Virat Kohli: ವಿರಾಟ ಕೊಹ್ಲಿ ಮತ್ತೊಂದು ಶತಕಕ್ಕೆ ಇನ್ನು 1000 ದಿವಸ ಕಾಯಬೇಕಾ? ಆಕಾಶ್ ಚೋಪ್ರಾ ಹೇಳಿಕೆಗೆ ಗರಂ ಆದ ಫ್ಯಾನ್ಸ್
ಸದ್ಯ ಭಾರತ ತಂಡ ಏಷ್ಯಾ ಕಪ್ ನಿಂದ ಹೊರ ಬಿದ್ದಿದೆ. ಆದರೆ 2022 ಸೂಪರ್ 4 ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಬಹುನಿರೀಕ್ಷಿತ ಶತಕ ಗಳಿಸಿದ್ದಕ್ಕಾಗಿ ವಿರಾಟ್ ಕೊಹ್ಲಿಯನ್ನು ಆಕಾಶ್ ಚೋಪ್ರಾ ಶ್ಲಾಘಿಸಿದ್ದು ಸೆಪ್ಟೆಂಬರ್ 8 ಗುರುವಾರ ದುಬೈನಲ್ಲಿ ಭಾರತ ತಂಡವು 213 ರನ್ಗಳ ಬೃಹತ್ ಗುರಿಯನ್ನು ಅಫ್ಘಾನಿಸ್ತಾನಕ್ಕೆ ನೀಡಿದ್ದು ಕೊಹ್ಲಿ 61 ಎಸೆತಗಳಲ್ಲಿ ಅಜೇಯ 122 ರನ್ ಗಳಿಸಿದರು. ಹೌದು ಅಫ್ಘಾನಿಸ್ತಾನ ತಂಡ 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡ 111 ರನ್ ಗಳಿಸಿ 101 ರನ್ಗಳ ಬೃಹತ್ ಅಂತರದಿಂದ ಸೋಲೊಪ್ಪಿಕೊಂಡಿದ್ದು ಯೂಟ್ಯೂಬ್ ಚಾನೆಲ್ನಲ್ಲಿ ಹಂಚಿಕೊಂಡ ವೀಡಿಯೊದಲ್ಲಿ ಆಕಾಶ್ ಚೋಪ್ರಾ ರವರು ವಿರಾಟ್ ಕೊಹ್ಲಿಯನ್ನು ಹೊಗಳಿದ್ದು ವಿರಾಟ್ ಕೊಹ್ಲಿ ಉತ್ತಮ ಫಾರ್ಮ್ ಅನ್ನು ಮುಂದುವರೆಸುತ್ತಾರೆ ಎಂದು ಆಶಯ ವ್ಯಕ್ತಪಡಿಸಿದ್ದಾರೆ.
ವಿರಾಟ್ ಕೊಹ್ಲಿ ರವರು ಭಾರತದ ಗೌರವ ಮತ್ತು ಹೆಮ್ಮೆ ಕೊಹ್ಲಿ ಮೊದಲ ಟಿ20 ಅಂತರಾಷ್ಟ್ರೀಯ ಶತಕ 1021 ದಿನಗಳ ಕಾಯುವಿಕೆ ನಂತರ 83 ಅಂತರಾಷ್ಟ್ರೀಯ ಇನ್ನಿಂಗ್ಸ್ಗಳನ್ನು ಆಡಿದ ಬಳಿಕ 71 ನೇ ಶತಕ ಗಳಿಸಿದ್ದು ಕೊಹ್ಲಿಯ ಫಾರ್ಮ್ ಮರಳಿ ಬರುತ್ತದೆ ಎಂದು ನಾವು ಭಾವಿಸುತ್ತೇವೆ ಮತ್ತು ಅವರು ಅದೇ ಶೈಲಿಯಲ್ಲಿ ಮುಂದುವರಿಯುತ್ತಾರೆ. ಅವರ ಮುಂದಿನ ಶತಮಾನಕ್ಕಾಗಿ ನಾವು 1000 ದಿನ ಕಾಯಬೇಕಾಗಿಲ್ಲ ಎಂದು ಭಾವಿಸುತ್ತೇವೆ ಎಂದು ಹೇಳಿದ್ದು
ವಿರಾಟ್ ಕೊಹ್ಲಿಯ ಆಟವನ್ನು ಶ್ಲಾಘಿಸಿರುವ ಆಕಾಶ್ ಚೋಪ್ರಾ ಅಫ್ಘಾನಿಸ್ತಾದ ಆಟಗಾರರ ಪರಿಸ್ಥಿತಿಯ ಬಗ್ಗೆಯೂ ಮಾತನಾಡಿದ್ದಾರೆ. ಹೌದು ಪಾಕಿಸ್ತಾನ ವಿರುದ್ಧದ ಪಂದ್ಯವನ್ನಾಡಿದ ಮರು ದಿನವೇ ಭಾರತದ ವಿರುದ್ಧ ಪಂದ್ಯವನ್ನಾಡಿದ ಅಫ್ಘಾನಿಸ್ತಾನ ಆಟಗಾರರು ಮಾನಸಿಕ ಹಾಗೂ ದೈಹಿಕವಾಗಿ ದಣಿದಿದ್ದರು ಎಂದು ಹೇಳಿದರು. ಪಂದ್ಯದ ಆಟಗಾರ ವಿರಾಟ್ ಕೊಹ್ಲಿ ಆಗಿರಬೇಕಿದ್ದು ರೋಹಿತ್ ಶರ್ಮಾ ಸ್ವತಃ ವಿಶ್ರಾಂತಿ ಪಡೆದರು ಹಾಗೂ ಕೆಎಲ್ ರಾಹುಲ್ ಜೊತೆಗೆ ವಿರಾಟ್ ಕೊಹ್ಲಿಗೆ ಓಪನಿಂಗ್ ನೀಡಿದರು. ನಬಿ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದು ಇದು ಸರಿಯಾದ ನಿರ್ಧಾರವಾಗಿತ್ತು ಆದರೆ ತಂಡವು ಮಾನಸಿಕವಾಗಿ ಮತ್ತು ದೈಹಿಕವಾಗಿ ದಣಿದಿದೆ ಎಂದು ಹೇಳಿದರು
ಕೊಹ್ಲಿ ಆಡಿದ ಕೆಲವು ಹೊಡೆತಗಳ ಬಗ್ಗೆ ಆಕಾಶ್ ಚೋಪ್ರಾ ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದು ಕೊಹ್ಲಿಗೆ ಜೀವದಾನ ಸಿಕ್ಕಿತು ಇಬ್ರಾಹಿಂ ಝದ್ರಾನ್ 28 ರನ್ ಗಳಿಸಿದ್ದಾಗ ಕ್ಯಾಚ್ ಕೈಬಿಟ್ಟಿದ್ದು ಅದರ ನಂತರ ಕೊಹ್ಲಿ ಬಾರಿಸಿದ ಬೌಂಡರಿ ಮತ್ತು ಸಿಕ್ಸರ್ ಉತ್ತಮವಾಗಿದ್ದವು ಪ್ರಾಬಲ್ಯವನ್ನು ಮರಳಿ ಪಡೆದಿದ್ದು ಹಳೆಯ ವಿರಾಟ್ ಕೊಹ್ಲಿ ಹಿಂತಿರುಗಿದರು. ನಂತರ ಅವರು ರಶೀದ್ ವಿರುದ್ಧ ಬಾರಿಸಿದ ಸಿಕ್ಸರ್. ಫಜಲ್ಹಕ್ ಫಾರೂಕಿ ವಿರುದ್ಧದ ಪುಲ್ ಹೊಡೆತಗಳು ಸಂಪೂರ್ಣವಾಗಿ ಮನಮುಟ್ಟುವಂತಿದ್ದವು ಎಂದು ಹೊಗಳಿದ್ದಾರೆ. ಹೌದು ಭಾರತವು ಬೃಹತ್ ಸ್ಕೋರ್ ತಲುಪಲು ಸಹಾಯ ಮಾಡುವಲ್ಲಿ ತಮ್ಮ ಪಾತ್ರವನ್ನು ವಹಿಸಿದ್ದಕ್ಕಾಗಿ ಸ್ಟ್ಯಾಂಡ್-ಇನ್ ನಾಯಕ ಕೆಎಲ್ ರಾಹುಲ್ (41 ಎಸೆತಗಳಲ್ಲಿ 62 ರನ್) ಆಟವನ್ನು ಆಕಾಶ್ ಚೋಪ್ರಾ ಶ್ಲಾಘಿಸಿದರು.
ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 71ನೇ ಶತಕ ದಾಖಲಿಸುವ ಮೂಲಕ ರಿಕಿ ಪಾಂಟಿಂಗ್ ದಾಖಲೆಯನ್ನು ವಿರಾಟ್ ಕೊಹ್ಲಿ ಸರಿಗಟ್ಟಿದ್ದು ಎಲ್ಲಾ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಸಚಿನ್ ತೆಂಡುಲ್ಕರ್ ಮಾತ್ರ 100 ಶತಕಗಳನ್ನು ದಾಖಲಿಸಿದ್ದಾರೆ. 104ನೇ ಅಂತಾರಾಷ್ಟ್ರೀಯ ಟಿ20 ಪಂದ್ಯವನ್ನಾಡಿರುವ ವಿರಾಟ್ ಕೊಹ್ಲಿ 3584 ರನ್ ಗಳಿಸಿದ್ದು ಅಫ್ಘಾನಿಸ್ತಾನದ ವಿರುದ್ಧ ಗಳಿಸಿದ ಶತಕ ಅಂತಾರಾಷ್ಟ್ರೀಯ ಟಿ20 ಪಂದ್ಯದಲ್ಲಿ ವಿರಾಟ್ ಕೊಹ್ಲಿ ಗಳಿಸಿದ ಮೊದಲ ಶತಕವಾಗಿದೆ. ಇನ್ನು 61 ಎಸೆತಗಳಲ್ಲಿ 122 ರನ್ ಗಳಿಸುವ ಮೂಲಕ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಭಾರತದ ಪರವಾಗಿ ಅತ್ಯಧಿಕ ರನ್ ಗಳಿಸಿದ ಆಟಗಾರ ಎನಿಸಿಕೊಂಡರು.
ಏಷ್ಯಾಕಪ್ ಟೂರ್ನಿ ಆರಂಭದಿಂದಲೂ ಕೂಡ ಕೊಹ್ಲಿ ಉತ್ತಮ ರನ್ ಕಲೆ ಹಾಕಿದ್ದು ಸೂಪರ್ 4 ಹಂತದ ಪಾಕಿಸ್ತಾನ ವಿರುದ್ಧದ ಪಂದ್ಯವನ್ನು ಹೊರತುಪಡಿಸಿ ಉಳಿದ ಪಂದ್ಯಗಳಲ್ಲಿ ಉತ್ತಮ ಬ್ಯಾಟಿಂಗ್ ಮಾಡದರು. ಅಫ್ಘಾನಿಸ್ತಾನದ ವಿರುದ್ಧದ ಪಂದ್ಯದಲ್ಲಿ 28 ರನ್ ಗಳಿಸಿದ್ದಾಗ ಕ್ಯಾಚ್ ಬಿಟ್ಟದ್ದರ ಸಂಪೂರ್ಣ ಲಾಭ ಪಡೆದ ವಿರಾಟ್ ಕೊಹ್ಲಿ ತದನಂತರ ಅಕ್ಷರಶಃ ಅಬ್ಬರಿಸಿದ್ದು 61 ಎಸೆತಗಳನ್ನು ಎದುರಿಸಿದ ವಿರಾಟ್ ಕೊಹ್ಲಿ 12 ಬೌಂಡರಿ 6 ಭರ್ಜರಿ ಸಿಕ್ಸರ್ ಸಹಿತ 122 ರನ್ ಗಳಿಸಿದರು. 200 ಸ್ಟ್ರೈಕ್ ರೇಟ್ನಲ್ಲಿ ಬ್ಯಾಟಿಂಗ್ ಮಾಡಿದರು. ವಿರಾಟ್ ಕೊಹ್ಲಿ ಒಟ್ಟಾರೆಯಾಗಿ ಐದು ಪಂದ್ಯಗಳಲ್ಲಿ 92 ಸರಾಸರಿ ಮತ್ತು 147.59 ಸ್ಟ್ರೈಕ್ ರೇಟ್ನಲ್ಲಿ 276 ರನ್ ಗಳಿಸಿದ್ದಾರೆ.