ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಶೂಟಿಂಗ್ ಮಧ್ಯೆ ಚಾರ್ಲಿ ನಾಯಿ ಕರೆಸಿ ತುಂಟಾಟ ಮಾಡಿದ ದರ್ಶನ್…ಕ್ಯೂಟ್ ವಿಡಿಯೋ

8,377

ನಮ್ಮ ಕನ್ನಡ ಚಿತ್ರರಂಗದ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಜೀವನದಲ್ಲಿ ಇಬ್ಬರಿಗೆ ಬಹಳ ಮುಖ್ಯವಾದ ಸ್ಥಾನವನ್ನು ಕೊಟ್ಟಿದ್ದಾರೆ. ಒಂದು ಅವರ ಅಭಿಮಾನಿಗಳಿಗೆ ಮತ್ತೊಂದು ಪ್ರಾಣಿಗಳಿಗೆ. ಹೌದು ಅಭಿಮಾನಿಗಳು ಯಾವುದೇ ಸಮಯಕ್ಕೆ ಬಂದರೂ ಏನೇ ಸಹಾಯ ಕೇಳಿದರೂ ಕೂಡ ಡಿಬಾಸ್ ದರ್ಶನ್ ಅವರು ಇಲ್ಲ ಎನ್ನುವುದಿಲ್ಲ. ಇನ್ನು ದರ್ಶನ್ ರವರಿಗೆ ಇರುವಂತ ಅಭಿಮಾನಿ ಬಳಗ ಬೇರೆ ಯಾವ ನಟರಿಗೂ ಇಲ್ಲ ಎಂದು ಹೇಳಿದರೆ ಖಂಡಿತಾವಾಗಿಯೂ ತಪ್ಪಾಗಲಾರದು.

ಇನ್ನೂ ದರ್ಶನ್ ರವರಿಗೆ ಪರಿಸರ ಪ್ರಾಣಿಗಳು ಕಾಡು ಗಿಡ ಮರಗಳೆಂದರೆ ಎಷ್ಟು ಇಷ್ಟ ಎಂದು ತಮಗೆ ಗೊತ್ತೇ ಇದೆ. ದರ್ಶನ್ ಅವರು ಮೈಸೂರಿನ ಹತ್ತಿರ ಸುಮಾರು ೫೦ ಎಕರೆಯ ಜಾಗದಲ್ಲಿ ಒಂದು ಸುಂದರವಾದ ತೋಟವನ್ನು ಸಹ ಮಾಡಿ ಅಲ್ಲಿ ಸುಮಾರು ೫೦ ಕ್ಕೂ ಹೆಚ್ಚು ಬೆಳೆಗಳನ್ನು ಬೆಳೆಸುತ್ತಾರೆ. ಇದರ ಜೊತೆಗೆ ಸುಮಾರು ೧೦೦ ಕ್ಕೂ ಹೆಚ್ಚು ಜಾತಿಯ ಪ್ರಾಣಿಗಳನ್ನು ಕೂಡ ಸಾಕುತ್ತಾರೆ.

ನಟ ದರ್ಶನ್ ರವರ ತೋಟದಲ್ಲಿ ನಾಯಿ ಕುದುರೆ ಹದ್ದು ಹಸು ಕೋಣ ಕುರಿ ನವಿಲು ಸೇರಿದಂತೆ ಹಲವಾರು ಪ್ರಾಣಿಗಳನ್ನು ಸಾಕಿಕೊಂಡಿದ್ದು ವಾರಕ್ಕೆ ಒಮ್ಮೆಯಾದರೂ ಸಹ ತಮ್ಮ ತೋಟಕ್ಕೆ ಹೋಗಿ ತಮ್ಮ ಪ್ರಾಣಿಗಳ ಆರೈಕೆಯನ್ನು ಡಿಬಾಸ್ ದರ್ಶನ್ ಅವರು ಮಾಡುತ್ತಾರೆ. ಸದ್ಯ ಈಗ ಡಿಬಾಸ್ ದರ್ಶನ್ ಅವರು ಒಂದು ಸುಂದರವಾದ ನಾಯಿಮರಿಯನ್ನು ದತ್ತು ಪಡೆದಿದ್ದಾರೆ.

ನಟ ದರ್ಶನ್ ರವರು ಒಂದು ಸುಂದರವಾದ ಪುಟಾಣಿ ನಾಯಿ ಮರಿಯನ್ನು ದತ್ತು ಪಡೆದಿದ್ದು ಇದಕ್ಕೆ ಕಾರಣ ದರ್ಶನ್ ಅವರಿಗೆ ನಾಯಿಗಳ ಮೇಲಿರುವ ಪ್ರೀತಿ. ಹೌದು ಈ ಪುಟಾಣಿ ನಾಯಿ ಮರಿ ದರ್ಶನ್ ಅವರಿಗೆ ತಮ್ಮ ಬೆಂಗಳೂರಿನ ಮನೆಯ ಹತ್ತಿರ ಸಿಕ್ಕಿದ್ದು ಈ ನಾಯಿ ಸಿಕ್ಕಿದ ಕೂಡಲೇ ದರ್ಶನ್ ರವರು ಸಂಬಂಧಪಟ್ಟ ಅಧಿಕಾರಿಗಳ ಜೊತೆಗೆ ಮಾತನಾಡಿ ಡಾಕ್ಯುಮೆಂಟ್ ಮಾಡಿ ಈ ನಾಯಿಯನ್ನು ದತ್ತು ಪಡೆದಿದ್ದಾರೆ ಎಂದು ತಿಳಿದು ಬಂದಿದೆ.

ನಟ ದರ್ಶನ್ ಅವರ ಒಳ್ಳೆಯ ಮನಸ್ಸು ಇದರಿಂದ ತಿಳಿಯುತ್ತದೆ. ಸದ್ಯ ಈಗಾಗಲೇ ನಟ ದರ್ಶನ್ ಅವರ ಬೆಂಗಳೂರಿನ ಮನೆಯಲ್ಲಿ ಸುಮಾರು ೧೦ ಕ್ಕೂ ಹೆಚ್ಚು ನಾಯಿಗಳನ್ನು ಸಾಕಿದ್ದು ಇನ್ನೂ ತಮ್ಮ ತೋಟದಲ್ಲಿ ದರ್ಶನ್ ಅವರು ಸುಮಾರು ೨೦ ಕ್ಕೂ ಹೆಚ್ಚು ನಾಯಿಗಳನ್ನು ಸಾಕಿಕೊಂಡಿದ್ದು ದರ್ಶನ್ ಅವರಿಗೆ ನಾಯಿಗಳ ಮೇಲಿರುವ ಪ್ರೀತಿ ಇದರಿಂದ ತಿಳಿಯುತ್ತದೆ.

ಈ ಹಿಂದೆ ಸಿನಿಮಾ ಶೂಟಿಂಗ್ ವೇಳೆಯಲ್ಲಿ ದರ್ಶನ್ ಅವರು ಶ್ವಾನ ಜೊತೆಗೆ ಹೆಚ್ಚಿನ ಸಮಯ ಕಳೆಯುತ್ತಿದ್ದರು. ಹೌದು ಶ್ವಾನಕ್ಕೆ ಬಿಸ್ಕತ್ ಹಾಕುತ್ತಾ ಅದರೊಂದಿಗೆ ಮಾತನಾಡುತ್ತಿದ್ದ ದರ್ಶನ್ ಅವರ ಅಪರೂಪದ ವಿಡಿಯೋವೊಂದು ವೈರಲ್ ಆಗಿತ್ತು. ಈ ವಿಡಿಯೋ ಈಗಲೂ ಕೂಡ ಹರಿದಾಡುತ್ತಿದ್ದು ಅಭಿಮಾನಿಗಳಿಗೆ ಖುಷಿ ನೀಡುತ್ತಿದೆ.

ಇನ್ನು ಕಳೆದ ಅಕ್ಟೋಬರ್ 22 ರಂದು ನಡೆದ ಬನಾರಸ್ ಸಿನಿಮಾದ ಪ್ರೀ ರಿಲೀಸ್ ಇವೆಂಟ್ ಗೆ ಭಾಗಿಯಾಗಿದ್ದ ದರ್ಶನ್ ಫಾರ್ಮ್ ಹೌಸ್ ಗೆ ಭೇಟಿ ನೀಡಿದ್ದರು. ಅಕ್ಟೋಬರ್ 23 ರಂದು ಧಾರವಾಡದ ಹೊರ ವಲಯದಲ್ಲಿರುವ ಮಾಜಿ ಸಚಿವ ವಿನಯ್ ಕುಲಕರ್ಣಿ ರವರ ಡೈರಿ ಫಾರ್ಮ್‌ಗೆ ನಟ ದರ್ಶನ್ ಭೇಟಿ ನೀಡಿದ್ದು ಡೈರಿಯಲ್ಲಿ ಇರುವ​ ಕುದುರೆ ಹಾಗೂ ದನಕರುಗಳೊಂದಿಗೆ ಕೆಲಕಾಲ ಕಳೆದಿದ್ದು ಈ ವೇಳೆಯಲ್ಲಿ ವಿನಯ್ ಕುಲಕರ್ಣಿ ಪತ್ನಿ ಶಿವಲೀಲಾ ಅವರು ಜೊತೆಗಿದ್ದರು.

ಇನ್ನು ಧಾರವಾಡ ಹೊರವಲಯದಲ್ಲಿರುವ ವಿನಯ್ ಕುಲಕರ್ಣಿ ಡೈರಿ ಫಾರ್ಮ್‌ಗೆ ಈ ಹಿಂದೆ ಸಹ ನಟ ದರ್ಶನ್ ಭೇಟಿ ನೀಡಿದ್ದರು. ಚಕ್ಕಡಿ ಸವಾರಿ ಮಾಡಿ ಸಂಭ್ರಮಿಸಿದ್ದು ಅದಕ್ಕಿಂತ ಮುನ್ನ ಹೈನುಗಾರಿಕೆ ವಿಚಾರವಾಗಿ ಅಲ್ಲಿಗೆ ಭೇಟಿ ನೀಡಿ ಕುದುರೆ ಸವಾರಿ ಮಾಡಿ ಬಂದಿದ್ದರು. ಸದ್ಯ ನಟ ದರ್ಶನ್ ಅವರು ಸಿನಿ ಕೆರಿಯರ್ ನಲ್ಲಿ ಬ್ಯುಸಿಯಾಗಿದ್ದು ಬಹುನಿರೀಕ್ಷಿತ ಕ್ರಾಂತಿ ಸಿನಿಮಾವು ಮುಂದಿನ ವರ್ಷ ಜನವರಿ 26 ಕ್ಕೆ ತೆರೆಗೆ ಬರಲಿದೆ. ಸದ್ಯಕ್ಕೆ ಡಿ ಬಾಸ್ ಡಿ 56 ಸಿನಿಮಾದ ಶೂಟಿಂಗ್ ನಲ್ಲಿ ಕೂಡ ಬ್ಯುಸಿಯಾಗಿದ್ದಾರೆ.