ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಹರಿಪ್ರಿಯಾ ಉಂಗುರ ಹಾಕುವಾಗ ಹಾಡು ಹೇಳಿದ ಮನೆಯವರು…ಚಿಂದಿ ವಿಡಿಯೋ

768

ಸದ್ಯ ಇತ್ತೀಚೆಗೆ ನಿಶ್ಚಿತಾರ್ಥ ಮಾಡಿಕೊಂಡ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಜೋಡಿಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದ್ದು ಡಾಲಿ ಧನಂಜಯ ಕೂಡ ಆತ್ಮೀಯ ಸ್ನೇಹಿತನಿಗೆ ಶುಭ ಹಾರೈಸಿದ್ದಾರೆ. ಸದ್ಯ ಇವರಿಬ್ಬರ ಟ್ವೀಟ್ ಸಂಭಾಷಣೆ ವೈರಲ್ ಆಗಿದ್ದು ನಟ ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ಗುಟ್ಟಾಗಿ ಉಂಗುರ ಬದಲಿಸಿಕೊಂಡಿದ್ದರು. ಇನ್ನು ಇದೀಗ ನಿಶ್ಚಿತಾರ್ಥ ಸಮಾರಂಭದ ವಿಡಿಯೋ ಫೋಟೊಗಳನ್ನು ಶೇರ್ ಮಾಡಿರುವ ಜೋಡಿ ಎಲ್ಲರೂ ಹರಸಿ ಆಶೀರ್ವದಿಸಿ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದು ಇದಕ್ಕೆ ಕಾಮೆಂಟ್ಸ್ ಬಾಕ್ಸ್‌ನಲ್ಲಿ ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ.

ಮುಂದಿನ ವರ್ಷ ಜೋಡಿ ಹಸೆಮಣೆ ಏರಲು ಸಿದ್ಧತೆ ನಡೆಸಿದ್ದು ಮತ್ತೊಂದ್ಕಡೆ ಇಬ್ಬರು ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ವಸಿಷ್ಠ ಸಿಂಹ ಪೋಸ್ಟ್‌ಗೆ ನಟ ಧನಂಜಯ ಪ್ರತಿಕ್ರಿಯಿಸಿದ್ದು ಕಂಗ್ರಾಟ್ಸ್ ದೋಸ್ತ ನೂರು ಕಾಲ ಚೆನ್ನಾಗಿ ಬಾಳಿ. ಹರಿಪ್ರಿಯಾ ಅವನು ನಮ್ಮ ಕೈಗೆ ಸಿಕ್ತಾ ಇಲ್ಲ ಅವಾಗವಾಗ ನಮಗು ಸ್ವಲ್ಪ ಬಿಟ್ಟು ಕೊಡಿ ತಮಾಷೆಯಾಗಿ ಕಾಲೆಳೆದಿದ್ದಾರೆ. ಇದಕ್ಕೆ ಅಭಿಮಾನಿಗಳು ತಮ್ಮ ಸ್ಟೈಲ್‌ನಲ್ಲಿ ಪ್ರತಿಕ್ರಿಯಿಸುತ್ತಿದ್ದು ಮತ್ತೊಂದು ಟ್ವೀಟ್‌ನಲ್ಲಿ ಅವರು ದೀಪ ನೀನು ಹಾವಳಿ ನೀವಿಬ್ರು ಸೇರಿದ್ರೆ ದೀಪಾವಳಿ ಬಾಳು ಬೆಳಕಾಗಲಿ ಎಂದು ಧನು ಟ್ವೀಟ್ ಮಾಡಿದ್ದಾರೆ.

ಹರಿಪ್ರಿಯಾ ಅವನು ನಮ್ಮ ಕೈಗೆ ಸಿಕ್ತಾ ಇಲ್ಲ ಅವಾಗವಾಗ ನಮಗು ಸ್ವಲ್ಪ ಬಿಟ್ಟು ಕೊಡಿ ಎಂದು ಧನಂಜಯ ಫನ್ನಿಯಾಗಿ ಮಾಡಿದ ಟ್ವೀಟ್‌ಗೆ ಟ್ಯಾಗ್‌ ಮಾಡಿ ಪ್ರತಿಕ್ರಿಯಿಸಿರುವ ವಸಿಷ್ಠ ಸಿಂಹ ರವರು ಹಹಹಾ. ಥ್ಯಾಂಕು ದೋಸ್ತಾ. ಹರಿಪ್ರಿಯಾ ಏನಂತೀರಾ? ಎಂದು ಕಾಮೆಂಟ್ ಮಾಡಿದ್ದು ಈ ಪೋಸ್ಟ್ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇದನ್ನು ನೋಡಿದ ಅಭಿಮಾನಿಯೊಬ್ಬರು ಈಗ್ಲೇ ಎಲ್ಲದಕ್ಕೂ ಪರ್ಮಿಷನ್ ಕೇಳೊಕೆ ಶುರು ಮಾಡಿದ್ರಾ? ಎಂದು ಕಿಚಾಯಿಸಿದ್ದು ಮತ್ತೊಬ್ಬರು ಓಕೆ ಎನ್ನುತ್ತಾರೆ? ಆದರೆ ಕಂಡೀಷನ್ ಅಪ್ಲೇ ಅಂತಾರೆ ಅನ್ನಿಸುತ್ತೆ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನು ಎಂದೆಂದಿಗೂ ಸಿನಿಮಾದಲ್ಲಿ ಸ್ನೇಹಿತನ ಮದುವೆಯಲ್ಲಿ ಸ್ನೇಹಿತರೆಲ್ಲಾ ಹಾಡಿ ಕುಣಿಯುವ ಸಾಂಗೊಂದಿದ್ದು ಅದರ ಒಂದು ಬಿಟ್‌ನಲ್ಲಿ ಡಾಲಿ ಧನಂಜಯ ಕೂಡ ಕಾಣಿಸಿಕೊಂಡಿದ್ದರು. ಸ್ನೇಹಿತ ಮದುವೆ ಆದ್ಮೇಲೆ ಏನೆಲ್ಲಾ ಆಗುತ್ತೆ ಎನ್ನುವುದನ್ನ ತಮಾಷೆಯಾಗಿ ಹೇಳಿದ್ದ ಹಾಡ ಅದಾಗಿದ್ದು ವಸಿಷ್ಠ ಸಿಂಹ ಮದುವೆಯಾಗುತ್ತಿರುವ ಸಂದರ್ಭಕ್ಕೆ ಆ ಹಾಡಿನಲ್ಲಿ ಧನಂಜಯ ಕಾಣಿಸಿಕೊಂಡಿದ್ದ ಬಿಟ್‌ನಲ್ಲಿದ್ದ ಸಾಲುಗಳು ಮ್ಯಾಚ್ ಆಗುವಂತಿದೆ. ಹೌದು ಅದನ್ನು ಯಾರೋ ಕಟ್ ಮಾಡಿ ಧನಂಜಯಗೆ ಟ್ಯಾಗ್ ಮಾಡಿ ಪೋಸ್ಟ್ ಮಾಡಿದ್ದು ಇದಕ್ಕೆ ಡಾಲಿ ನಗುವ ಎಮೋಜಿ ಹಾಕಿ ದೋಸ್ತ್ ವಸಿಷ್ಠ ಸಿಂಹನ ಟ್ಯಾಗ್ ಮಾಡಿದ್ದಾರೆ.

ಇನ್ನು ಡಾಲಿ ಧನಂಜಯ ಮದುವೆ ಬಗ್ಗೆ ಪದೇ ಪದೇ ಚರ್ಚೆ ಆಗುತ್ತಿರುತ್ತದೆ. ಹೌದು ಕೆಲ ದಿನಗಳ ಹಿಂದೆ ನಟಿ ಅಮೃತಾ ಅಯ್ಯಂಗಾರ್ ಜೊತೆ ಧನಂಜಯ ಡೇಟಿಂಗ್ ಮಾಡ್ತಿದ್ದಾರೆ. ಇಬ್ಬರು ಕೂಡ ಮದುವೆ ಆಗುತ್ತಾರೆ ಎನ್ನಲಾಗಿತ್ತು. ತಫ ನಂತರ ಇದೆಲ್ಲಾ ಸುಳ್ಳು ನಾವಿಬ್ಬರು ಸ್ನೇಹಿತರು ಎಂದು ಆ ಚರ್ಚೆಗೆ ತೆರೆ ಎಳೆದಿದ್ದು ವಸಿಷ್ಠ ಸಿಂಹ- ಹರಿಪ್ರಿಯಾ ಜೋಡಿಗೆ ಧನಂಜಯ ಶುಭ ಹಾರೈಸುತ್ತಿದ್ದಂತೆ ನಿಮ್ಮ ಮದುವೆ ಯಾವಾಗ ಸರ್ ಎಂದು ಕಾಮೆಂಟ್ ಬಾಕ್ಸ್‌ನಲ್ಲಿ ಕೆಲವರು ಧನಂಜಯ ಅವರನ್ನು ಕೇಳುತ್ತಿದ್ದಾರೆ.

ಇನ್ನು ಹರಿಪ್ರಿಯಾ ಅವರಿಗೆ ನಟ ವಸಿಷ್ಠ ಸಿಂಹ ಕ್ರಿಸ್ಟಲ್ ಹೆಸರಿನ ನಾಯಿಮರಿಯೊಂದನ್ನು ಉಡುಗೊರೆಯಾಗಿ ನೀಡಿದ್ದು ಆ ಮೂಲಕ ಇಬ್ಬರ ಸ್ನೇಹ ಪ್ರೀತಿ ಬೆಳೆದು ಈಗ ಇಬ್ಬರು ಹಸೆಮಣೆ ಏರಲು ಮುಂದಾಗಿದ್ದಾರೆ. ತೆಲುಗಿನ ಎವರು ಸಿನಿಮಾ ಕನ್ನಡ ರೀಮೆಕ್‌ನಲ್ಲಿ ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ನಟಿಸುತ್ತಿದ್ದು ಇನ್ನು ಈ ತಾರಾಜೋಡಿಯ ಎಂಗೇಜ್‌ಮೆಂಟ್ ಫೋಟೊಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇನ್ನು ಹರಿಪ್ರಿಯಾ ರವರು ಬಾವಿ ಪತಿಗೆ ಸಕ್ಕರೆ ಹೇಗೆ ತಿನ್ನಿಸುತ್ತಿದ್ದಾರೆ ನೋಡಿ.