ನಮ್ಮ ಕನ್ನಡ ನಾಡಿನ ಸಂಸ್ಕೃತಿ ಪರಂಪರೆ ತೋರಿಸಿದರೆ ಎಷ್ಟರ ಮಟ್ಟಿಗೆ ಸಿನಿಮಾ ಗೆಲ್ಲುತ್ತದೆ ಎಂಬುದಕ್ಕೆ ಸದ್ಯ ರಿಷಬ್ ರವರ ಕಾಂತಾರ ಸಿನಿಮಾ ಒಂದು ಉತ್ತಮವಾದ ಉದಾಹರಣೆ ಎಂದರೆ ಖಂಡಿತ ತಪ್ಪಾಗಲಾರದು. ಹೌದು ಈ ಸಿನಿಮಾಗೆ ಹಾಕಿದ ಬಜೆಟ್ ಕೇವಲ 16 ಕೋಟಿ ಆದರೆ ಇದೀಗ ಈ ಸಿನಿಮಾ ಮಾಡಿರುವ ಗಳಿಕೆ 200 ಕ್ಕೂ ಅಧಿಕ ಕೋಟಿ. ಇನ್ನು ಕಾಂತರಾ ಸಿನಿಮಾಗೂ ಮುನ್ನ ಹಲವಾರು ಸಿನಿಮಾಗಳಲ್ಲಿ ಅಭಿನಯಿಸಿದ್ದ ಕೆಲ ನಟರು ಇಷ್ಟರ ಮಟ್ಟಿಗೆ ಪ್ರಖ್ಯಾತಿ ಪಡೆದುಕೊಂಡಿರಲಿಲ್ಲ.
ಹೌದು ಕಾಂತರಾ ಸಿನಿಮಾದಲ್ಲಿನ ನಾಯಕನ ತಾಯಿಯ ಪಾತ್ರ ಮಾಡಿರುವ ಮಾನಸಿ ಸುದೀರ್ ಕಮಲಕ್ಕನ ಪಾತ್ರ ಮಾಡಿದ್ದು ಈ ಹಿಂದೆ ಕನ್ನಡ ಚಿತ್ರಗಳಲ್ಲಿ ಮಾನಸಿ ಸುದೀರ್ ಅಭಿನಯಿಸಿದ್ದಾರೆ. ಆದರೆ ಅವರಿಗೆ ಕಾಂತಾರ ಸಿನಿಮಾ ತಂದುಕೊಟ್ಟ ಪ್ರಖ್ಯಾತಿ ಬೇರೆ ಯಾವ ಸಿನಿಮವು ತಂದು ಕೊಟ್ಟಿಲ್ಲ. ಹೌದು ರಿಷಬ್ ಶೆಟ್ಟಿ ಅವರ ತಾಯಿಯ ಪಾತ್ರದಲ್ಲಿ ಮಾನಸಿ ಸುಧೀರ್ ಅವರು ಅದ್ಭುತವಾಗಿ ಅಭಿನಯಿಸಿದ್ದಾರೆ ಎನ್ನಬಹುದು.
ಇನ್ನು ಕಾಂತಾರ ಸುಂದರ ಎಂಬ ಪಾತ್ರಧಾರಿ ದೀಪಕ್ ರೈ. ಈ ಪಾತ್ರದಲ್ಲಿ ಅವರು ಅಕ್ಷರಶ ಜೀವಿಸಿದ್ದಾರೆ ಎಂದರೆ ತಪ್ಪಾಗಲಾರದು. ಹೌದು ಇವರು ಕನ್ನಡ ತುಳು ಸಿನಿಮಾಗಳಲ್ಲಿ ಅಭಿನಯಿಸಿದ್ದು ಇವರು ಒಂದು ಮೊಟ್ಟೆಯ ಕಥೆ ಹಾಗೂ ಗರುಡ ಗಮನ ವೃಷಭ ವಾಹನ ಸಿನಿಮಾದಲ್ಲಿನ ನಟನೆ ಇವರಿಗೆ ಸಾಕಷ್ಟು ಪ್ರಖ್ಯಾತಿಯನ್ನು ತಂದು ಕೊಟ್ಟಿತ್ತು.
ಇನ್ನು ಕಾಂತಾರ ಚಿತ್ರದಲ್ಲಿ ಬರುವ ರಾಂಪ ಪಾತ್ರಧಾರಿ ಪ್ರಕಾಶ್ ಕೆ ತುಮಿ ನಾಡು. ಸಿನಿಮಾದಲ್ಲಿ ಅವರನ್ನು ನೋಡಿದ ತಕ್ಷಣವೇ ನಗುವನ್ನು ತರಿಸುವಷ್ಟು ಸೊಗಸಾಗಿ ಅಭಿನಯಿಸಿದ್ದಾರೆ. ಹೌದು ಈ ಹಿಂದೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಿನಿಮಾದಲ್ಲಿ ಭುಜಂಗ ಪಾತ್ರಧಾರಿಯಾಗಿ ಕಾಣಿಸಿಕೊಂಡಿದ್ದು ಇವರು ರಂಗಭೂಮಿಯ ಕಲಾವಿದ ಹಾಗು ಸಾಕಷ್ಟು ತುಳುನಾಡಿನ ನಾಟಕಗಳಲ್ಲಿ ಅಭಿನಯಿಸಿದ್ದಾರೆ.
ಹಾಸ್ಯ ಎಂದು ಬಂದಾಗ ರಾಂಪ ಅಲಿಯಾಸ್ ಪ್ರಕಾಶ್ ರವರು ಅದ್ಭುತವಾಗಿ ನಟಿಸುತ್ತಾರೆ. ಆದರೆ ಬೇರೆ ನಟರಿಗೆ ಸಿಗುವ ಅವಕಾಶ ಇವರಿಗೆ ಸಿಗುತ್ತಿಲ್ಲ ಎಂಬುದೇ ಬೇಸರದ ಸಂಗತಿ.
ಈ ಕಲಾವಿದರನ್ನು ಕೇವಲ ರಿಷಬ್ ಶೆಟ್ಟಿ ಮತ್ತು ರಕ್ಷಿತ್ ಶೆಟ್ಟಿ ಮಾಡುವ ಸಿನಿಮಾದಲ್ಲಿ ಮಾತ್ರ ಕಾಣಬಹುದು ಅದನ್ನು ಬಿಟ್ಟು ಬೇರೆ ಯಾವ ಸಿನಿಮಾದಲ್ಲಿಯೂ ಇವರು ಕಾಣಿಸಿಕೊಳ್ಳುವುದಿಲ್ಲ. ಇನ್ನು ರಿಷಬ್ ರವರು ರಾಂಪಗೆ ಸುಮಾರು 30 ಲಕ್ಷದಷ್ಟು ಸಂಭಾವನೆ ನೀಡಿದ್ದು ಈ ವಿಚಾರವನ್ನು ತಿಳಿಸಿದ ರಂಪಾ ಬಹಳಸನೇ ಭಾವುಕರಾದರು. ಸದ್ಯ ರಿಷಬ್ ಶೆಟ್ಟಿ ಅಭಿನಯದ ಕಾಂತಾರ ಹಾವ ಇನ್ನೂ ಕಮ್ಮಿಯಾಗಿಲ್ಲ. ಕನ್ನಡ, ಹಿಂದಿ ತೆಲುಗು ಸೇರಿದಂತೆ ಬಿಡುಗಡೆಯಾದ ಭಾಷೆಗಳಲ್ಲೆಲ್ಲಾ ಸಿನಿಮಾ ಕಲೆಕ್ಷನ್ ಜೋರಾಗಿದೆ. ಬಾಕ್ಸಾಫೀಸ್ನಲ್ಲಿ ಕೋಟಿ ಕೋಟಿ ಲೂಟಿ ಮಾಡಿ ಮುನ್ನುಗ್ಗುತ್ತಿದೆ.
ಕಾಂತಾರ ಬಾಲಿವುಡ್ ಮಂದಿಗೆ ಹಿಡಿಸಬಹುದು ಅನ್ನೋ ನಿರೀಕ್ಷೆ ಇರಲಿಲ್ಲ. ಆರಂಭದಲ್ಲಿ ಬಾಕ್ಸಾಫೀಸ್ ಜೋಷ್ ಇಲ್ಲದೆ ಇದ್ದರೂ ದಿನದಿಂದ ದಿನಕ್ಕೆ ಸಿನಿಮಾ ನೋಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಪ್ರತಿದಿನ 2 ಕೋಟಿಗೂ ಅಧಿಕ ಕಲೆಕ್ಷನ್ ಮಾಡುತ್ತಿದೆ.