ವಾರ್ತಾ ಮಂಜರಿ
Trending Stories, Viral News, Gossips & Everything in Kannada

ರಚಿತಾರಾಮ್ ಜೊತೆ ವಿಜಯ್ ರಾಘವೇಂದ್ರ…ಚಿಂದಿ ಡ್ಯಾನ್ಸ್ ವಿಡಿಯೋ

313

ಕನ್ನಡ ಚಿತ್ರರಂಗದ ಅತ್ಯಂತ ಬ್ಯುಸಿ ಯಾಗಿರುವ ನಟಿಮಣಿ ಅಂದರೆ ರಚಿತಾ ರಾಮ್ ರವರು. ಹೌದು ಅಜಯ್ ರಾವ್ ರಿಂದ ಆರಂಭಿಸಿ ಅಪ್ಪು ತನಕ ಎಲ್ಲ ಸ್ಟಾರ್ ಗಳ ಜೊತೆ ಸಿನಿಮಾಗಳಲ್ಲಿ ನಾಯಕಿಯಾಗಿ ಮಿಂಚ್ತಿರೋ ಗುಳಿಕೆನ್ನೆಯ ಬೆಡಗಿ ಈ ವರ್ಷ ಸಖತ್ ಹಾಟ್ ಹಾಡುಗಳಲ್ಲೂ ಕಾಣಿಸಿಕೊಳ್ಳೋ ಮೂಲಕ ಮತ್ತಷ್ಟು ಬೇಡಿಕೆ ಹೆಚ್ಚಿಸಿ ಕೊಂಡಿದ್ದಾರೆ.

ಹೌದು ಸ್ಯಾಂಡಲ್​ವುಡ್ ನಲ್ಲಿ ಡಿಂಪಲ್​ ಕ್ವೀನ್​ ರಚಿತಾ ರಾಮ್​ ಅವರದ್ದೇ ಸುದ್ದಿ. ಸದ್ಯಕ್ಕೆ ರಚ್ಚು ಟಾಕ್​ ಆಫ್​ ದಿ ಟೌನ್​ ಆಗಿದ್ದಾರೆ ಎನ್ನಬಹುದು. ಗುಳಿ ಕೆನ್ನೆ ಬೆಡಗಿ ರಚಿತಾ ರಾಮ್ ಅಭಿಮಾನಿಗಳ ಮೆಚ್ಚಿನ ತಾರೆಯಾಗಿದ್ದು ಈ ಡಿಂಪಲ್ ಕ್ವೀನ್ ಹೋದಲ್ಲಿ ಬಂದಲ್ಲಿ ಎಲ್ಲಾ ಫ್ಯಾನ್ಸ್ ಮುತ್ತಿಕೊಳ್ಳುತ್ತಾರೆ. ರಚಿತಾ ರಾಮ್​ ಅಂದರೆ ಎಲ್ಲರಿಗೂ ಅಚ್ಚುಮೆಚ್ಚು.

ಇನ್ನು ಕಲರ್ಸ್ ವಾಹಿನಿಯ ಮಜಾ ಭಾರತ ಕಾಮಿಡಿ ರಿಯಾಲಿಟಿ ಶೋ ನಲ್ಲಿ ಜಡ್ಜ್ ಆಗಿ ಹಲವು ಸೀಸನ್ ಗಳನ್ನು ನಡೆಸಿಕೊಟ್ಟ ಡಿಂಪಲ್ ಕ್ವೀನ್ ರಚಿತಾ ರಾಮ್ ಇದೀಗ ಜೀ ಕನ್ನಡ ವಾಹಿನಿಗೆ ಬಂದಿದ್ದಾರೆ.ಈಗಾಗಲೇ ಡ್ರಾಮಾ ಜ್ಯೂನಿಯರ್ಸ್ ಸೀಸನ್ 4ರಲ್ಲಿ ರಚಿತಾ ಜಡ್ಜ್ ಆಗಿ ಕಾರ್ಯ ನಿರ್ವಹಿಸಿದ್ದು ಇದೀಗ ಮತ್ತೋಂದು ಶೋನ ಜಡ್ಜ್ ಆಗಿದ್ದಾರೆ. ಹೌದು ಜೀ ಕನ್ನಡ ವಾಹಿನಿಯ ಡ್ರಾಮಾ ಜೂನಿಯರ್ಸ್ ಸೀಸನ್ 4 ರಲ್ಲು ಕೂಡ ರಚಿತಾ ಅವರು ತೀರ್ಪುಗಾರರಾಗಿ ಕಾಣಿಸಿಕೊಂಡಿದ್ದು ವಿಶೇಷವೆಂದರೆ ಈ ಕಾರ್ಯಕ್ರಮಕ್ಕೆ ಕ್ರೇಜಿ ಸ್ಟಾರ್ ರವಿಚಂದ್ರನ್ ಹಾಗೂ ಹಿರಿಯ ನಾಯಕನಟಿ ಲಕ್ಷ್ಮಿ ಅಮ್ಮ ಅವರು ಕೂಡ ತೀರ್ಪುಗಾರರಾಗಿ ಇದ್ದರು.

ರಚಿತಾ ಅವರಎ ಎಲ್ಲಾ ಕಾರ್ಯಕ್ರಮದಲ್ಲೂ ಉತ್ತಮವಾದ ಸಲುಹೆಯನ್ನು ನೀಡುತ್ತಾ ಸೋತವರಿಗೆ ಪ್ರೋತ್ಸಾಹ ನೀಡುತ್ತಾ ಗೆದ್ದವರಿಗೆ ಮಾರ್ಗ ವನ್ನೂ ತೋರಿಸುತ್ತಾ ಎಲ್ಲಾರಿಗೂ ಕೂಡ ಮಾದರಿಯಾಗಿದ್ದಾರೆ. ಇನ್ನು ಇತ್ತೀಚೆಗೆ ಜೀ ಕನ್ನಡ ವಾಹಿನಿಯವರು ಸೂಪರ್ ಕ್ವೀನ್ಸ್ ಎಂಬ ರಿಯಾಲಿಟಿ ಶೋ ಅನ್ನು ಶುರುಮಾಡಿದ್ದಾರೆ.

ಇನ್ನು ಈ ಕಾರ್ಯಕ್ರಮಕ್ಕೆ ವಿಜಯ್ ರಾಘವೇಂದ್ರ ಅವರು ತೀರ್ಪುಗಾರರಾಗಿ ಕಾಣಿಸಿಕೊಂಡಿದ್ದು ಇನ್ನು ವಿಜಯ್ ರಾಘವೇಂದ್ರ ಅವರು ಈಗಾಗಲೇ ಹಲವು ಕಾರ್ಯಕ್ರಮಗಳಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಂಡಿದ್ದರು. ಅಲ್ಲದೆ ವಿಜಯ್ ರಾಘವೇಂದ್ರ ಅವರಿಗೆ ಕನ್ನಡ ಚಿತ್ರರಂಗದ ನಂಟು ಚಿಕ್ಕವಯಸ್ಸಿನಿಂದಲೂ ಇದ್ದು ಕಲೆ ಕ್ಷೇತ್ರದಲ್ಲಿ ವಿಜಯ್ ರಾಘವೇಂದ್ರ ಅವರು ಸಂಗೀತದಲ್ಲು ಜೊತೆಗೆ ನೃತ್ಯದಲ್ಲಿಯು ಸೈ ಎನಿಸಿಕೊಂಡಿದ್ದಾರೆ.

ಸದ್ಯ ಹೊಸ ರಿಯಾಲಿಟಿ ಶೋನ ತೀರ್ಪುಗಾರರಾಗಿ ಚಲನಚಿತ್ರ ತಾರೆಯರಾದ ವಿಜಯ್ ರಾಘವೇಂದ್ರ ಮತ್ತು ರಚಿತಾ ರಾಮ್ ಕಾಣಿಸಿಕೊಂಡಿದ್ದು ಇನ್ನು ಸೋಶಿಯಲ್ ಮೀಡಿಯಾಗಳಲ್ಲಿ ಸದಾ ಆಕ್ಟಿವ್ ಆಗಿ ಇರುವ ರಚಿತಾ ರಾಮ್ ಅವರು ಹೆಚ್ಚು ಅಭಿಮಾನಿಗಳನ್ನು ಹೊಂದಿದ್ದಾರೆ.

ಹೌದು ಅಲ್ಲದೆ ಇತ್ತೀಚೆಗೆ ವಿಜಯ್ ರಾಘವೇಂದ್ರ ಅವರು ಹಾಗೂ ರಚಿತಾ ರಾಮ್ ಅವರು ಇಬ್ಬರು ಸೇರಿ ವಿಜಯ್ ಅವರ ಸೇವಂತಿ ಸಿನಿಮಾದ ಜಾಜಿ ಮಲ್ಲಿಗೆ ನೋಡೇ ಎಂಬ ಹಾಡಿಗೆ ರೀಲ್ಸ್ ಮಾಡಿದ್ದು ಸದ್ಯ ಈ ರೀಲ್ಸ್ ಇನ್ಸ್ತಗ್ರಾಂ ಅಲ್ಲಿ ವೈರಲ್ ಆಗಿದೆ. ಲೇಕನಿಯ ಕೆಳಗೆ ಈ ವಿಡಿಯೋ ನೋಡಬಹುದು.

 

View this post on Instagram

 

A post shared by Rachita Ram (@rachita_.ram)