ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಅಶ್ವಿನಿ ಜೊತೆ ಅಪ್ಪು ಊಟ ಮಾಡುವಾಗ ನಕ್ಕ ಅಪ್ಪು…ಕ್ಯೂಟ್ ವಿಡಿಯೋ ನೋಡಿ

3,026

ಕನ್ನಡ ಚಿತ್ರರಂಗದ ರಾಜರತ್ನ ಪವರ್​ ಸ್ಟಾರ್​ ಕರುನಾಡ ರತ್ನ ಸರಳತೆಯ ಸಾಮ್ರಾಟ್​, ಅಭಿಮಾನಿಗಳ ನಗು ಮುಖದ ರಾಜಕುಮಾರ ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ಇಹಲೋಕ ತ್ಯಜಿಸಿ ಅದಾಗಲೇ ವರುಷ ಕಳೆದಿದ್ದು ಆದರೆ ಅವರಿಗೆ ಇದ್ದ ಪರಿಸರ ಕಾಳಜಿ ಸಮಾಜದ ಮೇಲೆ ಇದ್ದ ಪ್ರೀತಿ ಹಾಗೂ ದೊಡ್ಡವರ ಮೇಲೆ ಇದ್ದ ಗೌರವ ಎಲ್ಲರನ್ನೂ ಕೂಡ ಮೂಕ ವಿಸ್ಮಿತರನ್ನಾಗಿಸುತ್ತೆ.

ಅವರು ಮಾಡಿ ಹೋದ ಕೆಲಸವನ್ನು ಎಲ್ಲರು ಮುಂದುವರೆಸಿಕೊಂಡು ಹೋಗುವಂತೆ ಮಾಡಿದ್ದಾರೆ. ಹೌದು ಅವರು ನಮ್ಮ ಜೊತೆ ಇಲ್ಲ ಎಂಬುವ ಕಹಿ ಸತ್ಯವನ್ನು ಒಪ್ಪಿಕೊಂಡು ನಾವು ಹೋಗಲೇ ಬೇಕಾಗಿದ್ದು ಪ್ರತಿದಿನ ಅಪ್ಪು ಅವರನ್ನು ನೆನೆಯುವ ಕಾರ್ಯಕ್ರಮಗಳು ನಡೆಯುತ್ತಲೇ ಇದೆ.

ಹೌದು ಇದರ ಜೊತೆಗೆ ಒಂದಲ್ಲ ಒಂದು ರೀತಿ ಅಪ್ಪು ಅವರಿಗೆ ಗೌರವ ಸಲ್ಲಿಸುವ ಕೆಲಸಗಳು ನಡೆಯುತ್ತಲೇ ಇದ್ದು ಇತ್ತೀಚೆಗಷ್ಟೇ ಕೆಎಂಎಫ್​ ಕೂಡ ಅಪ್ಪು ಅವರಿಗೆ ವಿಶೇಷವಾಗಿ ಗೌರವ ಸಲ್ಲಿಸಿದ್ದು ಇದನ್ನು ಕಂಡ ಅಭಿಮಾನಿಗಳು ಭಾವುಕರಾಗಿದ್ದರು.

ಯಾವುದೇ ಹಣ ಪಡೆಯದೇ ಅಪ್ಪು ನಂದಿನಿ ಜಾಹೀರಾತಿನಲ್ಲಿ ನಟಿಸಿದ್ದು ಬ್ರ್ಯಾಂಡ್​ ಅಂಬಾಸಿಡರ್ ​ಆಗಿದ್ದರು. ಅದರಂತೆ ಕೆಎಂಎಫ್ ವತಿಯಿಂದ ಅವರಿಗೆ ವಿಶೇಷ ಗೌರವ ಸಲ್ಲಿಸರುವ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು. ಇದೀಗ ಅಪ್ಪು ಅಶ್ವಿನಿ ಜೊತೆ ಕಳೆದ
ಸಮಯದ ವಿಡಿಯೋ ವೈರಲ್ ಆಗಿದೆ ನೋಡಿ.