ವಾರ್ತಾ ಮಂಜರಿ
Trending Stories, Viral News, Gossips & Everything in Kannada

Punith Rajkumar: ಗಂಧದ ಗುಡಿ ಟ್ರೇಲರ್ ಬಿಡುಗಡೆಯಾದ 24 ಘಂಟೆಗಳಲ್ಲೇ ದೊಡ್ಡ ಆಘಾತ….ಆಗಿದ್ದೆ ಬೇರೆ

14,828
ಸದ್ಯ ಕನ್ನಡ ಚಿತ್ರರಂಗದ ಪವರ್ ಸ್ಟಾರ್ Punith Rajkumar  ರವರು ಕನಸಿನ ಕೂಸು ಡಾಕ್ಯುಮೆಂಟರಿ ಸಿನಿಮಾ ಗಂಧದಗುಡಿ  ಟ್ರೈಲರ್  ಈಗಾಗಲೇ ಬಿಡುಗಡೆ ಆಗಿದೆ.  ಹೌದು ಕೆಜಿ ರಸ್ತೆಯ ನರ್ತಕಿ ಚಿತ್ರಮಂದಿರಲ್ಲಿ ನಡೆದಂತಹ ಟ್ರೈಲರ್ ರಿಲೀಸ್ ಕಾರ್ಯಕ್ರಮದಲ್ಲಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ರಾಘವೇಂದ್ರ ರಾಜ್‌ಕುಮಾರ್ ಯುವರಾಜ್‌ಕುಮಾರ್ ಹಾಗೂ ವಿನಯ್ ರಾಜ್‌ಕುಮಾರ್ ಸೇರಿದಂತೆ ಇಡೀ ದೊಡ್ಮನೆ ಕುಟುಂಬದ ಸದಸ್ಯರು ಭಾಗಿಯಾಗಿದ್ದು ಅಶ್ವಿನಿ ಪುನೀತ್ ರಾಜ್‌ಕುಮಾರ್ ರವರು ಟ್ರೈಲರ್ ಬಿಡುಗಡೆ ಮಾಡಿದರು.
ಕರ್ನಾಟಕದ ಅರಣ್ಯ ಸಂಪತ್ತು ಮತ್ತು ವನ್ಯಜೀವಿ ಜಗತ್ತನ್ನು ಗಂಧದಗುಡಿ ಡಾಕ್ಯುಮೆಂಟರಿಯಲ್ಲಿ ಅನಾವರಣ ಮಾಡಲಾಗಿದ್ದು ಗಾಜನೂರಿನ ಸುತ್ತಾ ಮುತ್ತ ಇರುವಂತಹ ಕಾಡುಗಳಲ್ಲೂ ಕೂಡ ನಿರ್ದೇಶಕ ಅಮೋಘವರ್ಷ ಜೊತೆಗೆ ಪುನೀತ್ ರಾಜ್‌ಕುಮಾರ್ ರವರು ಸುತ್ತಾಡಿ ಬಂದಿದ್ದಾತೆ. ಅದನ್ನು ಹೈಲೆಟ್ ಮಾಡಿ ಟ್ರೈಲರ್ ಕಟ್ ಮಾಡಲಾಗಿದ್ದು ಸದ್ಯ ಅಪ್ಪು ರವರ ಪಿಆರ್‌ಕೆ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಮತ್ತು ಮಡ್‌ಸ್ಕಿಪರ್ ಸಂಸ್ಥೆ ಜಂಟಿಯಾಗಿ ಈ ವೈಲ್ಡ್ ಡಾಕ್ಯುಮೆಂಟರಿ ನಿರ್ಮಾಣ ಮಾಡಿರುವುದು ವಿಶೇಷ. ಇನ್ನು ಅಂತರಾಷ್ಟ್ರೀಯ ಗುಣಮಟ್ಟದ ಡಾಕ್ಯುಮೆಂಟರಿ ಮೇಕಿಂಗ್ ಹುಬ್ಬೇರಿಸುವಂತಿದೆ ಎನ್ನಬಹುದು.
ಇನ್ನು ಈ ಹಿಂದೆ ವೈಲ್ಡ್ ಕರ್ನಾಟಕ ಡಾಕ್ಯುಮೆಂಟರಿ ಮಾಡಿ ಅಮೋಘ ವರ್ಷ ಸೈ ಅನ್ನಿಸಿಕೊಂಡಿದ್ದವರು. ಹೌದು ಇದೀಗ ಅವರ ಜೊತೆ ಸೇರಿ ಪುನೀತ್ ಕರುನಾಡಿನ ಗಂಧದಗುಡಿ ಜಗತ್ತಿಗೆ ತೋರಿಸಲು ಮುಂದಾಗಿದ್ದು ಆದರೆ ಟೀಸರ್ ರಿಲೀಸ್‌ಗೆ ಹೊಸ್ತಿಲಲ್ಲಿ ಅಪ್ಪು ಬಾರದ ಲೋಕಕ್ಕೆ ಪಯಣ ಬೆಳೆಸಿಬಿಟ್ಟಿದ್ದಾರೆ. ಸದ್ಯ ಇದೀಗ ಗಂಧದಗುಡಿ ಡಾಕ್ಯುಮೆಂಟರಿ ಸಿನಿಮಾ ರಿಲೀಸ್‌ಗೆ ರೆಡಿಯಾಗಿದ್ದು ಟ್ರೈಲರ್ ಈಗಾಗಲೇ ಸದ್ದು ಮಾಡುತ್ತಿದೆ.Late Puneet Rajkumar's last project 'Gandhada Gudi' teaser out! - Tamil  News - IndiaGlitz.com
ಹೌದು ಜೀಪ್ ಏರಿ ಅಪ್ಪು ಹಾಗೂ ಅಮೋಘವರ್ಷ ರಾಜ್ಯದ ಮೂಲೆ ಮೂಲೆಗೆ ಸುತ್ತಾಡಿದ್ದು ಟ್ರೈಲರ್ ಆರಂಭದಲ್ಲೇ ದ್ವೀಪವೊಂದಕ್ಕೆ ಇಬ್ಬರು ಹೊರಟಿದ್ದಾರೆ. ಇನ್ನು ಅಪ್ಪು ವಾಯ್ಸ್‌ನಲ್ಲಿಯೇ ಟ್ರೈಲರ್ ಶುರುವಾಗುವುದು ವಿಶೇಷವಾಗಿದ್ದು ಇಲ್ಲೇನಾದರೂ ಬೇರೆ ತರಹದ ಪಕ್ಷಿಗಳನ್ನು ತೋರಿಸಲು ಕರ್ಕೊಂಡ್ ಬಂದಿದ್ದೀರಾ? ಸಮುದ್ರದ ಬಳಿ ಎಂದು ಅಪ್ಪು ಅವರು ಕೇಳಿದಾಗ ಇಲ್ಲ ಇಲ್ಲೊಂದು ಐಲ್ಯಾಂಡ್ ಇದೆ ಎಂದು ಅಮೋಘವರ್ಷ ಹೇಳುತ್ತಾರೆ. ಆಗ ಅಪ್ಪ ಓಹ್ ಜುರಾಸಿಕ್ ಪಾರ್ಕ್ ಎಂದಿದ್ದು ಇಲ್ಲಿಂದ ಮುಂದೆ ಸುಂದರ ದ್ವೀಪದ ದರ್ಶನವಾಗುತ್ತದೆ.
ಇನ್ನು ಅಮೋಘವರ್ಷ ರವರನ್ನು ತಮ್ಮ ತಂದೆ ಹುಟ್ಟಿದ ಗಾಜನೂರು ಮನೆಗೆ ಕರೆದುಕೊಂಡು ಹೋಗಿದ್ದು ತಂದೆ ಹುಟ್ಟಿ ಬೆಳೆದ ಊರಿನಲ್ಲಿ ಸುತ್ತಾಡಿಸಿದ್ದಾರೆ. ಹೌದು ಜೋಗ ಜಲಪಾತ ಸುತ್ತಾ ಓಡಾಡಿದ್ದು ಜಾನಪದ ಕಲೆ ಸಂಸ್ಕೃತಿಯ ಬಗ್ಗೆ ಕೂಡ ಚರ್ಚೆಸಿದ್ದಾರೆ. ವನ್ಯ ಜೀವಿನ ಸಂಕುಲವನ್ನು ನೋಡಿ ಬೆರಗಾಗಿದ್ದು ಗಂಧದಗುಡಿ ಟ್ರೈಲರ್ ನಿಜಕ್ಕೂ ಬಹಳ ಥ್ರಿಲ್ಲಿಂಗ್ ಆಗಿದೆ.
ಅಕ್ಟೋಬರ್ 28ಕ್ಕೆ ಸಿಲ್ವರ್‌ ಸ್ಕ್ರೀನ್‌ಗಳ ಮೇಲೆ ಗಂಧದಗುಡಿ ಡಾಕ್ಯೂಮೆಂಟರಿ ಸಿನಿಮಾ ಅಪ್ಪಳಿಸಲಿದೆ. ಆದರೆ ಈ ನಡುವೆ ಅಪ್ಪು ಅವರ ಕೆಲ ಅಭಿಮಾನಿಹಳಿಗೆ ಭಾರಿ ಬೇಸರವಾಗಿದ್ದು  ಅಪ್ಪು ಅವರ ಸಿನೆಮಾ ಗಂಧದಗುಡಿ  ಪೂರ್ಣ ಪ್ರಮಾಣದ ಸಿನಿಮಾವಲ್ಲ. ಕೇವಲ ಶಾರ್ಟ್ ಮೂವಿ ಅಥವಾ ಕೆಲವೇ ನಿಮಿಷಗಳ  ಅಥವಾ  ಗಂಟೆಯ ಸಿನೆಮಾ ಇರಬಹುದು  ಎಂದು ಬೇಸರ ವ್ಯಕ್ತಪಡಿಸಿದ್ದು ತಮ್ಮ ನೋವನ್ನು ಕೂಡ ಹೊರಹಾಕುತ್ತಿದ್ದಾರೆ.