ವಾರ್ತಾ ಮಂಜರಿ
Trending Stories, Viral News, Gossips & Everything in Kannada

SSLC ಪರೀಕ್ಷೆಯಲ್ಲಿ ಅಂದು ದಾಖಲೆ ಬರೆದಿದ್ದ ಅಶ್ವಿನಿ…ನೋಡಿ ಒಟ್ಟು ಮಾರ್ಕ್ಸ್ ಎಷ್ಟು

5,801

ಕರ್ನಾಟಕ ರನ್ನ ಪುನೀತ್ ರಾಜ್ ಕುಮಾರ್ ರವರು ಇದೀಗ ಕೇವಲ ನೆನಪು ಮಾತ್ರ ಎಂಬ ಸತ್ಯವನ್ನು ಅನಿವಾರ್ಯವಾಗಿ ಒಪ್ಪಿಕೊಳ್ಳಲೇ ಬೇಕಾಗಿದೆ. ಹೌದು ಇದೀಗ ನಮ್ಮ ಪ್ರೀತಿಯ ಅಪ್ಪು ಭೂತಾಯಿಯ ಮಡಿಲು ಸೇರಿ ಒಂದು ವರುಷವೇ ಕಳೆದು ಹೋಗಿದ್ದು ಈಗಲೂ ಕೂಡ ದೊಡ್ಮನೆಯ ಕುಟುಂಸ್ಥರು ಅಪ್ಪು ಅವರ ಅಗಲಿಕೆಯಿಂದ ಕಣ್ಣೀರು ಸುರಿಸುತ್ತಲೇ ಇದ್ದಾರೆ.

ಇನ್ನು ಇದೆಲ್ಲದರ ನಡುವೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರ ಪತ್ನಿ ದೊಡ್ಡ ನಿರ್ಧಾರವೊಂದನ್ನು ಕೂಡ ತೆಗೆದುಕೊಂಡಿದ್ದು ನಟ ಪುನೀತ್ ರಾಜ್ ಕುಮಾರ್ ಕೇವಲ ಸಿನಿಮಾದ ನಟನೆ ಮಾತ್ರವಲ್ಲದೇ ಹಲವಾರು ಉದ್ಯಮಗಳಿಂದ ಕೂಡ ಕೋಟಿ ಕೋಟಿ ಹಣವನ್ನು ಗಳುಸುತ್ತಿದ್ದರು. ಹೋಟೆಲ್ ಉಧ್ಯಮ ಸೇರಿದಂತೆ ರಿಯಲ್ ಎಸ್ಟೇಟ್ ಜೊತೆಗೆ ಸಿನಿಮಾ ನಿರ್ಮಾಣ ಕೆಲಸಕ್ಕೂ ಕೂಡ ಕೈ ಹಾಕಿದ್ದು ಅಲ್ಲದೆ ಹಿನ್ನಲೆ ಗಾಯನದ ಮೂಲಕ ಕೂಡ ಹಣ ಸಂಪಾದಿಸುತ್ತಿದ್ದರು.

ಹೌದು ಅಪ್ಪು ಅವರು ಎಷ್ಟೇ ಹಣವನ್ನು ಸಂಪಾಧನೆ ಮಾಡಿದರು ಕೂಡ ಅದರಲ್ಲಿ ಶೇಕಡ 30% ಹಣವನ್ನು ಸಾಮಾಜಿಕ ಕಾರ್ಯಗಳಿಗೆ ಮೀಸಲಿಡುತ್ತಿದ್ದರು. ಇನ್ನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರು ಅನಾಥಾಶ್ರಮ ವೃದ್ಧಾಶ್ರಮ ಗೋಶಾಲೆ ಸೇರಿದಂತೆ ಸಾವಿರಾರು ಮಕ್ಕಳಿಗೆ ವಿಧ್ಯಾಭ್ಯಾಸವನ್ನು ಸಹ ಕೊಡಿಸುತ್ತಿದ್ದರು ಹಾಗೂ ಕಷ್ಟದಲ್ಲಿದ್ದ ಸಹಸ್ರಾರು ಅಭಿಮಾನಿಗಳಿಗೂ ಕೂಡ ತೆರೆಯ ಹಿಂದೆ ಸಹಾಯ ಮಾಡಿದ್ದು ಸದ್ಯ ಇದೀಗ ಅಪ್ಪು ಅವರು ಅಗಲಿಕೆಯ ನಂತರ ಈ ಎಲ್ಲವನ್ನು ಕೂಡ ಯಾರು ನಿಭಾಯಿಸುತ್ತಾರೆ ಎಂಬ ಪ್ರಶ್ನೆ ಎಲ್ಲರನ್ನು ಕೂಡ ಕಾಡುತ್ತಲೇ ಇದೆ.

ಆದರೆ ಇದೀಗ ಎಲ್ಲದ್ದಕ್ಕೂ ಕೂಡ ಉತ್ತರವನ್ನು ಅಪ್ಪು ರವರ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ರವರು ಉತ್ತರ ನೀಡಿದ್ದು ಸದ್ಯ ಅಶ್ವಿನಿ ಪುನೀತ್ ರಾಜ್ ಕುಮಾರ್ ರವರು ತಮ್ಮ ಪ್ರೀತಿಯ ಪತಿ ಮಾಡುತ್ತಿದ್ದ ಎಲ್ಲಾ ಸಾಮಾಜಿಕ ಕಾರ್ಯವನ್ನು ತಾವೇ ಇನ್ನುಮುಂದೇ ಮಾಡುತ್ತೇವೆ ಎಂದು ನಿರ್ಧರಿಸಿದ್ದಾರೆ ಹಾಗೂ ಇದೆಲ್ಲದಕ್ಕಿಂತ ಹೆಚ್ಚಾಗಿ ಪುನೀತ್ ರಾಜ್ ಕುಮಾರ್ ರವರು ಸಾಮಾಜಿಕ ಕಾರ್ಯಗಳಿಗೆ ಮೀಸಲಿಟ್ಟಿದ್ದ ಹಣವನ್ನು ಅದೇ ಕಾರ್ಯಕ್ಕೆ ಮೀಸಲಿಡಲಿದ್ದು ಎಲ್ಲವನ್ನು ಸಹ ಮುಂದುವರಿಸಿಕೊಂಡು ಹೋಗುವಾಗಿ ತಿಳಿಸಿದ್ದಾರೆ. ಇದೇ ಕಾರಣಕ್ಕಾಗಿಯೇ ದೊಡ್ಡ ಮನೆಯವ ಮನಸ್ಸು ಯಾವಗಲೂ ದೊಡ್ಡದು ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.

ಇನ್ನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರ ಪತ್ನಿ ಅಶ್ವಿನಿ ಅವರು ಪತಿ ಹಿಂದಿನ ಪವರ್ ಆಗಿದ್ದರು ಎಂದು ಹೇಳಿದರೆ ತಪ್ಪಾಗುವುದಿಲ್ಲ. ಪುನೀತ್ ರಾಜ್ ಕುಮಾರ್ ರವರು ಮಾಡುತ್ತಿದ್ದ ಎಲ್ಲಾ ಕೆಲಸಗಳಿಗೂ ಕೂಡ ಬೆನ್ನೆಲುಬಾಗಿ ನಿಂತು ಪ್ರತಿ ಹೆಜ್ಜೆಗೂ ಕೂಡ ಬೆಂಬಲ ನೀಡುತ್ತಾ ಅವರ ಯಶಸ್ಸಿನ ಹಿಂದೆಯ ಮಹಿಳೆಯಾಗಿದ್ದರು. ಇನ್ನು ದೊಡ್ಮನೆ ಸೊಸೆಯಾಗಿ ಮನೆಯನ್ನು ಬೆಳೆಯುತ್ತಿರುವ ಅಶ್ವಿನಿಯವರು ಎಲ್ಲಿಯ ತನಕ ವಿಧ್ಯಾಭ್ಯಾಸ ಮಾಡಿದ್ದಾರೆ ಮತ್ತು ಅವರ ಎಸ್ ಎಸ್ ಎಲ್ ಸಿ ಯಲ್ಲಿ ಪಡೆದ ಅಂಕ ಎಷ್ಟು ಗೊತ್ತೆ? ಈ ಮಾಹಿತಿಯನ್ನು ತಿಳಿಯಲು ಲೇಖನಿಯನ್ನು ಸಂಪೂರ್ಣವಾಗಿ ಓದಿ ಮತ್ತು ಇಷ್ಟವಾದಲ್ಲಿ ಸ್ನೇಹಿತರಿಗೂ ಕೂಡ ಹಂಚಿಕೊಳ್ಳಿ ಹಾಗೂ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಮೆಂಟ್ ಮುಖಾಂತರ ತಿಳಿಸಿ.

ಅಶ್ವಿನಿ ಪುನೀತ್ ರಾಜ್ ಕುಮಾರ್ ರವರು 1981 ರಲ್ಲಿ ಜನಿಸಿದ್ದು ಇವರು ಮೂಲತಃ ಚಿಕ್ಕಮಗಳೂರಿನವರು. ಹೌದು ಇವರ ಪೂರ್ಣ ಹೆಸರು ಅಶ್ವಿನಿ ರೇವನಾಥ್ ಎಂಬುದಾಗಿದ್ದು ಹುಟ್ಟಿ ಬೆಳೆದಿದ್ದೆಲ್ಲವೂ ಸಹ ನಮ್ಮ ಬೆಂಗಳೂರಿನಲ್ಲಿಯೇ. ಅಶ್ವಿನಿಯವರ ವಿಧ್ಯಾಭ್ಯಾಸದ ಬಗ್ಗೆ ಹೇಳುವುದಾದರೆ ಅವರು ಗ್ರಾಜುಯೇಷನ್ ಕಂಪ್ಲೀಟ್ ಮಾಡಿದ್ದು ಆದರೆ ಯಾವ ವಿಷಯದಲ್ಲಿ ಎಂಬುದು ಮಾತ್ರ ಇಂದಿಗೂ ತಿಳಿದುಬಂದಿಲ್ಲ. ಅಶ್ವಿನಿ ಅವರು ಕಾಸ್ಟೂಮ್ ಡಿಸೈನರ್ ಹಾಗೂ ಸಿನಿಮಾ ನಿರ್ಮಾಪಕಿ ಕೂಡ ಹೌದು.

ಇನ್ನು ಅವರ ಸ್ನೇಹ ಬಳಗದಿಂದ ವರದಿಯ ಪ್ರಕಾರ ಅಶ್ವಿನಿ ಮೇಡಂ ೧೦ ನೇ ತರಗತಿಯಲ್ಲಿ 83 % ಪಲಿತಾಂಶ ಪಡೆದಿದ್ದು ಉತ್ತಮ ವಿಧ್ಯಾರ್ಥಿನಿ ಆಗಿದ್ದರಂತೆ. ಇನ್ನು ವಿಶೇಷ ಅಂದರೆ ಅಶ್ವಿನಿ ಮತ್ತು ಪುನೀತ್ ರಾಜ್ ಕುಮಾರ್ ಅವರದ್ದು ಪ್ರೇಮ ವಿವಾಹವಾಗಿದ್ದು ಕಾಮನ್ ಫ್ರೆಂಡ್ ಮುಖಾಂತರ ಒಬ್ಬರಿಗೊಬ್ಬರು ಪರಿಚಯವಾಗುತ್ತದೆ. ಮೊದಲು ಸ್ನೇಹಿತರಾಗಿದ್ದ ಇವರು ಸ್ನೇಹ ಪ್ರೇಮಕ್ಕೆ ತಿರುಗಿ ಒಬ್ಬರನ್ನೊಬ್ಬರು ಪರಸ್ಪರ ಪ್ರೀತಿಸಲು ಪ್ರಾರಂಭಿಸುತ್ತಾರೆ.

ಶಿವಣ್ಣ ಮುಖಾಂತರ ಅಪ್ಪು ತಮ್ಮ ಪ್ರೇಮದ ವಿಚಾರವನ್ನು ಮನೆಯವರಿಗೆ ತಿಳಿಸಿದ್ದು ಒಪ್ಪಿಗೆ ಸಹ ಕ್ಷಣದಲ್ಲಿ ಸಿಕ್ಕಿಬಿಡುತ್ತದೆ. ಆದರೆ ಅತ್ತ ಅಶ್ವಿನಿ ಯವರ ಮನೆಯಲ್ಲಿ ಮಾತ್ರ ಒಪ್ಪಿಗೆ ಸಿಗುವುದಿಲ್ಲ. ತದನಂತರ ಸಾಕಷ್ಟು ಸಮಯದ ಬಳಿಕ ಒಪ್ಪಿಗೆ ಸಿಕ್ಕಿದ್ದು 1999 ರ ಡಿಸೆಂಬರ್ 1 ರಂದು ಅಶ್ವಿನಿ ಅವರ ಜೊತೆ ಸಪ್ತಪದಿ ತುಳಿದರು ನಮ್ಮ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರು.

ಇನ್ನು ಇವರ ವಿವಾಹವೂ ಬೆಂಗಳೂರು ನಗರದ ರಾಜರಾಜೇಶ್ವರಿ ನಗರದ ಒಂದು ಕಲ್ಯಾಣ ಮಂಟಪದಲ್ಲಿ ನಡೆದಿದ್ದು ಇನ್ನು ವಿವಾಹವಾದ ಕ್ಷಣದಿಂದ ಇಲ್ಲಿಯ ತನಕ ಪತ್ನಿಗೆ ಬಹಳ ಸ್ಟ್ರೆಂತ್ ಆಗಿ ನಿಂತವರು ಅಶ್ವಿನಿ ಪುನೀತ್ ರಾಜ್ ಕುಮಾರ್ ರವರು. ಹೌದು ಗೃಹಿಣಿಯಾಗಿ ತಾಯಿಯಾಗಿ ಗಂಡನನ್ನು ನೋಡಿಕೊಳ್ಳುವುದು ಮಕ್ಕಳ ಪಾಲನೆ ಪೋಷಣೆ ಎಲ್ಲವನ್ನು ಕೂಡ ಅಶ್ವಿನಿ ಬಹಳ ಅಚ್ಚುಕಟ್ಟಾಗಿ ನಿಭಾಯಿಸಿದರು. ಹೌದು ಇನ್ನುಮುಂದೇ ಕೂಡ ಕುಟುಂಬದ ಜವಬ್ದಾರಿ ಅಶ್ವಿನಿ ಅವರ ಮೇಲಿದ್ದು ಅದನ್ನು ನಿಭಾಯಿಸುವ ಶಕ್ತಿ ಆ ದೇವರು ನೀಡಲಿ ಎಂದು ಹಾರೈಸೋಣ.