ವಾರ್ತಾ ಮಂಜರಿ
Trending Stories, Viral News, Gossips & Everything in Kannada

Bigboss OTT: ದೂರದ ಜೋಡಿ ಬಿಗ್ಬಾಸ್ ಓಟಿಟಿಯಲ್ಲಿ ಊಹಿಸದ ತಿರುವು

113

*ಬಿಗ್ ಬಾಸ್ ಕನ್ನಡ ಒಟಿಟಿಯಿಂದ ಎಲಿಮಿನೇಟ್ ಆದ ಜಶ್ವಂತ್ ಪ್ರೇಯಸಿ ನಂದಿನಿ ಕಾರಣ ಏನು ಗೊತ್ತಾ?*
ಬಿಗ್ ಬಾಸ್ ಕನ್ನಡ ಒಟಿಟಿ ಆರಂಭವಾಗಿ ಇಂದು 5ನೇ ವಾರ ಮುಕ್ತಾಯವಾಗಿದೆ. ಬಿಗ್ ಬಾಸ್’ ಮನೆಯಿಂದ ಯಾರು ಎಲಿಮಿನೇಟ್ ಆಗಲಿದ್ದಾರೆ ಎಂಬ ಕುತೂಹಲ ಪ್ರತಿವಾರವೂ ಮೂಡುತ್ತದೆ. ಕೊನೆಯ ವಾರ ಯಾರು ಮನೆಯಿಂದ ಹೊರಹೋಗುತ್ತಾರೆ ಎಂಬ ಕುತೂಹಲ ಮತ್ತಷ್ಟು ಹೆಚ್ಚಾಗುತ್ತದೆ.

ಈ ವಾರ ಮನೆಯಿಂದ ನಂದಿನಿ ಹೊರ ಬಂದಿದ್ದಾರೆ. ಈಗಾಗಲೇ ಮನೆಯಿಂದ 7 ಜನ ಸ್ಪರ್ಧಿಗಳು ಎಲಿಮಿನೇಟ್ ಆಗಿದ್ದಾರೆ. ಈ 5 ವಾರಗಳಲ್ಲಿ ಲೋಕೇಶ್, ಅರ್ಜುನ್ ರಮೇಶ್, ಕಿರಣ್ ಯೋಗೇಶ್ವರ್, ಸ್ಫೂರ್ತಿ ಗೌಡ, ಉದಯ್ ಸೂರ್ಯ, ಚೈತ್ರಾ ಹಳ್ಳಿಕೇರಿ ಹಾಗೂ ಅಕ್ಷತಾ ಕುಕ್ಕಿ ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದಾರೆ. ಈ ಐದನೇ ವಾರದಂದು ಅತೀ ಕಡಿಮೆ ವೋಟ್ಸ್ ಪಡೆದ ನಂದಿನಿ ಹೊರ ಬಂದಿದ್ದಾರೆ.

ಫಿನಾಲೆ ವೀಕ್​​ಗೆ ರಾಕೇಶ್ ಅಡಿಗ, ರೂಪೇಶ್ ಶೆಟ್ಟಿ ಹಾಗೂ ಸಾನ್ಯಾ ಅಯ್ಯರ್ ಈ ಮೊದಲೇ ಹೋಗಿದ್ದರು. ಉಳಿದಂತೆ ಆರ್ಯವರ್ಧನ್​ ಗುರೂಜಿ, ಜಶ್ವಂತ್ ಬೋಪಣ್ಣ, ಸೋನು ಶ್ರೀನಿವಾಸ್ ಗೌಡ, ಜಯಶ್ರೀ ಆರಾಧ್ಯ, ಸೋಮಣ್ಣ ಮಾಚಿಮಾಡ ಹಾಗೂ ನಂದಿನಿ ನಾಮಿನೇಷನ್​ ಲಿಸ್ಟ್​ನಲ್ಲಿ ಇದ್ದರು. ಈ ಪೈಕಿ ಆರ್ಯವರ್ಧನ್ ಮೊದಲು ಸೇವ್ ಆದರು. ಸೋಮಣ್ಣ, ಸೋನು, ಜಯಶ್ರೀ, ಸೋಮಣ್ಣ ನಂತರ ಸೇವ್ ಆದರು. ಕಡಿಮೆ ವೋಟ್ ಪಡೆದು ನಂದಿನಿ ಔಟ್ ಆಗಿದ್ದಾರೆ.

ಜಶ್ವಂತ್ ಹಾಗೂ ನಂದಿನಿ ನಿಜ ಜೀವನದಲ್ಲಿ ಲವರ್ಸ್​. ಬಿಗ್ ಬಾಸ್ ಮನೆಯಲ್ಲಿ ಪ್ರೀತಿ ಹುಟ್ಟಿದ ಉದಾಹರಣೆ ಇದೆ. ಆದರೆ, ಈ ಬಾರಿ ಲವರ್ಸ್​​ ಅನ್ನೇ ಮನೆ ಒಳಗೆ ಕಳುಹಿಸಲಾಗಿತ್ತು. ಜಶ್ವಂತ್ ಬಗ್ಗೆ ನಂದಿನಿಗೆ ಸಾಕಷ್ಟು ಪೊಸೆಸಿವ್​ನೆಸ್​ ಇತ್ತು. ಇದು ಜಶ್ವಂತ್ ಆಟದ ಮೇಲೆ ಪ್ರಭಾವ ಬೀರುತ್ತಲೇ ಇತ್ತು. ನಾನು ಈ ವಾರ ಮನೆಯಿಂದ ಹೊರ ಹೋಗುತ್ತೇನೆ ಎಂದು ನಂದಿನಿ ಈ ವಾರ ಅನೇಕ ಬಾರಿ ಹೇಳಿಕೊಂಡಿದ್ದರು.ಮನೆಯ ಟಾಸ್ಕ್‌ಗಳ ವಿಚಾರಕ್ಕೆ ಬಂದಾಗ ನಂದಿನಿ ಉತ್ತಮ ಪ್ರದರ್ಶನ ನೀಡಿದ್ದರು, ಪ್ರೇಕ್ಷಕ ಪ್ರಭುಗಳು ನಂದಿನಿಗೆ ಬೆಂಬಲ ನೀಡಲಿಲ್ಲ ಈ ಕಾರಣದಿಂದಲೂ ಅವರು ಔಟ್ ಆಗಿದ್ದಾರೆ.

ಈ ಮೂಲಕ ರೂಪೇಶ್​, ಸಾನ್ಯಾ, ರಾಕೇಶ್, ಸೋಮಣ್ಣ, ಆರ್ಯವರ್ಧನ್, ಜಯಶ್ರೀ, ಸೋನು, ಜಶ್ವಂತ್ ಫಿನಾಲೆ ವೀಕ್ ತಲುಪಿದ್ದಾರೆ. ಓಟಿಟಿಯಲ್ಲಿ ಭಾರೀ ಜನಪ್ರಿಯರಾಗಿರೋ ಬಿಗ್​ ಬಾಸ್​ ಮುಕ್ತಾಯಗೊಳ್ಳಲು ಇನ್ನೂ ಎರಡು ವಾರ ಬಾಕಿ ಇದೆ.​ ಕಲರ್ಸ್​ ಕನ್ನಡ ವಾಹಿನಿ ಪ್ರೇಕ್ಷಕರಿಗೆ ಗುಡ್​ ನ್ಯೂಸ್​ ಕೊಟ್ಟಿದೆ. ಅತಿ ಶೀಘ್ರದಲ್ಲೇ ನಿಮ್ಮ ಟಿವಿ ಪರದೆ ಮೇಲೆ ಪ್ರೇಕ್ಷಕರು ಬಿಗ್ ಬಾಸ್​ ಹೊಸ ಸೀಸನ್ ನೋಡಬಹುದಾಗಿದೆ.