ವಾರ್ತಾ ಮಂಜರಿ
Trending Stories, Viral News, Gossips & Everything in Kannada

Sindhu Menon: ಕನ್ನಡದಲ್ಲಿ ಅಂದು ಮಿಂಚಿದ್ದ ನಟಿ ಸಿಂಧು ಮೆನನ್ ಪರಿಸ್ಥಿತಿ ಏನಾಯ್ತು ಗೊತ್ತಾ

39,908

ಸಹಜ ನಟಿ ಸಿಂಧೂ ಮನೆನ್ ರವರು ಬಹು ಭಾಷಾ ನಟಿಯಾಗಿ ಸಾಕಷ್ಟು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರು. ಮೂಲತಃ ಕನ್ನಡತಿಯೇ ಆಗಿದ್ದ ಅವರು ಹೆಚ್ಚಾಗಿ ಸಕ್ರಿಯರಾಗಿದ್ದು ಮಾತ್ರ ಮಲಯಾಳಂ ತೆಲುಗು ಹಾಗೂ ತಮಿಳು ಚಿತ್ರರಂಗದಲ್ಲಿ. ಒಂದು ಕಾಲದಲ್ಲಿ ಸಾಲು ಸಾಲು ಚಿತ್ರಗಳಲ್ಲಿ ಅಭಿನಯಿಸಿ ಖ್ಯಾತಿ ಪಡೆದಿದ್ದ ಸಿಂಧೂ ಕಳೆದ ಕೆಲವು ವರುಷಗಳಿಂದ ಚಿತ್ರರಂಗದಿಂದ ದೂರ ಉಳಿದಿದ್ದಾರೆ. ಹೌದು ಆಶ್ಚರ್ಯ ಪಡುವ ಸಂಗತಿ ಏನೆಂದರೆ ಅವರು ಸಾಮಾಜಿಕ ಜಾಲತಾಣಗಳಲ್ಲೂ ಕೂಡ ಹೆಚ್ಚಾಗಿ ಸಕ್ರಿಯರಾಗಿಲ್ಲ.

ರಶ್ಮಿ ಎಂಬ ಚಿತ್ರದಲ್ಲಿ ಬಾಲನಟಿಯಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ sindhu menon ಕನ್ನಡ ಚಿತ್ರರಂಗದಲ್ಲಿ ಸಾಹಸಸಿಂಹ ವಿಷ್ಣುವರ್ಧನ್ ದರ್ಶನ್ ಕಿಚ್ಚ ಸುದೀಪ್ ರಂತಹ ಸ್ಟಾರ್ ನಟರ ಜೊತೆಗೆ ಅಭಿನಯಿಸಿ ಅಪಾರ ಕೀರ್ತಿಯನ್ನು ಗಳಿಸಿದ್ದು ತೆಲುಗು ತಮಿಳು ಮತ್ತು ಮಲೆಯಾಳಂ ನಲ್ಲೂ ಕೂಡಾ ಸ್ಟಾರ್ ನಟರ ಜೊತೆ ತೆರೆ ಹಂಚಿಕೊಂಡು ತನ್ನದೇ ಆದ ಛಾಪು ಮೂಡಿಸಿರುವ ಇವರ ಚಿತ್ರಗಳು ಸಾಕಷ್ಟು ಯಶಸ್ಸನ್ನು ಕೂಡ ಪಡೆದಿದ್ದು ಇನ್ನು ಭರತ ನಾಟ್ಯದಲ್ಲಿ ಪರಿಣಿತರಾಗಿದ್ದ ಸಿಂಧೂ ವೇದಿಕೆಯ ಮೇಲೆ ಕಾರ್ಯಕ್ರಮ ನೀಡುತ್ತಿದ್ದರು. ಹೌದು ಆ ಸ್ಪರ್ಧೆಯಲ್ಲಿ ನೋಡಿದ ಭಾಸ್ಕರ್ ಹೆಗ್ಗಡೆ ಅವರು ನಿರ್ದೇಶಕ ಕೆ.ವಿ‌. ಜಯರಾಮ್ ಅವರಿಗೆ ಪರಿಚಯಿಸಿದ್ದು ಅವರ ನಿರ್ದೇಶನದಲ್ಲಿ ಮೂಡಿ ಬಂದ ಸಿನಿಮಾವೇ ರಶ್ಮಿ.

ಹೌದು ಈ ಮೂಲಕ ಸಿಂಧು ಮೆನನ್ ಅವರು ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಾರೆ. ತದನಂತರ
ಹುಲಿಯಾ ಜೇಷ್ಠ ಪ್ರೇಮ ಪ್ರೇಮ ಪ್ರೇಮ ಖುಷಿ ವಿಕ್ರಂ ನಂತಹ ಕನ್ನಡ ಸಿನಿಮಾಗಳಲ್ಲಿ ಅಭಿನಯಿಸಿ ಖ್ಯಾತಿ ಪಡೆದುಕೊಂಡಿದ್ದು ತದನಂತರ ತೆಲುಗು ತಮಿಳು ಮತ್ತು ಮಲೆಯಾಳಂ ಚಿತ್ರರಂಗದಲ್ಲಿ ಹೆಚ್ಚು ಸಕ್ರಿಯವಾಗಿದ್ದ ಅವರು ಭದ್ರಾಚಲಂ ಶ್ರೀರಾಮಚಂದ್ರುಲು ತ್ರಿನೇತ್ರಂ ಇನ್ಸ್ಪೆಕ್ಟರ್ ನಂತಹ ತೆಲುಗು ಸಿನಿಮಾಗಳು ಚಿತ್ರರಂಗದಲ್ಲಿ ಬೇರೂರಲು ಕೂಡ ಸುಗಮ ದಾರಿ ಮಾಡಿಕೊತ್ತವೆ.Happy Birthday Sindhu Menon: Chandamama actress turns 34 | Telugu Movie News - Times of India

ತದನಂತರ ಸಮುತ್ತರಂ ಕಾದಲ್ ಪೂಕ್ಕಳ್ ಯೂತ್ ನಂತಹ ತಮಿಳು ಹಿಟ್ ಸಿನಿಮಾಗಳಲ್ಲಿ ಅಭಿನಯಿಸಿ ಅನೇಕ ಮಲೆಯಾಳಂ ಸಿನಿಮಾಗಳಲ್ಲಿ ಕೂಡ ಸಿಂಧೂ ಮೆನನ್ ನಿರತರಾಗುತ್ತಾರೆ. ಆದರೆ ಇದೀಗ ಸಿಂಧೂ ಅವರು ಸಿನಿಮಾ ರಂಗದಲ್ಲಿ ಇಲ್ಲ ಹಾಗಾದರೆ ಎಲ್ಲಿದ್ದಾರೆ? ಏನು ಮಾಡುತ್ತಿದ್ದಾರೆ ಎನ್ನುವುದು ಅಭಿಮಾನಿಗಳಲ್ಲಿ ಮೂಡುತ್ತಿರುವ ಯಕ್ಷ ಪ್ರಶ್ನೆ.

ಸಿಂಧು ಅವರು ರವರು 2010 ರಲ್ಲಿ ಡೊಮೆನಿಕ್ ಪ್ರಭು ಎಂಬುವವರ ಜೊತೆ ವಿವಾಹವಾಗುದ್ದು ಈ ದಂಪಂತಿಗಳಿಗೆ ಎರಡು ಮಕ್ಕಳಿವೆ ಸದ್ದ. ಇದೀಗ ಅವರು ತಮ್ಮ ಸಂಸಾರದ ಜೊತೆ ಅಮೆರಿಕಾದಲ್ಲಿ ನೆಲೆಸಿದ್ದಾರೆ ಎನ್ನಲಾಗಿದ್ದು ಕೆಲವರು ಇವರು ಇಂಗ್ಲೆಂಡ್ ನಲ್ಲಿ ಇದ್ದಾರೆ ಎಂದು ಹೇಳುತ್ತಾರೆ. ಹೌದು ಇಷ್ಟು ಮಾತ್ರಲ್ಲದೇ ಸಿಂಧು ಮನೆನ್ ಅವರ ಸಹೋದರ ಬ್ಯಾಂಕ್ ವೊಂದಕ್ಕೆ ಲಕ್ಷಾಂತರ ರೂ. ವಂಚನೆ ಮಾಡಿದ್ದಾರೆ ಹಾಗೂ ಅದರಲ್ಲಿ ಸಿಂಧು ಹಾಗೂ ಅವರ ಸೋದರಿ ಕೂಡಾ ಸೇರಿದ್ದಾರೆ ಎಂಬ ವಿವಾದ ಜೋರಾಗಿ ಹರಿದಾಡುತ್ತಿತ್ತು. ಆದರೆ ಸಿಂಧು ಮೆನನ್ ವಿದೇಶದಲ್ಲಿ ಇರುವುದಿರಿಂದ ಬ್ಯಾಂಕ್ ವಂಚನೆ ಪ್ರಕರಣಕ್ಕೂ ಆಕೆಗೂ ಸಂಬಂಧವಿಲ್ಲ ಎಂದು ಮೂಲಗಳ ಪ್ರಕಾರ ಹೇಳಲಾಗುತ್ತದೆ.

ಇನ್ನು ವೈವಾಹಿಕ ಜೀವನದ ಬಗ್ಗೆ ನೋಡುವುದಾದರೆ ಸಂಸಾರದಲ್ಲಿ ನೊಂದು ಪ್ರಾಣಕಳೆದುಕೊಳ್ಳುವ ಪ್ರಯತ್ನ ಕೂಡಾ ಮಾಡಿದ್ದರು ಎಂಬ ವದಂತಿಗಳು ಜೋರಾಗಿಯೇ ಹಬ್ಬಿದ್ದವು. ಹೀಗೆಲ್ಲಾ ನಡೆಯುತ್ತಿದ್ದರೂ ಸಹ ಸಿಂಧು ಮೆನನ್ ಮಾತ್ರ ಯಾವುದಕ್ಕೂ ಪ್ರತಿಕ್ರಿಯೆ ನೀಡುತ್ತಿಲ್ಲ. ಹೌದು ಅವರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಕೂಡಾ ಅಷ್ಟೇನೂ ಹೆಚ್ಚಿನ ಮಾಹಿತಿ ಸಿಗುವುದಿಲ್ಲ. ಆಕೆ ಚಿತ್ರರಂಗದಿಂದ ದೂರ ಉಳಿದು ಸುಮಾರು ಆರೇಳು ವರುಷ ಕಳೆದಿದ್ದರು ಕೂಡ ಅವರ ಅಭಿಮಾನಿಗಳ ಮನಸಲ್ಲಿ ಈಗಲೂ ಕೂಡ ಉಳಿದ್ದಾರೆ ಎನ್ನಬಹುದು.