ಸದ್ಯ ರಾಮ್ ನಾರಾಯಣ್ ನಿರ್ದೇಶನದಲ್ಲಿ ಪ್ರಜ್ವಲ್ ದೇವರಾಜ್ ಅಭಿನಯಿಸಿರುವ ಅಬ್ಬರ ಸಿನಿಮಾ ಹೆಸರಿಗೆ ತಕ್ಕಂತೆ ಅಬ್ಬರಿಸಲು ಸಿದ್ಧವಾಗಿದ್ದು ಈ ಸಿನಿಮಾ ಇದೇ ತಿಂಗಳು ರಾಜ್ಯಾದ್ಯಂತ ಅಬ್ಬರಿಸಲು ಬರುತ್ತಿದೆ. ಹೌದು ಇತ್ತೀಚೆಗೆ ಸಿನಿಮಾ ಟ್ರೇಲರ್ ಬಿಡುಗಡೆ ಸಮಾರಂಭ ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ನಡೆದಿದ್ದು ಕಾರ್ಯಕ್ರಮದಲ್ಲಿ ಹಿರಿಯ ನಟ, ಪ್ರಜ್ವಲ್ ತಂದೆ ಡೈನಾಮಿಕ್ ಸ್ಟಾರ್ ದೇವರಾಜ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಈ ಸಮಯದಲ್ಲಿ ಪ್ರಜ್ವಲ್ ದೇವರಾಜ್ ರವರು ತಂದೆಯ ಎದುರೇ ಖ್ಯಾತ ಕಾಮಿಡಿ ಮಟ ಸಾಧುಕೋಕಿಲ ಅವರಿಗೆ ಏನು ಮಾಡಿದರು ಗೊತ್ತಾ? ಶಾಕ್ ಆಗ್ತೀರ.
ರಾಮ್ ನಾರಾಯಣ್ ರವರು ಇದಕ್ಕೂ ಮುನ್ನ ಟೈಸನ್ ಹಾಗೂ ಕ್ರ್ಯಾಕ್ ಸಿನಿಮಾವನ್ನು ನಿರ್ದೇಶಿಸಿದ್ದು ಅಬ್ಬರ ಚಿತ್ರವನ್ನು ಸಿ ಆಂಡ್ ಎಂ ಮೂವೀಸ್ ಬ್ಯಾನರ್ ಅಡಿ ಬಸವರಾಜ್ ಮಂಚಯ್ಯ ನಿರ್ಮಿಸಿದ್ದಾರೆ. ಆ್ಯಕ್ಷನ್ ಫ್ಯಾಮಿಲಿ ಕಾಮಿಡಿ ಎಂಟರ್ಟೈನರ್ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ನಟ ಪ್ರಜ್ವಲ್ ದೇವರಾಜ್ ಜೊತೆಗೆ ರಾ ಶಿಪೊನ್ನಪ್ಪ ನಿಮಿಕಾ ರತ್ನಾಕರ್ ಹಾಗೂ ಲೇಖಾ ಚಂದ್ರ ನಾಯಕಿಯರಾಗಿ ಅಭಿನಯಿಸಿದ್ದು ಕಾರ್ಯಕ್ರಮದ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ನಿರ್ದೇಶಕ ರಾಮ್ ನಾರಾಯಣ್ ಮಾತನಾಡಿ ಚಿತ್ರದ ಬಗ್ಗೆ ಮಾಹಿತಿ ನೀಡಿದರು.
ಇನ್ನು ಇದೇ ತಿಂಗಳ 18ಕ್ಕೆ ಅಬ್ಬರ ಸಿನಿಮಾ ಬಿಡುಗಡೆಯಾಗುತ್ತಿದೆ. ಎಕ್ಸೈಟ್ಮೆಂಟ್ ಜೊತೆಗೆ ಆತಂಕವೂ ಇದ್ದು ಆದರೆ ಸಿನಿಮಾ ಗೆಲುವ ಭರವಸೆ ಇದೆ. ಅಂದುಕೊಂಡದ್ದಕ್ಕಿಂತ ಚೆನ್ನಾಗಿ ಸಿನಿಮಾ ಮೂಡಿ ಬಂದಿದೆ. ಹಾಡಿನ ಚಿತ್ರೀಕರಣವೊಂದರಲ್ಲಿ ನಾಯಕಿ ನಿಮಿಕಾ ಕಾಲಿಗೆ ಪೆಟ್ಟಾದರೂ ಅದನ್ನು ತೋರಿಸಿಕೊಳ್ಳದೆ ಸಿನಿಮಾದಲ್ಲಿ ನಟಿಸಿದರು. ಉಳಿದ ನಾಯಕಿಯರು ಕೂಡಾ ಬಹಳ ಚೆನ್ನಾಗಿ ಅಭಿನಯಿಸಿದ್ದಾರೆ ಎಂದರು.
ಹಿರಿಯ ನಟ ದೇವರಾಜ್ ಮಾತನಾಡಿ ಟ್ರೇಲರ್ ಬಹಳ ಚೆನ್ನಾಗಿದೆ.
ಚಿತ್ರದ ಹಾಡುಗಳು ಕೂಡಾ ತುಂಬಾ ಚೆನ್ನಾಗಿ ಬಂದಿವೆ. ಚಿತ್ರದ ಮೂವರು ನಾಯಕಿಯರು ಮಗನ ಬಗ್ಗೆ ಒಳ್ಳೆಯ ಮಾತುಗಳನ್ನು ಹೇಳಿದಾಗ ಒಬ್ಬ ತಂದೆಯಾಗಿ ನನಗೆ ಬಹಳ ಖುಷಿಯಾಗಿದ್ದು ಕನ್ನಡ ಚಿತ್ರರಂಗಕ್ಕೆ ಈಗ ಶುಕ್ರದೆಸೆ ಬಂದಿದೆ. ಇಡೀ ದೇಶವೇ ನಮ್ಮ ಚಿತ್ರರಂಗವನ್ನು ಹೊಗಳುತ್ತಿದೆ. ರಾಮ್ ನಾರಾಯಣ್ ಜೊತೆ ನಾನೂ ಕೆಲಸ ಮಾಡಿದ್ದೇನೆ. ಚಿತ್ರದ ಡೈಲಾಗ್ಗಳು ಚೆನ್ನಾಗಿವೆ ಎಂದರು.
ಇನ್ನು ನಾಯಕ ಪ್ರಜ್ವಲ್ ದೇವರಾಜ್ ಮಾತನಾಡಿ ಈ ಸಿನಿಮಾದಲ್ಲಿ ನಟಿಸಿದ ನಂತರ ಬಹಳ ನೆಮ್ಮದಿ ಎನಿಸುತ್ತಿದೆ. ಚಿತ್ರತಂಡದ ಎಲ್ಲರ ಶ್ರಮದಿಂದ ಸಿನಿಮಾ ಇಷ್ಟು ಚೆನ್ನಾಗಿ ಬರಲು ಸಾಧ್ಯವಾಯ್ತು. ಸಿನಿಮಾದಲ್ಲಿ ನಾನು ಮೂರು ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದೇನೆ. ಚಿತ್ರದಲ್ಲಿ ಹಾಸ್ಯ ಮನರಂಜನೆಯೊಂದಿಗೆ ರಿವೇಂಜ್ ಕಥೆ ಕೂಡಾ ಇದೆ. ಕೊನೆ ಕ್ಷಣದವರೆಗೂ ಪ್ರೇಕ್ಷಕರಿಗೆ ಕಥೆ ಬಗ್ಗೆ ಬಹಳ ಕುತೂಹಲ ಕಾಡುತ್ತದೆ. ಮನುಷ್ಯ ಸದಾ ಜಾಗೃತನಾಗಿರಬೇಕು ಎಂಬ ಸಂದೇಶವನ್ನು ಚಿತ್ರದಲ್ಲಿ ತೋರಿಸಲಾಗಿದೆ ಎಂದು ಚಿತ್ರದ ಬಗ್ಗೆ ಮಾಹಿತಿ ನೀಡಿದರು.
ಆದರೆ ಇದೀಗ ಅಪ್ಪನ ಎದುರೇ ಸಾಧು ಕೋಕಿಲ ಅವರಿಗೆ ನಟ ಪ್ರಜ್ವಲ್ ದೇವರಾಜ್ ಹೊಡೆದಿದ್ದಾರೆ. ಹೌದು ಪ್ರಜ್ವಲ್ ದೇವರಾಜ್ ಹೊಡೆಯುತ್ತಿದ್ದಂತೆ ಸಾಧು ಕೋಕಿಲ ನಕ್ಕಿದ್ದಾರೆ. ಅಷ್ಟಕ್ಕೂ ಪ್ರಜ್ವಲ್ ದೇವರಾಜ್ ಅವರು ಸಾಧುಕೋಕಿಲ ಅವರಿಗೆ ಹೊಡೆದಿರುವುದು ಸಿನಿಮಾದ ಶೂಟಿಂಗ್ ನಲ್ಲಿ. ಹೌದು ಸಿನಿಮಾದ ಚಿತ್ರೀಕರಣ ನಡೆಯುತ್ತಿರುವ ವೇಳೆಯಲ್ಲಿ ಸಿನಿಮಾದ ದೃಶ್ಯಕ್ಕಾಗಿ ಹೊಡೆದಿದ್ದು ಸದ್ಯ ಈ ವಿಡಿಯೋ ತುಣುಕು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.