ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಮೇಕೆ ಸಾಕಾಣಿಕೆ ಮಾಡೋರಿಗೆ ಗುಡ್ ನ್ಯೂಸ್…2 ಲಕ್ಷ ರೂ ಹಣ ಸಹಾಯ

2,679
ಮೇಕೆ ಸಾಕಾಣಿಕೆ ಎನ್ನುವುದು ಹೈನುಗಾರಿಕೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಸಾಕಷ್ಟು ದೊಡ್ಡ ಮಟ್ಟದ ಲಾಭಗಳಿಕೆಯ ಉದ್ಯಮವಾಗಿ ಬದಲಾವಣೆಯಾಗಿದೆ ಎಂದರೆ ತಪ್ಪಾಗಲಾರದು.
ಮೇಕೆಯ ಹಾಲು ಗೊಬ್ಬರ ಹಾಗೂ ಮೇಕೆಯನ್ನು ಮಾಂಸಕ್ಕಾಗಿ ಮಾರಾಟ ಮಾಡುವುದು ಸೇರಿದಂತೆ ವಿವಿಧ ಪ್ರಕಾರಗಳಲ್ಲಿ ಹಣವನ್ನು ಗಳಿಸಬಹುದಾಗಿದೆ. ಮೇಕೆ ಸಾಕಾಣಿಕೆ ಮಾಡುವವರಿಗೆ ಸರ್ಕಾರದಿಂದಲೂ ಕೂಡ ಸಾಲದ ಹಾಗೂ ಸಬ್ಸಿಡಿಯ ಪ್ರಯೋಜನಗಳು ದೊರಕುತ್ತಿದ್ದು ಈ ವ್ಯಾಪಾರವನ್ನು ಆರಂಭಿಸಿ ಲಾಭವನ್ನು ಕೂಡ ಗಳಿಸಬಹುದಾಗಿದೆ.
ಗ್ರಾಮೀಣ ಹಾಗೂ ನಗರ ಭಾಗ ಎರಡರಲ್ಲಿ ಕೂಡ ಮೇಕಸಾಕಾಣಿಕೆ ಮಾಡಬಹುದಾಗಿದ್ದು ಸರ್ಕಾರದ ನಬಾರ್ಡ್ ಸಂಸ್ಥೆಯ ಮೂಲಕ ಸಾಲವು ಕೂಡ ದೊರಕಲಿದ್ದು ವಿಮೆ ಕೂಡ ಸಿಗಲಿದೆ. ನಬಾರ್ಡ್ ಸಂಸ್ಥೆ ಅತ್ಯಂತ ಹಗ್ಗದ ಬ್ಯಾಂಕ್ ಸಾಲವನ್ನು ನೀಡುತ್ತದೆ. ಸಾಲವನ್ನು ನೀಡುವ ಬ್ಯಾಂಕುಗಳೆಂದರೆ ರಾಜ್ಯ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್, ರಾಜ್ಯ ಸಹಕಾರಿ ಬ್ಯಾಂಕ್ ಹಾಗೂ ನಗರ ಬ್ಯಾಂಕ್. ನಬಾರ್ಡ್ ಸಂಸ್ಥೆಯೊಂದಿಗೆ ಸಂಯೋಜನೆಗೊಂಡಿರುವ ವಾಣಿಜ್ಯ ಬ್ಯಾಂಕ್ ಹಾಗೂ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ ಗಳಲ್ಲಿಯೂ ಕೂಡ ಸಾಲ ಸೌಲಭ್ಯ ದೊರಕಲಿದೆ.
ನಬಾರ್ಡ್ ನಿಂದ ಎಸ್ ಸಿ ಎಸ್ ಟಿ ಜನಾಂಗದವರಿಗೆ 33 ಪ್ರತಿಶತ ಸಹಾಯಧನ ಹಾಗೂ ಸಾಮಾನ್ಯ ವರ್ಗದ ಜನರಿಗೆ 25% ಸಹಾಯಧನ ದೊರಕುತ್ತದೆ. 2.5 ಲಕ್ಷ ರೂಪಾಯಿ ಗರಿಷ್ಠ ಮಿತಿಯಾಗಿದೆ. ಎಲ್ಲ ದಾಖಲೆಗಳನ್ನು ನೀಡಿದ ಮೇಲೆ 20 ಮೇಕೆಗಳಿಗೆ ಗರಿಷ್ಠ 5 ಲಕ್ಷ ರೂಪಾಯಿ ಸಾಲವನ್ನು ಪಡೆದುಕೊಳ್ಳಬಹುದಾಗಿದೆ. 10 ಮೇಕೆಗಳಿಗೆ ಗರಿಷ್ಠ ನಾಲ್ಕು ಲಕ್ಷದವರೆಗೆ ಸಾಲವನ್ನು ಪಡೆದುಕೊಳ್ಳಬಹುದಾಗಿದೆ.
ಹತ್ತಿರದಲ್ಲಿರುವ ಪಶುಸಂಗೋಪನ ಕೇಂದ್ರಕ್ಕೆ ಹೋಗಿ ನಿಮಗೆ ಬೇಕಾದಷ್ಟು ಮೇಕೆಗಳನ್ನು ಖರೀದಿಸಿದ ನಂತರ ಮೇಕೆ ಸಾಕಾಣಿಕೆ ಯೋಜನೆ ಅಡಿ ಮೇಕೆಗಳನ್ನು ಸಾಕಲು ಅರ್ಜಿ ಸಲ್ಲಿಸಬೇಕು. ಇದಕ್ಕಾಗಿ ನೀವು ಐಟಿಆರ್ ಸ್ಲಿಪ್ ಆಧಾರ್ ಕಾರ್ಡ್ ಪ್ಯಾನ್ ಕಾರ್ಡ್ ಬ್ಯಾಂಕ್ ಅಕೌಂಟ್ ನಂಬರ್ ಹಾಗೂ ಆರು ತಿಂಗಳ ಸ್ಟೇಟ್ಮೆಂಟ್ ಅನ್ನು ನೀಡಿದರೆ ನಿಮ್ಮ ಸಾಲವನ್ನು ಮಂಜೂರು ಮಾಡಲಾಗುತ್ತದೆ. ಮೇಕೆ ಸಾಕಾಣಿಕೆ ಅತ್ಯಂತ ಲಾಭದಾಯಕ ವ್ಯಾಪಾರ ಉದ್ಯಮಿ ಆಗಿದ್ದು ಇದನ್ನು ಚೆನ್ನಾಗಿ ನಡೆಸಿಕೊಂಡು ಹೋದರೆ ಮುಂದಿನ ದಿನಗಳಲ್ಲಿ ಸಾಕಷ್ಟು ರೀತಿಯಲ್ಲಿ ಲಾಭವನ್ನು ಪಡೆಯಬಹುದಾಗಿದೆ.