ICC T20: ಟಿ20 ವಿಶ್ವಕಪ್ ಗೆ ಭಾರತ ತಂಡದ 15 ಆಟಗಾರರ ಹೆಸರು ಪ್ರಕಟಿಸಿದ ಆಶೀಶ್ ನೆಹ್ರಾ, ಯಾರೆಲ್ಲಾ ಇದ್ದಾರೆ ಗೊತ್ತಾ?
ಸದ್ಯ ಯುಎಇ ಆತಿಥ್ಯದ ಏಷ್ಯಾ ಕಪ್ ಟೂರ್ನಿಯಲ್ಲಿ ನೀರಸ ಪ್ರದರ್ಶನದೊಂದಿಗೆ ತನ್ನ ಅಭಿಯಾನ ಮುಗಿಸಿಕೊಂಡ ರೋಹಿತ್ ಶರ್ಮಾ ರವರ ನಾಯಕತ್ವದ ಭಾರತ ತಂಡ ಮುಂಬರುವ 2022ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಎಲ್ಲಾ ರೀತಿಯ ಅಗತ್ಯ ತಯಾರಿಯನ್ನು ಆರಂಭಿಸಲಿದ್ದು ಟಿ20 ವಿಶ್ವಕಪ್ ಟೂರ್ನಿಯ ಪ್ರಯುಕ್ತ ಸೆ. 20 ರಿಂದ ಆಸ್ಟ್ರೇಲಿಯಾ ವಿರುದ್ಧ ಮೂರು ಪಂದ್ಯಗಳ ಟಿ20 ಸರಣಿ ಇದಾದ ಬಳಿಕ ದಕ್ಷಿಣ ಆಫ್ರಿಕಾ ವಿರುದ್ಧ ಅಷ್ಟೇ ಪಂದ್ಯಗಳ ಚುಟುಕು ಸರಣಿಯಲ್ಲಿ ಭಾರತ ತಂಡ ಕಾದಾಟ ನಡೆಸಲಿದೆ. ಈ ಸರಣಿಗಳ ಮೂಲಕ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಭಾರತ ತಂಡವನ್ನು ಅಂತಿಮಗೊಳಿಸುವ ಸಾಧ್ಯತೆ ಇದೆ.
ಭಾರತ ತಂಡದ ಮಾಜಿ ವೇಗಿ ಆಶಿಶ್ ನೆಹ್ರಾ ರವರು ಮುಂಬರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ತಮ್ಮ ನೆಚ್ಚಿನ 15 ಸದಸ್ಯರ ಭಾರತ ತಂಡವನ್ನು ಪ್ರಕಟಿಸಿದ್ದು ಆದರೆ ಚೊಚ್ಚಲ ಐಪಿಎಲ್ ಟ್ರೋಫಿ ಮುಡಿಗೇರಿಸಿಕೊಂಡ ಗುಜರಾತ್ ಟೈಟನ್ಸ್ ತಂಡದಲ್ಲಿ ಆಡಿದ್ದಂತಹ ಸ್ಟಾರ್ ವೇಗಿ ಮೊಹಮ್ಮದ್ ಶಮಿ ಅವರನ್ನೇ ಕೈ ಬಿಟ್ಟಿದ್ದಾರೆ. ಒಂದು ಹೆಸರು ನನ್ನ ಮನಸಿಗೆ ಬಂದಿದ್ದು ಮೊಹಮ್ಮದ್ ಶಮಿ. ಹೌದು ಅವರು ಟೆಸ್ಟ್ ವಿಶೇಷ ಬೌಲರ್ ಆಗಿದ್ದು ಈ ಹಿನ್ನೆಲೆಯಲ್ಲಿ ಅವರು ಆಯ್ಕೆದಾರರನ್ನು ಹೆಚ್ಚಾಗಿ ಆಕರ್ಷಿಸುವುದಿಲ್ಲ. ಇದನ್ನು ನಾನು ಹೇಳುತ್ತಿರುವುದಲ್ಲ.
ಹೌದು ಅಂದಹಾಗೆ ಅವರ ಸಾಮರ್ಥ್ಯವನ್ನು ಗುಜರಾತ್ ಟೈಟನ್ಸ್ ತಂಡದಲ್ಲಿಯೇ ನೋಡಿದ್ದೇನೆ ಎಂದು ಆಶಿಶ್ ನೆಹ್ರಾ ತಿಳಿಸಿದ್ದಾರೆ. ಇನ್ನು ಯುಜ್ವೇಂದ್ರ ಚಹಲ್ ಮತ್ತು ರವೀಂದ್ರ ಜಡೇಜಾ ರವರ ಜೊತೆಗೆ ಹಿರಿಯ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ರವರನ್ನು ಕೂಡ ವಿಶ್ವಕಪ್ ಭಾರತ ತಂಡಕ್ಕೆ ಮಾಜಿ ವೇಗಿ ಆಯ್ಕೆ ಮಾಡಿದ್ದು ಜಡೇಜಾ ಮತ್ತು ಚಹಲ್ ಮಾತ್ರವೇ ಮುಖ್ಯವಲ್ಲ. ಆರ್ ಅಶ್ವಿನ್ ಸಹ ತಂಡಕ್ಕೆ ತುಂಬಾ ಮುಖ್ಯ. ಅವರು ಆಡಿದರೆ ಪಂದ್ಯದ ಮೇಲೆ ಹೆಚ್ಚಿನ ಪ್ರಭಾವ ಬೀರಬಲ್ಲರು ಎಂದು ಹೇಳಿದರು.
ಕೆ.ಎಲ್ ರಾಹುಲ್ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರನ್ನು ಆಶಿಶ್ ನೆಹ್ರಾ ರವರ ಅಗ್ರ ಮೂರು ಸ್ಥಾನಗಳಿಗೆ ಆರಿಸಿದ್ದು ಇದರ ಜೊತೆಗೆ ಸೂರ್ಯಕುಮಾರ್ ಯಾದವ್ ಅವರಿಗೆ ಖಚಿತವಾಗಿಯೂ ಪ್ಲೇಯಿಂಗ್ ಇಲೆವೆನ್ನಲ್ಲಿ ಅವಕಾಶ ಪಡೆದುಕೊಳ್ಳಲಿದ್ದಾರೆ ಎಂದು ಅವರು ತಿಳಿಸಿದ್ದು ಸೂರ್ಯಕುಮಾರ್ ಯಾದವ್ ರವರ ಖಚಿತವಾಗಿ ಪ್ಲೇಯಿಂಗ್ ಇಲೆವೆನ್ನಲ್ಲಿ ಆಡಲಿದ್ದು ಏಕೆಂದರೆ ರಿಷಭ್ ಪಂತ್ ಅವರನ್ನು ಅದಲು-ಬದಲು ಆಡಿಸಬೇಕಾಗುತ್ತದೆ. ಆ ಮೂಲಕ ನೀವು 4 ಅಥವಾ 5 ನೇ ಕ್ರಮಾಂಕಗಳಲ್ಲಿ ಸನ್ನಿವೇಶಕ್ಕೆ ತಕ್ಕಂತೆ ಬದಲಾವಣೆ ಮಾಡಬಹುದು ಎಂದು ಆಶಿಶ್ ನೆಹ್ರಾ ಹೇಳಿದ್ದಾರೆ. ಇನ್ನು ಆಶಿಶ್ ನೆಹ್ರಾ ಅವರ ನೆಚ್ಚಿನ 15 ಸದಸ್ಯರ ಭಾರತ ಟಿ20 ವಿಶ್ವಕಪ್ ತಂಡ ನೋಡುವಯದಾದರೆ ರೋಹಿತ್ ಶರ್ಮಾ, ಕೆ.ಎಲ್ ರಾಹುಲ್, ವಿರಾಟ್ ಕೊಹ್ಲಿ, ರಿಷಭ್ ಪಂತ್, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಯುಜ್ವೇಂದ್ರ ಚಹಲ್, ರವಿಚಂದ್ರನ್ ಅಶ್ವಿನ್, ದಿನೇಶ್ ಕಾರ್ತಿಕ್, ಜಸ್ಪ್ರೀತ್ ಬುಮ್ರಾ, ಹರ್ಷಲ್ ಪಟೇಲ್, ಅರ್ಷದೀಪ್ ಸಿಂಗ್, ಭುವನೇಶ್ವರ್ ಕುಮಾರ್, ದೀಪಕ್ ಹೂಡ.