ಇತ್ತೀಚಿನ ದಿನಗಳಲ್ಲಿ ಡಾನ್ಸ್ ಎಂದರೆ ಎಲ್ಲರಿಗೂ ಒಂದು ತರಹದ ಕ್ರೇಜ್ ಎನ್ನಬಹುದು. ಡಾನ್ಸ್ ಮಾಡಲು ಅವಕಾಶಗಳು ಸಿಕ್ಕರೆ ಎಲ್ಲದರಲ್ಲಿ ಸ್ಟೆಪ್ ಹಾಕುವ ಯುವಕ ಯುವತಿರು ನಮ್ಮ ಸುತ್ತ ಮುತ್ತಲೂ ಇದ್ದಾರೆ. ಅದರಲ್ಲಿಯೂ ಈ ಸೋಶಿಯಲ್ ಮೀಡಿಯಾ ಯುವಕ ಯುವತಿಯರ ಪಾಲಿಗೆ ಅವಕಾಶವನ್ನು ಕಲ್ಪಿಸಿಕೊಟ್ಟಿವೆ. ಅನೇರು ಈ ಸಾಮಾಜಿಕ ಜಾಲತಾಣಗಳ ಮೂಲಕವೇ ತಮ್ಮ ಪ್ರತಿಭೆಗಳನ್ನು ಹೊರಹಾಕುತ್ತಿರುತ್ತಾರೆ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ವಿಡಿಯೋಗಳಲ್ಲಿ ಎಲ್ಲರ ಗಮನ ಸೆಳೆಯುತ್ತಿರುವುದು ಈ ಹುಡುಗ ಹುಡುಗಿಯ ಡಾನ್ಸ್.. ಹೌದು ಈ ಜೋಡಿಯೊಂದು ನಿರ್ಜನ ನಡು ರಸ್ತೆಯಲ್ಲಿಯೇ ಬೀದಿ ದೀಪಗಳ ಸಹಾಯವನ್ನು ತೆಗೆದುಕೊಂಡ ತುಂಬಾ ರೊಮ್ಯಾಂಟಿಕ್ ಆಗಿ ಡಾನ್ಸ್ ಮಾಡಿದ್ದಾರೆ. ಈ ಜೋಡಿಯ ಡಾನ್ಸ್ ನೋಡಿದರೆ ಡಾನ್ಸ್ ಎಕ್ಸ್ಪರ್ಟ್ ಗಳ ರೀತಿಯಲ್ಲಿ ಹೆಜ್ಜೆ ಹಾಕಿದ್ದಾರೆ.
ಅಂದಹಾಗೆ, ಪ್ರೇರಣಾ ಮಹೇಶ್ವರಿ ಎಂಬ ಬಳಕೆದಾರರು ಈ ವಿಡಿಯೋವನ್ನು ತಮ್ಮ ಟ್ವಿಟರ್ನಲ್ಲಿ ಖಾತೆಯಲ್ಲಿ ಟ್ವೀಟ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ರಸ್ತೆಯ ಬೀದಿ ದೀಪಗಳ ಕೆಳಗೆ ಹುಡುಗ ಮತ್ತು ಹುಡುಗಿ ನೃತ್ಯ ಮಾಡುವುದನ್ನು ಕಾಣ ಬಹುದಾಗಿದೆ. ಈ ಇಬ್ಬರೂ ಡಾನ್ಸ್ ಮಾಡುತ್ತಿರುವುದನ್ನು ಯಾರೋ ಒಬ್ಬರು ಚಿತ್ರೀಕರಣ ಮಾಡುತ್ತಿದ್ದಾರೆ. ಈ ವಿಚಾರವು ಆ ಜೋಡಿಗೆ ತಿಳಿದಿಲ್ಲ. ಹೀಗಾಗಿ ನಿರಾತಂಕವಾಗಿ ಡಾನ್ಸ್ ಮಾಡುತ್ತಿದ್ದಾರೆ ಈ ಜೋಡಿ. ಈ ವಿಡಿಯೋವನ್ನು ಗಮನಿಸಿದರೆ, ಛಾವಣಿ ಅಥವಾ ಯಾವುದಾದರೊಂದು ಕಟ್ಟಡದಿಂದ ಚಿತ್ರೀಕರಣ ಮಾಡಿದಂತೆ ಕಾಣುತ್ತದೆ. ಹೀಗಾಗಿ ಕಟ್ಟಡ ಕೆಳಗಿನ ರಸ್ತೆಯಲ್ಲಿ ಈ ಜೋಡಿಯೂ ಡಾನ್ಸ್ ಮಾಡಿರುವ ಕ್ಯಾಮರಾದಲ್ಲಿ ಸೆರೆಯಾಗಿದೆ ಎನ್ನುವುದು ಪಕ್ಕಾ. ನಿರ್ಜನ ರಸ್ತೆಯಲ್ಲಿ ಬೀದಿ ದೀಪಗಳ ನಡುವೆ ಡಾನ್ಸ್ ಮಾಡುತ್ತಿರುವ ಈ ಜೋಡಿಯೂ ಯಾರು ಎಂಬುದು ತಿಳಿದು ಬಂದಿಲ್ಲ. ಆದರೆ ಈ ಜೋಡಿಯ ವಿಡಿಯೋ ವೈರಲ್ ಆಗಿದ್ದು, ಯಾವ ಡಾನ್ಸರ್ ಗೂ ಕಡಿಮೆಯಿಲ್ಲ ತಿಳಿಯುತ್ತದೆ. ಅದ್ಭುತವಾಗಿ ಹಾಡಿಗೆ ಹೊಂದಿಕೆಯಾಗುವಂತೆ ಹೆಜ್ಜೆ ಹಾಕಿದ್ದಾರೆ. ಈ ವಿಡಿಯೋವು ಸುಮಾರು 16 ಸೆಕೆಂಡ್ ಗಳಿದ್ದು, 12 ಸಾವಿರಕ್ಕೂ ಹೆಚ್ಚು ಲೈಕ್ಸ್ ಪಡೆದಿದೆ. ಇದಲ್ಲದೆ, ವೀಡಿಯೊವನ್ನು 1500 ಕ್ಕೂ ಹೆಚ್ಚು ಬಾರಿ ರೀಟ್ವೀಟ್ ಮಾಡಲಾಗಿದೆ. ಅದರ ಜೊತೆಗೆ ಈವರೆಗೂ ಸರಿ ಸುಮಾರು 2.5 ಲಕ್ಷ ವೀಕ್ಷಣೆಗಳನ್ನು ಪಡೆದುಕೊಂಡಿದೆ.
ಈ ಡಾನ್ಸ್ ವಿಡಿಯೋಗೆ ಮೆಚ್ಚುಗೆಯ ಪ್ರತಿಕ್ರಿಯೆಗಳು ವ್ಯಕ್ತವಾಗಿದೆ. ಬಳಕೆದಾರರಲ್ಲಿ ಅನೇಕರು, ‘ ಇಬ್ಬರೂ ಯಾವುದಾದರೊಂದು ನೃತ್ಯ ಕ್ರಾರ್ಯಕ್ರಮಕ್ಕಾಗಿ ಅಭ್ಯಾಸ ನಡೆಸುತ್ತಿದ್ದಾರೆ ಮತ್ತು ಇದೇ ಕಾರಣಕ್ಕೆ ಅವರು ನೃತ್ಯದಲ್ಲಿ ಇಷ್ಟೊಂದು ಮುಳುಗಿಹೋಗಿದ್ದಾರೆ ‘ ಎಂದು ಬರೆದಿದ್ದಾರೆ. ಇನ್ನು, ಕೆಲವರು ಇದೊಂದು ಅದ್ಭುತ ಜೋಡಿ ಎಂದು ಹೇಳಿದರೆ, ನ್ನುಳಿದವರು ಸಹೋದರ ಸಹೋದರಿಯರ ಜೋಡಿ ಇದಾಗಿದೆ ಎಂದಿದ್ದಾರೆ. ಅದೇನೇ ಏರಲಿ, ಈ ಜೋಡಿಯ ಡಾನ್ಸ್ ಶೈಲಿಯೂ ಸೋಶಿಯಲ್ ಮೀಡಿಯಾ ಬಳಕೆದಾರರಿಗೆ ಬಲು ಇಷ್ಟವಾಗಿದೆ. ಈ ಜೋಡಿಯ ಡಾನ್ಸ್ ಶೈಲಿ ನೋಡಲು ಈ ಕೆಳಗಿನ ವಿಡಿಯೋ ನೋಡಿ.