ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಹಿಂದಿನಿಂದ ಎಂಟ್ರಿ ಕೊಟ್ಟು ರಕ್ಷಿತ್ ಗೆ ಸರ್ಪ್ರೈಸ್ ಕೊಟ್ಟ ರಶ್ಮಿಕಾ..ಚಿಂದಿ ವಿಡಿಯೋ

121,479

ಈ ಸಿನಿಮಾರಂಗ ಎನ್ನುವುದೇ ಹಾಗೆ. ಹೌದು ಅಲ್ಲಿ ಪ್ರೀತಿ-ಪ್ರೇಮಬ್ರೇಕಪ್ ದಾಂಪತ್ಯ ಜೀವನದಲ್ಲಿ ಬಿರುಕು ವಿಚ್ಛೇದನ ಎಲ್ಲವೂ ಕೂಡ ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ. ಇನ್ನು ಮೊದಮೊದಲು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ಆತ್ಮೀಯ ಸ್ನೇಹಿತರಾದ ಕೆಲ ನಟ ನಟಿಯರು ದಿನ ಕಳೆದಂತೆ ಪ್ರೇಮದ ಜಾಲಕ್ಕೆ ಬಿದ್ದು ವಿವಾಹವಾಗುವ ನಿರ್ಧಾರ ತೆಗೆದುಕೊಳ್ಳುತ್ತಾರೆ.

ಆದರೆ ಇದರಲ್ಲಿ ಬಹುತೇಕ ಜನರು ನಿಶ್ಚಿತಾರ್ಥ ಮಾಡಿ ಕೊಳ್ಳುವ ವೇಳೆಯಲ್ಲಿ ಬ್ರೇಕಪ್ ಮಾಡಿಕೊಂಡರೆ ಸಾಕಷ್ಟು ಮಂದಿ ವಿವಾಹವಾದ ಎರಡ್ಮೂರು ವರ್ಷಗಳ ಬಳಿಕ ಭಿನ್ನಾಭಿಪ್ರಾಯಗಳು ಮೂಡಿ ದೂರ ಸರಿಯುತ್ತಾರೆ. ಹೀಗೆ ಬೇರೆಯಾದ ಪ್ರೇಮಿಗಳು ಮತ್ತೊಂದು ವಿವಾಹವಾಗಿ ಸುಖ ಸಂಸಾರ ನಡೆಸುತ್ತಿದ್ದು ಇನ್ನೂ ಕೆಲವರು ಈ ಬ್ರೇಕ್ ಅಪ್ ಗಳಿಂದ ಬೇಸರಗೊಂಡು ಏಕಾಂಗಿಯಾಗಿಯೇ ಉಳಿಯುತ್ತಾರೆ.

ಅವರು ಜೊತೆಯಲ್ಲಿ ಓಡಾಡುತ್ತಿದ್ದಾಗ ಮಾತ್ರ ಅಭಿಮಾನಿಗಳು ಬಹಳ ಸಂತಸದಿಂದ ಆ ಜೋಡಿಯನ್ನು ನೋಡಿ ಹರಿಸುತ್ತಿರುತ್ತಾರೆ.ಆದರೆ ಯಾವಾಗ ಬ್ರೇಕ್ ಆಗುತ್ತದೋ ಚಿತ್ರರಂಗದವರೇ ಹೀಗೆ ಎಂದು ಭಾವಿಸಿ ಎಲ್ಲವನ್ನು ಮರೆತು ಸುಮ್ಮನಾಗಿಬಿಡುತ್ತಾರೆ. ಆದರೆ ರಶ್ಮಿಕಾ ಮತ್ತು ರಕ್ಷಿತ್ ಶೆಟ್ಟಿ ವಿಚಾರದಲ್ಲಿ ಹಾಗಿಲ್ಲ. ಈಗಲೂ ಕೂಡ ಸಾಕಷ್ಟು ಪ್ರೇಕ್ಷಕರು ಇವರಿಬ್ಬರು ಒಂದಾಗಲಿ ಎಂದು ಕೋರುತ್ತಿದ್ದಾರೆ.

ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ತೆರೆಯ ಮೇಲೆ ಕಾಣಿಸಿಕೊಂಡಿದ್ದ ಈ ಜೋಡಿ ನಿಜ ಜೀವನದಲ್ಲೂ ಒಂದಾಗುತ್ತಿರುವುದನ್ನು ಕಂಡು ಸಾಕಷ್ಟು ಅಭಿಮಾನಿಗಳು ಸಂತಸ ಪಟ್ಟಿದ್ದರು. ಆದರೂ ತಮ್ಮ ಕೆರಿಯರ್ ಗಾಗಿಯೋ ಅಥವಾ ವೈಯಕ್ತಿಕ ಕಾರಣ ದಿಂದಾಗಿಯೋ ಇವರಿಬ್ಬರು ಇದೀಗ ದೂರವಾಗಿ ಬಿಟ್ಟಿದ್ದಾರೆ. ಈ ವಿಚಾರದ ಕುರಿತು ರಶ್ಮಿಕಾ ಅವರ ತಾಯಿಯೇ ಹೇಳಿಕೆ ನೀಡಿದ್ದು ನಿಶ್ಚಿತಾರ್ಥದ ಉಂಗುರವನ್ನು ಕೂಡ ಹಿಂದಿರುಗಿಸಿರುವುದಾಗಿ ತಿಳಿಸಿದ್ದರು.

ಈ ವಿಚಾರ ತಿಳಿದ ಅಭಿಮಾನಿಗಳಿಗೆ ಇದನ್ನು ಸಹಿಸಿಕೊಳ್ಳಲು ಕೂಡ ಸಾಧ್ಯವೇ ಆಗಲಿಲ್ಲ. ಈ ಘಟನೆ ನಡೆದ ಬಳಿಕವೂ ಕೂಡ ಈ ಜೋಡಿಗಳು ಮತ್ತೆ ಒಂದಾಗಲಿಲ್ಲ ಮಾತನಾಡಲಿಲ್ಲ. ಇವೆಲ್ಲಾ ನಡಿದ ಮೇಲೆ ಸಾಮಾಜಿಕ ಜಾಲತಾಣದಿಂದ ಹಾಗೂ ಸಿನಿಮಾಗಳಿಂದ ದೂರ ಉಳಿದ ರಕ್ಷಿತ್ ಶೆಟ್ಟಿ ಮತ್ತೆ ಚೇತರಿಸಿಕೊಳ್ಳಲು ಮೂರು ವರುಷ ಬೇಕಾಯಿತು. ಸದ್ಯ ಇದೀಗ ಇಬ್ಬರೂ ತಮ್ಮ ತಮ್ಮ ಸಿನಿಮಾ ಕೆರಿಯರ್ ನಲ್ಲಿ ಬ್ಯುಸಿಯಾಗಿದ್ದಾರೆ.

ಆದರೆ ಕಳೆದ ವರುಷ ಅಭಿಮಾನಿಗಳಿಗೆ ಸಂತಸ ತರುವಂತಹ ಒಂದು ವಿಚಾರ ಹೊರ ಬಂದಿತ್ತು. ಅದರಲ್ಲಿಯೂ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಅವರ ಹುಟ್ಟುಹಬ್ಬದ ದಿನದಂದು ಈ ಸುದ್ದಿ ಹೊರ ಬಂದಿರುವ ಕಾರಣ ಅಭಿಮಾನಿಗಳಿಗೆ ಸಂತಸ ಮತ್ತಷ್ಟು ಹೆಚ್ಚಾಗಿತ್ತು.ಹೌದು ಪ್ರೇಮಿಗಳಾಗಿದ್ದ ಈ ಜೋಡಿಗಳು ಸ್ನೇಹಿತರಾಗಿದ್ದು ರಶ್ಮಿಕಾ ಮಂದಣ್ಣ ಅವರ ಹುಟ್ಟುಹಬ್ಬದ ದಿನ ರಕ್ಷಿತ್ ಶೆಟ್ಟಿ ಅವರು ವಿಶೇಷವಾದ ವೀಡಿಯೋವನ್ನು ಹಂಚಿಕೊಳ್ಳುವ ಮೂಲಕ ಶುಭಾಶಯ ತಿಳಿಸಿದ್ದರು.

ಕಿರಿಕ್ ಪಾರ್ಟಿ ಸಿನಿಮಾದ ಆಡಿಷನ್ ನಲ್ಲಿ ಭಾಗಿಯಾಗಿದ್ದ ರಶ್ಮಿಕಾ ಮಂದಣ್ಣ ಅವರ ಆ ಕ್ಷಣವನ್ನು ಹಂಚಿಕೊಂಡಿರುವ ರಕ್ಷಿತ್ ನಾನು ಇಂದು ನಿಮ್ಮ ಕಿರಿಕ್ ಪಾರ್ಟಿ ಸಿನಿಮಾದ ಆಡಿಷನ್ ಸಮಯದ ವೀಡಿಯೋ ವೊಂದನ್ನು ಹಂಚಿಕೊಳ್ಳುತ್ತಿದ್ದೇನೆ. ಅಂದಿನಿಂದ ಹಿಡಿದು ಇಂದಿನವರೆಗೆ ನೀವೂ ಬಹಳಷ್ಟು ದೂರ ಪ್ರಯಾಣಿಸಿದ್ದೀರಿ. ನಿನ್ನ ಗುರಿಯನ್ನು ಬೆನ್ನತ್ತಿ ನಿಜವಾದ ವಾರಿಯರ್ ರೀತಿಯಲ್ಲಿ ಪ್ರಯಾಣಿಸುತ್ತಿರುವ ನಿಮ್ಮನ್ನು ಕಂಡರೆ ನನಗೆ ಹೆಮ್ಮೆ ಯಾಗುತ್ತಿದೆ. ನಿಮ್ಮ ಧೈರ್ಯವನ್ನು ನಾನು ಮೆಚ್ಚುತ್ತೇನೆ ಹುಟ್ಟು ಹಬ್ಬದ ಶುಭಾಶಯಗಳು. ಇನ್ನು ಹೆಚ್ಚೆಚ್ಚು ಯಶಸ್ಸು ನಿಮ್ಮದಾಗಲಿ ಎಂದು ಮನತುಂಬಿ ಬರೆದು ಪೋಸ್ಟ್ ಮಾಡಿದ್ದರು.

ರಕ್ಷಿತ್ ಶೆಟ್ಟಿ ಅವರ ಈ ಪೋಸ್ಟ್ ನೋಡುತ್ತಿದ್ದಂತೆ ರಶ್ಮಿಕಾ ಮಂದಣ್ಣ ಅವರು ಕೂಡಾ ಪ್ರತಿಕ್ರಿಯಿಸಿದ್ದು ಹಳೆಯ ದಿನಗಳನ್ನು ನೆನಪು ಮಾಡಿಕೊಂಡಿದ್ದಾರೆ. ಇತ್ತ ರಕ್ಷಿತ್ ಹಾಗೂ ರಶ್ಮಿಕಾ ಅಭಿಮಾನಿಗಳು ಇವರಿಬ್ಬರು ಮಾತನಾಡಿರುವುದನ್ನು ನೋಡಿ ಸಿಕ್ಕಾಪಟ್ಟೆ ಖುಷಿ ಪಟ್ಟಿದ್ದು ಇನ್ನು ಮುಂದೆ ಸ್ನೇಹಿತ ರಾಗಿಯಾದರೂ ಒಂದಾಗಲಿ ಎಂದು ಹಾರೈಸಿದ್ದರು.

ಅಲ್ಲದೆ ರಶ್ಮಿಕಾ ಮಂದಣ್ಣ ಅವರ ಹುಟ್ಟುಹಬ್ಬದ ದಿನದಂದು ಅಭಿಮಾನಿಗಳನ್ನ ಕಾಮನ್ ಡಿಪಿ ಹಾಕುವ ಮೂಲಕ ತಮ್ಮ ನೆಚ್ಚಿನ ನಟನಿಗೆ ಶುಭಾಶಯ ತಿಳಿಸಿದ್ದರು. ಈ ನಡುವೆ ಕ್ಯೂಟ್ ವಿಡಿಯೋ ವೊಂದು ವೈರಲ್ ಆಗಿದ್ದು ಅವನೇ ಶ್ರೀಮನ್ನಾರಯಣ ಸಿನಿಮಾಸ ಮುಹೂರ್ತ ಸಮಯದಲ್ಲಿ ರಕ್ಷಿತ್ ಗೆ ರಶ್ಮಿಕಾ ಎಷ್ಟು ಕ್ಯೂಟ್ ಆಗಿ ಸರ್ಪೈಸ್ ನೀಡಿದ್ದಾರೆ ನೀವೆ ನೋಡಿ.