ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಒಪ್ಪಿಗೆ ಸೂಚಿಸಿದ ಕಾಂತಾರ ನಟಿ ಸಪ್ತಮಿ ಗೌಡ…ಸುಮಲತಾ ಮನೆಯಲ್ಲಿ ಸಂಭ್ರಮ, ಸಿಹಿಸುದ್ದಿ

5,478

sihisuಸದ್ಯ ವಿಶ್ವ ಮಟ್ಟದಲ್ಲಿ ಹಿಟ್ ಕೊಟ್ಟ ಕಾಂತಾರ ಬಗ್ಗೆ ಇನ್ನೂ ಕೂಡ ಚರ್ಚೆ ನಿಂತಿಲ್ಲ. ದೇಶದ ಉದ್ದಕ್ಕೂ ರಿಷಬ್ ಶೆಟ್ಟಿಯ ಸಿನಿಮಾ ಪ್ರೇಕ್ಷಕರನ್ನು ಮನಗೆದ್ದಿದ್ದು  ಈ ಸಿನಿಮಾದಲ್ಲಿ ಬಂದ ಒಂದೊಂದು ಪಾತ್ರವೂ ಕೂಡ ಪ್ರೇಕ್ಷಕರಿಗೆ ಕಿಕ್ ಕೊಟ್ಟಿದೆ. ಅದರಲ್ಲೂ ರಿಷಬ್ ಶೆಟ್ಟಿಯಂತೆಯೇ ಸಪ್ತಮಿ ಗೌಡ ಸಿನಿಪ್ರಿಯರಿಗೆ ಇಷ್ಟ ಆಗಿದ್ದು  ಈಗಾಗಲೇ ಕಾಂತಾರ ಬ್ಲಾಕ್‌ಬಸ್ಟರ್ ಲಿಸ್ಟ್ ಸೇರಿದೆ. ಹೌದು ಬಾಕ್ಸಾಫೀಸ್‌ನಲ್ಲಿ ಪ್ರತಿ ದಿನ ಒಂದಲ್ಲ ಒಂದು ದಾಖಲೆಗಳನ್ನು ಅಳಿಸಿ ಹಾಕುತ್ತಾ ಮುನ್ನುಗ್ಗುತ್ತಿದ್ದು ಕನ್ನಡದ್ದೇ ಸಿನಿಮಾ ಕೆಜಿಎಫ್ ಸೃಷ್ಟಿಸಿದ ದಾಕಳೆಗಳನ್ನು ಬ್ರೇಕ್ ಮಾಡಿದೆ.

ಇನ್ನು ಇಷ್ಟೆಲ್ಲ ಸದ್ದು ಮಾಡಿದ ಮೇಲೆ ರಿಷಬ್ ಶೆಟ್ಟಿ ಹಾಗೂ ಸಪ್ತಮಿ ಗೌಡ ಮುಂದಿನ ಸಿನಿಮಾ ಯಾವುದು ಅನ್ನೋ ಬಗ್ಗೆ ಕುತೂಹಲ ಇದ್ದೇ ಇರುತ್ತದೆ. ಸದ್ಯ ರಿಷಬ್ ಶೆಟ್ಟಿ ಸಾಲು ಸಾಲು ಸಿನಿಮಾ ಸೆಟ್ಟೇರಿದ್ದರೂ ಈ ಯಶಸ್ಸಿನ ಬಳಿಕ ಏನಾಗುತ್ತೆ ಅನ್ನೋ ಮಾಹಿತಿ ಇಲ್ಲ. ಹೌದು ಆದರೆ ಸಪ್ತಮಿ ಗೌಡ ಹೊಸ ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

ಹೌದು ರಿಷಬ್ ಶೆಟ್ಟಿ ಅಭಿನಯದ ಶಿವನ ಪಾತ್ರ ಇಷ್ಟೊಂದು ಸದ್ದು ಮಾಡಬಹುದು ಅನ್ನೋದನ್ನು ಅವರೂ ಕೂಡ ಊಹಿಸಿರಲಿಲ್ಲ. ಅದೇ ಇನ್ನೊಂದು ಕಡೆ ಲೀಲಾ ಪಾತ್ರ ಕೂಡ ಸಿನಿಮಾದಲ್ಲಿ ಹಾಗೆ ಬಂದು ಹೀಗೆ ಹೋಗಬಹುದೇನೋ ಅನ್ನುವ ಕಲ್ಪನೆ ಇತ್ತು. ಆದರೆ ಫಾರೆಸ್ಟ್ ಗಾರ್ಡ್ ಲೀಲಾ ಪಾತ್ರದಲ್ಲಿ ಎಂಟ್ರಿ ಕೊಟ್ಟ ಸಪ್ತಮಿ ಗೌಡ ರವರು ಸಿನಿಪ್ರಿಯರ ಮನಸ್ಸು ಗೆದ್ದಿದ್ದು ಲೀಲಾ ಪಾತ್ರ ಕಂಡು ಪ್ರೇಕ್ಷಕರು ಭೇಷ್ ಎಂದಿದ್ದರು.

ಇಲ್ಲಿಂದ ಮುಂದಿನ ಸಿನಿಮಾ ಯಾವುದು ಅನ್ನೋ ಬಗ್ಗೆ ಕುತೂಹಲ ಜನರಲ್ಲಿದೆ. ಈಗ ಅದಕ್ಕೆ ತೆರೆಬಿದ್ದಿದೆ. ನಟಿ ಸಪ್ತಮಿ ಗೌಡ ಸಿನಿಮಾರಂಗ ಹೊಸ ಸೆನ್ಸೇಷನ್. ಸಿನಿಪ್ರಿಯರ ಬಾಯಲ್ಲೀಗ ಸಪ್ತಮಿ ಗೌಡ ಹೆಸರು ಕೇಳೋಕೆ ಸಿಗುತ್ತಿದ್ದು ಇನ್ನೊಂದು ಕಡೆ ಈ ನಟಿಗೆ ಸ್ಯಾಂಡಲ್‌ವುಡ್‌ನಲ್ಲಿ ಬೇಡಿಕೆ ಕೂಡ ಹೆಚ್ಚಾಗಿತ್ತು. ಈ ಬೆನ್ನಲ್ಲೇ ಯಾವ ಸಿನಿಮಾವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಅನ್ನುವ ಕುತೂಹಲವಂತೂ ಇತ್ತು. ಅದಕ್ಕೀಗ ತೆರೆಬಿದ್ದಿದ್ದು. ರೆಬೆಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಹೊಸ ಸಿನಿಮಾದಲ್ಲಿ ನಟಿಸೋಕೆ ಸಪ್ತಮಿ ಗೌಡ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

ಹೌದು ಕಾಂತಾರ ಬಳಿಕ ಸಪ್ತಮಿ ಗೌಡ ಹೊಸ ಸಿನಿಮಾ ಕಾಳಿಯಲ್ಲಿ ನಟಿಸುತ್ತಿದ್ದು ಪೈಲ್ವಾನ್ ಸಿನಿಮಾದ ನಿರ್ದೇಶಕ ಕೃಷ್ಣ ಈ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇನ್ನು  ಅಭಿಷೇಕ್ ಅಂಬರೀಶ್ ಲೀಡ್‌ ರೋಲ್‌ನಲ್ಲಿ ನಟಿಸುತ್ತಿದ್ದು ಇವರಿಗೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಅನ್ನುವ ಸುದ್ದಿ ಚಿತ್ರರಂಗದಲ್ಲಿ ಹರಿದಾಡುತ್ತಿದ್ದಾರೆ. ಈ ಬಗ್ಗೆ ಚಿತ್ರತಂಡ ಮತ್ತು ನಿರ್ದೇಶಕ ಕೃಷ್ಣ ಅಧಿಕೃತವಾಗಿ ಮಾಹಿತಿಯನ್ನು ನೀಡಬೇಕಿದೆ.

ಇನ್ನು ಸಪ್ತಮಿ ಗೌಡ ಅಭಿನಯದ ಕಾಂತಾರ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡೋದನ್ನು ಇನ್ನೂ ಕೂಡ ನಿಲ್ಲಿಸಿಲ್ಲ. ವಿಶ್ವದಾದ್ಯಂತ ಬಾಕ್ಸಾಫೀಸ್‌ನಲ್ಲಿ ಇದೂವರೆಗೂ ಸುಮಾರು 343 ಕೋಟಿ ರೂ. ಕಲೆಹಾಕಿದ್ದು  ಹಿಂದಿಯಲ್ಲೂ ಈ ಸಿನಿಮಾ ಬರೋಬ್ಬರಿ 63 ಕೋಟಿ ರೂ.ಗೂ ಅಧಿಕ ಗಳಿಕೆ ಕಂಡಿದೆ. ವಿಶೇಷ ಅಂದರೆ ಕಾಂತಾರ ಬಳಿಕ ಸಪ್ತಮಿ ಗೌಡ ಹೊಸ ಸಿನಿಮಾ ಟೈಟಲ್ ಕೂಡ ಕ ಅಕ್ಷರದಿಂದಲೇ ಆರಂಭ ಆಗುತ್ತಿದ್ದು ಹೀಗಾಗಿ ಈ ಸಿನಿಮಾನೂ ನಿರೀಕ್ಷೆ ದುಪ್ಪಟ್ಟಾಗಿದೆ.