ಸುಮಾರು ಐದು ವರುಷದ ಹಿಂದೆ ಅಂದರೆ 2018 ರಲ್ಲಿ ತೆರೆಕಂಡ ತಲೈವಾ ರಜಿನಿಕಾಂತ್ (Rajani Kanth) ಅಭಿನಯದ ರೋಬೋ 2.0 (Robp 2.O) ಸಿನಿಮಾ 543 ಕೋಟಿಯ ಭಾರೀ ಬಜೆಟ್ ಸಿನಿಮಾ. ಇನ್ನು ಸಿನಿಮಾದಲ್ಲಿ ರಜಿನಿಕಾಂತ್ ಅಕ್ಷಯ್ ಕುಮಾರ್(Akshay kumar) ಆ್ಯಮಿಜಾಕ್ಷನ್ರಂತಹ (Amy Jackson) ಘಟಾನುಘಟಿ ತಾರೆಯರು ನಟಿಸಿರೋ ಸಿನಿಮಾ ಇದಾಗಿದ್ದು ಭಾರತ ಸಿನಿಮಾ ರಂಗದ ಎಲ್ಲ ದಾಖಲೆಗಳನ್ನ ಪುಡಿ ಪುಡಿ ಮಾಡುತ್ತದೆ ಎಂದೇ ಹೇಳಲಾಗುತ್ತಿದ್ದ ಸಿನಿಮಾ ಇದಾಗುತ್ತು. ಇಂತಹ ಈ ಸಿನಿಮಾ ಸರಿ ಸುಮಾರು 10 ಸಾವಿರ (10 Thousand) ಚಿತ್ರಮಂದಿರಗಳಲ್ಲಿ ಅಬ್ಬರಿಸಿದ್ದು ರೋಬೋ 2.O ಅಬ್ಬರಕ್ಕೆ ಬಾಹುಬಲಿಯ (Bahubali)) ದಾಖಲೆಗಳ ಕತೆ ಮರಿದು ಬಿದ್ದಿತ್ತು ಎನ್ನಲಾಗಿತ್ತು.
ಹೌದು ಸೂಪರ್ ಸ್ಟಾರ್ ರಜಿನಿಕಾಂತ್ ಸಿನಿಮಾವೊಂದು ಬರುತ್ತಿದೆ ಅಂದಾಗಲೇ ಅದರ ಮೇಲೆ ಬೆಟ್ಟದಷ್ಟು ನಿರೀಕ್ಷೆ ತನ್ನಿಂತಾನೆ ಹುಟ್ಟಿ ಕೊಳುತ್ತದೆ. ಇನ್ನು ಬಾಕ್ಸಾಫಿಸ್‍ನಲ್ಲೊಂದು (Boxoffice) ಹೊಸ ದಾಖಲೆ ಗ್ಯಾರಂಟಿ ಅಂತಲೇ ಭಾವಿಸಲಾಗುತ್ತದೆ. ಅಂತದ್ದೇ ನಿರೀಕ್ಷೆ ಅಷ್ಟೇ ಕುತೂಹಲವನ್ನ ಹುಟ್ಟಿಸಿದ್ದು ಈ 2.0 ಸಿನಿಮಾ. ಕಾಲಿವುಡ್‍ನ(Kollywoos) ದಿ ಗ್ರೇಟ್ ನಿರ್ದೇಶಕ ಶಂಕರ್ (Shankar) ನಿರ್ದೇಶನ ಅಕ್ಕಿ-ಆ್ಯಮಿಯಂತಹ ಸ್ಟಾರ್ ಕಾಸ್ಟ್ 2.0 ಮೇಲೆ ಸಿಕ್ಕಾಪಟ್ಟೆ ಕ್ರೇಜ್ ಹುಟ್ಟಿಸಿತ್ತು. ಹೌದು ಭಾರತೀಯ ಸಿನಿಮಾ ರಂಗದಲ್ಲಿ ಬಾಹುಬಲಿಯನ್ನೂ ಮೀರಿಸುವಂತಹ ಮೇನಿಯಾ ಸೃಷ್ಟಿಸಿತ್ತು 2.0. ಅದರಂತೆ ಪ್ರಪಂಚದಾದ್ಯಂತ ಸುಮಾರು 10 ಸಾವಿರ ಚಿತ್ರಮಂದಿರಗಳಲ್ಲಿ 2.0 ಸಿನಿಮಾ ಬಿಡುಗಡೆಯಾಗಿತ್ತು.
ತನ್ನ ದೃಶ್ಯ ವೈಭವದಿಂದಲೇ ಬಾಕ್ಸಾಫಿಸ್ ಕೊಳ್ಳೆ ಹೊಡೆದಿದ್ದು ಆದರೆ 2.0 ಇಷ್ಟೆಲ್ಲ ಅಬ್ಬರಿಸಿ ಬೊಬ್ಬಿರಿದರೂ ಸಹ ಜಗ್ಗದೆ ಬಗ್ಗದೆ ನಿಂತ್ತಿದ್ದ ಬಾಹುಬಲಿ. ಟಾಲಿವುಡ್‍ನ ದಿ ಗ್ರೇಟ್ ಡೈರೆಕ್ಟರ್ ರಾಜಮೌಳಿ (Rajamouli) ನಿರ್ದೇಶನದ ಬಾಹುಬಲಿ 6.500 ಸ್ಕ್ರೀನ್‍ಗಳಲ್ಲಿ ಜಗತ್ತಿನಾದ್ಯಂತ ಬಿಡುಗಡೆಯಾಗಿತ್ತು. ಎಲ್ಲೆಡೆ ಅದ್ಭುತ ಪ್ರತಿಕ್ರಿಯೆ ಪಡೆದು ಭಾರತೀಯ ಸಿನಿಮಾ ರಂಗದಲ್ಲಿ ಹೊಸ ದಾಖಲೆ ಬರೆದಿತ್ತು. ಹೌದು 2000 ಕೋಟಿಗೂ ಹೆಚ್ಚು ಹಣ ಕೊಳ್ಳೆ ಹೊಡೆದು ಹೊಸ ಇತಿಹಾಸ ನಿರ್ಮಿಸಿತ್ತು.ಆದರೆ ಬಿಡುಗಡೆಯ ವಿಷಯದಲ್ಲಿ ದಾಖಲೆ ಬರೆದ 2.0 ಗಳಿಕೆಯ ವಿಷಯದಲ್ಲಿ ಮಾತ್ರ ಹಿಂದುಳಿದಿತ್ತು. ಅಂದಹಾಗೆ ಬಾಹುಬಲಿ ಮೊದಲ ದಿನ 125 ಕೋಟಿ ಹಣ ಗಳಿಸಿತ್ತು. ಬಾಹುಬಲಿಗಿಂತ ಹೆಚ್ಚು ಸ್ಕ್ರೀನ್‍ಗಳಲ್ಲಿ ತೆರೆಕಂಡಿರೋ 2.0 115 ಕೋಟಿ ಗಳಿಸಲಷ್ಟೇ ಶಕ್ತವಾಗಿತ್ತು.
ಹೀಗೆ 2.0 ಸಿನಿಮಾ ನಿರೀಕ್ಷೆ ಮಾಡಿದಂತೆ ದೊಡ್ಡ ಮಟ್ಟದ ಹಿಟ್ ಕಾಣಲಿಲ್ಲ. ಆದರೆ ಇದೇ ಶಂಕರ್ ನಿರ್ದೇಶನದ ರಜನಿಕಾಂತ್ ನಾಯಕನಾಗಿ ನಟಿಸಿರುವ ಚಿತ್ರ ಎಂದಿರನ್(Robo Part 1) . ಈ ಸಿನಿಮಾ ಒಟ್ಟು 288 ಕೋಟಿ ಗಳಿಕೆ ಮಾಡಿದ್ದು ಈ ಚಿತ್ರವು ದಕ್ಷಿಣ ಭಾರತದ ಅತಿ ದೊಡ್ಡ ಗಳಿಕೆಯ ಚಲನಚಿತ್ರಗಳಲ್ಲಿ 10 ನೇ ಸ್ಥಾನದಲ್ಲಿದೆ. ಅಲ್ಲದೆ ಈ ಸಿನಿಮಾ ಪ್ರತಿಯೊಬ್ವರಿಗೂ ಇಷ್ಟವಾಗಿತ್ತು. ಇನ್ನು ಈ ಚಿತ್ರದ ಅದ್ಬುತ ಮೇಕಿಂಗ್ ವಿಡಿಯೋ ಇದೀಗ ಬಿಡುಗಡೆಯಾಗಿದ್ದು ಈ ಲೇಖನಿಯ ಕೆಳಗೆ ಈ ವಿಡಿಯೋ ನೋಡಬಹುದು.