ವಾರ್ತಾ ಮಂಜರಿ
Trending Stories, Viral News, Gossips & Everything in Kannada

ನಿರಂಜನ್ ದೇಶಪಾಂಡೆ ಜೊತೆ ಸಪ್ತಮಿ ಗೌಡ ಡಾನ್ಸ್ ನೋಡಿ…ಚಿಂದಿ ವಿಡಿಯೋ

10,808

ಸದ್ಯ ರಿಷಬ್‌ ಶೆಟ್ಟಿ ನಿರ್ದೇಶಿಸಿ ಅಭಿನಯಿಸಿರುವ ಕಾಂತಾರ ಸಿನಿಮಾ ಬಿಟೌನ್ ಮಂದಿಯ ಮೋಸ್ಟ್‌ ಫೇವರೆಟ್‌ ಸಿನಿಮಾಗಳ ಪಟ್ಟಿಯಲ್ಲಿ ಸೇರಿ ಬಿಟ್ಟಿದ್ದು ಈ ಸಿನಿಮಾ ಬಳಿಕ ರಿಷಬ್‌ ಶೆಟ್ಟಿ ಕೂಡಾ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡರೆ ನಾಯಕಿ ಸಪ್ತಮಿ ಗೌಡಗೆ ಕೂಡಾ ಒಳ್ಳೆ ಹೆಸರು ತಂದುಕೊಟ್ಟಿದೆ.

ಹೌದು ಈ ಸಿನಿಮಾ ನಂತರ ಸಪ್ತಮಿಗೆ ಸ್ಯಾಂಡಲ್‌ವುಡ್‌ನಲ್ಲಿ ಮಾತ್ರವಲ್ಲದೇ ಪರಭಾಷೆಯಲ್ಲಿ ಸಹ ಸಾಕಷ್ಟು ಆಫರ್‌ ಬರುತ್ತಿದ್ದು ಸಪ್ತಮಿ ಗೌಡ ಬಗ್ಗೆ ಹೇಳುವುದಾದರೆ ಈ ಚೆಲುವೆ ಚಿತ್ರರಂಗಕ್ಕೆ ಬಂದದ್ದು ಡಾಲಿ ಧನಂಜಯ ಅಭಿಮಾನಿಯದ ಪಾಪ್‌ಕಾರ್ನ್‌ ಮಂಕಿ ಟೈಗರ್‌ ಚಿತ್ರದ ಮೂಲಕ. ಹೌದು ಡಾಲಿ ಧನಂಜಯ್‌ ಜೊತೆ ಸಪ್ತಮಿ ಗೌಡ ನಾಯಕಿಯಾಗಿ ನಟಿಸಿದ್ದು ಪಾಪ್‌ಕಾರ್ನ್‌ ಮಂಕಿ ಟೈಗರ್‌ ಚಿತ್ರದಲ್ಲಿ ಸಪ್ತಮಿ ಗೌಡ ಗಿರಿಜ ಎಂಬ ಪಾತ್ರದಲ್ಲಿ ನಟಿಸಿದ್ದರು. ಅದಾದ ಬಳಿಕ 5-6 ಕಥೆಗಳನ್ನು ಕೇಳಿದ್ದೆ. ಆದರೆ ಲೀಲಾ ಪಾತ್ರದ ಬಗ್ಗೆ ರಿಷಭ್‌ ಶೆಟ್ಟಿ ವಿವರಿಸಿದಾಗ ನಾನು ಕೂಡಲೇ ಒಪ್ಪಿಕೊಂಡೆ ಈ ಪಾತ್ರ ಬಹಳ ವಿಭಿನ್ನವಾಗಿದೆ ಎಂದು ಸಪ್ತಮಿ ಹೇಳಿದ್ದರು.

ಇನ್ನು ಸಪ್ತಮಿ ಗೌಡ ತಂದೆ ನಿವೃತ್ತ ಪೊಲೀಸ್‌ ಅಧಿಕಾರಿ ಎಸ್‌.ಕೆ. ಉಮೇಶ್‌ ಅವರ ಪುತ್ರಿಯಾಗಿದ್ದು ನಟನೆ ಮಾತ್ರವಲ್ಲದೆ ಸಪ್ತಮಿ ರಾಷ್ಟ್ರೀಯ ಮಟ್ಟದ ಈಜುಗಾರ್ತಿಯಾಗಿ ಕೂಡಾ ಹೆಸರು ಮಾಡಿದ್ದಾರೆ. ಬಂದ ಅವಕಾಶಗಳನ್ನೆಲ್ಲಾ ಕೂಡ ಒಪ್ಪಿಕೊಳ್ಳದೆ ವಿಭಿನ್ನ ಪಾತ್ರಗಳನ್ನು ಮಾಡಬೇಕೆಂಬುದು ಸಪ್ತಮಿ ಗೌಡ ಆಸೆಯಂತೆ.

ಆದ್ದರಿಂದ ಸಿನಿಮಾಗಳನ್ನು ಆಯ್ಕೆ ಮಾಡಿಕೊಳ್ಳುವಾಗ ಸ್ಕ್ರಿಪ್ಟ್‌ ವಿಚಾರದಲ್ಲಿ ಅವರು ಬಹಳ ಚೂಸಿಯಾಗಿದ್ದಾರೆ. ಇನ್ನು ನಟಿಸಿರುವುದು ಎರಡನೇ ಸಿನಿಮಾಗಳಲ್ಲಾದರೂ ಸಪ್ತಮಿ ಸಾಕಷ್ಟು ಜನರ ಮನಸ್ಸು ಗೆದ್ದಿದ್ದಾರೆ. ಇದೀಗ ಅಭಿಷೇಕ್‌ ಅಂಬರೀಶ ಜೊತೆ ಅವರು ನಟಿಸುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.

ಸುದೀಪ್‌ ಅವರ ಪೈಲ್ವಾನ್‌ ಚಿತ್ರವನ್ನು ನಿರ್ದೇಶಿಸಿದ್ದ ಕೃಷ್ಣ ರವರು ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು ಚಿತ್ರಕ್ಕೆ ಕಾಳಿ ಎಂದು ಹೆಸರಿಡಲಾಗಿದೆ. ಚಿತ್ರವನ್ನು ಕೃಷ್ಣ ಪತ್ನಿ ಸ್ವಪ್ನ ನಿರ್ಮಿಸುತ್ತಿದ್ದು ಅಕ್ಟೋಬರ್‌ 3 ರಂದು ಅಭಿಷೇಕ್‌ ಅಂಬರೀಶ್‌ ಹುಟ್ಟುಹಬ್ಬದಂದು ಕಾಳಿ ಚಿತ್ರದ ಪೋಸ್ಟರ್‌ ಕೂಡ ಬಿಡುಗಡೆಯಾಗಿತ್ತು.

ಇದೀಗ ಈ ಚಿತ್ರದಲ್ಲಿ ಅಭಿಷೇಕ್‌ ಜೊತೆಗೆ ಸಪ್ತಮಿ ನಟಿಸುತ್ತಿದ್ದಾರೆ ಎಂದು ಸ್ಯಾಂಡಲ್‌ವುಡ್‌ ಮಂದಿ ಮಾತನಾಡುತ್ತಿದ್ದು ಚಿತ್ರತಂಡ ಸಪ್ತಮಿ ಗೌಡ ಅವರನ್ನು ಸಂಪರ್ಕಿಸಿ ಚಿತ್ರದ ಕಥೆ ಹೇಳಿದ್ದು ಅವರೂ ಕೂಡಾ ಈ ಚಿತ್ರದಲ್ಲಿ ನಟಿಸಲು ಉತ್ಸುಕರಾಗಿದ್ದಾರಂತೆ. ಆದರೆ ಚಿತ್ರತಂಡವಾಗಲೀ ಸಪ್ತಮಿ ಗೌಡ ಆಗಲೀ ಈ ಸುದ್ದಿಯನ್ನು ಅಧಿಕೃತವಾಗಿ ಘೋಷಿಸಿಲ್ಲ.

1990ರ ಕಾಲಘಟ್ಟದಲ್ಲಿ ನಡೆಯುವ ಕಥೆಯನ್ನೇ ಪ್ರಧಾನವಾಗಿಸಿಕೊಂಡು ಕಾಳಿ ಚಿತ್ರದ ಕಥೆ ಹೆಣೆಯಲಾಗಿದೆ. ಈ ಸಿನಿಮಾ ಕಾವೇರಿ ನದಿ ನೀರು ವಿವಾದದ ಸಂದರ್ಭದಲ್ಲಿ ಘಟಿಸುವ ಪ್ರೇಮ ಕಥೆಯಾಗಿದ್ದು ವಿವಾದದ ಜೊತೆ ಜೊತೆಗೆ ಈ ಸಿನಿಮಾದಲ್ಲಿ ನಿರ್ದೇಶಕರು ಪ್ರೇಮ್‌ ಕಹಾನಿಯನ್ನು ಕೂಡಾ ಹೇಳಲು ಹೊರಟಿದ್ದಾರೆ.

ಹೀಗೆ ಸದ್ಯಕ್ಕೆ ಸಪ್ತಮಿ ಗೌಡ್ ಮೋಸ್ಟ್ ಟಾಕಿಂಗ್ ಹಿರೋಯಿನ್ ಆಗಿದ್ದು ಅವರ ಒಂದಲ್ಲಾ ಒಂದು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಲೇ ಇದೆ. ಇತ್ತೀಚೆಗಷ್ಟೇ ನಟಿ ಸೈಪ್ ಅವಾರ್ಡ್ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದ ವಿಡಿಯೋ ಬಹಳಾನೇ ವೈರಲ್ ಆಗಿದ್ದು ಈ ಸಮಯದಲ್ಲಿ ನಟಿ ಹೇಗೆ ನೃತ್ಯ ಮಾಡಿದ್ದಾರೆ ನೀವೆ ನೋಡಿ..