ಸದ್ಯ ಧ್ರುವ ಸರ್ಜಾ ಹಾಗೂ ಪ್ರೇರಣಾ ಅವರು ಮುದ್ದಾದ ಹೆಣ್ಣು ಮಗುವನ್ನು ತಮ್ಮ ಬದುಕಿಗೆ ಸ್ವಾಗತಿಸಿದ್ದು ಧ್ರುವ ಅಂದುಕೊಂಡಂತೆ ಹೆಣ್ಣು ಮಗುವನ್ನೇ ಪಡೆದಿದ್ದಾರೆ. ಇನ್ನು ಮೇಘನಾ ರಾಜ್ ಅವರೂ ಕೂಡಾ ದೊಡ್ಡ ಆಗಿರೋ ಖುಷಿಯಲ್ಲಿದ್ದು ರಾಯನ್ ಅಣ್ಣನಾಗಿದ್ದಾನೆ.ಮೇಘನಾ ಈ ಬಗ್ಗೆ ಪ್ರತಿಕ್ರಿಯಿಸಿ ನಮ್ಮ ಮನೆಯಲ್ಲಿ ಮಗ ಇದ್ದ, ಹೆಣ್ಣು ಮಗು ಬೇಕೆಂಬ ಆಸೆ ಇದ್ದು ಈಗ ಹೆಣ್ಣುಮಗು ಜನಸಿದ್ದು ಖುಷಿಯಾಗಿದೆ ಎಂದಿದ್ದಾರೆ. ಇನ್ನು ರಾಯನ್ ರಾಜ್ ಸರ್ಜಾಗೆ ಪುಟ್ಟ ತಂಗಿಯೊಬ್ಬಳು ಸಿಕ್ಕಿದ್ದು ಚಿರು ಮಗ ಈಗ ಅಣ್ಣನಾಗಿದ್ದು ಧ್ರುವ ಸರ್ಜಾ ಕೂಡಾ ಹೆಣ್ಣು ಮಗು ಜನಿಸಿದ ಸಂಭ್ರಮದಲ್ಲಿದ್ದಾರೆ..
ಇನ್ನು ಹೆಣ್ಣು ಮಗುವಿಗೆ ಜನ್ಮ ಕೊಟ್ಟಿರುವ ಪ್ರೇರಣಾ ಅವರನ್ನು ನೋಡಲು ಮೇಘನಾ ರಾಜ್ ಕೆ.ಆರ್ ರಸ್ತೆಯಲ್ಲಿರುವ ಅಕ್ಷ ಆಸ್ಪತ್ರೆಗೆ ಭೇಟಿ ನೀಡಿದ್ದರು. ತಂಗಿ ಮತ್ತು ಮಗಳನ್ನು ನೋಡಲು ಬಂದಿರುವ ಮೇಘನಾ ತಾಯಿ ಮಗು ಇಬ್ಬರೂ ಆರೋಗ್ಯವಾಗಿದ್ದು ಮಗನಾಗಿ ರಾಯನ್ ಇದ್ದಾನೆ. ಮಗಳು ಬಂದಿರುವುದಕ್ಕೆ ಖುಷಿ ಇದೆ ಎಂದಿದ್ದಾರೆ. ಇನ್ನು ಸೆಪ್ಟೆಂಬರ್ 7ರಂದು ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಪ್ರೇರಣಾ ಸೀಮಂತ ಕಾರ್ಯ ನಡೆದಿತ್ತು. ಈ ಕಾರ್ಯಕ್ರಮದಲ್ಲಿ ಅರ್ಜುನ್ ಸರ್ಜಾ ಮೊದಲಾದವರು ಭಾಗಿ ಆಗಿದ್ದರು.
ಶೀಘ್ರದಲ್ಲಿ ಸರ್ಜಾ ಕುಟುಂಬಕ್ಕೆ ಹೊಸ ಸದಸ್ಯನ ಆಗಮನ ಕಾರಣ ಸರ್ಜಾ ಕುಟುಂಬದಲ್ಲಿ ಸಂತಸ ಮೂಡಿತ್ತು. ಹಸಿರು ಮತ್ತು ಕೆಂಪು ಕಾಂಬಿನೇಷನ್ ಸೀರಿಯಲ್ಲಿ ಪ್ರೇರಣಾ ಮಿಂಚುತ್ತಿದ್ದು ರೇಶ್ಮೆ ಶರ್ಟ್ ಮತ್ತು ಧೋತಿಯಲ್ಲಿ ಧ್ರುವ ಸರ್ಜಾ ಕಾಣಿಸಿಕೊಂಡಿದ್ದರು ಸೋಷಿಯಲ್ ಮೀಡಿಯಾದಲ್ಲಿ ಫೋಟೋ ವೈರಲ್ ಆಗಿದ್ದು ಸೀಮಂತ ಕಾರ್ಯಕ್ರಮಕ್ಕೆ ವೇದಿಕೆಯನ್ನು ಹೂಗಳಿಂದ ಅಲಂಕಾರ ಮಾಡಲಾಗಿತ್ತು.
ಇನ್ನು ಶಕ್ತಿ ಪ್ರಸಾದ್ ಮತ್ತು ಚಿರಂಜೀವಿ ಸರ್ಜಾ ಫೋಟೋ ಕೂಡ ಇಡಲಾಗಿದ್ದು ಡಿಸೈನರ್ ಮೆಹೆಂದಿ ಕೂಡ ಹಾಕಿಸಿಕೊಂಡಿದ್ದರು. Our little happiness is one the way ಎಂದು ಒಂದು ಕೈ ಮೇಲೆ ಬರೆದು ಧ್ರುವ ಪತ್ನಿಗೆ ಮುತ್ತಿಡುತ್ತಿರುವ ಡಿಸೈನ್ ಹಾಕಲಾಗಿದ್ದು ಮತ್ತೊಂದು ಕೈ ಮೇಲೆ You mean the world to us ಎಂದು ಬರೆದು. ಪುಟ್ಟ ಕೃಷ್ಣ ಅಮ್ಮನ ಮಡಿಲಿನಲ್ಲಿ ಕುಳಿತಿರುವುದನ್ನು ಬಿಡಿಸಲಾಗಿದೆ. ಅಲ್ಲದೆ ಪುಟ್ಟ ಮಗುವೊಂದು ಫೀಡಿಂಗ್ ಬಾಡಲ್ ಮತ್ತು ಬಾಲ್ ಜೊತೆಗಿರುವಂತೆ ಡಿಸೈನ್ ಮಾಡಲಾಗಿತ್ತು.
ಇನ್ನು ಚಿರಂಜೀವಿ ಸರ್ಜಾ ಅವರು ಇಹಲೋಕವನ್ನು ತ್ಯಜಿಸಿದ ನಂತರ ಮೇಘನಾ ರಾಜ್ ಅವರು ಚಿರಂಜೀವಿ ಸರ್ಜಾ ಅವರ ಕುಟುಂಬದಿಂದ ಸ್ವಲ್ಪ ದೂರನೇ ಉಳಿದಿದ್ದು ಈಗ ತಮ್ಮ ತಂದೆ ತಾಯಿಯ ಜೊತೆ ವಾಸ ಮಾಡುತ್ತಿದ್ದಾರೆ.
ಆದರೂ ಕೂಡ ಕೆಲವು ಕಾರ್ಯಕ್ರಮ ಅಥವಾ ಸಮಾರಂಭ ಇದ್ದಾಗ ಇಬ್ಬರು ಕುಟುಂಬದವರು ಕೂಡ ಒಟ್ಟಾಗಿ ಇದ್ದರೆ ನೋಡಿಗರಿಗೆ ಅಷ್ಟೇನೂ ಬಾಸ ವಾಗುವುದಿಲ್ಲ ಆದರೆ ಧ್ರುವ ಸರ್ಜಾ ಕುಟುಂಬದಲ್ಲಿ ನಡೆಯುವಂತಹ ಕಾರ್ಯಗಳಿಗೆ ಮೇಘನಾ ರಾಜ್ ಅವರು ಹೋಗುತ್ತಿಲ್ಲ ಹಾಗೆಯೇ ಮೇಘನಾ ರಾಜ್ ಅವರ ಮನೆಯಲ್ಲಿ ನಡೆಯುತ್ತಿರುವಂತಹ ಕಾರ್ಯಕ್ರಮಗಳಿಗೆ ಧ್ರುವ ಸರ್ಜಾ ಅವರು ಹೋಗುತ್ತಿಲ್ಲ. ಈ ನಡುವೆ ಚಿರು ರವರ ಪುಣ್ಯತಿಥಿಗೆ ಎರಡು ಕುಟುಂಬದವರು ಭಾಗವಹಿಸಿದ್ದು ಈ ವೇಳೆ ರಾಯನ್ ನನ್ನು ನಗಿಸಲು ಪ್ರೇರಣಾ ಎಷ್ಟು ಕಷ್ಟಪಟ್ಟಿದ್ದಾರೆ ನೀವೆ ನೋಡಿ.