ವಾರ್ತಾ ಮಂಜರಿ
Trending Stories, Viral News, Gossips & Everything in Kannada

Shivaraj Kumar: ಅರ್ಧಕ್ಕೆ ನಿಂತಿರುವ ಶಿವಣ್ಣನ ಈ ಸಿನೆಮಾ ರಿಲೀಸ್ ಆದರೆ ದಾಖಲೆಗಳು ಧೂಳಿಪಟ…ನೋಡಿ

301

1986 ನಮ್ಮ ಹೆಮ್ಮೆಯ ಕನ್ನಡಿಗರ ಆರಾಧ್ಯ ದೈವ ಹಾಗೂ ಕರುನಾಡ ರತ್ನ ವರನಟ ಡಾ ರಾಜ್ ಕುಮಾರ್ ಅವರ ಕರುಳಿನ ಕುಡಿ Shivaraj Kumar ರವರು ಪರಿಪೂರ್ಣ ನಾಯಕನಾಗಿ ಕಾಣಿಸಿಕೊಂಡಿದ್ದಂತಹ ಆನಂದ್ ಸಿನಿಮಾ ಬಿಡಯಗಡೆಯಾದ ದಿನ. ಹೌದು ಅಪ್ಪಾಜಿಯ ಹಿರಿಯ ಮಗನ ಸಿನಿಮಾ ಅಂದ ಮೇಲೆ ಸಿನಿಮಾ ಮೇಲಿನ ನಿರೀಕ್ಷೆಗಳು ಕೂಡ ಶಿಖರ ದಷ್ಟು ಎತ್ತರಕ್ಕೆ ಏರಿತ್ತು ಎನ್ನಬಹುದು.

ನಿರೀಕ್ಷೆಯಂತೆಯೇ ಆನಂದ್ ಚಿತ್ರ ಸುಮಾರು 38 ವಾರಗಳ ಕಾಲ ಚಿತ್ರಮಂದಿರದಲ್ಲಿ ಪ್ರದರ್ಶನ ಕಂಡು ಹೊಸ ದಾಖಲೆಯೊಂದು ಬರೆದಿತ್ತು. ಹೌದು ಕನ್ನಡಕ್ಕೆ ಮತ್ತೊಬ್ಬ ಪ್ರತಿಭಾವಂತ ನಾಯಕ ನಟ ಈ ಸಿನಿಮಾ ಮೂಲಕ ಬೆಳಕಿಗೆ ಬಂದಿದ್ದು ಶಿವಣ್ಣನ ಅಭಿನಯ ಕಾಲೇಜು ಹುಡುಗನ ಪಾತ್ರ ಹಾಗೂ ಅವರ ನೃತ್ಯಕ್ಕೆ ಕರುನಾಡ ಜನತೆ ಮಾರು ಹೋಗಿದ್ದರು ಎನ್ನಬಹುದು. ಅಂದಿನ ಯುವ ಪೀಳಿಗೆ ಗಳ ಬಾಯಲ್ಲಿ ಗುನುಗುತ್ತಿದ್ದಿದು ಒಂದೇ ಹಾಡು ಟುವ್ವಿ ಟುವ್ವಿ ಟುವ್ವಿ ಎಂದು ಹಾಡುವ.

ಹೌದು ಈ ಹಾಡಿನಲ್ಲಿ ಜಗಮೆಚ್ಚಿದ ಮಗನ ನೃತ್ಯಕ್ಕೆ ಪ್ರೇಕ್ಷಕರು ಫಿದಾ ಆಗಿದ್ದು ಈ ಚಿತ್ರದ ಬಳಿಕ ಶಿವಣ್ಣ ತಿರುಗಿ ನೋಡಲೆ ಇಲ್ಲ. ತದನಂತರ ಹ್ಯಾಟ್ರಿಕ್ ಹಿಟ್ ಸಿನಿಮಾಗಳನ್ನು ನೀಡಿ ಹ್ಯಾಟ್ರಿಕ್ ಹೀರೋ  Shivaraj Kumar  ಎಂದು ಬಿರುದು ಪಡೆದ ಶಿವಣ್ಣ ರವರು ಸಾಲು ಸಾಲು ಹಿಟ್ ಸಿನಿಮಾಗಳನ್ನು ನೀಡಿ ಸದ್ಯ ಇದೀಗ ೧೦೦ ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿ ಕರುನಾಡ ಚಕ್ರವರ್ತಿಯಾಗಿದ್ದಾರೆ. ಆನಂದ್ ಸಿನಿಮಾದಲ್ಲಿ ಹೇಗೆ ನರ್ತನ ಮಾಡಿದ್ದರೋ ಸದ್ಯ ಇದೀಗ ಕೂಡ ೫೯ ವರುಷ ದಾಟಿದ್ದರು ಕೂಡ ಅದೇ ಎನರ್ಜಿ ಹಾಗೂ ಅದೇ ಜೋಶ್ ನಲ್ಲಿ ಕುಣಿಯತ್ತಾರೆ. ಶಿವಣ್ಣನಿಗೆ ಶಿವಣ್ಣನೇ ಸಾಟಿ ಎನ್ನಬಹುದು.With Appu gone, I have lost a child: Shivarajkumar | Kannada Movie News -  Times of India

ಇಷ್ಟು ವಯಸ್ಸಾಗಿದ್ದರೂ ಕೂಡ ಇನ್ನು ಎಂಗ್ ಅಂಡ್ ಎನರ್ಜಿಟಿಕ್ ಆಗಿ 18ರ ಪ್ರಾಯರಂತೆ ಕಾಣುವ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ರವರು ತಮ್ಮ ಅಭಿಮಾನಿಗಳ ಪ್ರೀತಿಯ ಶಿವಣ್ಣ ಒಂದರ ಮೇಲೊಂದರಂತೆ ಹಿಟ್ ಸಿನಿಮಾಗಳನ್ನು ನೀಡುತ್ತಾ ಚಿತ್ರರಂಗಕ್ಕೆ ಗಾಡ್ ಫಾದರ್ ಆಗಿ ಬೆಳೆಯುತ್ತಿದ್ದಾರೆ. ಬಹುಶಃ ವರ್ಷವೊಂದರಲ್ಲಿ ಈಗಲೂ ಅತಿ ಹೆಚ್ಚು ಸಿನೆಮಗಳನ್ನು ಒಪ್ಪಿಕೊಳ್ಳುವುದು ಅತಿ ಹೆಚ್ಚು ಸಿನಿಮಾಗಳನ್ನು ತೆರೆಗೆ ತರುವುದು ಮತ್ತು ಅತಿ ಹೆಚ್ಚು ಸಿನಿಮಾಗಳ ಪೋಸ್ಟರ್ ಬಿಡುಗಡೆ ಮಾಡುವುದು ಎಲ್ಲವೂ ಸಹ ಶಿವಣ್ಣ ಮಾತ್ರ ಎನ್ನಬಹುದು.

ಆದರೆ ಪೋಸ್ಟರ್ ರಿಲೀಸ್ ಮಾಡಿ ಮುಹೂರ್ತ ಮುಗಿಸಿದ ಅದೆಷ್ಟೋ ಶಿವಣ್ಣನ ಸಿನಿಮಾಗಳು ಬಿಡುಗಡೆ ಆಗುವುದೇ ಇಲ್ಲ. ಹೌದು ಶಿವಣ್ಣನಿಗೆ ಸಿನಿಮಾ ಮಾಡಬೇಕು ಎಂದು ಕನಸು ಹೊತ್ತು ತರಾತುರಿಯಲ್ಲಿ ಶಿವಣ್ಣನಿಗೆ ಕಥೆ ಒಪ್ಪಿಸಿದ ನಿರ್ಮಾಪಕರು ನಿರ್ದೇಶಕರು ಕೆಲವು ಕಾರಣಾಂತರಗಳಿಂದಾಗಿ ಅರ್ಧಕ್ಕೆ ನಿಲ್ಲಿಸಬೇಕಾಗುತ್ತದೆ.ಶಿವಣ್ಣ ರವರ ಸಿನಿಮಾದ ಚಿತ್ರೀಕರಣ ಸಮಯದಲ್ಲಿ ಪರ್ಫೆಕ್ಟ್ ಇದ್ದರೂ ಇತರರು ಎಡವಿ ಬಿಡುತ್ತಿದ್ದು ಹೀಗೆ ಸಿನಿಮಾದ ಬಜೆಟ್ ಕಾರಣಕ್ಕೋ ಅಥವಾ ಬೇರೆ ಯಾವುದೇ ಕಾರಣಕ್ಕೋ ಸಿನಿಮಾ ನಿಂತೇ ಹೋಗುತ್ತದೆ.

ಹೀಗೆ ಅದಾಗಲೇ ಪೋಸ್ಟರ್ ರಿಲೀಸ್ ಮಾಡಿ ಚಿತ್ರದ ಶೀರ್ಷಿಕೆ ಎಲ್ಲಾ ಕಡೆ ಹಬ್ಬಿ ಆದರೂ ಸಹ ಚಿತ್ರೀಕರಣ ನಡೆಯದೆ ಹಾಗೆಯೇ ಉಳಿದಿರುವ ಆ ಒಂದು ಸಿನಿಮಾಗೆ ಈಗಲೂ ಕೂಡ ಅಭಿಮಾನಿಗಳು ತುದಿಗಾಲಿನಲ್ಲಿ ಕಾಯುತ್ತಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಹೊಸದೊಂದು ಸಂಚಲನ ಸೃಷ್ಟಿಸಿದ ಹಿರಿಯ ನಿರ್ದೇಶಕ ಕೆ‌ವಿ ರಾಜ ಹಾಗೂ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ರವರ ಕಾಂಬಿನೇಷನ್ನಲ್ಲಿ ಬರಬೇಕಿದ್ದ ಖೆಡ್ಡ ಸಿನಿಮಾ.

ಕೆವಿ ರಾಜು ಅವರ ಸಿನಿಮಾ ಶೈಲಿಗೆ ಮಾರು ಹೋಗದ ಪ್ರೇಕ್ಷಕರು ಇಲ್ಲವೇನೋ ಎನ್ನಬಹುದು. ಹೌದು ಅವರ ಕಥನ ಶೈಲಿ ಮತ್ತು ನಿರೂಪಣಾ ಶೈಲಿ ಎಲ್ಲವೂ ಪ್ರತಿಯೊಬ್ಬರಿಗೂ ಕೂಡ ಇಷ್ಟವಾಗುವಂತದ್ದು
ತಮ್ಮ ವಿಭಿನ್ನ ನಿರ್ದೇಶನ ಶೈಲಿಯಿಂದಲೇ ಮನೆಮಾತಾದ ಕೆವಿ ರಾಜು ಅವರು 1995ರಲ್ಲಿ ಶಿವಣ್ಣನಿಗಾಗಿಯೇ ಒಂದು ಕಥೆಯನ್ನು ಮಾಡಿಕೊಳ್ಳುತ್ತಾರೆ.

ಹೌದು ಆದರೆ ಮಾತ್ರ ಆ ಸಿನಿಮಾದ ಪೋಸ್ಟರ್ ಮತ್ತು ಮುಹೂರ್ತ ಎಲ್ಲವೂ ಆದ ನಂತರ ಚಿತ್ರ ಸದ್ದು ಮಾಡಲಿಲ್ಲ. ಹೀಗಾಗಿ 1995 ರಲ್ಲಿ ಬಿಡುಗಡೆಯಾಗಬೇಕಿದ್ದ ಆ ಸಿನಿಮಾವನ್ನು ಈ ಒಂದುಕಾಲಕ್ಕೆ ಸೂಕ್ತವಾಗುವ ರೀತಿ ಬದಲಾವಣೆಯನ್ನು ಮಾಡಿಕೊಂಡು ಶಿವಣ್ಣನಿಗೆ ಮತ್ತೊಮ್ಮೆ ಕಥೆಯನ್ನು ಒಪ್ಪಿಸಿದರೆ ಆಗಲೇ ಬಿಡುಗಡೆ ಆಗಬೇಕಿದ್ದಂತಹ ಖೆಡ್ಡ ಎಂಬ ಶಿವಣ್ಣ ಮತ್ತು ಕೆವಿ ರಾಜುರವರ ಡೆಡ್ಲಿ ಕಾಂಬಿನೇಷನ್ ಪ್ರೇಕ್ಷಕರಿಗೆ ನೋಡ ಸಿಗುತ್ತದೆ. ಹೀಗೆ ಎಲ್ಲವೂ ಸಹ ಸರಿಯಾಗಿ ಮತ್ತೊಮ್ಮೆ ತೆರೆಯ ಮೇಲೆ ಇವರಿಬ್ಬರ ಕಾಂಬಿನೇಷನ್ ಒಂದಾದರೆ ಈ ಸಿನಿಮಾ ತೆರೆಗೆ ಬಂದರೆ ಬಾಕ್ಸಾಫೀಸ್ ಧೂಳ್ ಎಬ್ಬಿಸುವುದಕ್ಕೆ ಪಕ್ಕಾ. ಮುಂದಿನ ದಿನಗಳಲ್ಲಿ ಶಿವಣ್ಣ ಈ ಸಿನಿಮಾ ಮಾಡಬೇಕು ಈ ಕುರಿತು ನಿಮ್ಮ ಅಭಿಪ್ರಾಯವನ್ನು ನಮಗೆ ತಪ್ಪದೆ ಕಾಮೆಂಟ್ ಬಾಕ್ಸ್ನಲ್ಲಿ ತಿಳಿಸಿ.