ಕನ್ನಡ ಚಿತ್ರರಂಗದ ಪ್ರಿನ್ಸಸ್ ರಾಧಿಕಾ ಪಂಡಿತ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದು ಯಶ್ ಜೊತೆ ವೈವಾಹಿಕ ಬದುಕಿಗೆ ಕಾಲಿಟ್ಟ ಮೇಲೆ ಚಿತ್ರರಂಗದಿಂದ ಅಂತರ ಕಾಯ್ದುಕೊಂಡಿರುವ ರಾಧಿಕಾ ರವರು ಕನ್ನಡ ಇಂಡಸ್ಟ್ರಿಯ ಪ್ರತಿಭಾನ್ವಿತ ಹಾಗೂ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿದ್ದ ನಟಿಯಾಗಿದ್ದರು.
2008ರಲ್ಲಿ ಮೊಗ್ಗಿನ ಮನಸು ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಪ್ರವೇಶಿಸಿದ ರಾಧಿಕಾ ಸುಮಾರು 12 ವರ್ಷಗಳ ಕಾಲ ಜನರನ್ನು ರಂಜಿಸಿದ್ದು ಒಳ್ಳೊಳ್ಳೆ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಇದುವರೆಗೂ 21 ಚಿತ್ರಗಳಲ್ಲಿ ರಾಧಿಕಾ ನಟಿಸಿದ್ದು ಬಹುತೇಕ ಎಲ್ಲವೂ ಹಿಟ್ ಸಿನಿಮಾಗಳೇ. ಇನ್ನು ಕೆಲವು ಚಿತ್ರಗಳು ಈಗಲೂ ಪ್ರೇಕ್ಷಕರನ್ನು ಕಾಡುತ್ತದೆ. ಈ ಸಿನಿಮಾಗಳಲ್ಲಿ ರಾಧಿಕಾ ಅವರನ್ನು ನೋಡಲು ಜನರು ಇಷ್ಟ ಪಡುತ್ತಿದ್ದಾರೆ.
ಹೌದು 2008ರಲ್ಲಿ ತೆರೆಕಂಡ ಮೊಗ್ಗಿನ ಮನಸು ಸಿನಿಮಾದ ಮೂಲಕ ರಾಧಿಕಾ ಪಂಡಿತ್ ಚಿತ್ರರಂಗ ಪ್ರವೇಶಿಸಿದ್ದು ಶಶಾಂಕ್ ನಿರ್ದೇಶಿಸಿದ್ದ ಈ ಚಿತ್ರದಲ್ಲಿ ನಟ ಯಶ್-ರಾಧಿಕಾ ಜೋಡಿಯಾಗಿ ನಟಿಸಿದ್ದರು. ಇನ್ನು ಮೊಗ್ಗಿನ ಮನಸು ಚಿತ್ರದ ಅಭಿನಯಕ್ಕಾಗಿ ರಾಧಿಕಾ ಪಂಡಿತ್ಗೆ ರಾಜ್ಯ ಪ್ರಶಸ್ತಿ ಹಾಗೂ ಫಿಲಂ ಫೇರ್ ಪ್ರಶಸ್ತಿ ಲಭಿಸಿದ್ದು ರಾಧಿಕಾ ವೃತ್ತಿ ಜೀವನದಲ್ಲಿ ಎಂದೆಂದೂ ಮರೆಯಲಾಗದ ಚಿತ್ರ ಇದಾಗಿದೆ ಎನ್ನಬಹುದು.
ಇನ್ನು 2009ರಲ್ಲಿ ಬಿಡುಗಡೆಯಾದ ಚಿತ್ರ ಲವ್ ಗುರು. ತರುಣ್ ಚಂದ್ರ ನಾಯಕರಾಗಿದ್ದ ಈ ಚಿತ್ರದಲ್ಲಿ ರಾಧಿಕಾ ಪಂಡಿತ್ ಖುಷಿ ಎಂಬ ಪಾತ್ರದಲ್ಲಿ ಅಭಿನಯಿಸಿದ್ದು ಪ್ರಶಾಂತ್ ರಾಜ್ ಈ ಚಿತ್ರ ನಿರ್ದೇಶಿಸಿದ್ದರು. ಇನ್ನು ಲವ್ ಗುರು ಸಿನಿಮಾ ಮ್ಯೂಸಿಕಲ್ ಆಗಿ ದೊಡ್ಡ ಹಿಟ್ ಆಗಿದ್ದು ರಾಧಿಕಾ ಅವರಿಗೂ ಒಳ್ಳೆಯ ಹೆಸರು ತಂದು ಕೊಡ್ತು.
ಇನ್ನು ಮೊಗ್ಗಿನ ಮನಸು ಒಲವೇ ಜೀವನ ಲೆಕ್ಕಾಚಾರ ಲವ್ ಗುರು ಬಳಿಕ ರಾಧಿಕಾ ನಟಿಸಿದ ನಾಲ್ಕನೇ ಚಿತ್ರ ಕೃಷ್ಣನ್ ಲವ್ ಸ್ಟೋರಿ. ಅಜಯ್ ರಾವ್ ನಾಯಕರಾಗಿದ್ದ ಈ ಚಿತ್ರ ಶತದಿನ ಆಚರಿಸಿಕೊಂಡಿದ್ದು ಶಶಾಂಕ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು. ರಾಧಿಕಾ ನಟನೆಗೆ ಫಿಲಂ ಫೇರ್ ಅತ್ಯುತ್ತಮ ನಟಿ ಪ್ರಶಸ್ತಿ ಲಭಿಸಿತ್ತು. ಇನ್ನು ಧ್ರುವ ಸರ್ಜಾ ಚೊಚ್ಚಲ ಸಿನಿಮಾದಲ್ಲಿ ರಾಧಿಕಾ ಪಂಡಿತ್ ನಾಯಕಿಯಾಗಿದ್ದು ಅಚ್ಚು-ರಚ್ಚು ಲವ್ ಸ್ಟೋರಿ ಮೆಗಾ ಹಿಟ್ ಆಯಿತು. ಎಪಿ ಅರ್ಜುನ್ ಈ ಸಿನಿಮಾ ನಿರ್ದೇಶಿಸಿದ್ದು ಈ ಸಿನಿಮಾ ಹಿಟ್ ಆದ ಪರಿಣಾಮ ಧ್ರುವ-ರಾಧಿಕಾ ಕಾಂಬಿನೇಷನ್ನಲ್ಲಿ ಬಹುದ್ದೂರ್ ಎಂಬ ಮತ್ತೊಂದು ಚಿತ್ರ ಬಂತು.
ಇನ್ನು ಪಕ್ಕದ ಮನೆ ಹುಡುಗಿ ಕಾಲೇಜ್ ಹುಡುಗಿ ಜಗಳಗಂಟಿ ಹುಡುಗಿ ಪಾತ್ರಗಳಲ್ಲಿ ನಟಿಸಿದ್ದ ರಾಧಿಕಾ ಪಂಡಿತ್ ರವರು ಕಡ್ಡಿಪುಡಿ ಸಿನಿಮಾದಲ್ಲಿ ನಟ ಶಿವರಾಜ್ ಕುಮಾರ್ ಪತ್ನಿ ಪಾತ್ರದಲ್ಲಿ ನಟಿಸಿದ್ದು ಈ ಹಿಂದೆ ರಾಧಿಕಾ ಅಭಿನಯಿಸಿದ್ದ ಎಲ್ಲ ಪಾತ್ರಗಳಿಗಿಂತೂ ಇದು ಬಹಳ ವಿಶೇಷವಾಗಿತ್ತು.
ದುನಿಯಾ ಸೂರಿ ಸಿನಿಮಾ ನಿರ್ದೇಶಿಸಿದ್ದರು. ಇನ್ನು ರಾಧಿಕಾ ಪಂಡಿತ್ ಮತ್ತು ಯಶ್ ಪಾಲಿಗೆ ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ ಸಿನಿಮಾ ಮರೆಯಲು ಸಾಧ್ಯವಿಲ್ಲ ಎನ್ನಬಹುದು . ಕನ್ನಡ ಇಂಡಸ್ಟ್ರಿಯಲ್ಲಿ ಚಿತ್ರ ಅನೇಕ ದಾಖಲೆ ಬರೆದಿದ್ದು ರಾಧಿಕಾ ನಟನೆಯ ಸೈಮಾ ಪ್ರಶಸ್ತಿ ಲಭಿಸಿತ್ತು. ನಿಜ ಜೀವನ ಜೋಡಿಯಾಗಿರುವ ಯಶ್-ರಾಧಿಕಾ ಪಂಡಿತ್ ಈ ಸಿನಿಮಾ ಮಾಡುವ ವೇಳೆಗೆ ಪ್ರೀತಿಯಲ್ಲಿದ್ದರು. ಸದ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ರಾಧಿಕಾ ಸುಮಂಗಲಿ ಧಾರಾವಾಹಿಯಲ್ಲಿ ನಟಿಸಿದ್ದ ವಿಡಿಯೋ ವೈರಲ್ ಆಗಿದ್ದು ಸುಮಂಗಲಿ ಧಾರಾವಾಹಿಯಲ್ಲಿ ರಾಧಿಕಾ ಹೇಗಿದ್ದಾರೆ ನೀವೆ ನೋಡಿ.