ವಾರ್ತಾ ಮಂಜರಿ
Trending Stories, Viral News, Gossips & Everything in Kannada

ICC T20: ಟಿ20 ವಿಶ್ವಕಪ್ ಗೆ ಪಾಕಿಸ್ತಾನ ತಂಡದ ಮೆಂಟರ್ ಆಗಿ ಆಸ್ಟ್ರೇಲಿಯಾ ದಿಗ್ಗಜ ನೇಮಕ, ತಂಡ ಇನ್ನಷ್ಟು ಬಲಿಷ್ಟವಾಯ್ತು

128

ಸದ್ಯ ಇದೇ ವರುಷ ಅಕ್ಟೋಬರ್‌-ನವೆಂಬರ್‌ ಅವಧಿಯಲ್ಲಿ ಆಸ್ಟ್ರೇಲಿಯಾದ ಆತಿಥ್ಯದಲ್ಲಿ ನಡೆಯಲಿರುವ ಐಸಿಸಿ ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿ ಸಲುವಾಗಿ ಪಾಕಿಸ್ತಾನ ತಂಡ ಆಸೀಸ್‌ ದಿಗ್ಗಜ ಬ್ಯಾಟರ್‌ ಮ್ಯಾಥ್ಯೂ ಹೇಡೆನ್‌ ರವರನ್ನು ತನ್ನ ಮೆಂಟರ್‌ ಆಗಿ ತೆಗೆದುಕೊಂಡಿದೆ. ಹೌದು ಹೇಡೆನ್‌ ನೇಮಕಾತಿಯನ್ನು ಪಾಕಿಸ್ತಾನ ಕ್ರಿಕೆಟ್‌ ಮಂಡಳಿ (ಪಿಸಿಬಿ) ಶುಕ್ರವಾರ ಅಧಿಕೃತವಾಗಿ ಘೋಷಣೆ ಮಾಡಿದ್ದು ಅಂದಹಾಗೆ ಪಾಕಿಸ್ತಾನ ತಂಡದ ಕೋಚಿಂಗ್‌ ಬಳಗಕ್ಕೆ ಮ್ಯಾಥ್ಯೂ ಹೇಡೆನ್‌ ಸೇರುತ್ತಿರುವುದು ಇದು ಎರಡನೇ ಬಾರಿಯಾಗಿದೆ. ಇದಕ್ಕೂ ಮುನ್ನ 2021ರ ಐಸಿಸಿ ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿ ವೇಳೆಯೂ ಕೂಡ ಹೇಡೆನ್‌ ಪಾಕ್‌ ಪಡೆಗೆ ಮಾರ್ಗದರ್ಶಕರಾಗಿದ್ದರು. ಇನ್ನು ಆ ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದ ಪಾಕಿಸ್ತಾನ ತಂಡ ಸೂಪರ್‌-4 ಹಂತದಲ್ಲಿ ಟೀಮ್ ಇಂಡಿಯಾ ಹಾಗೂ ನ್ಯೂಜಿಲೆಂಡ್ನಂತಹ ಬಲಿಷ್ಠ ತಂಡಗಳಿಗೆ ಸೋಲುಣಿಸಿ ಫೈನಲ್‌ಗೆ ಕಾಲಿಟ್ಟಿತ್ತು. ಆದರೆ ಆ ಆವೃತ್ತಿಯ ಚಾಂಪಿಯನ್ಸ್‌ ಆಸ್ಟ್ರೇಲಿಯಾ ಎದುರು ಉಪಾಂತ್ಯದಲ್ಲಿ ಸೋತು ನಿರಾಶೆಗೊಳಗಾಗಿತ್ತು.

ಮೆಂಟರ್‌ ಆಗಿ ಪಾಕಿಸ್ತಾನ ತಂಡವನ್ನು ಮತ್ತೆ ಸೇರುತ್ತಿರುವುದಕ್ಕೆ ಸಂತಸವಿದ್ದು ಈ ಬಾರಿ ಆಸ್ಟ್ರೇಲಿಯಾದಲ್ಲಿ ಐಸಿಸಿ ಟಿ20 ಕ್ರಿಕೆಟ್ ವಿಶ್ವಕಪ್‌ ಟೂರ್ನಿ ನಡೆಯಲಿದ್ದು ಪಾಕ್‌ ತಂಡದಲ್ಲಿ ಮತ್ತೊಮ್ಮೆ ಗೆಲುವಿನ ಸಂಸ್ಕೃತಿ ತರಲು ಕಾತುರದಿಂದ ಎದುರು ನೋಡುತ್ತಿದ್ದೇನೆ. ಏಷ್ಯಾ ಕಪ್‌ 2022 ಟೂರ್ನಿಯಲ್ಲಿ ಪಾಕಿಸ್ತಾನ ತಂಡದ ಪ್ರದರ್ಶನವನ್ನು ಗಮನಿಸಿದ್ದು ಭಾನುವಾರ ಟೀಮ್ ಇಂಡಿಯಾ ವಿರುದ್ಧ ದಾಖಲಿಸಿದ ಗೆಲುವು ಅದ್ಭುತವಾಗಿತ್ತು ಎಂದು ಪಾಕ್‌ ತಂಡದ ಮೆಂಟರ್‌ ಮ್ಯಾಥ್ಯೂ ಹೇಡೆನ್‌ ಹೇಳಿದ್ದಾರೆ. ಆಸ್ಟ್ರೇಲಿಯಾದಲ್ಲಿನ ಸ್ಥಿತಿಗತಿಗಳ ಬಗ್ಗೆ ನನಗಿರುವ ಅಪಾರ ಜ್ಞಾನದಿಂದಾಗಿ ನನಗೆ ಪಾಕಿಸ್ತಾನ ತಂಡದ ಮೆಂಟರ್‌ ಆಗುವ ಮತ್ತೊಂದು ಅವಕಾಶ ಸಿಕ್ಕಿದ್ದು ಪಾಕಿಸ್ತಾನ ತಂಡದ ಡ್ರೆಸಿಂಗ್‌ ರೂಮ್‌ನಲ್ಲಿಮತ್ತೊಮ್ಮೆ ಕಾಣಿಸಿಕೊಳ್ಳಲು ಬಹಳಾ ಉತ್ಸುಕನಾಗಿದ್ದೇನೆ ಎಂದಿದ್ದಾರೆ. ಅಕ್ಟೋಬರ್‌ 15ರಂದು ಬ್ರಿಸ್ಬೇನ್‌ನಲ್ಲಿ ಹೇಡೆನ್‌ ಪಾಕ್‌ ತಂಡವನ್ನು ಸೇರಿಕೊಳ್ಳಲಿದ್ದು ಇದಕ್ಕೂ ಮುನ್ನ ಪಾಕಿಸ್ತಾನ ತಂಡ ನ್ಯೂಜಿಲೆಂಡ್‌ ಮತ್ತು ಬಾಂಗ್ಲಾದೇಶ ತಂಡಗಳನ್ನು ಒಳಗೊಂಡ ತ್ರಿಕೋನ ಟಿ20 ಕ್ರಿಕೆಟ್‌ ಸರಣಿಯಲ್ಲಿ ಆಡಲಿದೆ. ಟಿ20 ವಿಶ್ವಕಪ್‌ ಟೂರ್ನಿಗೂ ಮೊದಲು 2 ಅಭ್ಯಾಸ ಪಂದ್ಯಗಳನ್ನು ಆಡಲಿರುವ ಪಾಕಿಸ್ತಾನ ತಂಡ ಅಕ್ಟೋಬರ್‌ 23ರಂದು ಟೀಮ್ ಇಂಡಿಯಾ ಎದುರು ಮೊದಲ ಪಂದ್ಯವನ್ನಾಡಲಿದೆ.

Hayden returns as Pak team 'mentor' for T-20 World Cup - Sports - Business  Recorder

ಮ್ಯಾಥ್ಯೂ ಹೇಡೆನ್‌ ಅವರನ್ನು ಪಾಕಿಸ್ತಾನ ತಂಡಕ್ಕೆ ಮತ್ತೊಮ್ಮೆ ಸ್ವಾಗತಿಸುತ್ತಿದ್ದು ಅವರು ತಮ್ಮ ಸಾಮರ್ಥ್ಯವನ್ನು ಈಗಾಗಲೇ ಸಾಬೀತು ಪಡಿಸಿದ್ದಾರೆ. ಅವರ ಸಾಮರ್ಥ್ಯ ಮತ್ತು ಜ್ಞಾನದ ಬಗ್ಗೆ ಎಲ್ಲರಿಗೂ ತಿಳಿದಿದೆ. ಆಸ್ಟ್ರೇಲಿಯಾದಲ್ಲಿನ ಸ್ಥಿತಿಗತಿಗಳ ಬಗ್ಗೆ ಅವರಿಗೆ ಅಪಾರ ಜ್ಞಾನವಿದೆ. ಹೀಗಾಗಿ ನಮ್ಮ ತಂಡದಲ್ಲಿ ಅವರ ಉಪಸ್ಥಿತಿ ಖಂಡಿತಾ ಯಶಸ್ಸು ತಂದುಕೊಡುತ್ತದೆ ಎಂದು ನಂಬಿದ್ದೇವೆ ಎಂದು ಪಿಸಿಬಿ ಮುಖ್ಯಸ್ಥ ರಮೀಝ್ ರಾಜಾ ಹೇಳಿದ್ದಾರೆ. ಇನ್ನು ಪಾಕಿಸ್ತಾನ ತಂಡ ಏಷ್ಯಾ ಕಪ್‌ 2022 ಟೂರ್ನಿಯಲ್ಲಿ ಫೈನಲ್‌ ತಲುಪಿದ್ದು ಗ್ರೂಪ್ ಹಂತದಲ್ಲಿ ಆಡಿದ 2 ಪಂದ್ಯಗಳಲ್ಲಿ ಒಂದು ಪಂದ್ಯವನ್ನು ಗೆದ್ದಿದ್ದ ಬಾಬರ್‌ ಆಝಮ್‌ ಸಾರಥ್ಯದ ಪಾಕಿಸ್ತಾನ ತಂಡ, ಸೂಪರ್‌-4 ಹಂತದಲ್ಲಿ ಟೀಮ್ ಇಂಡಿಯಾ ಮತ್ತು ಅಫಘಾನಿಸ್ತಾನ ಎದುರು ಗೆದ್ದು ಫೈನಲ್‌ಗೆ ಅರ್ಹತೆ ಪಡೆದಿದೆ. ಸೆಪ್ಟೆಂಬರ್‌ 11ರಂದು ನಡೆಯಲಿರುವ ಫೈನಲ್‌ನಲ್ಲಿ ಶ್ರೀಲಂಕಾ ಎದುರು ಟ್ರೋಫಿಗಾಗಿ ಪೈಪೋಟಿ ನಡೆಸಲಿದೆ