ವಾರ್ತಾ ಮಂಜರಿ
Trending Stories, Viral News, Gossips & Everything in Kannada

ವಿದೇಶದ ಹಳ್ಳಿಗಳಲ್ಲಿ ರಸ್ತೆ ಹೇಗೆ ಮಾಡುತ್ತಾರೆ ನೋಡಿ…ಚಿಂದಿ ವಿಡಿಯೋ

7,869

ಸದ್ಯ ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚಲು ಪರಿಣಾಮಕಾರಿಯಾಗಿ ಕ್ರಮಕೈಗೊಳ್ಳದ ಬಗ್ಗೆ ಹೈಕೋರ್ಟ್‌ನಿಂದ ಪದೇ ಪದೇ ಛೀಮಾರಿ ಹಾಕಿಸಿಕೊಂಡ ಬಿಬಿಎಂಪಿ ಈ ಕಾಮಗಾರಿಗೆ ಮತ್ತೆ ಪೈಥಾನ್‌ ಯಂತ್ರ ಬಳಸಲು ನಿರ್ಧರಿಸಿದೆ.

ಹೌದು ನಗರದ ಪೂರ್ವ ವಲಯದಲ್ಲಿ 17 ರಸ್ತೆಗಳು ಪಶ್ಚಿಮ ವಲಯದಲ್ಲಿ 37 ರಸ್ತೆಗಳು ದಕ್ಷಿಣ ವಲಯದಲ್ಲಿ 32 ರಸ್ತೆಗಳು ಆರ್.ಆರ್.ನಗರ ವಲಯದಲ್ಲಿ 8 ರಸ್ತೆಗಳು ಹಾಗೂ 28 ಉಪಮುಖ್ಯ ರಸ್ತೆಗಳು ಸೇರಿದಂತೆ 180 ಕಿ.ಮೀ ಉದ್ದದ 122 ರಸ್ತೆಗಳ ಗುಂಡಿಗಳನ್ನು ವಿಶೇಷ ತಾಂತ್ರಿಕತೆ ಅಳವಡಿಸಿರುವ ಪೈಥಾನ್ ಯಂತ್ರದ ಮೂಲಕವಾಗಿ ಮುಚ್ಚಲು ಬಿಬಿಎಂಪಿ ಕ್ರಮಕೈಗೊಂಡಿದೆ. ಪೂರ್ವ ವಲಯದ ಕೆಲವು ರಸ್ತೆಗಳಲ್ಲಿನ ಗುಂಡಿಗಳನ್ನು ಪೈಥಾನ್‌ ಯಂತ್ರ ಬಳಸಿ ಮುಚ್ಚುವ ಕಾರ್ಯವನ್ನು ಪಾಲಿಕೆಯ ಮುಖ್ಯ ಆಯುಕ್ತ ಗೌರವ್‌ ಗುಪ್ತ ಅವರು ಪರಿಶೀಲಿಸಿದ್ದರು.

ಇನ್ನು ಮುಖ್ಯ ಆಯುಕ್ತರು ನಗರದ ಮಹಾತ್ಮ ಗಾಂಧಿ ರಸ್ತೆ ಮತ್ತು ಕಬ್ಬನ್ ರಸ್ತೆಗಳಲ್ಲಿ ಗುಂಡಿ ಮುಚ್ಚುವ ಕಾಮಗಾರಿಯನ್ನು ಮುಖ್ಯ ಆಯುಕ್ತರು ವೀಕ್ಷಿಸಿದರು. ಪೈಥಾನ್ ಯಂತ್ರ ಬಳಸಿ ರಸ್ತೆ ಗುಂಡಿ ಮುಚ್ಚುವ ಕಾರ್ಯವನ್ನು ಪೂರ್ಣಗೊಂಡ ಬಳಿಕ ಆ ರಸ್ತೆಗಳಲ್ಲಿ ಮತ್ತೆ ರಸ್ತೆ ಗುಂಡಿ ನಿರ್ಮಾಣವಾಗದಂತೆ ಎಚ್ಚರ ವಹಿಸಬೇಕು ಎಂದು ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದು.

ಬಿಬಿಎಂಪಿ ವ್ಯಾಪ್ತಿಯಲ್ಲಿ ಮುಖ್ಯರಸ್ತೆಗಳು ಉಪಮುಖ್ಯ ರಸ್ತೆಗಳು ಹಾಗೂ ವಾರ್ಡ್ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚುವ ಪ್ರಕ್ರಿಯೆ ಮುಕ್ತಾಯ ಹಂತದಲ್ಲಿದೆ ಎಂದು ಬಿಬಿಎಂಪಿ ತಿಳಿಸಿದೆ. ಪೂರ್ವ ವಿಭಾಗದ ರಸ್ತೆ ಮೂಲಸೌಕರ್ಯ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಗೀತಾ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

ರಸ್ತೆ ಗುಂಡಿ ಮುಚ್ಚಲು ನಾವು ಹೊಸ ಪೈಥಾನ್ ಯಂತ್ರ ಖರೀದಿಸಿಲ್ಲ. ಬಿಬಿಎಂಪಿ ಈ ಹಿಂದೆ ಖರೀದಿಸಿದ್ದ ಪೈಥಾನ್ ಯಂತ್ರಗಳನ್ನೇ ಬಳಸಿ ಗುಂಡಿ ಮುಚ್ಚುತ್ತಿದ್ದು ವಾಹನ ದಟ್ಟಣೆ ಇಲ್ಲದ ರಸ್ತೆಯಲ್ಲಿ ಈ ಯಂತ್ರ ಬಳಸಿ ದಿನದಲ್ಲಿ ಗರಿಷ್ಠ 30 ಕಿ.ಮೀ ಉದ್ದದಷ್ಟು ದೂರದವರೆಗೆ ರಸ್ತೆ ಗುಂಡಿಗಳನ್ನು ಮುಚ್ಚಬಹುದು ಎಂದು ಬಿಬಿಎಂಪಿ ರಸ್ತೆ ಮೂಲಸೌಕರ್ಯ ವಿಭಾಗದ ಮುಖ್ಯ ಎಂಜಿನಿಯರ್‌ ಬಿ.ಎಸ್‌.ಪ್ರಹ್ಲಾದ್‌ ತಿಳಿಸಿದರು.

ಸದ್ಯ ಇಂದು ಈ ವಿಚಾರದ ಬಗ್ಗೆ ಯಾಕೆ ಮಾತನಾಡುತ್ತಿದ್ದಾರೆ ಎಂದು ಯೋಚಿಸುತ್ತಿದ್ದಿರ.. ಕಾರಣವಿದೆ.. ಬೇರೆ ರಾಷ್ಟ್ರಗಳಲ್ಲಿನ ರಸ್ತೆಗಳನ್ನ ತಾವು ಯೂಟ್ಯೂಬ್ ಗಳಲ್ಲಿ ಅಥವಾ ಸುದ್ದಿ ವಾಹಿನಿಗಳಲ್ಲಿ ನೋಡಿರಬಹುದು. ಹಳ್ಳಕೊಳ್ಳ ಗಳಿಲ್ಲದೇ ಎಷ್ಟು ಅಚ್ಚುಕಟ್ಟಾಗಿರುತ್ತದೆ ಅಲ್ಲವೇ? ಇದು ಹೇಗೆ ಸಾದ್ಯ ಅಂತೀರ? ಒಮ್ಮೆ ಕೆಳಗಿನ ವಿಡಿಯೋ ನೋಡಿ. ನಿಮಗೂ ಕೂಡ ಈ ಯಂತ್ರ ಹಾಗೂ ತಂತ್ರಜ್ಞಾನ ನಮ್ಮ ಭಾರತಕ್ಕೂ ಬೇಕು ಎನಿಸದೇ ಇರದು.