ವಾರ್ತಾ ಮಂಜರಿ
Trending Stories, Viral News, Gossips & Everything in Kannada

ವಿಷ್ಣುವರ್ಧನ್ ಮಗಳ ಡಾನ್ಸ್ ನೋಡಿ…ಸಿಂಗಾರ ಸಿರಿಯೆ ಹಾಡು ಚಿಂದಿ ವಿಡಿಯೋ

2,843

ಕನ್ನಡ ಚಿತ್ರರಂಗದ ಅಭಿನಯಭಾರ್ಗವ ಡಾಕ್ಟರ್ ವಿಷ್ಣುವರ್ಧನ್ ಹಾಗೂ ನಟಿ ಭಾರತೀಯವರು ಇಬ್ಬರು ಮಕ್ಕಳನ್ನು ದತ್ತು ಪಡೆದುಕೊಂಡು ತಮ್ಮ ಸ್ವಂತ ಮಕ್ಕಳಂತೆಯೇ ನೋಡಿಕೊಂಡಿರುವ ವಿಚಾರ ತಮಗೆಲ್ಲರಿಗೂ ತಿಳಿದೇ ಇದೆ. ಇವರು ದತ್ತು ಪಡೆದ ಹೆಣ್ಣು ಮಕ್ಕಳಿಬ್ಬರ ಹೆಸರು ಚಂದನಾ ಮತ್ತು ಕೀರ್ತಿ. ಇನ್ನು ಕೀರ್ತಿಯವರು ಮೀಡಿಯಾಗಳಲ್ಲಿ ಆಗಾಗ ಕಾಣಿಸುತ್ತಾರೆ. ಆದರೆ ಚಂದನ ಅವರು ಮಾತ್ರ ಎಲ್ಲಿಯೂ ಕಾಣಿಸಿಕೊಳ್ಳುವುದಿಲ್ಲ. ಇನ್ನು ಇತ್ತೀಚಿಗಷ್ಟೇ ಈ ಕುಟುಂಬವು ಡಾಕ್ಟರ್ ವಿಷ್ಣುವರ್ಧನ್ ಅವರ ಮನೆಯ ನವೀಕರಣದ ಕನಸನ್ನು ನೆರವೇರಿಸುವ ಸಲುವಾಗಿ ಹೊಸದೊಂದು ನವಯುಗದ ಮನೆಯನ್ನೇ ನಿರ್ಮಿಸಿದ್ದಾರೆ.

ಹೌದು ಎರಡು ಫ್ಲೋರ್ಗಳ ಮನೆ ಇದಾಗಿದ್ದು ಹಳೆಯ ಮನೆಯಲ್ಲಿ ವಿಷ್ಣುವರ್ಧನ್ ರವರು ಕಾಲ ಕಳೆಯಲು ಇಷ್ಟಪಡುತ್ತಿದ್ದ ಹಸಿರು ತುಂಬಿದ ಗಾರ್ಡನ್ ನಂತೆಯೇ ಹೊಸ ಮನೆಯಲ್ಲಿಯೂ ಕೂಡ ಗಿಡ ಮರಗಳನ್ನು ಬೆಳೆಸಲೆಂದೇ ಜಾಗವನ್ನು ಮೀಸಲಿಟ್ಟು ಸುಂದರ ವನವನ್ನು ಬೆಳೆಸಿದ್ದಾರೆ.

ಇನ್ನು ವಿಷ್ಣುವರ್ಧನ್ ಅವರು ಪೂಜಿಸುತ್ತಿದ್ದ ಗಣೇಶನ ಮೂರ್ತಿಗಾಗಿ ಮನೆಯ ಎದುರಲ್ಲಿ ಇಟ್ಟು ಒಂದು ಮಂಟಪವನ್ನು ಕೂಡ ನಿರ್ಮಿಸಿದ್ದು ಈ ಮನೆಯ ಗ್ರಹಪ್ರವೇಶವು ನವೆಂಬರ್ 27ರಂದು ಅದ್ದೂರಿಯಾಗಿ ನೆರವೇರಿತ್ತು. ಹೌದು ಮನೆಯ ನಿರ್ಮಾಣ ಕಾಲದಲ್ಲಿ ಭಾರತೀಯ ವಿಷ್ಣುವರ್ಧನ್ ಅವರೊಂದಿಗೆ ಮಗಳು ಕೀರ್ತಿ ಮತ್ತು ಅವರ ಪತಿ ಅನಿರುದ್ಧ ಅವರು ಹೆಗಲಾಗಿ ನಿಂತಿದ್ದು ಎಲ್ಲಾ ಕೆಲಸ ಕಾರ್ಯಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದರು.

ಜೊತೆ ಜೊತೆಯಲಿ ಧಾರವಾಹಿಯ ಆರ್ಯವರ್ಧನ್ ಖ್ಯಾತಿಯ ಅನಿರುದ್ಧವರನ್ನು ವಿಷ್ಣುವರ್ಧನ್ ಅವರ ಪುತ್ರಿ ಕೀರ್ತಿಯವರು ವಿವಾಹವಾಗಿದ್ದಾರೆ ಎಂಬುದು ನಿಮಗೆಲ್ಲರಿಗೂ ತಿಳಿದಿದೆ.

ಇನ್ನು ಇದೇ ದಂಪತಿಗಳು ಗೃಹಪ್ರವೇಶ ಕಾರ್ಯಕ್ರಮದ ಪೂಜೆಯಲ್ಲಿ ಕಾಣಿಸಿಕೊಂಡಿದ್ದು ಕೀರ್ತಿಯವರು ಅವರ ಆಸೆಯಂತೆ ತಂದೆ ವಿಷ್ಣುವರ್ಧನ್ ಅವರ ಒಪ್ಪಿಗೆ ಪಡೆದು ಕಾಸ್ಟ್ಯೂಮ್ ಡಿಸೈನರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹೌದು ವಿಷ್ಣುವರ್ಧನ್ ಕುಟುಂಬದ ಸಭೆ ಸಮಾರಂಭಗಳಲ್ಲಿಯಾದರೂ ಕಾಣಿಸಿಕೊಂಡು ಕೀರ್ತಿಯವರು ಮೀಡಿಯಾದಲ್ಲಿ ಆಗಾಗ ಕಾಣ ಸಿಗುತ್ತಾರೆ. ಆದರೆ ಮಾತ್ರ ಚಂದನ ಅವರು ಗೃಹಪ್ರವೇಶ ಕಾರ್ಯಕ್ರಮಕ್ಕೆ ಆಗಮಿಸಿದ್ದರು ಕೂಡ ಫೋಟೋ ಹಾಗೂ ವಿಡಿಯೋಗಳಲ್ಲಿ ಅಷ್ಟಾಗಿ ಸೆರೆಯಾಗಿಲ್ಲ. ಇವರಿಗೆ ಮಾಧ್ಯಮಗಳೆಂದರೆ ಕೊಂಚ ಮುಜುಗರವಂತೆ.

ಚಂದನಾ ಅವರು ಫಾರಿನ್ ಕಂಟ್ರಿಯಲ್ಲಿ ಸೆಟಲ್ ಆಗಿದ್ದಾರೆ ಎಂಬುದು ಹಲವರ ಅಭಿಪ್ರಾಯವಾಗಿದ್ದು ಆದರೆ ಅವರು ತಮ್ಮ ಉದ್ಯಮಿ ಪತಿಯೊಂದಿಗೆ ಬೆಂಗಳೂರಿನಲ್ಲಿಯೇ ವಾಸವಾಗಿದ್ದಾರೆ ಎನ್ನಲಾಗುತ್ತಿದೆ. ಹೌದು ಮಾಧ್ಯಮದವರು ಸಂದರ್ಶನಕ್ಕಾಗಿ ಚಂದನಾ ಹಾಗೂ ಅವರ ಪತಿಯಲ್ಲಿ ಕೇಳಿದಾಗ ಮುಜುಗರದಿಂದ ಅವರಿಬ್ಬರೂ ಒಪ್ಪಿಕೊಳ್ಳಲಿಲ್ಲವಂತೆ.

ಇನ್ನು ಒಬ್ಬ ಸ್ಟಾರ್ ನಟನ ಮಗಳಾಗಿಯೂ ಕೂಡ ಹೆಚ್ಚು ಪ್ರಚಾರಗೊಳ್ಳದೆ ಸರಳ ಜೀವನವನ್ನು ನಡೆಸುತ್ತಿದ್ದು ಒಟ್ಟಿನಲ್ಲಿ ವಿಷ್ಣುವರ್ಧನ್ ಅವರ ಪುತ್ರಿಯರು ಚಂದನಾ ಮತ್ತು ಕೀರ್ತಿ ಇಬ್ಬರು ಖುಷಿಯಾದ ಜೀವನವನ್ನು ಸಾಗಿಸುತ್ತಿದ್ದಾರೆ. ಸದ್ಯ ಇದೀಗ ಸಹೋದರಿಯರಿಬ್ಬರು ಒಟ್ಟಿಗೆ ಕಾಣಿಸಿಕೊಂಡಿದ್ದು ಕಾಂತಾರ ಚಿತ್ರದ ಸಿಂಗಾರ ಸಿರಿಯೇ ಹಾಡಿಗೆ ಹೇಗೆ ನೃತ್ಯ ಮಾಡಿದ್ದಾರೆ ನೀವೆ ನೋಡಿ.