ವಾರ್ತಾ ಮಂಜರಿ
Trending Stories, Viral News, Gossips & Everything in Kannada

ರಜನಿ ಅಭಿನಯದ ರೋಬೊ ಚಿತ್ರದಲ್ಲಿ ಗ್ರಾಫಿಕ್ ಬಳಕೆ ನೋಡಿ..ಚಿಂದಿ ವಿಡಿಯೋ

4,961

2018 ರಲ್ಲಿ ತೆರೆಕಂಡ ತಲೈವಾ ರಜಿನಿ ಅಭಿನಯದ 2.0 ಸಿನಿಮಾ 543 ಕೋಟಿಯ ಭಾರೀ ಬಜೆಟ್‍ ಸಿನಿಮಾ. ರಜಿನಿಕಾಂತ್ ಅಕ್ಷಯ್ ಕುಮಾರ್​ ಆ್ಯಮಿಜಾಕ್ಷನ್​ರಂತಹ ಘಟಾನುಘಟಿ ತಾರೆಯರು ನಟಿಸಿರೋ ಸಿನಿಮಾ ಇದಾಗಿದ್ದು ಭಾರತ ಸಿನಿಮಾ ರಂಗದ ಎಲ್ಲ ದಾಖಲೆಗಳನ್ನ ಪುಡಿ ಪುಡಿ ಮಾಡುತ್ತೆ ಅಂತೇಳಲಾಗುತ್ತಿದ್ದ ಸಿನಿಮಾ ಇದಾಗುತ್ತು.

ಇಂತಹ ಈ ಸಿನಿಮಾ 10ಸಾವಿರ ಚಿತ್ರಮಂದಿರಗಳಲ್ಲಿ ಅಬ್ಬರಿಸಿದ್ದು ರೋಬೋ ಅಬ್ಬರಕ್ಕೆ ಬಾಹುಬಲಿಯ ದಾಖಲೆಗಳ ಕತೆ ಮರಿದು ಬಿದ್ದಿತ್ತು ಎನ್ನಲಾಗಿತ್ತು. ಹೌದು ಸೂಪರ್ ಸ್ಟಾರ್​ ರಜಿನಿಕಾಂತ್ ಸಿನಿಮಾವೊಂದು ಬರುತ್ತಿದೆ ಅಂದಾಗ್ಲೇ ಅದರ ಮೇಲೆ ಬೆಟ್ಟದಷ್ಟು ನಿರೀಕ್ಷೆ ತನ್ನಿಂತಾನೆ ಹುಟ್ಕೊಳುತ್ತೆ. ಇನ್ನು ಬಾಕ್ಸಾಫಿಸ್‍ನಲ್ಲೊಂದು ಹೊಸ ದಾಖಲೆ ಗ್ಯಾರಂಟಿ ಅಂತಲೇ ಭಾವಿಸಲಾಗುತ್ತದೆ. ಅಂತದ್ದೇ ನಿರೀಕ್ಷೆ ಅಷ್ಟೇ ಕುತೂಹಲವನ್ನ ಹುಟ್ಟಿಸಿದ್ದು ಈ 2.0 ಸಿನಿಮಾ.

ಕಾಲಿವುಡ್‍ನ ದಿ ಗ್ರೇಟ್ ನಿರ್ದೇಶಕ ಶಂಕರ್ ನಿರ್ದೇಶನ ಅಕ್ಕಿ-ಆ್ಯಮಿಯಂತಹ ಸ್ಟಾರ್ ಕಾಸ್ಟ್ 2.0 ಮೇಲೆ ಸಿಕ್ಕಾಪಟ್ಟೆ ಕ್ರೇಜ್​ ಹುಟ್ಟಿಸಿತ್ತು. ಹೌದು ಭಾರತೀಯ ಸಿನಿಮಾ ರಂಗದಲ್ಲಿ ಬಾಹುಬಲಿಯನ್ನೂ ಮೀರಿಸುವಂತಹ ಮೇನಿಯಾ ಸೃಷ್ಟಿಸಿತ್ತು 2.0. ಅದರಂತೆ ಪ್ರಪಂಚದಾದ್ಯಂತ ಸುಮಾರು 10 ಸಾವಿರ ಚಿತ್ರಮಂದಿರಗಳಲ್ಲಿ 2.0 ಸಿನಿಮಾ ಬಿಡುಗಡೆಯಾಗಿತ್ತು.

ತನ್ನ ದೃಶ್ಯ ವೈಭವದಿಂದಲೇ ಬಾಕ್ಸಾಫಿಸ್ ಕೊಳ್ಳೆ ಹೊಡೆದಿದ್ದು ಆದರೆ ರೋಬೋ ಇಷ್ಟೆಲ್ಲ ಅಬ್ಬರಿಸಿ ಬೊಬ್ಬಿರಿದರೂ ಸಹ ಜಗ್ಗದೆ ಬಗ್ಗದೆ ನಿಂತ್ತಿದ್ದ ಬಾಹುಬಲಿ. ಟಾಲಿವುಡ್‍ನ ದಿ ಗ್ರೇಟ್ ಡೈರೆಕ್ಟರ್ ರಾಜಮೌಳಿ ನಿರ್ದೇಶನದ ಬಾಹುಬಲಿ 6.500 ಸ್ಕ್ರೀನ್‍ಗಳಲ್ಲಿ ಜಗತ್ತಿನಾದ್ಯಂತ ಬಿಡುಗಡೆಯಾಗಿತ್ತು. ಎಲ್ಲೆಡೆ ಅದ್ಭುತ ಪ್ರತಿಕ್ರಿಯೆ ಪಡೆದು ಭಾರತೀಯ ಸಿನಿಮಾ ರಂಗದಲ್ಲಿ ಹೊಸ ದಾಖಲೆ ಬರೆದಿತ್ತು. ಹೌದು 2000 ಕೋಟಿಗೂ ಹೆಚ್ಚು ಹಣ ಕೊಳ್ಳೆ ಹೊಡೆದು ಹೊಸ ಇತಿಹಾಸ ನಿರ್ಮಿಸಿತ್ತು.

ಆದರೆ ಬಿಡುಗಡೆಯ ವಿಷಯದಲ್ಲಿ ದಾಖಲೆ ಬರೆದ 2.0 ಗಳಿಕೆಯ ವಿಷಯದಲ್ಲಿ ಮಾತ್ರ ಹಿಂದುಳಿದಿತ್ತು. ಅಂದಹಾಗೆ ಬಾಹುಬಲಿ ಮೊದಲ ದಿನ 125 ಕೋಟಿ ಹಣ ಗಳಿಸಿತ್ತು. ಬಾಹುಬಲಿಗಿಂತ ಹೆಚ್ಚು ಸ್ಕ್ರೀನ್‍ಗಳಲ್ಲಿ ತೆರೆಕಂಡಿರೋ 2.0 115 ಕೋಟಿ ಗಳಿಸಲಷ್ಟೇ ಶಕ್ತವಾಗಿತ್ತು. ಈ ಮೂಲಕ ಮೊದಲ ದಿನದ ಗಳಿಕೆಯ ವಿಚಾರದಲ್ಲಿ ಮೊದಲನೇ ಸ್ಥಾನದಲ್ಲಿಯೇ ಉಳಿದು ಕೊಂಡಿತ್ತು ಬಾಹುಬಲಿ.

2.0′ ಸಿನಿಮಾ ತನ್ನ ಅದ್ಧೂರಿತನದಲ್ಲಿ ತಾಂತ್ರಿಕತೆಯಲ್ಲಿ ಭಾರತೀಯ ಸಿನಿಮಾವನ್ನ ಇನ್ನೊಂದು ಮಟ್ಟಕ್ಕೆ ತೆಗೆದುಕೊಂಡು ಹೋಗಿದೆ. ಆದರೆ ಚಿತ್ರಕಥೆ ನೀರಸವಾಗಿದ್ದು ಹಾಗೆ ರಜಿನಿ-ಅಕ್ಷಯ್ ಬಿಟ್ಟರೆ ಯಾವ ಪಾತ್ರಕ್ಕೂ ಅಷ್ಟೇನೂ ಮಹತ್ವ ಇಲ್ಲ ಅನ್ನೋದು ಚಿತ್ರ ನೋಡಿದೋರ ಮಾತಾಗಿದೆ.

ಒಟ್ಟಾರೆ ಎಷ್ಟೇ ಹಣ ಖರ್ಚು ಮಾಡಿ ಸಿನಿಮಾ ಮಾಡಿದರೂ ಸಹ ಗಟ್ಟಿಯಾದ ಚಿತ್ರಕತೆ ಇಲ್ಲದಿದ್ದರೆ ಆ ಸಿನಿಮಾ ಅಷ್ಟು ದೊಡ್ಡ ಮಟ್ಟಕ್ಕೆ ಜನ ಮನ ಮುಟ್ಟೋದಿಲ್ಲ ಅನ್ನೋದು 2.0 ಸಿನಿಮಾದಿಂದ ಮತ್ತೆ ಸಾಬೀತಾಗಿತ್ತು. ಇನ್ನು 2.0 ಚಿತ್ರವನ್ನು ಒತ್ತಮ ತಂತ್ರಜ್ಞಾನ ಬಳಸಿ ಹೇಗೆ ಚಿತ್ರಿಸಿದ್ದರು ಗೊತ್ತಾ? ಕೆಳಗಿನ ವಿಡಿಯೋ ನೋಡಿ.