ಕನ್ನಡ ಚಿತ್ರರಂಗದ ಕಂಡ ಸ್ಟಾರ್ ದಂಪತಿಗಳಲ್ಲಿ ಮೊದಲಿಂದಲೂ ಕೂಡ ಮೇಘನಾ ರಾಜ್ ಹಾಗೂ ಚಿರಂಜೀವಿ ಸರ್ಜಾ ಅವರ ಜೋಡಿ ಬಹಳ ವಿಶೇಷವಾಗಿಯೇ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಹೌದು ಬಹು ಕಾಲ ಪ್ರೀತಿಸಿ ಮುದುವೆ ಮಾಡಿಕೊಂಡ ಈ ಜೋಡಿ ತುಂಬು ಕುಟುಂಬದಲ್ಲಿ ಬಹಳ ಅಚ್ಚುಕಟ್ಟಾದ ಸಖ ಜೀವನ ನಡೆಸುತ್ತಿತ್ತು. ಪ್ರಾಣಕ್ಕಿಂತ ಹೆಚ್ಚಾಗಿ ತನ್ನ ಪತಿಯನ್ನು ಪ್ರೀತಿಸುತ್ತಿದ್ದ ಮೇಘನಾ ರಾಜ್ ಪ್ರೀತಿಯ ಚಿರುವಿಗಾಗಿ ಮತ್ತೊಮ್ಮೆ ಹಿನ್ನಲೆ ಗಾಯನವನ್ನು ಪ್ರಾರಂಭಿಸಿದ್ದರು.
ಅದೆಷ್ಟೋ ಜನರಿಗೆ ಈ ವಿಚಾರ ತಿಳಿದಿಯೇ ಇಲ್ಲ. ನಟಿ ಮೇಘನಾ ರಾಜ್ ನಟನೆಯ ಜೊತೆಗೆ ಉತ್ತಮ ಗಾಯಕಿಯೂ ಕೂಡ ಹೌದು. 2014 ರಲ್ಲಿ ಮಲೆಯಾಳಂ ಚಿತ್ರರಂಗದ 100ಡಿಗ್ರಿ ಸೆಲ್ಸಿಯಸ್ ಎಂಬ ಸಿನಿಮಾಗೆ ಮೊದಲ ಬಾರಿಗೆ ಗಾಯನ ಮಾಡಿದ್ದ ಮೇಘನಾ, ನಂತರ ಪರಿ ಪೂರ್ಣ ನಟಿಯಾದರು.
ಇನ್ನು ನಟ ಶ್ರೀನಗರ ಕಿಟ್ಟಿ ಅಭಿನಯದ ಬಹುಪರಾಕ್ ಎಂಬ ಸಿನಿಮಾದಲ್ಲಿ ಅಭಿನಯಿಸಿದ್ದ ಮೇಘನಾ ರಾಜ್ ಈ ಚಿತ್ರದಲ್ಲೂ ಕೂಡ ಒಂದು ಹಾಡನ್ನು ಹಾಡಿದ್ದರು. ನಂತರ ವಿವಾಹವಾದ ಮೇಲೆ ಗಾಯನ ಹಾಗೂ ನಟನೆ ಎರಡರಿಂದಲೂ ಕೂಡ ದೂರ ಉಳಿದು ಬಿಟ್ಟಿದ್ದ ಮೇಘನಾ ಅವರನ್ನು ಮತ್ತೊಮ್ಮೆ ಚಿತ್ರರಂಗಕ್ಕೆ ತಂದಿದ್ದು ಪತಿ ಚಿರಂಜೀವಿ ಸರ್ಜಾ .
ಹೌದು ಚಿರು ಅವರ ಸೂಪರ್ ಡೂಪರ್ ಹಿಟ್ ಸಿನಿಮಾ ಸಿಂಗ ಚಿತ್ರದಲ್ಲಿ ಒಂದು ಟಪ್ಪಾಂಗುಚ್ಚಿ ಹಾಡಿಗೆ ಮೇಘನಾ ಧ್ವನಿ ನೀಡಿದ್ದು ಈಗಲೂ ಕೂಡ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಸೆಟ್ ಮಾಡಿರುವ ಸಿಂಗ ಚಿತ್ರದ ವಾಟ್ ಎ ಬ್ಯೂಟಿಫುಲ್ ಹುಡುಗಿ ಶಿವ ಶಿವ ಎಂಬ ಹಾಡಿನ್ನು ಗಾಯಕ ನವೀನ್ ಸಜ್ಜು ಹಾಗೂ ಮೇಘನಾ ರಾಜ್ ಅವರು ಹಾಡಿದ್ದರು.
ಅಲ್ಲದೇ ಈ ಹಾಡಿಗೆ ಚಿರು ಹಾಗೂ ಅದಿತಿ ಪ್ರಭುದೇವ ಸಖತ್ ಸ್ಟೆಪ್ಸ್ ಕೂಡ ಹಾಕಿದ್ದು ಈ ಹಾಡು ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿತ್ತು. ಪತಿಯ ಸಿನಿಮಾಗೆ ಧ್ವನಿ ನೀಡುವುದು ಬಹಳ ವಿಶಿಷ್ಟ ಅನುಭವ ಎಂದು ನುಡಿದಿರುವ ಮೇಘನಾ ಕಳೆದ ವರುಷ ತೆರೆಕಂಡ ಚಿರು ಅಭಿನಯದ ಶಿವಾರ್ಜನ ಸಿನಿಮಾಗೆ ಮತ್ತೊಮ್ಮೆ ಗಾಯನ ಮಾಡಿವ ಮೂಲಕ ಪತಿಯ ಬೆಂಬಲಕ್ಕೆ ನಿಂತಿದ್ದರು ಮೇಘನಾ ರಾಜ್ .
ಚಿಕ್ಕವರಿದ್ದಾಗಲೇ ರಂಗಭೂಮಿ ಕಲಾವಿದೆಯಾಗಿ ಕಾಣಿಸಿಕೊಂಡಿದ್ದ ನಟಿ ಮೇಘನಾ ರಾಜ್ ನಂತರ ಲೂಸ್ ಮಾದ ಯೋಗೇಶ್ ಅಭಿನಯದ ಪುಂಡಾ ಚಿತ್ರದ ಮೂಲಕ ಸ್ಯಾಂಡಲ್ವುಡ್ಗೆ ಪಾದಾರ್ಪಣೆ ಮಾಡುತ್ತಾರೆ.
ಆನಂತರ ಆಯ್ಕೆ ಮಾಡಿಕೊಂಡ ಸಿನಿಮಾವೆಲ್ಲಾ ಕನ್ನಡ ಚಿತ್ರರಂಗದ ಸೂಪರ್ ಹಿಟ್ ಸಿನಿಮಾಗಳೇ.
ಮೂಲತಃ ಬೆಂಗಳೂರಿನವರೇ ಆದ ನಟಿ ಮೇಘನಾ ರಾಜ್ ಹುಟ್ಟಿದ್ದು ಮೇ 3,1990ರಲ್ಲಿ. ಚಂದನವನದ ಹಿರಿಯ ಕಲಾವಿದರಾದ ಸುಂದರ್ ರಾಜ್ ಹಾಗು ಪ್ರಮೀಳಾ ಜೋಷಾಯಿ ಅವರ ಮುದ್ದು ಮಗಳಾದ ಇವರು
ಬಾಲ್ಡ್ವಿನ್ ಶಾಲೆಯಲ್ಲಿ ವಿದ್ಯಾಭ್ಯಾಸವನ್ನು ಮುಗಿಸಿ ಕ್ರೈಷ್ಟ್ ಕಾಲೇಜಿನಲ್ಲಿ ಸೈಕಾಲಜಿಯಲ್ಲಿ ಪದವಿ ಪಡೆದಿದುಕೊಳ್ಳುತ್ತಾರೆ.
ಕೃಷ್ಣಲೀಲೈ ಎಂಬ ಚಿತ್ರದ ಮೂಲಕ ಸಿನಿ ಜರ್ನಿ ಶುರುಮಾಡಿದ ಮೇಘನಾ ರಾಜ್ ನಂತರ ಹಿಂತಿರುಗಿ ನೋಡಲೇ ಇಲ್ಲ. ತಮಿಳು ಸೇರಿದಂತೆ ಕನ್ನಡ ಹಾಗೂ ಮಲಯಾಳಂ ಚಿತ್ರರಂಗದಲ್ಲಿ ಬಹು ಬೇಡಿಕೆಯ ನಟಿಯಾಗಿ ತಮ್ಮನ್ನು ತಾವು ಸ್ಥಾಪಿಸಿಕೊಳ್ಳುತ್ತಾರೆ.
ರಾಕಿಂಗ್ ಸ್ಟಾರ್ ಯಶ್ ಅವರ ಜೊತೆ ನಟಿಸಿದ ರಾಜಾಹುಲಿ ಸಿನಿಮಾ ಮೇಘನಾ ರಾಜ್ ಅವರ ವೃತ್ತಿ ಜೀವನದಲ್ಲೇ ಬಿಗ್ ಬ್ರೇಕ್ ತಂದುಕೊಡುತ್ತದೆ. ಹಾಗೂ ಬ್ಯೂಟಿಫುಲ್ ಚಿತ್ರ ಮಾಲಿವುಡ್ನಲ್ಲಿ ಸೂಪರ್ ಹಿಟ್ ಆಗುತ್ತದೆ.
ಮೇ 08,2018ರಲ್ಲಿ ತನ್ನ ಬಹು ವರುಷದ ಗೆಳೆಯ ಚಿರಂಜೀವಿ ಸರ್ಜಾ ಅವರವಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಮೇಘನಾ ವಿವಾಹದ ನಂತರ ಕನ್ನಡದ ಮೊದಲ 3ಡಿ ಐತಿಹಾಸಿಕ ಸಿನಿಮಾ ಕುರುಕ್ಷೇತ್ರದಲ್ಲಿ ಅಭಿನಯಿಸುತ್ತಾರೆ. ಇನ್ನು ಮೇಘನಾ ರಾಜ್ ಅಭಿನಯಿಸುವುದರ ಜೊತೆಗೆ ಒಳ್ಳೆಯ ಗಾಯಕಿಯೂ ಹೌದು..
ಚಿರು ಅವರಿಗೆ ಮೇಘನಾ ಅವರು ಬಹಳ ಲಕ್ಕಿಯಂತೆ.
ಈ ವಿಚಾರವನ್ನು ಸ್ವತಃ ಚಿರು ಅವರೇ ಮೇಘನಾ ಅವರು ನಡೆಸುಕೊಡುತ್ತಿದ್ದ ಸಂದರ್ಶನದಲ್ಲಿ ಹೇಳಿಕೊಂಡಿದ್ದು ಮದುವೆ ಮುಂಚೆ ವರುಷಕ್ಕೆ ಎರಡು ಸಿನಿಮಾ ಮಾಡುತ್ತಿದೆ ಆದರೆ ವಿವಾಹದ ಬಳಿಕ ಬ್ಯಾಕು ಟು ಬ್ಯಾಕ್ ಸಿನಿಮಾ ಮಾಡುತ್ತಿದ್ದೇನೆ ಇದಕ್ಕೆ ಕಾರಣ ನೀನೆ ಯೂ ಆರ್ ಮೈ ಲಕ್ಕಿ ಚಾರ್ಮ್ ಎಂದು ಚಿರು ಮೇಘನಾ ಅವರಿಗೆ ಹೇಳಿದ್ದಾರೆ. ಸದ್ಯ ಪತಿಯ ಅಗಲಿಕೆಯ ನೋವಿನಿಂದ ಹೊರ ಬಂದಿರುವ ಮೇಘನಾ ಸರಳ ಜೀವನಕ್ಕೆ ಜಾರಿದ್ದು ಇದೀಗ ಕಾಂತಾರ ಚಿತ್ರದ ಹಾಡುಗೆ ರೀಲ್ಸ್ ಮಾಡಿದ್ದಾರೆ. ಹೌದು ಸಿಂಗಾರ ಸಿರಿಯೆ ಹಾಡಿಗೆ ಮೇಘನಾ ಸೀರೆಯಲ್ಲಿ ಹೇಗೆ ರೀಲ್ಸ್ ಮಾಡಿದ್ದಾರೆ ನೀವೆ ನೋಡಿ.