ಕೊಡಗಿನ ಬೆಡಗಿಬ ನಟಿ ರಶ್ಮಿಕಾ ಮಂದಣ್ಣ ತೆಲುಗು ಹಾಗೂ ಹಿಂದಿ ಚಿತ್ರಗಳಲ್ಲಿ ಸಿಕ್ಕಾಪಟ್ಟೆ ಬ್ಯೂಸಿಯಾಗಿದ್ದು ತೆಲುಗಿನಲ್ಲಿ ಸಾಲುಸಾಲು ಚಿತ್ರದಲ್ಲಿ ನಡೆಸುತ್ತಿದ್ದಂತೆ ರಶ್ಮಿಕಾ ಹಿಂದಿ ಸಿನಿಮಾಗಳ ಕಡೆ ಸಹ ಮುಖ ಮಾಡಿದರು. ಹೌದು ಬಾಲಿವುಡ್ನಲ್ಲಿ ಬಿಗ್ ಬಿ ಅಮಿತಾಬಚ್ಚನ್ ಅವರೊಂದಿಗೆ ನಟಿಸುವ ಅವಕಾಶವನ್ನು ಗಿಟ್ಟಿಸಿಕೊಳ್ಳುವ ಮೂಲಕವಾಗಿ ರಶ್ಮಿಕಾ ರವರು ಅಚ್ಚರಿಯನ್ನು ಮೂಡಿಸಿದ್ದು ಹಿಂದಿ ಮತ್ತು ತೆಲುಗುನಲ್ಲಿ ಬಿಸಿಯಾಗಿರುವ ರಶ್ಮಿಕ ಮಂದಣ್ಣ ರವರು ಕನ್ನಡ ಸಿನಿಮಾರಂಗದಿಂದ ಅಂತರವನ್ನು ಕಾಯ್ದುಕೊಂಡಿದ್ದಾರೆ.
ರಶ್ಮಿಕ ಕನ್ನಡ ಚಿತ್ರಗಳಿಂದ ಚಿತ್ರರಂಗಕ್ಕೆ ಬಂದಂತಹ ನಟಿ ಕನ್ನಡದ ಸೂಪರ್ ಹಿಟ್ ಕಿರಿಕ್ ಪಾರ್ಟಿ ಚಿತ್ರದ ಮೂಲಕ ರಶ್ಮಿಕ ಮಂದಣ್ಣ ಸಿನಿಪ್ರಿಯರಿಗೆ ಪರಿಚಯವಾದರು. ಇನ್ನು ಮೊದಲ ಸಿನಿಮಾದಲ್ಲೇ ಸೂಪರ್ ಸಕ್ಸಸ್ ಕಂಡ ರಶ್ಮಿಕ ಮಂದಣ್ಣ ಬಳಿಕ ಕನ್ನಡ ಸಿನಿಮಾರಂಗದಿಂದ ಅಂತರವನ್ನು ಕಾಯ್ದುಕೊಂಡಿದ್ದು ಅಪರೂಪಕ್ಕೊಂದು ಸಿನಿಮಾಗಳಲ್ಲಿ ನಟಿಸಿ ಇದೀಗ ಶಾಶ್ವತವಾಗಿ ದೂರವಾಗಿ ಬಿಟ್ಟಿದ್ದಾರೆ.
ಹೌದು ಕೊನೆಯದಾಗಿ ರಶ್ಮಿಕ ಮಂದಣ್ಣ ನಟಿಸುತ್ತಿರುವ ಧ್ರುವ ಸರ್ಜಾ ನಟನೆಯ ಪೊಗರು ಸಿನಿಮಾ. ಆದರೆ ಈ ಸಿನೆಮಾ ಕೂಡ ಬಿಡುಗಡೆಯಾಗುವ ಸಮಯದಲ್ಲಿ ಚಿತ್ರದ ಬಗ್ಗೆ ಸರಿಯಾಗಿ ಪ್ರಮೋಷನ್ ಮಾಡಿಲ್ಲ ಎನ್ನುವ ಆರೋಪ ಕೂಡ ರಶ್ಮಿಕ ಮಂದಣ್ಣರವರ ವಿರುದ್ಧ ಕೇಳಿಬಂದಿತ್ತು. ತೆಲುಗು ತಮಿಳು ಸಿನಿಮಾಗಳನ್ನು ಚೆನ್ನಾಗಿ ಪ್ರಮೋಷನ್ ಮಾಡುವ ರಶ್ಮಿಕ ಮಂದಣ್ಣ ತಾವೇ ನಟಿಸಿದ ಕನ್ನಡ ಸಿನಿಮಾವನ್ನು ಸರಿಯಾಗಿ ಪ್ರಮೋಟ್ ಮಾಡುತ್ತಿಲ್ಲ ಎಂದು ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದರು.
ಈ ಕಾರಣದಿಂದಾಗಿ ಪೊಗರು ಚಿತ್ರವೇ ರಶ್ಮಿಕ ಮಂದಣ್ಣ ನಟಿಸಿದ ಕೊನೆಯ ಕನ್ನಡ ಚಿತ್ರವಾಗಿದ್ದು ಇದರ ಬಗ್ಗೆ ಸಂದರ್ಶನದಲ್ಲಿ ಮಾತನಾಡಿರುವ ರಶ್ಮಿಕ ಮಂದಣ್ಣರಿಗೆ ಕನ್ನಡ ಸಿನಿಮಾ ಮಾಡುವುದು ಯಾವಾಗ ಎಂದು ಕೇಳಿದ ಪ್ರಶ್ನೆಗೆ ಈಗ ತೆಲುಗು ಮತ್ತು ಹಿಂದಿ ನಡುವೆ ಪ್ರಯಾಣ ಮಾಡಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತಿದೆ.
ಈಗಾಗಲೇ ತಮಿಳು ಸಿನಿಮಾ ಮಾಡಿದ್ದೇನೆ ಇದೆಲ್ಲದರ ಜೊತೆಗೆ ಕನ್ನಡ ಸಿನಿಮಾ ಮಾಡಲು ಮತ್ತಷ್ಟು ಎನರ್ಜಿಬೇಕಾಗುತ್ತೆ 360 ದಿನಗಳು ನನಗೆ ಸಾಕಾಗುತ್ತಿಲ್ಲ ಎಂದು ರಶ್ಮಿಕ ಮಂದಣ್ಣ ತಿಳಿಸಿದ್ದರು. ಇದು ಕನ್ನಡಿಗರಿಗೆ ಕೊಂಚ ಬೇಸರವಾಗಿದ್ದು ಇನ್ನು ಇತ್ತೀಚಿಗೆ ಅವರು ಕನ್ನಡದ ಬಗ್ಗೆ ಕನ್ನಡಿಗರ ಸಿನಿಮಾಗಳ ಬಗ್ಗೆ ಕೊಡುತ್ತಿರುವ ಹೇಳಿಕೆಗಳು ಈ ಮಟ್ಟಿಗೆ ಅವರನ್ನು ದ್ವೇಷಿಸಲು ಕಾರಣವಾಗಿದೆ.
ಹೌದು ತನಗೆ ಲೈಫ್ ಕೊಟ್ಟ ನಿರ್ದೇಶಕ ರಿಶಬ್ ಶೆಟ್ಟಿ ಎನ್ನುವುದು ರಶ್ಮಿಕ ಮಂದಣ್ಣ ಮರೆತಿರುವಂತಿದೆ. ಹಾಗಾಗಿ ಇತ್ತೀಚೆಗಷ್ಟೇ ಮುಂಬೈನಲ್ಲಿ ಕ್ಯಾಮೆರಾ ಒಂದಕ್ಕೆ ಬಿದ್ದ ಇವರನ್ನು ಕಾಂತಾರ ಚಿತ್ರ ಬಗ್ಗೆ ಕೇಳಿದಾಗ ಇನ್ನು ನೋಡಿಲ್ಲ ಎಂದು ಸನ್ನೆ ಮಾಡಿ ಹೋದರು.
ಹೌದು ಇಡೀ ದೇಶವೇ ಮೆಚ್ಚಿ ಕಾಂತರಾ ಸಿನಿಮಾ ಬಗ್ಗೆ ಅಭಿಪ್ರಾಯ ತಿಳಿಸುತ್ತಿರುವಾಗ ಕನಿಷ್ಠ ಪಕ್ಷ ಕನ್ನಡದ ಸಿನಿಮಾ ತಾನೊಬ್ಬ ಕನ್ನಡದಿಂದ ಗುರುತಿಸಿಕೊಂಡವಳು ಎನ್ನುವ ಪರಿವೇ ಇಲ್ಲದಂತೆ ಇವರು ನಡೆದುಕೊಂಡಿದ್ದಾರೆ. ಇನ್ನು ಮುಂದೆ ಹೋಗಿ ಇವರು ಕಿರಿಕ್ ಪಾರ್ಟಿ ಬಗ್ಗೆ ಕೊಟ್ಟಿರುವ ಸಂದರ್ಶನ ನೋಡಿದರೆ ಈಕೆ ಎಷ್ಟೊಂದು ಸುಳ್ಳುಗಾರ್ತಿ ಎನ್ನುವುದು ಗೊತ್ತಾಗುತ್ತದೆ.
ಇನ್ನು ರಶ್ಮಿಕ ಮಂದಣ್ಣ ಅವರ ಕಿರಿಕ್ ಪಾರ್ಟಿ ಸಿನಿಮಾ ಸಮಯದ ವಿಡಿಯೋಗಳನ್ನು ನೋಡಿದರೆ ರಶ್ಮಿಕಾ ಅವಕಾಶಗಳಿಗಾಗಿ ಎಷ್ಟು ಒದ್ದಾಡಿದ್ದಾರೆ ಎನ್ನುವುದನ್ನು ಅವರೇ ಹೇಳಿಕೊಂಡಿದ್ದಾರೆ. ಆಡಿಷನ್ ಅಲ್ಲಿ ಇವರನ್ನು ಆರಿಸಿಕೊಂಡಿದ್ದರು. ಆದರೆ ಇದೀಗ ಹೇಳುತ್ತಿರುವ ಹಸಿ ಸುಳ್ಳು ಏನೆಂದರೆ ನನಗೆ ಫೇಸ್ಬುಕ್ ನೋಡಿ ಸಿನಿಮಾ ಆಫರ್ ನೀಡಿದರು ಎಂಬುದು.
ನಾನು ಮೊದಲಿಗೆ ಅದನ್ನು ರಿಜೆಕ್ಟ್ ಮಾಡಿದ್ದೆ ಆದರೆ ನನ್ನ ಶಿಕ್ಷಕಿ ಫೋರ್ಸ್ ಮಾಡಿದ ಕಾರಣ ನಾನು ಆ ಸಿನಿಮಾದಲ್ಲಿ ಅಭಿನಯಿಸಬೇಕಾಯಿತು. ಹೌದು ನನಗೆ ಚಿತ್ರದಲ್ಲಿ ನಟಿಸಲು ಆಸಕ್ತಿ ಇರಲಿಲ್ಲ ಎಂದು ಹೇಳಿಕೆ ಕೊಟ್ಟಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಕನ್ನಡಿಗರು ಈಕೆಯನ್ನು ಸಾಮಾಜಿಕ ಜಾಲತಾಣದಲ್ಲಿ ದಲ್ಲಿ ಸರಿಯಾಗಿಯೇ ತರಾಟೆಗೆ ತೆಗೆದುಕೊಂಡಿದ್ದಾರೆ.