ತೆಲುಗು ಚಿತ್ರರಂಗದ ಖ್ಯಾತ ನಟಿ ಸಮಂತಾ ತಮಗೆ ಆರೋಗ್ಯ ಸಮಸ್ಯೆ ಇದೆ ಎಂದು ಇತ್ತೀಚೆಗೆ ಹೇಳಿಕೊಂಡಿದ್ದರು. ಹೌದು ಈ ಸಮಸ್ಯೆ ನಡುವೆಯೂ ಅವರು ತಮ್ಮ ಮುಂಬರುವ ಯಶೋದ ಚಿತ್ರದ ಪ್ರಮೋಷನ್ ಕೆಲಸಗಳಲ್ಲಿ ಪಾಲ್ಗೊಂಡಿದ್ದು ಯಶೋದ ಸಿನಿಮಾ ಇದೇ ತಿಂಗಳು 11 ರಂದು ತೆರೆ ಕಾಣುತ್ತಿದೆ. ಇತ್ತೀಚೆಗೆ ಸಮಂತಾ ನಿರೂಪಕಿ ಸುಮಾ ರವರು ನಡೆಸಿಕೊಡುವ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದು ಯಶೋದ ಸಿನಿಮಾ ಬಗ್ಗೆ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಇದೇ ವೇಳೆ ಅವರು ತಮ್ಮ ಆರೋಗ್ಯದ ಬಗ್ಗೆ ಕೂಡಾ ಮಾತನಾಡುತ್ತಾ ಭಾವುಕರಾಗಿದ್ದಾರೆ.
ಹೌದು ಆರೋಗ್ಯ ಹಾಗೂ ವೈಯಕ್ತಿಕ ಸಮಸ್ಯೆಗಳನ್ನು ಹೇಗೆ ಎದುರಿಸುತ್ತಿದ್ದೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ಸಮಂತಾ ರವರು ನಾನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವಂತೆ ಜೀವನದಲ್ಲಿ ಅನೇಕ ಏಳು ಬೀಳುಗಳನ್ನು ಕಂಡಿದ್ದು ಜೀವನದಲ್ಲಿ ಒಂದು ಹೆಜ್ಜೆಯೂ ಮುಂದೆ ಇಡಲು ಸಾಧ್ಯವಿಲ್ಲ ಎಂದು ಸಾಕಷ್ಟು ಬಾರಿ ಅನ್ನಿಸಿರುವುದೂ ಉಂಟು. ಆದರೆ ಒಮ್ಮೆ ಹಿಂತಿರುಗಿ ನೋಡಿದರೆ ಇಷ್ಟು ಕಷ್ಟಗಳನ್ನು ದಾಟಿ ಮುಂದಿ ಬಂದಿರುವುದರ ಬಗ್ಗೆ ನನಗೇ ಆಶ್ಚರ್ಯ ಎನ್ನಿಸುತ್ತದೆ.
ನಾನು ಕಷ್ಟಗಳೊಂದಿಗೆ ಹೋರಾಡುತ್ತಾ ಇಲ್ಲಿ ಜೀವನ ಸಾಗಿಸುತ್ತಿದ್ದೇನೆ. ಹೌದು ನಾನು ಮಾತ್ರವಲ್ಲ ಪ್ರತಿಯೊಬ್ಬರಿಗೂ ಏನಾದರೂ ಒಂದು ಸಮಸ್ಯೆ ಇದ್ದೇ ಇರುತ್ತದೆ. ಇನ್ನು ಎಲ್ಲರೂ ಆ ಸಮಸ್ಯೆಗಳೊಂದಿಗೆ ಹೋರಾಡುತ್ತಲೇ ಮುನ್ನುಗ್ಗುತ್ತಿದ್ದು ಆದರೂ ಕೊನೆಗೂ ನಾನು ಗೆದ್ದೇ ಗೆಲ್ಲುತ್ತೇನೆ. ನನ್ನ ಪ್ರಾಣಕ್ಕೆ ತೊಂದರೆ ಇದೆ ಎಂದು ಸೋಷಿಯಲ್ ಮೀಡಿಯಾ ಹಾಗೂ ಮಾಧ್ಯಮಗಳು ಪ್ರಕಟಿಸಿದ ಹಾಗೆ ಖಂಡಿತ ಜೀವಕ್ಕೆ ಏನೂ ತೊಂದರೆ ಇಲ್ಲ. ಆದರೆ ಗಂಭೀರವಾದ ಆರೋಗ್ಯ ಸಮಸ್ಯೆ ಇದೆ. ಇದರಿಂದ ಹೊರ ಬರಲು ಸ್ವಲ್ಪ ಸಮಯ ಬೇಕು ಎಂದು ಸಮಂತಾ ಭಾವುಕರಾಗಿ ಮಾತನಾಡಿದ್ದಾರೆ..
ಇನ್ನು ಹರಿ-ಹರೀಶ್ ನಿರ್ದೇಶನದ ಸಮಂತಾ ಅಭಿನಯದ ಆಕ್ಷನ್ ಥ್ರಿಲ್ಲರ್ ಸಿನಿಮಾ ಯಶೋ 11ರಂದು ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿದೆ. ಈ ಚಿತ್ರದಲ್ಲಿ ಸಮಂತಾ ಅವರ ಕೆಲಸ ನೋಡಿ ಹಾಲಿವುಡ್ನ ಸಾಹಸ ನಿರ್ದೇಶಕ ಯಾನಿಕ್ ಬೆನ್ ಬೆರಗಾಗಿದ್ದು ಶ್ರೀದೇವಿ ಮೂವೀಸ್ ಬ್ಯಾನರ್ ಅಡಿಯಲ್ಲಿ ಶಿವಲೆಂಕ ಕೃಷ್ಣ ಪ್ರಸಾದ್ ನಿರ್ಮಿಸಿರುವ ಈ ಅದ್ಧೂರಿ ಬಜೆಟ್ ಚಿತ್ರದ ಟ್ರೇಲರ್ ಇತ್ತೀಚೆಗಷ್ಟೇ ಬಿಡುಗಡೆಯಾಗಿ ಎಲ್ಲರಿಂದ ಮೆಚ್ಚುಗೆ ಪಡೆದಿದೆ. ಹೌದು ಅಷ್ಟೇ ಅಲ್ಲದೇ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದೆ.
ಹೌದು ಒಂದು ಕಡೆ ಪ್ರೇಕ್ಷಕರು ಚಿತ್ರದಲ್ಲಿನ ಆಕ್ಷನ್ ದೃಶ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರೆ ಚಿತ್ರದಲ್ಲಿ ಹೈ-ವೋಲ್ಟೇಜ್ ಫೈಟ್ಸ್ ಮತ್ತು ಸ್ಟಂಟ್ಗಳು ಚೆನ್ನಾಗಿ ಮೂಡಿ ಬರುವುದಕ್ಕೆ ಕಾರಣರಾಗಿರುವ ಸಮಂತಾ ಶ್ರದ್ಧೆಗೆ ಯಾನಿಕ್ ಬೆನ್ ಖುಷಿಯಾಗಿದ್ದಾರೆ. ಇನ್ನು ಸಮಂತಾ ಮತ್ತು ಬೆನ್ ಒಟ್ಟಿಗೆ ಕೆಲಸ ಮಾಡುತ್ತಿರುವುದು ಇದು ಮೊದಲೇನಲ್ಲ.
ಈ ಹಿಂದೆ ಸಮಂತಾ ಅವರೊಂದಿಗೆ ಫ್ಯಾಮಿಲಿ ಮ್ಯಾನ್ 2 ವೆಬ್ ಸೀರೀಸ್ಗಾಗಿ ಕೆಲಸ ಮಾಡಿದ್ದರು ಮತ್ತು ಈಗ ಅವರು ಮತ್ತೊಮ್ಮೆ ಯಶೋದ ಚಿತ್ರದಲ್ಲಿ ಅತ್ಯುತ್ತಮ ಆಕ್ಷನ್ಗಾಗಿ ಜೊತೆಯಾಗಿದ್ದು ಚಿತ್ರದಲ್ಲಿ ಆಕ್ಷನ್ ದೃಶ್ಯಗಳು ಅದ್ಭುತವಾಗಿ ಮೂಡಿಬಂದಿರುವುದಕ್ಕೆ ಸಮಂತಾ ಅವರ ಸಮರ್ಪಣಾ ಮನೋಭಾವ ಮತ್ತು ಇಚ್ಛಾಶಕ್ತಿಯೇ ಕಾರಣ ಎಂದು ಮೆಚ್ಚಿ ಮಾತನಾಡಿದ್ದರು. ಸದ್ಯ ಇದೀಗ ಸಮಂತಾರ ಸಾಕಷ್ಟು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು ತಮ್ಮ ಫ್ಯಾನ್ಸ್ ಜೊತೆ ಸಮಂತಾ ಹೇಗಿರುತ್ತಾರೆ ಗೊತ್ತಾ? ಕೆಳಗಿಮ ವಿಡಿಯೋ ನೋಡಿ.