ಅಂತರರಾಷ್ಟ್ರೀಯ ನಟ ಎಂಬುವಂತಹ ಖ್ಯಾತಿ ಪಡೆದಿರುವ ರಾಕಿಂಗ್ ಸ್ಟಾರ್ ಯಶ್ ರವರ ಅಭಿನಯದ ಕೆಜಿಎಫ್ ಸಿನಿಮಾ ಬಿಡುಗಡೆ ಆದಾಗಿನಿಂದಲೂ ಸಹ ಅದರ ಡೈಲಾಗ್ ಗಳದ್ದೇ ಕಾರುಬಾರು ಎನ್ನಬಹುದು.ಹೌದು ಕೆಜಿಎಫ್ ಮೊದಲ ಭಾಗ ಬಿಡುಗಡೆ ಆಗಿದ್ದಾಗಲೂ ಅದರ ಡೈಲಾಗ್ ಗಳು ಪ್ರತಿ ಯುವಕರ ಬಾಯಲ್ಲಿ ರಾರಾಜಿಸುತ್ತಿತ್ತು. ಇನ್ ಮೇಲಿಂದ ಅವರಪ್ಪ ನನ್ನ ಮಾವ ನಾನು ನಿಮ್ಮೆಲರಿಗೂ ಭಾವ. ನಿಮ್ಮಕ್ಕನ್ ಚೆನ್ನಾಗಿ ನೋಡ್ಕೊಳ್ರೋ ಚೆನ್ನಾಗಿ ನೋಡ್ಕೊಳ್ಳಿ ಈ ಡೈಲಾಗ್ ನ ಪಡ್ಡೆ ಹುಡುಗರು ಹೇಳಿದ್ದೇ ಹೇಳಿದ್ದು.
ನಂತರ ಅದೇ ರೀತಿಯಾಗಿ ಇನ್ನೊಂದು ಫೇಮಸ್ ಡೈಲಾಗ್ ಅಂದರೆ ಇಫ್ ಯು ಥಿಂಕ್ ಯು ಆರ್ ಬ್ಯಾಡ್ ಐ ಯಾಮ್ ಯುವರ್ ಡ್ಯಾಡ್. ಈ ಡೈಲಾಗ್ ಕೂಡ ಸಿಕ್ಕಾಪಟ್ಟೆ ಹಿಟ್ ಆಗಿತ್ತು. ಅಲ್ಲದೇ ಇದೇ ಮೈನ್ ಡೈಲಾಗ್ ಅನ್ನಿಸಿಕೊಂಡಿತ್ತು. ಸದ್ಯ ಇದೀಗ ಕೆ ಜೆ ಎಪ್ ಪಾರ್ಟ್ 2 ರಿಲೀಸ್ ಆಗಿ ದೊಡ್ಡ ದಾಖಲೆಯನ್ನೇ ಬರೆದಿದ್ದು ಈ ಸಿನಿಮಾ ರಿಲೀಸ್ ಆದಾಗಿಂದ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಯುವಕ ಯುವತಿಯರ ಬಾಯಲ್ಲಿ ರೀಲ್ಸ್ ಗಳಲ್ಲಿ ಒಂದೇ ಡೈಲಾಗ್ ಕೇಳಿ ಬರುತ್ತಿದೆ. ಅದುವೇ ವಾಯ್ಲೆನ್ಸ್ ಡೈಲಾಗ್.
ಹೌದು ಈ ವಾಯ್ಲೆನ್ಸ್ ವಾಯ್ಲೆನ್ಸ್ ವಾಯ್ಲೆನ್ಸ್ ಐ ಡೋಂಟ್ ಲೈಕ್ ಇಟ್ ಐ ಅವಾಯ್ಡ್ ಬಟ್ ವಾಯ್ಲೆನ್ಸ್ ಲೈಕ್ಸ್ ಮಿ. ಐ ಕಾಂಟ್ ಅವಾಯ್ಡ್ ಡೈಲಾಗ್ ಸದ್ಯ ಇದೀಗ ಎಲ್ಲರ ಫೆವರಿಟ್ ಅನ್ನಿಸಿಕೊಂಡಿದೆ. ಪುಟ್ಟ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಕೂಡ ಈ ಡೈಲಾಗ್ ಹೇಳಿ ರೀಲ್ಸ್ ಮಾಡುತ್ತಿದ್ದಾರೆ. ಇದರ ಜೊತೆ ಸೇಮ್ ಡೈಲಾಗ್ ಟೋನ್ ಬಳಸಿ ಬೇರೆ ಬೇರೆ ಡೈಲಾಗ್ ಕ್ರಿಯೇಟ್ ಮಾಡಲು ಶುರು ಮಾಡಿದ್ದಾರೆ.

ಸದ್ಯ ಇದೀಗ ಕೆಜಿಎಫ್ ಗುಂಗುನಿಂರ ಹೊರ ಬರುವಂತೆ ಮಾಡಿರುವುದು ಕಾಂತಾರ Kantara ಸಿನಿಮಾ. ಹೌದು ಎಲ್ಲರ ಬಾಯಲ್ಲೂ ವರಹ ರೂಪಂ ಹಾಡು ಬರುತ್ತಿದ್ದು ದೈವ ನರ್ತನಕ್ಕೆ ಪ್ರೇಕ್ಷಕರು ಫಿದಾ ಆಗಿದ್ದಾರೆ. 11ನೇ ದಿನವೂ ಕೂಡ ಸಿನಿಮಾ ಹೌಸ್ಫುಲ್ ಪ್ರದರ್ಶನ ಕಾಣುತ್ತಿದ್ದು ವಿಶ್ವದಾದ್ಯಂತ ಕಾಂತಾರ ಕಿಚ್ಚು ಹಬ್ಬಿದೆ. ಕೆಜಿಎಫ್ ೨ ಬಿಟ್ಟರೆ ಇತ್ತೀಚಿನ ವರ್ಷಗಳಲ್ಲಿ ಈ ಪಾಟಿ ಕ್ರೇಜ್ ಮತ್ಯಾವುದೇ ಕನ್ನಡ ಚಿತ್ರಕ್ಕೂ ಸಿಕ್ಕಿರಲಿಲ್ಲ. ಸದ್ಯ ಕಾಂತಾರ ಸಿನಿಮಾ ಬಗ್ಗೆ ಹೊರರಾಜ್ಯಗಳಲ್ಲಿ ಕುತೂಹಲ ದುಪ್ಪಟ್ಟಾಗಿದೆ.
ಸದ್ಯ ತಮಿಳುನಾಡು ಹಾಗೂ ಮಹಾರಾಷ್ಟ್ರದಲ್ಲಿ ಕಾಂತಾರ ಚಿತ್ರಕ್ಕೆ ಅದ್ಬೂತ ಪ್ರತಿಕ್ರಿಯೆ ಸಿಗುತ್ತಿದ್ದು ಬಹುತೇಕ ಶೋಗಳು ಹೌಸ್ಫುಲ್ ಆಗುತ್ತಿರುವುದು ಅಲ್ಲಿನ ಫಿಲ್ಮ್ ಮೇಕರ್ಸ್ಗೂ ಕೂಡ ಅಚ್ಚರಿ ತಂದಿದೆ. ಹೌದು ಮುಂಬೈನಲ್ಲಿ 120ಕ್ಕೂ ಅಧಿಕ ಶೋಗಳು ಪ್ರದರ್ಶನವಾಗುತ್ತಿದ್ದರೆ ಚೆನ್ನೈನಲ್ಲಿ 25ಕ್ಕೂ ಅಧಿಕ ಶೋಗಳಲ್ಲಿ ಕಾಂತಾರ ಆರ್ಭಟ ಜೋರಾಗಿದೆ. ಈ ಹಿಂದೆ ಕೆಜಿಎಪ್ ಚಿತ್ರಕ್ಕೆ ಮಾತ್ರ ಹೊರ ರಾಜ್ಯಗಳಲ್ಲಿ ಇಂತಹ ರೆಸ್ಪಾನ್ಸ್ ಸಿಕ್ಕಿತ್ತು ಎನ್ನಬಹುದು.
ಇನ್ನು ಹೈದರಾಬಾದ್ನಲ್ಲೂ ಸಿನಿಮಾ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದು ಬಾಕ್ಸಾಫೀಸ್ನಲ್ಲಿ ಈಗಾಗಲೇ ಕಾಂತಾರ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡುತ್ತಿದ್ದು ಚಿತ್ರತಂಡ ಅಫೀಷಿಯಲ್ ಆಗಿ ಘೋಷಿಸದೇ ಇದ್ದರೂ ಕೂಡ 10 ದಿನಕ್ಕೆ ಸಿನಿಮಾ ಕಲೆಕ್ಷನ್ 50 ಕೋಟಿ ಗಡಿ ದಾಟಿರುವ ಸುಳಿವು ಸಿಕ್ಕಿದೆ.ಸಿನಿಮಾ ಕ್ರೇಜ್ ನೋಡುತ್ತಿದ್ದರೆ ಶೀಘ್ರದಲ್ಲೇ 100 ಕೋಟಿ ಕ್ಲಬ್ ಸೇರಿಕೊಳ್ಳುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದ್ದು ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಬಹಳ ದೊಡ್ಡಮಟ್ಟದಲ್ಲಿ ಚಿತ್ರವನ್ನು ಪ್ರಪಂಚದ ಮೂಲೆ ಮೂಲೆಗೆ ತಲುಪಿಸುತ್ತಿದೆ.
ಸದ್ಯ ಇಂಗ್ಲೀಷ್ ಸಬ್ಟೈಟಲ್ ಜೊತೆಗೆ ಕಾಂತಾರ ಚಿತ್ರ ಕನ್ನಡದಲ್ಲಿ ವಿಶ್ವದಾದ್ಯಂತ ಸದ್ದು ಮಾಡುತ್ತಿದ್ದು ಸದ್ಯ ಈಗಾಗಲೇ ಹಿಂದಿ ತೆಲುಗು ತಮಿಳು ಮಲಯಾಳಂ ಭಾಷೆಗಳಿಗೆ ಡಬ್ ಆಗಿದ್ದು ಟ್ರೈಲರ್ ಕೂಡ ಬಿಡುಗಡೆ ಆಗಿದೆ. ಇದೇ ಶುಕ್ರವಾರದಿಂದ ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಮತ್ತೊಮ್ಮೆ ಕಾಂತಾರ ಆರ್ಭಟ ಶುರುವಾಗಲಿದ್ದು ಪರಭಾಷಿಕರು ಅವರದ್ದೇ ಭಾಷೆಯಲ್ಲಿ ಸಿನಿಮಾ ನೋಡುವ ಅವಕಾಶ ಸಿಗಲಿದೆ ಎನ್ನಬಹುದು.