ಸದ್ಯ ಟಾಲಿವುಡ್ ಚಿತ್ರರಂಗದ ಖ್ಯಾತ ನಟಿ ಸಮಂತಾ ಸದಾ ಸುದ್ದಿಯಲ್ಲಿರುವ ನಟಿಯಾಗಿದ್ದು ಅದರಲ್ಲೂ ಕೂಡ ನಾಗಚೈತನ್ಯ ಜೊತೆಗೆ ವಿಚ್ಚೇದನ ಆದ ಮೇಲಂತೂ ಸಾಕಷ್ಟು ಗಾಸಿಪ್ ಟ್ರೋಲಿಗಳಿಗೆ ಸಮಂತಾ ಗುರಿಯಾಗಿದ್ದಾರೆ ಎನ್ನಬಹುದು. ಸದ್ತ ಇದೀಗ ತಾವು ನಾಗಚೈತನ್ಯಗೆ ಯಾಕೆ ಡಿವೋರ್ಸ್ ಕೊಟ್ಟಿದ್ದು ಎಂಬುದರ ಬಗ್ಗೆ ಮಾಜಿ ಅತ್ತೆ ಲಕ್ಷ್ಮಿ ದಗ್ಗುಬಾಟಿ ಯವರ ಬಳಿ Samantha ಅಳಲು ತೋಡಿಕೊಂಡಿದ್ದಾರಂತೆ.
ಹೌದು ದಕ್ಷಿಣ ಭಾರತ ಚಿತ್ರರಂಗದಲ್ಲಿ ಮುದ್ದಾದ ಜೋಡಿಯಾಗಿ ಹೈಲೆಟ್ ಆಗಿ ನಾಗ್ಚೈತನ್ಯ ಹಾಗೂ ಸಮಂತಾ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿ ಒಂದು ವರ್ಷವಾಗಿದ್ದು ಬಳಿಕ ತಮ್ಮ ವೃತ್ತಿ ಜೀವನದತ್ತ ನಾಗ್ ಹಾಗೂ ಸಮಂತಾ ಬ್ಯುಸಿಯಾಗಿದ್ದಾರೆ. ಪುಷ್ಪ ಚಿತ್ರದಲ್ಲಿ ಐಟಂ ಸಾಂಗ್ ಹಿಟ್ ಆದ್ಮೇಲೆ ಸಮಂತಾ ರೇಂಜ್ ಬದಲಾಗಿದ್ದು ಹಾಗಾಗಿ ಹೊಸ ಹೊಸ ಗಾಸಿಪ್ಗಳಿಗೆ ಕೂಡ ನಟಿ ಆಹಾರವಾಗುತ್ತಿದ್ದಾರೆ.
ಸದ್ಯ ಹೀಗೆ ದಿನಕ್ಕೊಂದು ಸುದ್ದಿ ಸಮಂತಾ ಬಗ್ಗೆ ಹರಿದಾಡುತ್ತಿದ್ದು ಇದೀಗ ನಾಗಚೈತನ್ಯ ಅವರ ತಾಯಿ ಲಕ್ಷ್ಮಿ ದಗ್ಗುಬಾಟಿ ಅವರನ್ನ ಸಮಂತಾ ಭೇಟಿಯಾಗಿದ್ದಾರೆ ಎಂಬ ಸುದ್ದಿ ಕೂಡ ಟಿಟೌನ್ನಲ್ಲಿ ಹರಿದಾಡುತ್ತಿದೆ.
ಹೌದು ನಿಮ್ಮ ಮಗ ನನಗೆ ಹಿಂಸೆ ಕೊಟ್ಟ ಅದೇ ಕಾರಣಕ್ಕೆ ನಾನು ಡೈವೋರ್ಸ್ ಕೊಟ್ಟೆ ಮದುವೆ ನಂತರ ಚೈತು ಬದಲಾಗಿದ್ದರು ನನ್ನನ್ನು ಕಂಟ್ರೋಲ್ ಮಾಡುತ್ತಿದ್ದರು.
ಇದು ನನಗೆ ಇಷ್ಟವಾಗಲಿಲ್ಲ ಎಂದು ಮಾಜಿ ಅತ್ತೆ ಬಳಿ ಹೇಳಿಕೊಂಡಿದ್ದಾರೆ ಎನ್ನುವ ಚರ್ಚೆ ಫಿಲ್ಮ್ನಗರ್ನಲ್ಲಿ ನಡಿಯುತ್ತಿದ್ದು ಮದುವೆ ಬಳಿಕ ಮೊದಲಿನ ತರ ಚೈತು ಇರಲಿಲ್ಲ. ಈ ಸಿನಿಮಾ ಮಾಡಬೇಡ ಆ ಡ್ರೆಸ್ ಹಾಕಬೇಡ ಅವರ ಜೊತೆ ಮಾತನಾಡಬೇಡ ಎಂದು ಹೇಳುತ್ತಿದ್ದರು. ಇದರಿಂದಾಗಿ ನನ್ನ ಫ್ರೀಡಂ ಹೋಯ್ತು ಅಷ್ಟೇ ಅಲ್ಲ ಎಷ್ಟು ದಿನ ಮಾತು ಬಿಟ್ಟರು ಚೈತು ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ ಅಕ್ಕಿನೇನಿ ಫ್ಯಾಮಿಲಿ ಸಹ ಆತನಿಗೆ ಬೆಂಬಲವಾಗಿ ನಿಂತಿದ್ದರು. ನನ್ನ ಆತ್ಮಾಭಿಮಾನಕ್ಕೆ ಕುಂದು ಬಂದ ಹಿನ್ನೆಲೆಯಲ್ಲಿ ಡೈವೋರ್ಸ್ ತೆಗೆದುಕೊಂಡೆ ಎಂದು ಸಮಂತಾ ಅತ್ತೆ ಬಳಿ ಹೇಳಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ಇನ್ನು ಇದು ಎಷ್ಟು ನಿಜ ಎನ್ನುವುದು ಮಾತ್ರ ಗೊತ್ತಾಗುತ್ತಿಲ್ಲ. ಅಂದಹಾಗೆ ಚೈತು ನಾಗಾರ್ಜುನಾ ಹಾಗೂ ಲಕ್ಷ್ಮಿ ದಗ್ಗುಬಾಟಿ ಪುತ್ರರಾಗಿದ್ದು ಲಕ್ಷ್ಮಿ ದಗ್ಗುಬಾಟಿ ಅವರಿಗೆ ನಾಗ್ ಡೈವೋರ್ಸ್ ಕೊಟ್ಟು ನಟಿ ಅಮಲಾ ಅವರನ್ನು ಮದುವೆ ಆಗಿದ್ದರು. ಸಾಮಾಜಿಕ ಜಾಲತಾಣದಲ್ಲಿ ಸದಾ ಆಕ್ಟೀವ್ ಆಗಿ ಇರುತ್ತಿದ್ದ ಸಮಂತಾ ಕಳೆದ ಕೆಲ ದಿನಗಳಿಂದ ಸೈಲೆಂಟ್ ಆಗಿದ್ದುಬಯಾವುದೇ ಪೋಸ್ಟ್ ಮಾಡುತ್ತಿರಲಿಲ್ಲ. ಆದರೆ ಇತ್ತೀಚೆಗೆ ಸಮಂತಾ ತನ್ನ ಮುದ್ದಿನ ನಾಯಿಯ ಫೋಟೊ ಶೇರ್ ಮಾಡಿ ಹಿಂದಡಿ ಇಟ್ಟೆ ಆದರೆ ಸೋತಿಲ್ಲ ಎಂದು ಬರೆದುಕೊಂಡಿದ್ದರು. ಇದಕ್ಕೆ ಸಾಕಷ್ಟು ಜನ ಸೆಲೆಬ್ರೆಟಿಗಳು ಪ್ರತಿಕ್ರಿಯಿಸಿ ಮೋರ್ ಪವರ್ ಟು ಯು ಬಿ ಸ್ಟ್ರಾಂಗ್ ಎಂದು ಕೂಡ ಕಾಮೆಂಟ್ ಮಾಡಿದ್ದರು.
ಸದ್ಯ ಭಾರತೀಯ ಚಿತ್ರರಂಗದಲ್ಲಿ ಸದ್ಯ ವೆಬ್ ಸೀರಿಸ್ ಟ್ರೆಂಡ್ ನಡಿಯುತ್ತಿದ್ದು ಸೂಪರ್ ಸ್ಟಾರ್ಗಳೇ ವೆಬ್ ಸಿರೀಸ್ನಲ್ಲಿ ನಟಿಸಲು ಮುಂದಾಗಿದ್ದಾರೆ. ದಿ ಫ್ಯಾಮಿಲಿಮ್ಯಾನ್- 2 ಸೀರಿಸ್ ಬಳಿಕ ಸಮಂತಾ ದಿ ಸಿಟಾಡೆಲ್ ಎಂಬ ಮತ್ತೊಂದು ಪ್ರಾಜೆಕ್ಟ್ಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದು ಇದಕ್ಕಾಗಿ ಹಿಂದಿ ಭಾಷೆಯನ್ನು ಕಲಿಯುತ್ತಿದ್ದಾರಂತೆ. ಹೌದು 90ರ ದಶಕದಲ್ಲಿ ನಡೆಯುವ ಈ ಕಥೆಯನಲ್ಲಿ ಬಹಳ ವಿಭಿನ್ನ ಪಾತ್ರದಲ್ಲಿ ಸ್ಯಾಮ್ ನಟಿಸುತ್ತಿದ್ದು ನವೆಂಬರ್ನಲ್ಲಿ ಚಿತ್ರೀಕರಣ ಶುರುವಾಗಲಿದೆ.
ಇನ್ನು ಕಳೆದ ಕೆಲ ತಿಂಗಳುಗಳಿಂದ ಸಮಂತಾ ಹೆಸರು ಟ್ರೆಂಡಿಂಗ್ನಲ್ಲಿದ್ದು ಹಾಲಿವುಡ್ ಸಿನಿಮಾದಲ್ಲೂ ಬಣ್ಣ ಹಚ್ಚಿ ನಟಿಸಿದ್ದಾರೆ. ಮಹಿಳಾ ಪ್ರಧಾನ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಮಿಂಚಿದ್ದು ಸಮಂತಾ ನಟನೆಯ ಶಾಕುಂತಲಂ ಸಿನಿಮಾ ಕೂಡ ಬಿಡುಗಡೆಗೆ ಸಿದ್ಧವಾಗಿದೆ. ಮತ್ತೊಂದು ಕಡೆ ಯಶೋಧ ಎನ್ನುವ ಮತ್ತೊಂದು ಚಿತ್ರದ ಟೀಸರ್ ರಿಲೀಸ್ ಆಗಿ ಸದ್ದು ಮಾಡಿದೆ.