ಪುಷ್ಪ ಸಿನಿಮಾದ ಕನ್ನಡ ಅವತರಣಿಗೆಗೆ ರಶ್ಮಿಕಾ ಡಬ್ ಮಾಡದ ವಿಚಾರದವರೆಗೂ ಸಖತ್ ಸುದ್ದಿ ಯಾಗಿದ್ದರು.
ಇನ್ನು ರಶ್ಮಿಕಾ ಕನ್ನಡದ ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದವರು. ಹೌದು ಕಿರಿಕ್ ಪಾರ್ಟಿ ಸಿನಿಮಾದ ಮೂಲಕವೇ ಕರ್ನಾಟಕದ ಕ್ರಶ್ ಎಂದು ಹೆಸರು ಪಡೆದ ರಶ್ಮಿಕಾ ಈಗ ನ್ಯಾಷನಲ್ ಕ್ರಷ್ ಆಗಿ ಬೆಳೆದಿದ್ದಾರೆ. ಆದರೇ ಕನ್ನಡದ ಬೇರನ್ನೆ ಮರೆತು ತೆಲುಗು ತಮಿಳು ಬಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ ಅನ್ನುವ ವಿಚಾರಕ್ಕೂ ಪದೇ ಪದೇ ಸುದ್ದಿ ಯಾಗ್ತಾರೆ ಈ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ. ಇದೀಗ ಅವರ ಹೊಸ ವರ್ಷದ ವಿಡಿಯೋ ನೋಡಿ .