ವಾರ್ತಾ ಮಂಜರಿ
Trending Stories, Viral News, Gossips & Everything in Kannada

Samantha: ಎರಡನೇ ಮದುವೆಗೆ ರೆಡಿಯಾಗಿದ್ದಾರಾ ಸಮಂತಾ..ಅನುಮಾನಕ್ಕೆ ಕಾರಣವಾಯ್ತು ಆ ಅಂಶ

311

ಸಮಂತಾ ಹಾಗೂ ನಾಗಚೈತನ್ಯ ವಿಚ್ಚೇದನ ಪಡೆದ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಸದಾ ಸುದ್ದಿಯಲ್ಲೇ ಇರುತ್ತಾರೆ. ಪ್ರತಿ ದಿನ ಒಂದಲ್ಲ ಒಂದು ಸುದ್ದಿ ಹಲ್ಚಲ್ ಎಬ್ಬಿಸುತ್ತಲೇ ಇರುತ್ತೆ. ಸಮಂತಾ ಸಿನಿಮಾ ಬಗ್ಗೆನೋ, ನಾಗಚೈತನ್ಯ ವಿರುದ್ಧ ಸಮರದ ಬಗ್ಗೆನೋ, ಏನಾದರೂ ಒಂದು ಸುದ್ದಿ ಹಬ್ಬುತ್ತಲೇ ಇರುತ್ತೆ. ಸಮಂತಾ ಟಾಲಿವುಡ್ ನ ಬಹು ಬೇಡಿಕೆಯ ನಟಿಯರ ಪೈಕಿ ಒಬ್ಬರು. ತಮ್ಮ ಉತ್ತಮ ಅಭಿನಯ ಹಾಗೂ ಗ್ಲಾಮರ್ ನ ಮೂಲಕ ನಟಿ ಸಮಂತಾ ದೊಡ್ಡ ಮಟ್ಟದಲ್ಲಿ ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡಿದ್ದಾರೆ. ಇನ್ನು ನಟಿ ಸಮಂತಾ ನಟ ನಾಗಚೈತನ್ಯ ಜೊತೆಗೆ ವಿಚ್ಛೇಧನ ಪಡೆದ ಬಳಿಕ ಒಂದೆಲ್ಲಾ ಒಂದು ರೀತಿ ಸುದ್ದಿಯಾಗುತ್ತಿರುತ್ತಾರೆ. ಇನ್ನು ನಟಿ ಇದೀಗ ಸಿನಿಮಾರಂಗದಲ್ಲಿ ಸಾಕಷ್ಟು ಬೇಡಿಕೆ ಕೂಡ ಪಡೆದುಕೊಂಡಿದ್ದಾರೆ.

ತೆಲುಗು, ತಮಿಳು ಸೇರಿದಂತೆ ಇದೀಗ ನಟಿ ಬಾಲಿವುಡ್ ಗೂ ಸಹ ಎಂಟ್ರಿ ಕೊಟ್ಟಿದ್ದಾರೆ. ಈಗ ಸಮಂತಾ 2ನೇ ಮದುವೆ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬಿಸಿ ಬಿಸಿ ಚರ್ಚೆಯಾಗುತ್ತಲೇ ಇದೆ. ವಿಚ್ಛೇದನದ ಬಳಿಕ ಸಮಂತಾ ಮತ್ತೊಂದು ಮದುವೆಗೆ ರೆಡಿಯಾಗಿದ್ದಾರೆನ್ನಲಾದ ಸುದ್ದಿಯೊಂದು ಹಲ್ಚಲ್ ಎಬ್ಬಿಸಿದೆ. ಅಷ್ಟಕ್ಕೂ ಸಮಂತಾ ಮದುವೆಯಾಗ್ತಿರೋ ಸುದ್ದಿ ನಿಜವೇ? ಯಾರೊಂದಿಗೆ ಹೆಸರು ತಳುಕು ಹಾಕಿಕೊಳ್ಳುತ್ತಿದೆ? ಇಂತಹದ್ದೇ ಒಂದಿಷ್ಟು ವದಂತಿಗಳು ಹಬ್ಬುತ್ತಿದೆ. ಸಮಂತಾ ಇದೀಗ ಚಿತ್ರರಂಗದಲ್ಲಿ ಸಕತ್ ಬ್ಯುಸಿಯಾಗಿದ್ದಾರೆ.

 

ಒಂದಾದ ಮೇಲೆ ಒಂದು ಸಿನಿಮಾದಲ್ಲಿ ನಟಿಸುವ ಮೂಲಕ ನಟಿ ಸಮಂತಾ ದಕ್ಷಿಣ ಭಾರತ ಸಿನಿಮಾರಂಗದ ಟಾಪ್ ನಟಿಯರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ. ಇನ್ನು ನಟಿ ನಾಗಚೈತನ್ಯ ಜೊತೆ ವಿಚ್ಛೇಧನ ಪಡೆದ ಬಳಿಕ ಅವರ ಬಗ್ಗೆ ಸಾಕಷ್ಟು ಗಾಸಿಪ್ ಗಳು ಕೇಳಿ ಬಂದಿದ್ದವು. ಇದೀಗ ನಟಿ ಸಮಂತಾ ಅವರ ಎರಡನೇ ಮದುವೆಯ ಬಗ್ಗೆ ಸುದ್ದಿಗಳು ಹರಿದಾಡುತ್ತಿದೆ. ಇನ್ನೊಂದು ಕಡೆ ಸಮಂತಾ ಸರಣಿ ಆಫರ್ಗಳಿಗೆ ಗ್ರೀನ್ ಸಿಗ್ನಲ್ ಕೊಡುತ್ತಿದ್ದಾರೆ. ಈ ಬಗ್ಗೆನೂ ಚರ್ಚೆಯಾಗುತ್ತಿದೆ. ಸಾಲದ್ದಕ್ಕೆ ಸಮಂತಾ ಆರೋಗ್ಯ ಸರಿಯಿಲ್ಲ ಅಂತಾನೂ ವದಂತಿಗಳು ಹಬ್ಬಿವೆ. ಅಷ್ಟಕ್ಕೂ ಸಮಂತಾ ವಿಚಾರವಾಗಿ ಸೈಲೆಂಟ್ ಆಗಿದ್ದ ನೆಟ್ಟಿಗರು ಸೋಶಿಯಲ್ ಮೀಡಿಯಾದಲ್ಲಿ ಮತ್ತೆ ವೈಲೆಂಟ್ ಆಗುತ್ತಿದ್ದಾರೆ.

ಸಮಂತಾ ಅವರ ಮನೆಯಲ್ಲಿ ಇದೀಗ ನಟಿಗೆ ಮತ್ತೊಂದು ಮದುವೆಯಾಗುವಂತೆ ಒತ್ತಾಯಿಸುತ್ತಿದ್ದಾರಂತೆ ಆದರೆ ನಟಿ ಸಮಂತಾ ಮಾತ್ರ ಇದಕ್ಕೆ ಒಪ್ಪಿಗೆ ನೀಡುತ್ತಿಲ್ಲವಂತೆ. ನಟಿ ಸಮಂತಾ ಇನ್ನು ಯಾವುದೇ ಕಾರಣಕ್ಕೂ ಯಾವುದೇ ಮದುವೆ ಅಥವಾ ಪ್ರೀತಿಯಲ್ಲಿ ಆಸಕ್ತಿ ಹೊಂದಿಲ್ಲವಂತೆ. ಇದೀಗ ನಟಿ ಕೇವಲ ತಮ್ಮ ಕೆರಿಯರ್ ಬಗ್ಗೆ ಯೋಚಿಸುತ್ತಿದ್ದಾರಂತೆ.

 

ಆದರೆ ನಟಿಯ ಮನೆಯಲ್ಲಿ ಮಾತ್ರ ಮತ್ತೊಂದು ಮದುವೆಯಾಗುವಂತೆ ತುಂಬಾ ಒತ್ತಾಯ ಮಾಡುತ್ತಿದ್ದಾರಂತೆ. ಎನ್ನುವ ಸುದ್ದಿ ಸದ್ಯ ಸೋಷಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿದೆ. ಎರಡನೇ ಮದುವೆಗೆ ರೆಡಿಯಾಗುತ್ತಿದ್ದಾರೆ ಅನ್ನೋ ಮಾತು ಕೇಳಿ ಬರುತ್ತಿದೆ. ಸಮಂತಾ ಬಾಲಿವುಡ್ ನಟನೊಂದಿಗೆ ಎರಡನೇ ಮದುವೆ ಆಗಲಿದ್ದಾರೆ ಅನ್ನೋ ಮಾತು ಟಾಲಿವುಡ್ನಲ್ಲಿ ಹರಿದಾಡುತ್ತಿದೆ. ಆ ಬಾಲಿವುಡ್ ನಟ ಹೈದರಾಬಾದ್ಗೆ ಬಂದರೆ, ಸಮಂತಾ ಖರೀದಿಸಿದ ಹೊಸ ವಿಲ್ಲಾದಲ್ಲಿಯೇ ಉಳಿದುಕೊಳ್ಳುತ್ತಾರೆ ಅನ್ನೋ ಗುಸುಗುಸು ಹಬ್ಬಿದೆ.