ಈ ಕೋಳಿ ಮೊಟ್ಟೆಗಳು ಹೇರಳವಾದ ಪ್ರೋಟಿನ್ ಮತ್ತು ಪೌಷ್ಟಿಕಾಂಶಗಳನ್ನು ಒಳಗೊಂಡಿದ್ದು, ಇದೊಂದು ಪೂರ್ಣ ಪ್ರಮಾಣದ ಆಹಾರವಾಗಿದೆ. ಮೊಟ್ಟೆಯು ಚಯಾಪಚಯಾ ಕ್ರಿಯೆಯನ್ನು ಉತ್ತಮಪಡಿಸುತ್ತದೆ. ಹಾಗೂ ಪ್ರತಿ ನಿತ್ಯ ಮೊಟ್ಟೆ ತಿನ್ನುವುದರಿಂದ ಕೆಲವೊಂದು ಪೋಷಕಾಂಶಗಳನ್ನು ಕರಗಿಸಿ ದೇಹದ ಬೊಜ್ಜು ಕೂಡ ಕರಗುತ್ತದೆ. ಮೊಟ್ಟೆಯನ್ನು ಬೇಯಿಸಿ ಅದರ ಬಿಳಿ ಭಾಗವನ್ನು ಮಾತ್ರ ತಿಂದರೆ ಆರೋಗ್ಯಕರವಾಗಿ ತೆಳ್ಳಗಾಗುತ್ತಾರೆ.
ಬೇಯಿಸಿದ ಮೊಟ್ಟೆಯಿಂದ ಕಣ್ಣುಗಳಿಗೆ ಅತ್ಯುತ್ತಮ ಪ್ರಯೋಜನ ಲಭಿಸುವುದರ ಜೊತೆಗೆ ಪ್ರತಿನಿತ್ಯ ಬೆಳಗ್ಗೆ ಒಂದು ಮೊಟ್ಟೆ ತಿಂದರೆ ಶಕ್ತಿವರ್ಧಕವಾಗಿ ಕೆಲಸ ಮಾಡುತ್ತದೆ. ಹಾಗೂ ಮಾಂಸಖಂಡಗಳು ಬಲವಾಗಿ ದೇಹದ ಶಕ್ತಿಯನ್ನು ಕೂಡ ಹೆಚ್ಚಿಸುತ್ತದೆ.
ಈ ಮೊಟ್ಟೆಗಳಲ್ಲಿ ವಿಟಮಿನ್ ಬಿ12 ಹೇರಳವಾಗಿರುವುದರಿಂದ ದೇಹಕ್ಕೆ ರೋಗ ನಿರೋಧಕ ಶಕ್ತಿಯನ್ನು ಕೂಡ ಹೆಚ್ಚಿಸುತ್ತದೆ. ಗರ್ಭಿಣಿಯರು ಮೊಟ್ಟೆ ತಿನ್ನುವುದರಿಂದ ಗರ್ಭದಲ್ಲಿರುವ ಶಿಶುವಿಗೆ ಪೋಷಕಾಂಶ ಹಾಗೂ ಖನಿಜಾಂಶ ಪೂರೈಕೆಯಾಗಿ ಆರೋಗ್ಯಯುತವಾಗಿ ಬೆಳೆಯಲು ಸಹಾಯವಾಗುತ್ತದೆ. ಸದ್ಯ ಇಲ್ಲೊಬ್ಬ ಕೋಳಿ ಹಿಡಿಯಿಯಲು ಮಾಡಿದ ಪ್ರಯೋಗ ನೋಡಿ.