ಆಧುನಿಕತೆಯ ಭರಾಟೆಯಲ್ಲಿ ಮರಗಳನ್ನು ಬೆಳೆಸುವುದನ್ನು ಪ್ರತಿಯೊಬ್ಬರೂ ಮರೆಯುತ್ತಿದ್ದಾರೆ. ಹೌದು ಕಾಡು ಬೆಳೆದಾಗ ಮಾತ್ರ ನಾಡು ಉಳಿಯುತ್ತದೆ. ಈ ಬಗ್ಗೆ ಪ್ರತಿಯೊಬ್ಬರೂ ಎಚ್ಚರಿಕೆ ವಹಿಸಬೇಕು. ಮನುಷ್ಯನ ಸ್ವಾರ್ಥ ಚಿಂತನೆಗಳಿಂದ ನಾಡಿನ ಅರಣ್ಯ ಸಂಪತ್ತು ನಾಶವಾಗುತ್ತಿದೆ. ಕಾಂಕ್ರಿಟ್ ನಾಡಿಗಾಗಿ ನೈಸರ್ಗಿಕ ಸಂಪತ್ತನ್ನು ಹಾಳು ಮಾಡಲಾಗುತ್ತಿದೆ. ಈ ಬಗ್ಗೆ ಎಚ್ಚತ್ತುಕೊಳ್ಳದಿದ್ದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ.
ಇನ್ನು ಮನುಷ್ಯನ ಚಿಂತನೆಗಳಿಂದ ನಾಡಿನ ಅರಣ್ಯ ಸಂಪತ್ತು ನಾಶವಾಗುತ್ತಿದೆ. ಕಾಂಕ್ರಿಟ್ ನಾಡಿಗಾಗಿ ನೈಸರ್ಗಿಕ ಸಂಪತ್ತನ್ನು ಹಾಳು ಮಾಡಲಾಗುತ್ತಿದೆ. ಈ ಬಗ್ಗೆ ಎಚ್ಚತ್ತುಕೊಳ್ಳದಿದ್ದಲ್ಲಿ ಅಪಾಯ ಇಲ್ಲವಾದರೆ ಕಟ್ಟಿಟ್ಟ ಬುತ್ತಿ. ಪರಿಸರ ನಾಶದಿಂದ ಕಾಲಕ್ಕೆ ತಕ್ಕಂತೆ ಮಳೆಯಾಗುತ್ತಿಲ್ಲ. ಇದರಿಂದ ಭೂಮಿಯಲ್ಲಿನ ಅಂತರ್ಜಲ ಮಟ್ಟ ಕುಸಿಯುತ್ತಿದ್ದು ಹನಿ ನೀರಿಗೂ ಹಾಹಾಕಾರ ಪ್ರಾರಂಭವಾಗಿದೆ. ಇನ್ನಾದರೂ ಎಚ್ಚೆತ್ತುಕೊಂಡು ಸಸಿಗಳನ್ನು ನೆಡುವ ಮೂಲಕ ಪರಿಸರ ರಕ್ಷಣೆಗೆ ಪಣ ತೊಡಬೇಕು.
ಪರಿಸರ ಉಳಿಸಲು ನಾಗರಿಕ ಸಮಾಜದ ಪ್ರತಿಯೊಬ್ಬರು ಕೈ ಜೋಡಿಸಬೇಕಾದ ಅವಶ್ಯಕತೆ ಇದೆ. ವಿಶೇಷವಾಗಿ ಯುವ ಜನಾಂಗ ಪ್ರಕೃತಿ ಉಳಿಸಲು ಮುಂದಾಗಬೇಕಿದೆ.ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿನ ಯುವಕರು ಪರಿಸರ ಸಂರಕ್ಷಣೆಗೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಅರಣ್ಯ ಸಂಪತ್ತು ಉಳಿವಿಗೆ ಮುಂದಾಗಬೇಕು.
ಇನ್ನೂ ಗಿಡ ಹಾಗೂ ಮರಗಳನ್ನು ಬೆಳೆಸುವುದರಿಂದ ಕಾಲ ಕಾಲಕ್ಕೆ ಮಳೆಯಾಗುವುದಷ್ಟೆ ಅಲ್ಲದೆ ನಶಿಸಿ ಹೋಗುತ್ತಿರುವ ಕಾಡನ್ನು ಉಳಿಸಿ ಬೆಳೆಸಿದಂತಾಗುತ್ತದೆ. ಪರಿಸರದ ಉಳಿವಿಗೆ ಪ್ರತಿಯೊಬ್ಬರೂ ಕೈಲಾದ ಕೊಡುಗೆ ನೀಡುವ ಮೂಲಕ ಪರಿಸರ ಸಂರಕ್ಷಣೆ ಮಾಡಬೇಕು. ಗಿಡ ಮರಗಳು ಹಾಳಾಗುತ್ತಿರುವುದರಿಂದ ಪ್ರಕೃತಿ ವಿಕೋಪ ಬರಗಾಲ ಅಂರ್ತಜಲ ಮಟ್ಟ ಕುಸಿತ ಸೇರಿದಂತೆ ಮತ್ತಿತರ ಸಮಸ್ಯೆಗಳು ತಲೆ ದೂರಿದೆ.
ಇವುಗಳಿಗೆ ಪರಿಹಾರದ ರೂಪವಾಗಿ ಪ್ರತಿಯೊಬ್ಬರೂ ಕನಿಷ್ಠ 2 ಗಿಡಗಳನ್ನು ನೆಟ್ಟು ಪೋಷಣೆ ಮಾಡುವ ಜವಾಬ್ದಾರಿ ಹೊರಬೇಕು. ತೀವ್ರ ಬರಗಾಲಕ್ಕೆ ತುತ್ತಾಗಿರುವುದರಿಂದ ಗ್ರಾಮಗಳಲ್ಲಿ ಪರಿಸರ ಸಂರಕ್ಷಣೆ ಕೈಗೊಳ್ಳದಿದ್ದರು ಭವಿಷ್ಯದ ದಿನಗಳಲ್ಲಿ ಇರುವ ಜಲ ಮೂಲಗಳು ಬರಿದಾಗಲಿದೆ. ಅದಕ್ಕಾಗಿ ಗಿಡ ಮರಗಳು ನೆಡಬೇಕು ಹಾಗೂ ಅವುಗಳನ್ನು ಸಂರಕ್ಷಣೆ ಮಾಡಬೇಕು.ಅಭಿವೃದ್ಧಿಯ ಹೆಸರಿನಲ್ಲಿ ಮರ ಗಿಡಗಳನ್ನು ಕಡಿಯುತ್ತಿದ್ದೇವೆ.
ಆದರೆ ಇದರಿಂದ ಆಗುವ ಹಾನಿಯನ್ನು ಯಾರು ಯೋಚನೆ ಮಾಡುವುದಿಲ್ಲ. ಮೊದಲೆಲ್ಲಾ ದೈತ್ಯವಾದ ಮರಗಳನ್ನು ಕಡಿಯಬೇಕಾದರೆ ಸಾಕಷ್ಟು ಮಂದಿ ಸೇರಿ ಕಷ್ಟಪಟ್ಟು ಕಡಿಯಬೇಕಾಗಿತ್ತು. ಆದರೆ ಇದೀಗ ಮರಗಳನ್ನು ಕತ್ತರಿಸುವ ಸುಲಭವಾದ ಯಂತ್ರವನ್ನು ಕೂಡ ಮನುಷ್ಯ ಜೀವಿ ಕಂಡು ಹಿಡಿದಿದ್ದು ಇದು ಪ್ರಕೃತಿಯ ನಾಶದ ಮುನ್ಸೂಚನೆಯೇ ಅಥವಾ ನಗರದ ಅಭಿವೃದ್ದಿ ಕೆಲಸವೇ ಲೇಖನಿಯ ಕೆಳಗಿನ ವಿಡಿಯೋ ನೋಡಿ ನೀವೇ ನಿರ್ಧರಿಸಿ.
ಉತ್ತಮ ಪರಿಸರ ಉತ್ತಮ ಆರೋಗ್ಯಕ್ಕೆ ಕಾರಣವಾಗುತ್ತದೆ. ಹೌದು ನಮ್ಮ ಸುತ್ತಲಿನ ಪರಿಸರ ಎಷ್ಟು ಚೆನ್ನಾಗಿರುತ್ತೆ ಅಷ್ಟು ನಾವು ಆರೋಗ್ಯವಾಗಿರುತ್ತೇವೆ. ಪರಿಸರ ಹಾಳಾದಷ್ಟು ನಮ್ಮ ಆರೋಗ್ಯ ಹಾಳಾಗುತ್ತದೆ. ಈಚೀನ ದಿನಗಳಲ್ಲಿ ಪರಿಸರವನ್ನು ನಾವು ನಾಶ ಮಡುತ್ತಾ ಸಾಗಿದ್ದೇವೆ. ಇದರಿಂದ ಪರಿಸರ ಕೂಡ ನಮಗೆ ಪ್ರತಿಯಾಗಿ ಕೆಲವೊಂದು ಸಮಯದಲ್ಲಿ ಕೆಡಕನ್ನು ಮಾಡುತ್ತಿದೆ.
ಇನ್ನು ವಿಶ್ವ ಪರಿಸರ ದಿನವನ್ನು ಪ್ರತಿ ವರ್ಷ ಜೂನ್ 5 ರಂದು ಆಚರಿಸಲಾಗುತ್ತದೆ. ಈ ದಿನವು ಪರಿಸರ ಸಂರಕ್ಷಣೆಗಾಗಿ ಜಾಗೃತಿ ಮತ್ತು ಕೈಗೊಳ್ಳಬೇಕಾದ ಕ್ರಮವನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ವಿಶ್ವ ಪರಿಸರ ದಿನವನ್ನು 1972 ರಲ್ಲಿ ವಿಶ್ವಸಂಸ್ಥೆಯು ಮಾನವ ಪರಿಸರದ ಸ್ಟಾಕ್ಹೋಮ್ ಸಮ್ಮೇಳನದಲ್ಲಿ ಪ್ರಾರಂಭಿಸಿತು. 1974 ರಲ್ಲಿ ವಿಶ್ವ ಪರಿಸರ ದಿನವನ್ನು ಮೊದಲ ಬಾರಿಗೆ 1974 ರಲ್ಲಿ ಯುನೈಟೆಡ್ ಸ್ಟೇಟ್ಸ್ನಲ್ಲಿ ಆಚರಿಸಲಾಯಿತು.