ರಿಷಬ್ ಶೆಟ್ಟಿ ನಟಿಸಿ ನಿರ್ದೇಶನದ ಕಾಂತಾರ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಹೊಸ ಇತಿಹಾಸ ಸೃಷ್ಟಿಸುತ್ತಿದ್ದು ನಿರೀಕ್ಷೆಗೂ ಮೀರಿ ಅದ್ಭುತ ಯಶಸ್ಸುಗಳಿಸಿರುವ ಈ ಚಿತ್ರ ಬಾಕ್ಸ್ ಆಫೀಸ್ನಲ್ಲೂ ಸಖತ್ ಸದ್ದು ಮಾಡುತ್ತಿದೆ ಎನ್ನಬಹುದು . ಸೆಪ್ಟೆಂಬರ್ 30 ರಂದು ತೆರೆಕಂಡ ಕಾಂತಾರ ಸಿನಿಮಾ ಇಂದಿಗೂ ಹೌಸ್ಫುಲ್ ಪ್ರದರ್ಶನ ಕಾಣುತ್ತಿದ್ದು ವಿಶ್ವದಾದ್ಯಂತ ಕಾಂತಾರ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ.
ಹೌದು ಅದರಲ್ಲೂ ಸಾಮಾಜಿಕ ಜಾಲತಾಣಗಳಲ್ಲಂತೂ ಚಿತ್ರದ ಬಗ್ಗೆ ಅತೀವ ಮೆಚ್ಚುಗೆ ವ್ಯಕ್ತವಾಗುತ್ತಿದ್ದು ಜನ ಕಾಂತಾರ ವೀಕ್ಷಣೆಗೆ ಮುಗಿಬೀಳುತ್ತಿದ್ದಾರೆ. ಕಾಂತಾರ ಒಂದು ನೋಡಿ ಮರೆಯುವ ಚಿತ್ರವಲ್ಲ. ಅದು ನೋಡಿ ಅನುಭವಿಸುವ ಸಿನಿಮಾ ಎನ್ನುವುದು kantara ಸಿನಿಮಾ ನೋಡಿರುವ ಪ್ರೇಕ್ಷಕರ ಅಭಿಪ್ರಾಯವಾಗಿದೆ. ಸದ್ಯ ದಾಖಲೆಗಳನ್ನೆಲ್ಲ ಕುಟ್ಟಿ ಪುಡಿ ಪುಡಿ ಮಾಡಿರುವಂತಹ ಕಾಂತರಾ ಸಿನಿಮಾಗೆ ನಾಯಕ ನಟಿಯಾದ
ಸಪ್ತಮಿ ಗೌಡ ಪಡೆದಿರುವಂತಹ ಸಂಭಾವನೆ ಎಷ್ಟು ಗೊತ್ತಾ? ಮುಂದೆ ಓದಿ.
ಸದ್ಯ ಕರಾವಳಿ ಸಂಸ್ಕೃತಿಯನ್ನು ಹೊತ್ತು ತಂದ ಕಾಂತಾರ ಸಿನಿಮಾ ಸೂಪರ್ ಹಿಟ್ ಆಗಿದ್ದು ರಿಷಬ್ ಶೆಟ್ಟಿ ಅವರ ನೂತನ ಶೈಲಿಯ ಚಿತ್ರಕಥೆ ಮತ್ತು ನಟನೆಗೆ ಪ್ರೇಕ್ಷಕರು ಮನಸೋತಿದ್ದು ಕೇವಲ ಕರ್ನಾಟಕ ಮಾತ್ರವಲ್ಲದೇ ಇತರ ರಾಜ್ಯಗಳಲ್ಲೂ ಕೂಡ ಕಾಂತಾರ ಚಿತ್ರದ ಮೆಚ್ಚುಗೆಯ ಮಾತುಗಳು ವ್ಯಕ್ತವಾಗಿದ್ದು ಇದನ್ನು ಪ್ಯಾನ್ ಇಂಡಿಯಾ ಸಿನಿಮಾ ಮಾಡಿದ್ದರೆ ಎಲ್ಲಾ ಭಾಷೆಯ ಪ್ರೇಕ್ಷಕರು ಕೂಡ ಚಿತ್ರವನ್ನು ಅನುಭವಿಸಿ ನೋಡುತ್ತಿದ್ದರು ಎನ್ನುವುದು ಹಲವರ ಅಭಿಪ್ರಾಯವಾಗಿದೆ.
ಸದ್ಯ ಕಾಂತಾರ ಇತರ ಭಾಷೆಯಲ್ಲೂ ಕೂಡ ತೆರೆ ಕಾಣಬೇಕು ಎನ್ನುವ ವ್ಯಾಪಕ ಒತ್ತಾಯ ಕೇಳಿ ಬಂದ ಹಿನ್ನೆಲೆಯಲ್ಲಿ ಹೊಂಬಾಳೆ ಫಿಲ್ಮ್ಸ್ ಇತರ ಭಾಷೆಗಳಲ್ಲೂ ಕೂಡ ಚಿತ್ರ ಬಿಡುಗಡೆ ಮಾಡಲು ಸಜ್ಜಾಗಿದ್ದು ಕಾಂತಾರ ಚಿತ್ರವನ್ನು ಮೊದಲಿಗೆ ಹಿಂದಿಯಲ್ಲಿ ಡಬ್ ಮಾಡಲಾಗಿದ್ದು ಕಾಂತಾರ ಹಿಂದಿ ಅವತರಣಿಕೆ ಅಕ್ಟೋಬರ್ 14ರಂದು ತೆರೆ ಕಾಣಲಿದೆ. ಹೌದು ಈಗಾಗಲೇ ಕಾಂತಾರ ಹಿಂದಿ ಭಾಷೆಯ ಟ್ರೈಲರ್ ಬಿಡುಗಡೆಯಾಗಿದ್ದು ಪ್ರೇಕ್ಷಕರಿಂದ ಕೂಡ ಭಾರಿ ಮೆಚ್ಚುಗೆ ಪಡೆದುಕೊಂಡಿದೆ. ಹಿಂದಿ ಭಾಷೆಯಲ್ಲಿ ಡಬ್ ಆಗಿರುವ ಕಾಂತಾರ ಅಕ್ಟೋಬರ್ 14ರಿಂದ ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳಲಿದೆ ಎಂದು ಹೊಂಬಾಳೆ ಫಿಲ್ಮ್ಸ್ ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ.
ಇನ್ನು ರಿಷಬ್ ಶೆಟ್ಟಿ ಹಾಗೂ ಸಪ್ತಮಿ ಗೌಡ ಅವರ ಕಾಂಬಿನೇಷನ್ನ ಕಾಂತರಾ ಸಿನಿಮಾ ಐವತ್ತು ಕೋಟಿ ಕ್ಲಬ್ ಸೇರಿದ್ದು 2020ರಲ್ಲಿ ಡಾಲಿ ಧನಂಜಯ್ ಅವರ ಪಾಪ್ಕಾರ್ನ್ ಮಂಕಿ ಟೈಗರ್ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಪಾದರ್ಪಣೆ ಮಾಡಿದಂತಹ ಸಪ್ತಮಿ ಗೌಡ ಕಾಂತಾರ ಸಿನಿಮಾದಲ್ಲಿ ಕಮಾಲ್ ಮಾಡಿದ್ದಾರೆ. ತಮ್ಮ ಎರಡನೇ ಸಿನಿಮಾಗೆ ನಟಿ ಸಪ್ತಮಿ ಗೌಡ ಬಾರಿ ಮೊತ್ತದ ಸಂಭಾವನೆ ಅಂದರೆ ಬರೋಬ್ಬರಿ 50 ಲಕ್ಷ ಸಂಭಾವನೆಯನ್ನು ಪಡೆದಿದ್ದು ನೀವು ಕಾಂತರ ಸಿನಿಮಾವನ್ನು ಕಣ್ತುಂಬಿಕೊಂಡಿದ್ದರೆ ತಪ್ಪದೆ ನಿಮ್ಮ ಅನಿಸಿಕೆಯನ್ನು ಕಮೆಂಟ್ ಮೂಲಕ ನಿಮ್ಮ ಅನಿಸಿಕೆ ತಿಳಿಸಿ.