2022ರ ಏಷ್ಯಾಕಪ್ನಿಂದ ಭಾರತ ತಂಡದ ಪ್ರಯಾಣ ಮುಗಿದಿದ್ದು ಏಷ್ಯಾಕಪ್ 2022ರ ಸೂಪರ್-4 ಸುತ್ತಿನಲ್ಲಿ ಪಾಕಿಸ್ತಾನ ಹಾಗೂ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲು ಅನುಭವಿಸಬೇಕಾಯಿತು. ಭಾರತದ ವಿರುದ್ಧ ಪಾಕಿಸ್ತಾನ 6 ವಿಕೆಟ್ಗಳ ಜಯ ಸಾಧಿಸಿದರೆ ಶ್ರೀಲಂಕಾ ವಿರುದ್ಧ 6 ವಿಕೆಟ್ಗಳಿಂದ ಸೋತಿತು. ಹೀಗಾಗಿ ಏಷ್ಯಾಕಪ್ 2022 ರಿಂದ ನಿರ್ಗಮಿಸಿದ ನಂತರ ಟೀಮ್ ಇಂಡಿಯಾದ ಬೌಲರ್ಗಳ ಬಗ್ಗೆ ಪ್ರಶ್ನೆಗಳು ಎದ್ದಿವೆ. ವಾಸ್ತವವಾಗಿ ಪಾಕಿಸ್ತಾನ ಮತ್ತು ಶ್ರೀಲಂಕಾ ತಂಡಗಳ ವಿರುದ್ಧ ಡೆತ್ ಓವರ್ಗಳಲ್ಲಿ ಭಾರತೀಯ ಬೌಲರ್ಗಳು ನಿರಾಸೆ ಅನುಭವಿಸಿದರು. ಬೌಲಿಂಗ್ನಲ್ಲಿ ನಿರಾಸೆ ಮೂಡಿಸಿರುವ ಇಂತಹ ಬೌಲರ್ಗಳಿಗೆ ಭಾರತ ತಂಡದಲ್ಲಿ ಸ್ಥಾನ ಸಿಗುವ ಬಗ್ಗೆ ಪ್ರಶ್ನೆಗಳು ಎದ್ದಿವೆ
ಭುವನೇಶ್ವರ್ ಕುಮಾರ್ ಏಷ್ಯಾಕಪ್ 2022 ರಲ್ಲಿ ಟೀಮ್ ಇಂಡಿಯಾದ ಅತ್ಯಂತ ಅನುಭವಿ ವೇಗದ ಬೌಲರ್ ಆಗಿದ್ದು ಜಸ್ಪ್ರೀತ್ ಬುಮ್ರಾ ಅವರ ಅನುಪಸ್ಥಿತಿಯಲ್ಲಿ ಭುವಿ ತಮ್ಮ ಬೌಲಿಂಗ್ನಿಂದ ಎಲ್ಲರಿಗೂ ನಿರಾಶೆ ಮೂಡಿಸಿದ್ದಾರೆ. ವಾಸ್ತವವಾಗಿ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಭುವನೇಶ್ವರ್ ಕುಮಾರ್ 19 ನೇ ಓವರ್ನಲ್ಲಿ 19 ರನ್ ನೀಡಿದ್ದು ಶ್ರೀಲಂಕಾ ವಿರುದ್ಧ 19 ನೇ ಓವರ್ನಲ್ಲಿ 14 ರನ್ ನೀಡಿದರು. ಎರಡೂ ಪಂದ್ಯಗಳಲ್ಲಿ ಭುವನೇಶ್ವರ್ ಕುಮಾರ್ ಅವರ ಓವರ್ ಟರ್ನಿಂಗ್ ಪಾಯಿಂಟ್ ಆದ ಕಾರಣ ಪಂದ್ಯ ಭಾರತದ ಕೈ ತಪ್ಪಿದ್ದು ಸದ್ಯ ಇದೀಗ ಭಾರತ ತಂಡದಲ್ಲಿ ಭುವನೇಶ್ವರ್ ಕುಮಾರ್ ಸ್ಥಾನದ ಬಗ್ಗೆ ಅನುಭವಿಗಳು ನಿರಂತರವಾಗಿ ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ.
ಏಷ್ಯಾಕಪ್ 2022 ರ ಸೂಪರ್-4 ರೌಂಡ್ನಲ್ಲಿ ಅವೇಶ್ ಖಾನ್ ಟೀಂ ಇಂಡಿಯಾದ ಭಾಗವಾಗಿರಲಿಲ್ಲ. ಆದರೆ ಯುವ ಬೌಲರ್ ಗುಂಪು-ಹಂತದ ಪಂದ್ಯದಲ್ಲಿ ದುಬಾರಿ ಎನಿಸಿಕೊಂಡಿದ್ದು ವಿಶೇಷವಾಗಿ ಅವೇಶ್ ರನ್ ರೇಟ್ ತೀರ ದುಬಾರಿಯಾಗಿತ್ತು. ಪಾಕಿಸ್ತಾನ ವಿರುದ್ಧದ ಮೊದಲ ಪಂದ್ಯದಲ್ಲಿ ಅವೇಶ್ ಖಾನ್ 2 ಓವರ್ಗಳಲ್ಲಿ 19 ರನ್ ನೀಡಿ 1 ವಿಕೆಟ್ ಪಡೆದರೆ ಹಾಂಕಾಂಗ್ ವಿರುದ್ಧದ ಪಂದ್ಯದಲ್ಲಿ ಅವೇಶ್ ಖಾನ್ 4 ಓವರ್ಗಳಲ್ಲಿ 53 ರನ್ ನೀಡಿ ದುಬಾರಿಯಾದರು. ಅಂತಹ ಸಂದರ್ಭಗಳಲ್ಲಿ ಟಿ20 ವಿಶ್ವಕಪ್ ತಂಡದಲ್ಲಿ ಅವೇಶ್ ಖಾನ್ ಅವರ ಉಪಸ್ಥಿತಿಯನ್ನು ಪ್ರಶ್ನಿಸಲಾಗಿದೆ.
ಸದ್ಯ ಇದೀಗ 2022ರ ವಿಶ್ವಕಪ್ಗೆ ತಂಡದ ಆಯ್ಕೆ ಕುರಿತು ಹಲವು ಅಭಿಮಾನಿಗಳು ಬಿಸಿಸಿಐಗೆ ಸಾಮಾಜಿಕ ಜಾಲತಾಣದಲ್ಲಿ ಸಲಹೆಗಳನ್ನು ನೀಡುತ್ತಿದ್ದು ಯಾವುದೇ ಸಂದರ್ಭದಲ್ಲಿ ಈ ಆಟಗಾರರನ್ನು ಆಯ್ಕೆ ಮಾಡದಂತೆ ಸೂಚಿಸುತ್ತಿದ್ದಾರೆ. ಅವೇಶ್ ಖಾನ್ ರವರನ್ನು ಟಿ20 ವಿಶ್ವಕಪ್ಗೆ ಆಯ್ಕೆ ಮಾಡಬಾರದು ಎಂಬ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ಕೇಳಿಬರುತ್ತಿದ್ದು ಅವೇಶ್ ಖಾನ್ ತಂಡದಲ್ಲಿದ್ದರೆ ಭಾರತ ಗೆಲ್ಲುವ ಪಂದ್ಯವೂ ಸೋಲುವುದು ಖಚಿತ ಎಂದು ಹೇಳುತ್ತಿದ್ದಾರೆ. ಇನ್ನು ಇದೇ ವೇಳೆ ಪಂತ್ ಗೆ ಅಂತಿಮ ತಂಡದಲ್ಲಿ ಸ್ಥಾನ ನೀಡಬಾರದು ಎಂದು ಕೆಲವರು ಹೇಳಿದರೆ ಇನ್ನು ಕೆಲವರು ಪಂತ್ ಸೀಮಿತ ಓವರ್ ಕ್ರಿಕೆಟ್ ಗೆ ಫಿಟ್ ಅಲ್ಲ ಎಂದಿದ್ದಾರೆ. ಅವರಿಗಿಂತ ಸಂಜು ಸ್ಯಾಮ್ಸನ್ ಉತ್ತಮ ಎನ್ನುತ್ತಾರೆ.
ಹೌದು ಅವರು ಕಾರ್ತಿಕ್ ಮತ್ತು ಸಂಜು ಸ್ಯಾಮ್ಸನ್ ಅವರನ್ನು ವಿಕೆಟ್ ಕೀಪರ್ಗಳಾಗಿ ಆಯ್ಕೆ ಮಾಡಬೇಖುಎಂಬ ಕೂಗು ಹೆಚ್ಚು ಕೇಳಿಬರುತ್ತಿದೆ. ಓಪನರ್ ಆಗಿ ರಾಹುಲ್ ಗಿಂತ ಶುಭಮನ್ ಗಿಲ್ ಉತ್ತಮ ಎಂಬ ಅಭಿಪ್ರಾಯ ಸಹ ವ್ಯಕ್ತವಾಗುತ್ತಿದ್ದು ಏಷ್ಯಾಕಪ್ ನಲ್ಲಿ ರಾಹುಲ್ ತೀವ್ರ ನಿರಾಸೆ ಅನುಭವಿಸಿದ್ದು ಗೊತ್ತೇ ಇದೆ. ಅವರಿಗಿಂತ ಗಿಲ್ ರೋಹಿತ್ ಅವರೊಂದಿಗೆ ಇನ್ನಿಂಗ್ಸ್ ತೆರೆಯುವುದು ಉತ್ತಮ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ.ಆದರೆ ಕೋಚ್ ದ್ರಾವಿಡ್ ಹಾಗೂ ಬಿಸಿಸಿಐ ಆಯ್ಕೆಗಾರರು ಏನು ಮಾಡುತ್ತಾರೆ ಎಂಬುದನ್ನು ಕಾದು ನೋಡಬೇಕಿದ್ದು ಟಿ20 ವಿಶ್ವಕಪ್ ಗೆಲ್ಲುವ ಬಲಿಷ್ಠ ತಂಡವನ್ನು ಆಯ್ಕೆ ಮಾಡಲಿದೆಯೇ ಎಂದು ನೋಡಬೇಕಿದೆ.