ಸದ್ಯ ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗ ಬಹಳ ಅಂದರೆ ಬಹಳಾನೇ ಎತ್ತರಕ್ಕೆ ಬೆಳೆಯುತ್ತಿದೆ ಅಂತಾನೇ ಹೇಳಬಹುದು. ಹೌದು ಇದ್ದಕ್ಕಿದ್ದಂತೆ ಕನ್ನಡ ಚಿತ್ರರಂಗದ ತನ್ನ ಮೇಕಿಂಗ್ ಸ್ಟೈಲ್ ಅನ್ನೇ ಬದಲಿಸಿಕೊಂಡಿದ್ದು ಇಡೀ ಭಾರತೀಯ ಚಿತ್ರರಂಗವೇ ಕನ್ನಡ ಸಿನಿಮಾಗಳಿಗೆ ಕಾಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹೌದು ಅದ್ಬುತ ಕಥೆ ಹೊಂದಿರುವ ಸಿನಿಮಾಗಳ ಜೊತೆಗೆ ಅತ್ಯುತ್ತಮ ಸಂಗೀತ ಹಾಗೂ ಹಿನ್ನಲೆ ಸಂಗೀತ ನಿರ್ದೇಶಕರ ಮೇಕಿಂಗ್ ಕಲಾವಿದರುಗಳ ಪರಕಾಯ ಪ್ರವೇಶ ಛಾಯಾಗ್ರಕರ ಕೈಚಳಕ ಹೀಗೆ ಕೈ ಕೈ ಸೇರಿದರೆ ಚೆಪ್ಪಾಳೆ ಎಂಬಂತೆ ಪ್ರತಿಯೊಬ್ಬರು ಕೂಡ 100 % ಎಫರ್ಟ್ ಹಾಕಿ ಕನ್ನಡ ಚಿತ್ರರಂಗವನ್ನ ಅಂತರರಾಷ್ಟ್ರೀಯ ಮಟ್ಟಕ್ಕೆ ತೆಗೆದುಕೊಂಡು ಹೋಗುತ್ತಿದ್ದಾರೆ.
ಹೌದು ಕೆಜಿಎಫ್ ಸಿನಿಮಾ ಬಳಿಕ ಇದೀಗ ಸಾಕಷ್ಟು ಸಿನಿಮಾಗಳು ಪ್ಯಾನ್ ಇಂಡಿಯಾ ಸಿನಿಮಾಗಳಾಗುತ್ತಿದ್ದು ಕನ್ನಡ ಸಿನಿಮಾಗಳು ಇನ್ನೂರು ಮನ್ನೂರು ಅಷ್ಟೇ ಯಾಕೆ ಸಾವಿರ ಕೋಟಿ ವರೆಗೂ ಕೂಡ ಕಲೆಕ್ಷನ್ ಮಾಡುತ್ತಿವೆ. ಇನ್ನು ಬಾಲಿವುಡ್ ನ ದೈತ್ಯ ನಟರು ಕೂಡ ಕನ್ನಡದ ಸಿನಿಮಾಗಳ ಮುಂದೆ ಸೋಲುತ್ತಿದ್ದಾರೆ. ಸದ್ಯ ಇದೀಗ ಕೆಜಿಎಫ್ ಬಳಿಕ ಭಾರತೀಯ ಚಿತ್ರರಂಗದಲ್ಲಿ ದೊಡ್ಡ ಸಂಚಲನ ಮೂಡಿಸುತ್ತಿರುವ ಸಿನಿಮಾ ಎಂದರೆ ಕಾಂತಾರ.
ಹೌದು ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ಸಿನಿಮಾ ತರೆ ಕಾಣುವ ಮುನ್ನವೇ ಪ್ಯಾನ್ ಇಂಡಿಯಾ ಸಿನಿಮಾ ಎಂದು ಘೋಷಿಸಿ ಪಂಚ ಬಾಷೆಯಲ್ಲಿ ಬಿಡುಗಡೆ ಮಾಡುತ್ತಾರೆ. ಆದರೆ ಕಾಂತರ ಮಾತ್ರ ಮೊದಲು ಕನ್ನಡದಲ್ಲಿ ಮಾತ್ರ ಬಿಡುಗಡೆ ಆಗಿದ್ದು ಇದೀಗ ಬೇರೆ ಬಾಷೆಯಲ್ಲೂ ಕೂಡ ಬಿಡುಗಡೆ ಮಾಡಿ ಎಂದು ಒತ್ತಾಯಿಸಿ ಪ್ಯಾನ್ ಇಂಡಿಯಾ ಸಿನಿಮಾ ವನ್ನ ಮಾಡಿದ್ದಾರೆ.
ಇಂತಹ ಜಾದುವನ್ನ ಕನ್ನಡ ಚಿತ್ರರಂಗದ ಹೆಸರಂತಾ ಪ್ರತಿಭೆ Rishabh Shetty ಮಾಡಿ ತೋರಿಸಿದ್ದು ಮತ್ತೊಮ್ಮೆ ಹೊಂಬಾಳೆ ಪ್ರೊಡಕ್ಷನ್ಸ್ ಕನ್ನಡ ಚಿತ್ರರಂಗಕ್ಕೆ ಉತ್ತಮ ಕೊಡುಗೆ ನೀಡಿದೆ. ಇನ್ನೂಕಾಂತಾರ ಬಿಡುಗಡೆಯಾಗಿ ಎರಡು ವಾರಗಳನ್ನು ಯಶಸ್ವಿಯಾಗಿ ಪೂರೈಸಿದ್ದೂ ಆದರೂ ಕೂಡ ಇನ್ನೂ ಕೆಲವರಿಗೆ ಟಿಕೆಟ್ ಸಿಗುತ್ತಿಲ್ಲ. ಈ ಮಟ್ಟಿಗೆ ಸಿನಿಮಾ ಸದ್ದು ಮಾಡುತ್ತಿದ್ದು ಈ ಹೊತ್ತಲ್ಲೇ ಕಾಂತಾರ ಸಿನಿಮಾ ಮೇಲೆ ಅಪವಾದವೊಂದು ಕೂಡ ಎದುರಾಗಿದೆ.

ಹೌದು ನೆಟ್ಟಿಗರು ಕಾಂತಾರ ಸಿನಿಮಾದ ವರಹ ರೂಪಂ ಹಾಡನ್ನು ಕದ್ದಿದ್ದಾರೆ ಎಂಬ ಆರೋಪ ಮಾಡುತ್ತಿದ್ದು ಸಾಕ್ಷಿಯನ್ನು ಹುಡುಕಿ ಕೂಡ ತಂದಿದ್ದಾರೆ. ಅಷ್ಟಕ್ಕೂ ಸಂಗೀತ ನಿರ್ದೇಶಕ ಅಜನೀಶ್ ಬಿ ಲೋಕನಾಥ್ ಹಾಡು ಕದ್ದಿದ್ದಾರಾ? ನೆಟ್ಟಿ ಕೊಟ್ಟಿರೋ ಸಾಕ್ಷಿ ಆದರು ಯಾವುದು? ತಿಳಿಯಲು ಮುಂದೆ ಓದಿ.ಹೌದು ಸರಿ ಸುಮಾರು 5 ವರ್ಷಗಳ ಹಿಂದೆ ಮಲಯಾಳಂನಲ್ಲಿ ನವರಸಂ ಅನ್ನೋ ಅಲ್ಬಮ್ ಹಾಡೊಂದನ್ನು ಬಿಡುಗಡೆ ಮಾಡಿದ್ದರು.
ಹೌದು ಥೈಕ್ಕುಡಂ ಬ್ರಿಡ್ಜ್ ಅನ್ನುವ ಹೆಸರಿನಲ್ಲಿ ಈ ಹಾಡನ್ನು ಟ್ಯೂನ್ ಹಾಕಿ ಕಂಪೋಸ್ ಮಾಡಿದ್ದು ಮಾತೃಭೂಮಿ ಕಪ್ಪಾ ಟಿವಿಯಲ್ಲಿ ಈ ನವರಸಂ ಸಾಂಗ್ ಅನ್ನು ಲಭ್ಯವಿದೆ. ಇನ್ನು ಅಸಲಿಗೆ ಈ ನವರಸಂ ಸಾಂಗ್ ಹಾಗೂ ಕಾಂತಾರ ಸಿನಿಮಾದ ವರಹ ರೂಪಂ ಹಾಡು ಎರಡಕ್ಕೂ ಸಾಕಷ್ಟು ಸಾಮ್ಯತೆ ಇದ್ದು ಹೀಗಾಗಿ ಸಂಗೀತ ಅಜನೀಶ್ ಬಿ ಲೋಕನಾಥ್ ಈ ಹಾಡನ್ನು ಕಾಪಿ ಮಾಡಿದ್ದಾರೆ ಎಂದಯ ಹಲವು ನೆಟ್ಟಿಗರು ಆರೋಪ ಮಾಡಿದ್ದಾರೆ.
ಹೌದು ಈಗಾಗಲೇ ವರಹ ರೂಪಂ ಹಾಡು ಪ್ರೇಕ್ಷಕರ ಮನಕದ್ದು ಆದರೆ ನೆಟ್ಟಿಗರು ಇದು ಬೇರೆ ಭಾಷೆಯಿಂದ ಕದ್ದ ಹಾಡು ಎಂಬುದಕ್ಕೆ ಸಾಕ್ಷಿ ಸಮೇತ ಪ್ರತ್ಯಕ್ಷರಾಗಿದ್ದು ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಆದರೂ ಕೂಡ ಈ ಬಗ್ಗೆ ಚಿತ್ರತಂಡ ಇದೂವರೆಗೂ ಪ್ರತಿಕ್ರಿಯೆ ನೀಡಿಲ್ಲ. ಇನ್ನು ಅಜನೀಶ್ ಬಿ ಲೋಕನಾಥ್ ಕೂಡ ನೆಟ್ಟಿಗರು ಮಾಡುತ್ತಿರುವ ಆರೋಪಕ್ಕೆ ಉತ್ತರ ಕೊಡುವುದಕ್ಕೂ ಮುಂದೆ ಬಂದಿಲ್ಲ.
ಇನ್ನು ನೆಟ್ಟಿಗರು ಅದೇನೇ ಆರೋಪ ಮಾಡುತ್ತಿದ್ದರೂ ಕೂಡ ಸಿನಿಮಾದ ವೇಗವನ್ನು ಮಾತ್ರ ತಗ್ಗಿಸಲು ಸಾಧ್ಯವಾಗಿಲ್ಲ. ಹೌದುಬಅಲ್ಲದೆ ಇದೇ ವಾರದಲ್ಲಿ ಹಿಂದಿ ಹಾಗೂ ತೆಲುಗು ಭಾಷೆಯಲ್ಲಿ ಕಾಂತಾರ ಬಿಡುಗಡೆ ಆಗುತ್ತಿದ್ದು ಮುಂದೆ ಮಲಯಾಳಂ ಭಾಷೆಯಲ್ಲೂ ಕೂಡ ಸಿನಿಮಾ ರಿಲೀಸ್ ಆಗಲಿದೆ. ಆಗ ಇದೇ ಸಾಂಗ್ ಅನ್ನು ಇಟ್ಟುಕೊಳ್ಳುತ್ತಾರಾ? ಅನ್ನುವುದು ಕೂಡ ಇನ್ನೂ ಸ್ಪಷ್ಟವಾಗಿಲ್ಲ.