ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಗಂಧದಗುಡಿ ಸಿನೆಮಾದ ಆದಿವಾಸಿಗಳ ಬಗ್ಗೆ ಮಾತಾಡಿದ ನಟ ಚೇತನ್…ಆಗಿದ್ದೆ ಬೇರೆ

199

ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಅಂತಿಮ ಚಿತ್ರವಾದ ಗಂಧದ ಗುಡಿ ಸದ್ಯ ವಿಶ್ವದಾದ್ಯಂತ ಸದ್ದು ಮಾಡುತ್ತಿದ್ದು ಪುನೀತ್ ರಾಜ್ ಕುಮಾರ್ ರವರು ಹಲವು ದಿನಗಳಿಂದ ಕಾಣುತ್ತಿದ್ದ ಕನಸು ಈ ಗಂಧದ ಗುಡಿ ಚಿತ್ರ. ಹೌದು ನಮ್ಮ ನಾಡಿನ ವನ್ಯಸಂಪತ್ತನ್ನು ಇಡೀ ಜಗತ್ತಿಗೆ ಸಾರಿ ಹೇಳಬೇಕು ಎಂಬ ಉದ್ದೇಶದಿಂದ ನಿರ್ದೇಶಕ ಅಮೋಘವರ್ಷ ರವರ ಜಿತೆ ತಾವೇ ಕಾಡುಮೇಡು ಅಲೆದು ಗಂಧದಗುಡಿ ಚಿತ್ರವನ್ನು ತಯಾರಿಸಿದ್ದರು ನಮ್ಮ ಅಪ್ಪು.

ಆದರೆ ತಮ್ಮ ಕನಸಿನ ಕೂಸು ಗಂಧದಗುಡಿ ಸಿನಿಮಾ ಬಿಡುಗಡೆ ಆಗುವ ಮುನ್ನವೇ ನಟ ಪುನೀತ್ ರಾಜ್ ಕುಮಾರ್ ಇಹಲೋಕ ತ್ಯಜಿಸಿದ್ದು ಪುನೀತ್ ಅಗಲಿ ವರ್ಷ ಕಳೆದ ಬಳಿಕ ಗಂಧದಗುಡಿ ಚಿತ್ರವನ್ನು ಬಿಡುಗಡೆ ಮಾಡಲಾಯಿತು. ಹೌದು ಅಪ್ಪು ಅವರ ಬಹುದಿನಗಳ ಕನಸು ಈ ಮೂಲಕ ನನಸಾಗಿದ್ದು ಗಂಧದಗುಡಿ ಚಿತ್ರ ದೊಡ್ಡ ಮಟ್ಟದಲ್ಲಿ ಗೆಲುವು ಸಾಧಿಸಿತು.ರಾಜ್ಯದ ಅರಣ್ಯ ಸಂಪತ್ತು ಇಷ್ಟೆಲ್ಲ ಇದೆಯಾ ಎಂದು ಪ್ರೇಕ್ಷಕರು ಪುನೀತ್ ರವರ ಈ ಹೊಸ ಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದು ಇನ್ನು ಅಪ್ಪು ಅಭಿನಯದ ಕೊನೆಯ ಚಿತ್ರ ಎಂಬ ಕಾರಣದಿಂದ ಅಲ್ಲದೆ ಚಿತ್ರದಲ್ಲಿರುವ ಕಂಟೆಂಟ್ ವೀಕ್ಷಿಸಲು ಚಿತ್ರಮಂದಿರದತ್ತ ಪ್ರೇಕ್ಷಕರು ಮುಗಿಬೀಳುತ್ತಿದ್ದಾರೆ.

ಇನ್ನು ಗಂಧದಗುಡಿ ಸಿನಿಮಾವನ್ನು ಕೇವಲ ಸಿನಿಪ್ರಿಯರು ಮಾತ್ರವಲ್ಲದೆ ಈಗಾಗಲೇ ಹಲವಾರು ಸೆಲೆಬ್ರಿಟಿಗಳು ಕೂಡ ವೀಕ್ಷಿಸಿದ್ದು ಚಿತ್ರವನ್ನು ನೋಡಿ ಓರ್ವ ದೊಡ್ಡ ನಟನಾಗಿದ್ದುಕೊಂಡು ಇಂತಹ ಸಿನಿಮಾಗಳನ್ನು ಮಾಡುವುದು ಸಾಮಾನ್ಯ ವಿಷಯವಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸದ್ಯ ಇದೀಗ ಇತ್ತೀಚಿಗಷ್ಟೇ ಕಾಂತಾರ ಚಿತ್ರವನ್ನು ನೋಡಿ ಚಿತ್ರದ ಕಂಟೆಂಟ್ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದತಹ ನಟ ಚೇತನ್ ಅಹಿಂಸಾ ಗಂಧದಗುಡಿ ಚಿತ್ರವನ್ನು ವೀಕ್ಷಿಸಿದ್ದು ತಮ್ಮ ಪಾಲಿನ ವಿಮರ್ಶೆಯನ್ನು ಟ್ವಿಟರ್ ಮೂಲಕ ತಿಳಿಸಿದ್ದಾರೆ.

ಇನ್ನು ಗಂಧದ ಗುಡಿ ಚಿತ್ರ ವೀಕ್ಷಿಸಿದ ಬಳಿಕ ತನ್ನ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡಿರುವ ನಟ ಚೇತನ್ ಕುಮಾರ್ ನನ್ನ ಒಳ್ಳೆಯ ಸ್ನೇಹಿತ ಹಾಗೂ ದೊಡ್ಡ ಅಣ್ಣ ಅಪ್ಪು ಸರ್ ಅವರಿಗೆ ಗಂಧದ ಗುಡಿ ಅಂತಿಮ ಅತ್ಯದ್ಭುತ ವಿದಾಯ ಎಂದು ಬರೆದುಕೊಂಡಿದ್ದು ಚಿತ್ರದಲ್ಲಿ ಅಪ್ಪು ಅವರು ಕಾಣಿಸಿಕೊಂಡಿರುವ ರೀತಿ ಹಾಗೂ ಅಮೋಘವರ್ಷ ಅವರ ನಿರ್ದೇಶನವನ್ನು ಕೊಂಡಾಡಿದ್ದಾರೆ.

ಹೌದು ಪ್ರಕೃತಿಯನ್ನು ತೋರಿಸುವುದರ ಜೊತೆಗೆ ಆದಿವಾಸಿಗಳು ಹಾಗೂ ಅಲೆಮಾರಿಗಳ ಚಿತ್ರಣವನ್ನು ಉತ್ತಮವಾಗಿ ಸೆರೆ ಹಿಡಿಯಲಾಗಿದೆ ಎಂದಿರುವ ನಟ ಚೇತನ್ ರವರು ಭಕ್ತ ಪ್ರಹ್ಲಾದ ಹಾಗೂ ಗಂಧದ ಗುಡಿ ಪುನೀತ್ ರಾಜ್ ಕುಮಾರ್ ಅಭಿನಯದ ನನ್ನ ಆಲ್ ಟೈಮ್ ಫೇವರಿಟ್ ಚಿತ್ರಗಳು ಎಂದು ಬರೆದುಕೊಂಡಿದ್ದಾರೆ.

ಇನ್ನು ಗಂಧದಗುಡಿ ಸಿನಿಮಾದಲ್ಲಿ ಆದಿವಾಸಿಗಳನ್ನು ತೋರಿಸಿರುವ ರೀತಿಯನ್ನು ಮೆಚ್ಚಿಕೊಂಡ ನಟ ಚೇತನ್ ಅಹಿಂಸಾ ರವರು ಹಿಂದೆ ಇದೇ ವಿಷಯಕ್ಕಾಗಿ ಕಾಂತಾರ ಚಿತ್ರದ ವಿರುದ್ಧ ಮಾತನಾಡಿ ವಿವಾದ ಎಬ್ಬಿಸಿದ್ದರು. ಹೌದು ಚಿತ್ರದಲ್ಲಿ ಬರುವ ಭೂತಕೋಲ ಆಚರಣೆ ಆದಿವಾಸಿಗಳ ಸಂಸ್ಕೃತಿ ಆದರೆ ಅದನ್ನು ಹಿಂದೂ ಸಂಸ್ಕೃತಿ ಎಂದು ತಪ್ಪಾಗಿ ತೋರಿಸಲಾಗಿದೆ ಎಂದಿದ್ದರು.

ಏಕೆಂದರೆ ಹಿಂದೂ ಧರ್ಮ ಹುಟ್ಟುವುದಕ್ಕೂ ಮುನ್ನ ಆದಿವಾಸಿಗಳಿದ್ದರು ಹೀಗಾಗಿ ಭೂತಕೋಲ ಹಿಂದೂ ಧರ್ಮದ ಆಚರಣೆ ಅಲ್ಲವೇ ಅಲ್ಲ ಎಂದು ಚೇತನ್ ರಿಷಬ್ ಶೆಟ್ಟಿ ಅವರ ನಿರ್ದೇಶನ ತಪ್ಪು ಎಂದಿದ್ದು ಇದು ದೊಡ್ಡ ವಿವಾದಕ್ಕೆ ಕಾರಣವಾಗಿತ್ತು.

ಸದ್ಯ ಗಂಧದಗುಡಿ ಚಿತ್ರ ಇಡೀ ರಾಜ್ಯದ ಜನರು ಮತ್ತು ವಿಶೇಷವಾಗಿ ಮಕ್ಕಳು ವೀಕ್ಷಿಸಲೇಬೇಕಾದ ಚಿತ್ರ ಎಂಬ ಉದ್ದೇಶದಿಂದ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಸಿನಿಮಾದ ಟಿಕೆಟ್ ದರವನ್ನು ತಗ್ಗಿಸಿದ್ದಾರೆ. ಗಂಧದ ಗುಡಿ ಚಿತ್ರದ ಟಿಕೆಟ್ ದರ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿ 56 ರೂಪಾಯಿಗಳು ಮತ್ತು ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಲ್ಲಿ 112 ರೂಪಾಯಿಗಳಿದ್ದು ಈ ಮೂಲಕ ಗಂಧದಗುಡಿ ಚಿತ್ರವನ್ನು ಪ್ರೇಕ್ಷಕರು ಕಡಿಮೆ ದರದಲ್ಲಿ ಕಣ್ತುಂಬಿಕೊಳ್ಳಬಹುದಾಗಿದೆ.