ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಚಿತ್ರರಂಗಕ್ಕೆ ಕಾಲಿಟ್ಟು ಅದಾಗಲೇ 25 ವರ್ಷ ಕಳೆದಿದೆ. ಹೌದು ಈ ದೊಡ್ಡ ಪ್ರಯಾಣದಲ್ಲಿ ಅವರು ಕಂಡ ಏಳು-ಬೀಳು ಹಲವು ಎನ್ನಬಹುದು. ಹೌದು ಸೋಲು-ಗೆಲುವು ಏನೇ ಇದ್ದರೂ ಪ್ರೀತಿಯಿಂದ ಸಿನಿಮಾ ಮಾಡುವ ಅವರಿಗೆ ಕೋಟ್ಯಂತರ ಅಭಿಮಾನಿಗಳಿದ್ದು ಕನ್ನಡ ಮಾತ್ರವಲ್ಲದೇ ಪರಭಾಷೆಯಲ್ಲೂ ಕೂಡ ಸಿನಿಪ್ರಿಯರ ಹೃದಯದಲ್ಲಿ ಕಿಚ್ಚನಿಗೆ ಸ್ಥಾನವಿದೆ.
ಈ 25 ವರ್ಷಗಳ ಸಿನಿಪಯಣದಲ್ಲಿ ಸುದೀಪ್ ಪಾಲಿನ ಕೆಲವು ಸ್ಪೆಷಲ್ ಸಿನಿಮಾಗಳನ್ನು ಪಟ್ಟಿ ಮಾಡಿದರೆ ಅದರಲ್ಲಿ ಹುಚ್ಚ ಮತ್ತು ತೆಲುಗಿನ ಈಗ ಚಿತ್ರಗಳಿಗೂ ಸ್ಥಾನವಿದೆ. ಸುದೀಪ್ಗೆ ದೊಡ್ಡ ಯಶಸ್ಸು ನೀಡಿದ ಹುಚ್ಚ ಚಿತ್ರ ಬಿಡುಗಡೆಯಾಗಿ ಸರಿಯಾಗಿ 20 ವರ್ಷ ಕಳೆದಿದ್ದು 2001ರ ಜು.6ರಂದು ರಾಜ್ಯಾದ್ಯಂತ ಹುಚ್ಚ ರಿಲೀಸ್ ಆಗಿತ್ತು. ಡಿಫರೆಂಟ್ ಆದ ಶೀರ್ಷಿಕೆ ಪೋಸ್ಟರ್ಗಳಲ್ಲಿ ಕಾಣಿಸಿಕೊಂಡ ಸುದೀಪ್ ರವರ ಡಿಫರೆಂಟ್ ಗೆಟಪ್ ನೋಡಿ ಸಹಜವಾಗಿಯೇ ಚಿತ್ರದ ಬಗ್ಗೆ ಜನರಲ್ಲಿ ನಿರೀಕ್ಷೆ ಮೂಡಿತ್ತು.
ಹೌದು ಆ ನಿರೀಕ್ಷೆಯನ್ನು ಇನ್ನಷ್ಟು ಹೆಚ್ಚಿಸಿದ್ದು ರಾಜೇಶ್ ರಾಮ್ನಾಥ್ ಅವರ ಸುಮಧುರ ಹಾಡುಗಳು. ಜು.6ರಂದು ಚಿತ್ರಮಂದಿರದಲ್ಲಿ ಸಿನಿಮಾ ನೋಡಿದ ಪ್ರೇಕ್ಷಕರ ನಿರೀಕ್ಷೆ ಹುಸಿ ಆಗಲಿಲ್ಲ. ಅದಾಗಿ 11 ವರ್ಷ ಕಳೆಯುವುದರಲ್ಲಿ ಅಂದರೆ 2012ರಲ್ಲಿ ಸುದೀಪ್ ಅವರು ನಿರ್ದೇಶಕ ರಾಜಮೌಳಿ ಜೊತೆ ಸಿನಿಮಾ ಮಾಡುವ ಮಟ್ಟಕ್ಕೆ ಬೆಳೆದರು. ಸದ್ಯ ಇದೀಗ ಅವರ ಜರ್ನಿ ವಿಕ್ರಾಂತ್ ರೋಣ ವರೆಗೂ ಬಂದು ನಿಂತಿದೆ.
ಇನ್ನು ಕಿಚ್ಚ ಸುದೀಪ್ ರವರ ಸಿನಿ ಜರ್ನಿಯಲ್ಲಿ ಕೋಟಿಗೊಬ್ಬ ಸರಣಿ ಮರೆಯುವಂತಿಲ್ಲ. ಎರಡು ವರುಷದ ಹಿಂದೆಯಷ್ಟೆ ಕೋಟಿಗೊಬ್ಬ 3 ಬಿಡುಗಡೆಯಾಗಿ ದೂಳೆಬ್ವಿಸಿತ್ತು. 2021 ರ ಅ.15 ರಂದು ಸಿನಿಮಾ ತೆರೆಗೆ ಬಂತು. ಕಾರಣಾಂತರಗಳಿಂದ ತಡವಾಗಿ ಬಿಡುಗಡೆಯಾದರು ಸಿನಿಮಾ ಮೇಲಿನ ಕ್ರೇಜ್ ಅಭಿಮಾನಿಗಳಿಗೆ ಕಮ್ಮಿ ಆಗಿರಲಿಲ್ಲ.
ಹೌದು ಮೊದಲ ದಿನವೇ ಎಲ್ಲ ಕಡೆ ಕೋಟಿಗೊಬ್ಬ ಹೌಸ್ ಫುಲ್ ಪ್ರದರ್ಶನ ಕಂಡಿದ್ದು ಸಿನಿಮಾ ವೀಕ್ಷಿಸಿದ ಅಭಿಮಾನಿಗಳು ಕೂಡ ಖುಷಿಪಟ್ಟರು. ರಾಜ್ಯಾದ್ಯಂತ ಸುಮಾರು 300ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಈ ಸಿನಿಮಾ ತೆರೆಕಂಡಿದ್ದು ಮೊದಲ ದಿನವೇ ಎಲ್ಲ ಕಡೆ ಹೌಸ್ ಫುಲ್ ಪ್ರದರ್ಶನ ಕಂಡಿದ್ದರಿಂದ ಸುಮಾರು 12.50 ಕೋಟಿ ರೂ. ಗಲ್ಲಾಪೆಟ್ಟಿಗೆಯಲ್ಲಿ ಕಲೆಕ್ಷನ್ ಆಗಿದೆ ಎಂಬ ಮಾಹಿತಿ ಸಿಕ್ಕಿತ್ತು.
ಮೊದಲು ಅ.14 ರಂದು ಈ ಸಿನಿಮಾವನ್ನು ತೆರೆಗೆ ತರುವುದಾಗಿ ನಿರ್ಮಾಪಕರು ಘೋಷಣೆ ಮಾಡಿದ್ದರು. ಆದ್ರೆ ಅದು ಸಾಧ್ಯವಾಗಲಿಲ್ಲ. ಗುರುವಾರದ ಬದಲು ಶುಕ್ರವಾರ ಸಿನಿಮಾ ತೆರೆಗೆ ಬಂದಿತ್ತು. ಕೆಲ ಏರಿಯಾಗಳ ವಿತರಕರು ಅಂದುಕೊಂಡ ಸಮಯಕ್ಕೆ ಹಣ ನೀಡದೇ ಇದ್ದಿದ್ದರಿಂದ ಈ ರೀತಿ ಆಯ್ತು ಅಂತ ನಿರ್ಮಾಪಕ ಸೂರಪ್ಪ ಬಾಬು ಹೇಳಿದ್ರು. ಅಷ್ಟೇ ಅಲ್ಲದೆ ಸಿನಿಮಾ ರಿಲೀಸ್ ಮಾಡದಿರಲು ಕೆಲವರು ಷಡ್ಯಂತ್ರ ಮಾಡಿದ್ದಾರೆ ಅದರ ಹಿಂದೆ ಹಲವಾರು ಕಾರಣಗಳಿವೆ ಅದು ಕಿಚ್ಚ ಸುದೀಪ್ಗೂ ಗೊತ್ತು.
ವಿತರಕರು ಮೋಸ ಮಾಡಿದ್ದಾರೆ. ವಿತರಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇನೆ. ಮಾನನಷ್ಟ ಮೊಕದ್ದಮೆ ದಾಖಲು ಮಾಡುತ್ತೇನೆ. ವಿತರಕರಿಂದ ನನಗೆ 7-10 ಕೋಟಿ ನಷ್ಟ ಉಂಟಾಗಿದೆ ಎಂದು ಅವರು ಗರಂ ಆಗಿದ್ರು. ಅತ್ತ ವಿತರಕ ಖಾಜಾಪೀರ್ ಸೂರಪ್ಪ ಬಾಬು ನಮಗೆ ಧಮ್ಕಿ ಹಾಕಿ ಬೆದರಿಸಿದ್ದಾರೆ.
ಅವರು ತುಂಬಾ ಕೆಟ್ಟ ಭಾಷೆಯಲ್ಲಿ ಮಾತನಾಡಿದ್ದಾರೆ. ನನಗೆ ನನ್ನ ಕುಟುಂಬಕ್ಕೆ ಏನಾದರೂ ತೊಂದರೆ ಆದರೆ ಅದಕ್ಕೆ ಕೋಟಿಗೊಬ್ಬ 3 ಸಿನಿಮಾ ನಿರ್ಮಾಪಕ ಸೂರಪ್ಪ ಬಾಬು ಅವರೇ ಕಾರಣ ಅಂತ ಆರೋಪ ಮಾಡಿದ್ದರು. ಆ ಸಂಬಂಧ ಚಿತ್ರದುರ್ಗ ನಗರ ಪೊಲೀಸ್ ಠಾಣೆಯಲ್ಲಿ ಸೂರಪ್ಪ ಬಾಬು (ಎಂ.ಬಿ. ಬಾಬು) ವಿರುದ್ಧ ಐಪಿಸಿ ಕಲಂ 504, 506 ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿತ್ತು.ಈ ಎಲ್ಲದರ ನಡುವೆ ಸಿನಿಮಾ ಸೂಪರ್ ಹಿಟ್ ಆಗಿದ್ದು 50 ಕೋಟಿ ಕಲೆಕ್ಷನ್ ಮಾಡಿತ್ತು. ಇನ್ನು ಚಿತ್ರದ ಅದ್ಬುತ ಮೇಕಿಂಗ್ ಹೇಗಿತ್ತು ಗೊತ್ತಾ? ಕೆಳಗಿನ ವಿಡಿಯೋ ನೋಡಿ.