ವಾರ್ತಾ ಮಂಜರಿ
Trending Stories, Viral News, Gossips & Everything in Kannada

M S Dhoni: ಏಷ್ಯಾ ಕಪ್ ನಂತರ ಕ್ರಿಕೆಟ್ ಬಿಟ್ಟು ಬೇರೆ ಆಟದಲ್ಲಿ ಆಸಕ್ತಿ ತೋರಿಸುತ್ತಿರುವ ಧೋನಿ, ವಿಡಿಯೋ ವೈರಲ್

132

ಸದ್ಯ ಕ್ರಿಕೆಟ್‌ನಿಂದ ನಿವೃತ್ತಿ ಪಡೆದ ನಂತರ ಭಾರತ ಕ್ರಿಕೆಟ್ ತಂಡಫ ಮಾಜಿ ನಾಯಕ ಮಹೇಂದ್ರ ಸಿಂಗ್‌ ಧೋನಿ ಎಲ್ಲಿದ್ದಾರೆ ಹಾಗೂ ಏನು ಮಾಡುತ್ತಿದ್ದಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮೂಡುವುದು ಸಹಜ. ಸದ್ಯ ಧೋನಿ ಕ್ರಿಕೆಟ್‌ ಹೊರತಾಗಿ ಬೇರೊಂದು ಕ್ರೀಡೆ ಬಗ್ಗೆ ಬಹಳಷ್ಟು ಆಸಕ್ತಿ ಬೆಳೆಸಿಕೊಂಡಂತೆ ಕಾಣುತ್ತಿದ್ದು ಯಾಕಂದರೆ ಧೋನಿ ಹಾಗೂ ಕಪಿಲ್‌ ದೇವ್‌ ಇಬ್ಬರೂ ಅಮೆರಿಕ ತಲುಪಿದ್ದಾರೆ.

ಹೌದು ಅಲ್ಲಿ ಯುಎಸ್‌ ಓಪನ್‌ ಟೆನಿಸ್‌ ನೋಡಲು ತೆರಳಿದ್ದು ಇಬ್ಬರೂ ಜೊತೆಯಾಗಿ ಟೆನಿಸ್‌ ವೀಕ್ಷಿಸ್ತಾ ಇರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗಿದೆ. ಆರ್ಥರ್-ಆಶ್ ಸ್ಟೇಡಿಯಂನಲ್ಲಿ ಇವರು ಹಾಜರಿದ್ದು ಪ್ರೇಕ್ಷಕರಿಂದ ಕಿಕ್ಕಿರಿದು ತುಂಬಿದ್ದ ಸ್ಟೇಡಿಯಂನಲ್ಲಿ ಧೋನಿ ಹಾಗೂ ಕಪಿಲ್‌ ದೇವ್‌ ಸಹ ಇದ್ದರು. ಪರಸ್ಪರ ಕೈಕುಲುಕುತ್ತ ಸಂಭಾಷಿಸುತ್ತಿರುವ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು ಯುಎಸ್ ಓಪನ್ ಪಂದ್ಯಗಳನ್ನು ಪ್ರಸಾರ ಮಾಡ್ತಿರೋ ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವನ್ನು ಹಂಚಿಕೊಂಡಿದೆ.

ಧೋನಿಯನ್ನು ಸ್ಟೇಡಿಯಂನಲ್ಲಿ ನೋಡಿ ಅಭಿಮಾನಿಗಳು ಸಹ ಹರ್ಷೋದ್ಘಾರ ಮಾಡಿದ್ದು ಭಾರತಕ್ಕೆ ವಿಶ್ವಕಪ್‌ ಗೆದ್ದು ಕೊಟ್ಟ ಶ್ರೇಷ್ಠ ನಾಯಕರು ಮಹೇಂದ್ರ ಸಿಂಗ್‌ ಧೋನಿ ಹಾಗೂ ಕಪಿಲ್‌ ದೇವ್‌. 1983ರಲ್ಲಿ ಕಪಿಲ್‌ ದೇವ್‌ ನಾಯಕತ್ವದಲ್ಲಿ ಭಾರತ ಮೊದಲ ಬಾರಿಗೆ ವಿಶ್ವಕಪ್ ಗೆದ್ದಿತ್ತು. ತದನಂತರ 2011 ರಲ್ಲಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಭಾರತ ಶ್ರೀಲಂಕಾವನ್ನು ಮಣಿಸಿ ವಿಶ್ವಕಪ್ ಗೆದ್ದಿದ್ದು 2007ರಲ್ಲಿ ಧೋನಿ ನಾಯಕತ್ವದಲ್ಲಿ ಟೀಂ ಇಂಡಿಯಾ ಟಿ20 ವಿಶ್ವಕಪ್ ಗೆದ್ದಿತ್ತು.

 

ಸದ್ಯ ಟಿ20 ಕ್ರಿಕೆಟ್​ ವಿಶ್ವಕಪ್​​ಗೆ ವೇಳಾಪಟ್ಟಿ ನಿಗದಿಯಾಗಿದ್ದು ಮೊದಲ ಸುತ್ತಿನ ಪಂದ್ಯಗಳು ಅಕ್ಟೋಬರ್ 16ರಿಂದ ಆರಂಭವಾಗಲಿವೆ. ಮೊದಲ ಸುತ್ತಿನ ಮೊದಲ ಪಂದ್ಯ ಶ್ರೀಲಂಕಾ ಹಾಗೂ ನಮೀಬಿಯಾ ತಂಡಗಳ ನಡುವೆ ನಡೆಯಲಿದೆ. ಅಕ್ಟೋಬರ್ 21ರವರೆಗೆ ನಡೆಯುವ ಈ ಪಂದ್ಯಗಳಲ್ಲಿ ಅರ್ಹತೆ ಪಡೆದ ತಂಡಗಳು ಸೂಪರ್​-12 ತಂಡಗಳೊಡನೆ ಆಡಲು ಅರ್ಹತೆ ಪಡೆದುಕೊಳ್ಳುತ್ತವೆ. ಮೊದಲ ಸುತ್ತಿನಲ್ಲಿ ​ಶ್ರೀಲಂಕಾ ನಮೀಬಿಯಾ ಸ್ಕಾಟ್ಲೆಂಡ್ ವೆಸ್ಟ್​ ಇಂಡೀಸ್ ತಂಡಗಳು ಆಡಲಿದ್ದು ಸೂಪರ್ 12 ಪಂದ್ಯಗಳು ಅಕ್ಟೋಬರ್ 22ರಿಂದ ಆರಂಭವಾಗಲಿದ್ದು ಮೊದಲ ಪಂದ್ಯ ನ್ಯೂಜಿಲ್ಯಾಂಡ್ ಹಾಗೂ ಆಸ್ಟ್ರೇಲಿಯಾಗಳ ನಡುವೆ ಸಿಡ್ನಿ ಕ್ರಿಕೆಟ್ ಗ್ರೌಂಡ್​ನಲ್ಲಿ ನಡೆಯಲಿದೆ. ಭಾರತ ಅಕ್ಟೋಬರ್ 23ರಂದು ಪಾಕಿಸ್ತಾನದೊಂದಿಗೆ ಮೆಲ್ಬರ್ನ್ ಕ್ರಿಕೆಟ್​ ಗ್ರೌಂಡ್​ನಲ್ಲಿ ಮೊದಲ ಪಂದ್ಯ ಆಡಲಿದೆ. ಇನ್ನು ಭಾರಿಯೂ ಧೋನಿ ಮೆಂಟರ್ ಆಗಿರುತ್ತಾರ ಕಾದು ನೋಡಬೇಕಿದೆ.