ವಾರ್ತಾ ಮಂಜರಿ
Trending Stories, Viral News, Gossips & Everything in Kannada

Virat Kohli: ಕೊಹ್ಲಿ 71ನೇ ಶತಕದ ಬಗ್ಗೆ CSK ಮಾಡಿದ ಟ್ವೀಟ್ ವೈರಲ್, ಬರೆದ ಸಾಲುಗಳಿಗೆ ಫ್ಯಾನ್ಸ್ ಮೆಚ್ಚುಗೆ

86

ಹದಿನೈದನೆ ಆವೃತ್ತಿಯ ಏಷ್ಯಾಕಪ್​ನಿಂದ ಭಾರತ ಹೊರಬಿದ್ದಾಗಿದೆ. ಸದ್ಯ ಇದೀಗ ತವರಿಗೆ ಹೊರಟಿರುವ ಟೀಮ್ ಇಂಡಿಯಾ ಮುಂದಿನ ಸರಣಿಗೆ ಸಜ್ಜಾಗಬೇಕಿದ್ದು ಏಷ್ಯಾಕಪ್​ನ ಸೂಪರ್ 4 ಹಂತದಲ್ಲಿ ಮೊದಲ ಎರಡು ಪಂದ್ಯ ಸೋತ ಪರಿಣಾಮ ರೋಹಿತ್ ಪಡೆ ಫೈನಲ್​ಗೆ ಪ್ರವೇಶ ಪಡೆಯಲು ಸಾಧ್ಯವಾಗಲಿಲ್ಲ. ಹೌದು ಭಾರತ ಏಷ್ಯಾಕಪ್ ಎತ್ತಿ ಹಿಡಿಯಲು ವಿಫಲವಾಯಿತು ಎಂಬ ದುಃಖದ ನಡುವೆ ಅಭಿಮಾನಿಗಳನ್ನು ನಿರಾಳಗೊಳಿಸಿದ್ದು ವಿರಾಟ್ ಕೊಹ್ಲಿಯ ಶತಕ. 1021 ದಿನಗಳ ಬಳಿಕ ಕೊಹ್ಲಿ ಬ್ಯಾಟ್​ನಿಂದ ಕೊನೆಗೂ ಸೆಂಚುರಿಯೊಂದು ಮೂಡಿಬಂದಿದ್ದು ಮುಂದಿನ ತಿಂಗಳು ಆರಂಭವಾಗಲಿರುವ ಐಸಿಸಿ ಟಿ20 ವಿಶ್ವಕಪ್​ಗೂ ಮುನ್ನ ಭಾರತಕ್ಕೆ ಸಿಕ್ಕ ಸಂತಸದ ಸುದ್ದಿ ಇದಾಗಿದೆ. ಕೇವಲ 61 ಎಸೆತಗಳಲ್ಲಿ 12 ಬೌಂಡರಿ 6 ಅಮೋಘ ಸಿಕ್ಸರ್​ನೊಂದಿಗೆ 200 ಸ್ಟ್ರೈಕ್‌ ರೇಟ್‌ನಲ್ಲಿ ಬ್ಯಾಟ್ ಬೀಸಿದ ಕೊಹ್ಲಿ ಅಜೇಯ 122 ರನ್ ಚಚ್ಚಿದರು.

ಕೊಹ್ಲಿ ಶತಕದ ಅಂಚಿನಲ್ಲಿ ಇರುವಾಗ ಯಾವುದೆ ಒತ್ತಡವಿಲ್ಲದೆ ಕ್ರೀಸ್​ನಲ್ಲಿ ಡ್ಯಾನ್ಸ್ ಮಾಡುತ್ತಿರುವ ವಿಡಿಯೋ ಒಂದು ಸಖತ್ ವೈರಲ್ ಆಗುತ್ತಿದೆ 90ರ ಗಡಿಯಲ್ಲಿದ್ದ ಕೊಹ್ಲಿ 17ನೇ ಓವರ್​ ನಡೆಯುತ್ತಿರುವಾಗ ಸ್ಟೇಡಿಯಂನಲ್ಲಿ ಡಿಜೆ ಪ್ಲೇ ಮಾಡಲಾಗಿದ್ದು ಈ ಸಂದರ್ಭ ಕ್ರೀಸ್​ನಲ್ಲಿ ಬ್ಯಾಟಿಂಗ್​ಗೆ ತಯಾರಾಗುವ ಮುನ್ನ ಕೊಹ್ಲಿ ನೃತ್ಯ ಮಾಡುವುದು ಕಂಡುಬಂದಿದೆ.

ಇನ್ನು ಕೊಹ್ಲಿ ಸಿಕ್ಸ್ ಸಿಡಿಸಿ ಶತಕ ಬಾರಿಸುತ್ತಿದ್ದಂತೆ ಇಡೀ ಕ್ರೀಡಾಂಗಣವೇ ಎದ್ದು ನಿಂತು ಗೌರವ ಸೂಚಿಸಿದ್ದು ಇನ್ನಿಂಗ್ಸ್​ ಮುಗಿಸಿ ಪೆವಿಲಿಯನ್​ಗೆ ಬಂದಾಗ ಬೌಂಡರಿ ಲೈನ್ ಬಳಿಕ ಭಾರತೀಯ ಆಟಗಾರರು ಕೊಹ್ಲಿಗೆ ಶುಭಾಷಯ ತಿಳಿಸಲು ಕಾದುಕುಳಿತಿದ್ದರು. ಅದರಲ್ಲೂ ನಾಯಕ ರೋಹಿತ್ ಶರ್ಮಾ ಅವರು ಕೊಹ್ಲಿ ಆಗಮಿಸುತ್ತಿದ್ದಂತೆ ನಗುತ್ತಾ ಕೈಕೊಟ್ಟು ತಬ್ಬಿಕೊಂಡು ವಿಶ್ ಮಾಡಿ ಸಂಭ್ರಮ ಹಂಚಿಕೊಂಡರು.

Days after making massive MS Dhoni revelation, Virat Kohli shares cryptic Instagram story - see post

ಇನ್ನು ವಿರಾಟ್ ಕೊಹ್ಲಿ ಅತಿ ಹೆಚ್ಚು ಅಂತರರಾಷ್ಟ್ರೀಯ ಶತಕಗಳನ್ನು ಗಳಿಸಿದ ವಿಚಾರದಲ್ಲಿ ರಿಕಿ ಪಾಂಟಿಂಗ್‌ ದಾಖಲೆಯನ್ನು ಸರಿಗಟ್ಟಿದ್ದು ಕೊಹ್ಲಿ 522 ಇನ್ನಿಂಗ್ಸ್‌ಗಳಲ್ಲಿ 71 ಶತಕಗಳನ್ನು ಪೂರ್ಣಗೊಳಿಸಿದರೆ ಪಾಂಟಿಂಗ್ ಇದಕ್ಕಾಗಿ 668 ಇನ್ನಿಂಗ್ಸ್‌ಗಳನ್ನು ಆಡಿದ್ದರು. ಇನ್ನು ಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಭಾರತದ ಪರ ಅತಿ ದೊಡ್ಡ ಇನ್ನಿಂಗ್ಸ್ ಆಡಿದ ಆಟಗಾರ ಎನಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ರೋಹಿತ್ ಶರ್ಮಾ ಗಳಿಸಿದ್ದ 118 ರನ್ ದಾಖಲೆಯಾಗಿತ್ತು. ಅಂತೆಯೆ ಅಂತರರಾಷ್ಟ್ರೀಯ ಟಿ20ಯಲ್ಲಿ ಶತಕ ಸಿಡಿಸಿದ ಅತಿ ಹಿರಿಯ ಭಾರತೀಯ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೂ ಕೊಹ್ಲಿ ಪಾತ್ರರಾಗಿದ್ದಾರೆ.

ಇನ್ನು ಕೊಹ್ಲಿ ಮತ್ತೊಮ್ಮೆ ತಮ್ಮ ಬ್ಯಾಟ್ ಅನ್ನು ಮೇಲಕ್ಕೆತ್ತಿದ್ದನ್ನು ನೋಡಿ ಕ್ರಿಕೆಟ್ ವಲಯದವರು ತಮ್ಮ ಸಂತೋಷವನ್ನು ವ್ಯಕ್ತಪಡಿಸಿದರು. ಇಂಡಿಯನ್ ಪ್ರೀಮಿಯರ್ ಲೀಗ್ ಫ್ರಾಂಚೈಸಿ ಚೆನ್ನೈ ಸೂಪರ್ ಕಿಂಗ್ಸ್ ರವರು ಮಾಜಿ ಭಾರತೀಯ ನಾಯಕನಿಫೆ ವಿಶೇಷ ಟ್ವೀಟ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಮಾಡಿದೆ.ದಿ ಕಿಂಗ್ ಬ್ಯಾಕ್ ಅವರು ಹೇಳುತ್ತಿದ್ದಾರೆ. ಆದರೆ ಅವರು ಎಂದಿಗೂ ಬಿಟ್ಟು ಹೋಗಲಿಲ್ಲ, ಅಲ್ಲವೇ? ಎಂದು CSK ಟ್ವಿಟರ್‌ನಲ್ಲಿ ಬರೆದಿದ್ದಾರೆ. ಕೊಹ್ಲಿಯ ನಾಕ್ ಅನ್ನು ಶ್ಲಾಘಿಸುವ ಸರಣಿ ಟ್ವೀಟ್‌ಗಳೊಂದಿಗೆ ಅವರು ಕಾವ್ಯಾತ್ಮಕ ಎಳೆಯನ್ನು ಹಾಕಿದರು ಅದು ಸಕಾರಾತ್ಮಕ ಭವಿಷ್ಯಕ್ಕಾಗಿ ಭರವಸೆಯೊಂದಿಗೆ ಕೊನೆಗೊಂಡಿತು ಎಂದು ಹೇಳುವ ಮೂಲಕ ಅಡೆತಡೆಗಳು ಪಟ್ಟುಬಿಡದ ಯೋಧನನ್ನು ತಡೆಹಿಡಿಯುವುದಿಲ್ಲ! ಕ್ರಿಕೆಟ್ ಹೈ ಅಭಿ ಬಾಕಿ! ಎಂದು ಬರೆಯಲಾಗಿದೆ.

IPL 11, RCB vs CSK: In Dhoni's tactical masterclass, there were a few  lessons to be learnt for Kohli