ವಾರ್ತಾ ಮಂಜರಿ
Trending Stories, Viral News, Gossips & Everything in Kannada

Sapthami Gowda: ಕಾಂತಾರ ಚಿತ್ರದ ನಟಿ ಸಪ್ತಮಿ ಗೌಡ ನಿಜಕ್ಕೂ ಸಾಮಾನ್ಯ ಮಹಿಳೆಯಲ್ಲಿ…ಅಸಲಿ ಸತ್ಯ ಹೊರಕ್ಕೆ

576

ಸದ್ಯ ಭಾರತೀಯ ಚಿತ್ರರಂಗದಲ್ಲೇ ಸನ್ಸೇಷನ್ ಮೂಡಿಸುತ್ತಿರುವ Kantara ಸಿನಿಮಾದಲ್ಲಿ ಶಿವನ ಪ್ರೇಯಸಿಯಾಗಿ ಹಾಗೂ ಫಾರೆಸ್ಟ್ ಗಾರ್ಡ್ ಆಗಿ ಮಿಂಚಿದ ಲೀಲಾ ಎಲ್ಲರಿಗೂ ಈಗ ಫೇವರೇಟ್ ಆಗಿದ್ದು Kantara ಸಿನಿಮಾದ ಲೀಲಾ ಸದ್ಯ ಎಲ್ಲೆಡೆ ವೈರಲ್ ಆಗಿದ್ದಾರೆ ಎನ್ನಬಹುದು. ಇನ್ನು ಸಪ್ತಮಿ ಗೌಡ ಮೂಲತಃ ಬೆಂಗಳೂರಿನವರು ಎಂದರೆ ಖಂಡಿತವಾಗಿಯೂ ಈ ಸಿನಿಮಾ ನೋಡಿ ನಂಬುವುದು ಕಷ್ಟ ಎನ್ನಬಹುದು. ಯಾಕೆಂದರೆ Kantara ಸಿನಿಮಾದಲ್ಲಿ ಅಪ್ಪಟ ದೇಸಿ ಗರ್ಲ್ ಆಗಿ ಕಾಣಿಸಿಕೊಂಡಿದ್ದಾರೆ. ನಟಿ ಸಪ್ತಮಿಯ ಲೀಲಾ ಪಾತ್ರದ ಲುಕ್ ಕಾಸ್ಟ್ಯೂಮ್ ಹಾವ ಭಾವ ಎಲ್ಲರಿಗೂ ಮೆಚ್ಚುಗೆಯಾಗಿದ್ದು ಖಡಕ್ ಹಳ್ಳಿ ಹುಡುಗಿಯಾಗಿ ಕಾಣಿಸಿದ್ದಾರೆ ಸಪ್ತಮಿ ಗೌಡ.

ಹೌದು ಸಿನಿಮಾದಲ್ಲಿ ಫಾರೆಸ್ಟ್ ಗಾರ್ಡ್ ಲೀಲಾ ಆಗಿ ಕಾಣಿಸಿಕೊಂಡ ಸಪ್ತಮಿ ಯವರು ಅದೇ ಸಮಯದಲ್ಲಿ ಸುಂದರವಾದ ಹಳ್ಳಿ ಯುವತಿಯಾಗಿಯೂ ಕೂಡ ಪ್ರೇಕ್ಷಕರನ್ನ ರಂಜಿಸಿದ್ದಾರೆ.
ಇನ್ನು ಈ ಸಿನಿಮಾದ ಸಿಂಗಾರ ಸಿರಿಯೇ ಹಾಡು ನಂಬರ್ ವನ್ ಆಗಿದ್ದು ಎಲ್ಲೆಡೆ ವೈರಲ್ ಆಗಿದೆ. ಹೌದು ಶಿವ ಹಾಗೂ ಲೀಲಾ ಅವರ ಕ್ಯೂಟ್ ಲುಕ್ ಅಭಿಮಾನಿಗಳಿಗೆ ಮೆಚ್ಚುಗೆಯಾಗಿದ್ದು ಇನ್ನು ಸಪ್ತಮಿ ಗೌಡ ಕನ್ನಡ ಚಿತ್ರರಂಗದಲ್ಲಿ ಯುವ ನಟಿ. ಇವರು 2020ರಲ್ಲಿ ತೆರೆಕಂಡ ಧನಂಜಯ್ ಅಭಿನಯದ ಪಾಪ್​​ಕಾರ್ನ್ ಮಂಕಿ ಟೈಗರ್ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದು ಬೆಂಗಳೂರಿನವರಾದ ಸಪ್ತಮಿ ಗೌಡ ನಿವೃತ್ತ ಪೊಲೀಸ್ ಅಧಿಕಾರಿ ಎಸ್.ಕೆ ಉಮೇಶ್ ಸುಪುತ್ರಿಯಾಗಿರುವುದು ವಿಶೇಷ.

 who is sapthami gowda
Courtesy: India Today

ಇನ್ನು ಸಪ್ತಮಿ ಗೌಡ Kantara ಸಿನಿಮಾಗೆ ಆಯ್ಕೆಯಾದ ಹಿಂದೆ ಒಂದು ಕಥೆಯಿದೆ. ಹೌದು ನಟ ನಿರ್ದೇಶಕ ರಿಷಬ್ ಶೆಟ್ಟಿಯವರು ಇನ್ಸ್ಟಾಗ್ರಾಮ್ ನಲ್ಲಿ Sapthami Gowda ರವರ ಒಂದು ಪೋಸ್ಟ್ ನೋಡಿದರಂತೆ. ಸಿರೇಯೊಟ್ಟಿದ್ದ ಸಪ್ತಮಿಯ ಫೋಟೋ ನೋಡಿದ ರಿಷಬ್ ಈಕೆಯೆ ಲೀಲೆ ಪಾತ್ರಕ್ಕೆ ಫಿಕ್ಸ್ ಎಂದು ಆಡಿಷನ್ ಮಾಡುತ್ತಾರೆ. ಮುಂದೆ ನಡೆದಿದ್ದೆ ಚರಿತ್ರೆ. ಹೌದು ಪಾಪ್ ಕಾರ್ನ್ ಮಂಕಿ ಟೈಗರ್ ಸಿನಿಮಾದ ಸಪ್ತಮಿ ಪಾತ್ರಕ್ಕೂ Kantara ಸಿನಿಮಾದ ಲೀಲಾ ಪಾತ್ರಕ್ಕೂ ಅಜಗಜಾಂತರ ವ್ಯತ್ಯಸವಿದೆ. ಅಲ್ಲಿ ರಗಡ್ ಪಾತ್ರ ಇದ್ದರೆ ಇಲ್ಲಿ ಸಾಫ್ಟ್ ಕ್ಯಾರೆಕ್ಟರ್. ಇದು ಸಪ್ತಮಿ ನಟನೆಯ ಶಕ್ತಿ ಏನು ಎಂಬುದನ್ನ ತೋರಿಸುತ್ತದೆ.

ಹೌದು ಸಪ್ತಮಿಯವರು ಯಾವ ಪಾತ್ರ ಕೊಟ್ಟರು ನಿಭಾಯಿಸುವುದಕ್ಕೆ ಸೈ ಎಂಬುದನ್ನ ನಿರೂಪಿಸಿದ್ದಾರೆ. Kantara ಸಿನಿಮಾದಲ್ಲಿ ಫಾರೆಸ್ಟ್ ಗಾರ್ಡ್ ಆಗಿರುವ ಸಪ್ತಮಿ ರಿಯಲ್ ಲೈಫನಲ್ಲಿ ಕೂಡ ದೊಡ್ಡ ಸಾಧನೆ ಮಾಡಿದ್ದಾರೆ. ಹೌದು ಅವರು ನ್ಯಾಷನಲ್ ಲೆವೆಲ್ ಈಜುಪಟು. ಸಣ್ಣ ವಯ್ಯಸ್ಸಿನಲ್ಲೇ ಈಜು ಸ್ಪರ್ಧಿಗಳಲ್ಲಿ ಭಾಗವಹಿಸುತ್ತಿದ್ದ ಸಪ್ತಮಿ ಹಲವು ಪ್ರಶಸ್ತಿಗಳನ್ನ ಕೂಡ ಗೆದ್ದಿದ್ದಾರೆ.

ಅಷ್ಟೆ ಅಲ್ಲದೇ ಸಪ್ತಮಿಯವರು ಫಿಟ್ನೆಸ್ ಫ್ರಿಕ್ ಆಗಿದ್ದು ಸಾಮಾಜಿಕ ಜಾಲತಾಣದಲ್ಲಿ ಆಗಾಗ ವರ್ಕೌಟ್ ಮಾಡುತ್ತಿರುವ ಫೋಟೋಗಳನ್ನ ಹಂಚಿಕೊಳ್ಳುತ್ತಲೆ ಇರುತ್ತಾರೆ. ಒಂದೇ ಮಾತಿನಲ್ಲಿ ಹೇಳುವುದಾದರೆ Sapthami Gowda ಸಕಲಕಲಾವಲ್ಲಭೆ ಎನ್ನಬಹುದು. ಉತ್ತಮ ನಟಿಯಾಗುವುದರ ಜೊತೆಗೆ ಪೋಲಿಸ್ ಮಗಳು ಹಾಗು ರಾಷ್ಟ್ರೀಯ ಈಜು ಪಟು. ಸದ್ಯ ಕಾಂತರ ಸಿನಿಮಾ ಸಪ್ತಮಿಯವರ ಸಿನಿ ಜೀವನದಲ್ಲಿ ಟರ್ನಿಂಗ್ ಪಾಯಿಂಟ್ ಅಂತಾನೇ ಹೇಳಬಹುದು.