ವಾರ್ತಾ ಮಂಜರಿ
Trending Stories, Viral News, Gossips & Everything in Kannada

Iphone 14: ಐಫೋನ್ 14 ಬಿಡುಗಡೆ, ಭಾರತದ ಮಾರುಕಟ್ಟೆಯಲ್ಲಿ ಯಾವಾಗಿಂದ ಸಿಗಲಿದೆ? ಭಾರತದಲ್ಲಿ ಇದರ ಬೆಲೆ ಎಷ್ಟು?

204

ಐಫೋನ್​ 13 ಮಾರುಕಟ್ಟೆಯಲ್ಲಿ ತನ್ನದೇ ಆದ ಬೇಡಿಕೆಯನ್ನು ಸೃಷ್ಟಿಸಿಕೊಂಡಿದೆ. ಇದೀಗ ಆ್ಯಪಲ್​ ಕಂಪನಿ ಅದರ ಮುಂದುವರಿದ ಭಾಗವಾಗಿ ಐಫೋನ್ 14 ತಯಾರಿಯಲ್ಲಿ ಸಿದ್ಧತೆ ನಡೆಸುತ್ತಿದೆ. Apple iPhone 14 ಸರಣಿಯ ಬಿಡುಗಡೆಗೆ ಬಗ್ಗೆ ಹಲವು ದಿನಗಳಿಂದ ಸುದ್ದಿ ಹರಿದಾಡುತ್ತಿದೆ. ಸದ್ಯದಲ್ಲೇ ಮಾರುಕಟ್ಟೆ ಪ್ರವೇಶಿಸಲಿದೆ. ಆದರೆ ಅದಕ್ಕೂ ಮೊದಲು ಐಫೋನ್‌ 14 ವೈಶಿಷ್ಟ್ಯಗಳು ಮತ್ತು ಬೆಲೆಗಳು ಸೋರಿಕೆಯಾಗಿವೆ. ಆದರೆ ಸೋರಿಕೆಯಾಗಿರುವುದು ಆ್ಯಪಲ್​​ ಕಡೆಯಿಂದ ಅಲ್ಲ, ಟಿಪ್​ಸ್ಟರ್​​ ಕಡೆಯಿಂದ. ಐಫೋನ್ 14 ಸರಣಿಯಲ್ಲಿ ನಾಲ್ಕು ಮಾದರಿಗಳು ಬರಲಿದೆ ಎಂದು ಹೇಳಿದೆ. ಅದರಲ್ಲಿ iPhone 14, iPhone 14 Max, iPhone 14 Pro, iPhone 14 Pro Max ಇರಲಿದೆ. ಈ ನಾಲ್ಕರಲ್ಲಿ, iPhone 14 Pro Max ಬದಲಾದ ವಿನ್ಯಾಸದೊಂದಿಗೆ ಅತ್ಯುತ್ತಮ, ಅತ್ಯಂತ ದುಬಾರಿ ಎಂದು ನಿರೀಕ್ಷಿಸಲಾಗಿತ್ತು .

ಅಷ್ಟೇ ಅಲ್ಲದೆ, ಐಫೋನ್ 14 ಪ್ರೊ ಮ್ಯಾಕ್ಸ್‌ನ ಅತ್ಯಂತ ರೋಮಾಂಚಕಾರಿ ವಿನ್ಯಾಸವನ್ನು ಹೊಂದಿರಲಿದ್ದು, ನೋಡಲು ಆಕರ್ಷಕವಾಗಿರಲಿದೆ ಎಂದು ಹೇಳಲಾಗುತ್ತು. ಐಫೋನ್ ಪ್ರಿಯರಲ್ಲಿ ಬಹುನಿರೀಕ್ಷೆ ಹುಟ್ಟುಹಾಕಿದ್ದ ಆ್ಯಪಲ್ ಕಂಪೆನಿಯ ಐಫೋನ್ 14ರ ಸರಣಿಯ ಹೊಸ ಸಾಧನ ಬುಧವಾರ ಅಮೆರಿಕ ಸ್ಯಾನ್‌ಫ್ರಾನ್ಸಿಸ್ಕೊದಲ್ಲಿ ಅನಾವರಣಗೊಂಡಿದೆ. ಈ ಹೊಸ ಸಾಧನದ ಬಗ್ಗೆ ವಿಶ್ವಾದ್ಯಂತ ಎದ್ದ ಊಹಾಪೋಹ, ಸೋರಿಕೆಯಾದ ಮಾಹಿತಿ ಹತ್ತು ಹಲವು. ಆದರೆ ಕೊನೆಗೂ ಐ ಫೋನ್ ಪ್ರಿಯರ ಮನಗೆಲ್ಲಲು ಹೊರಟ ಐಫೋನ್‌ 14ಸರಣಿಯು ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಬಹು ನಿರೀಕ್ಷೆಯ Apple iPhone 14 ಸರಣಿಯ ಮೊಬೈಲ್‌ಗಳನ್ನು ಲೋಕಾರ್ಪಣೆಗೊಳಿಸಲಾಗಿದೆ.ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ಆಯಪಲ್‌ ಕಂಪನಿ ಸಿಇಒ ಟಿಮ್‌ ಕುಕ್‌ ಅವರು ಆಯಪಲ್‌ 14 ಸರಣಿಯ ಮೊಬೈಲ್‌ಗಳನ್ನು ಲೋಕಾರ್ಪಣೆ ಮಾಡಿದ್ದಾರೆ.

10 things we know about the iPhone 14 so far: launch date, price, design, specs and more

ಕ್ಯಾಮೆರಾದಲ್ಲಿ ಆಯಪಲ್‌ ಕಂಪನಿಯು ಈ ಬಾರಿ ಮಹತ್ವದ ಬದಲಾವಣೆ ಮಾಡಿದೆ. ಆಯಪಲ್‌ 14 ಪ್ರೊ ಹಾಗೂ ಪ್ರೊ ಮ್ಯಾಕ್ಸ್‌ ಎರಡೂ 48 ಮೆಗಾ ಪಿಕ್ಸೆಲ್‌ ಪ್ರೈಮರಿ ಕ್ಯಾಮೆರಾ ಹೊಂದಿವೆ. ಹಾಗೆಯೇ, ಇವುಗಳ ಸೆನ್ಸಾರ್‌ ಆಯಪಲ್‌ 13 ಪ್ರೊಗಿಂತ ಶೇ.65ರಷ್ಟು ದೊಡ್ಡದಾಗಿವೆ. ಸ್ಯಾಟಲೈಟ್‌ ಕನೆಕ್ಟಿವಿಟಿ (ಇಂಟರ್‌ನೆಟ್‌ ಇಲ್ಲದೆ ಮಾಹಿತಿ ರವಾನಿಸುವುದು ಹಾಗೂ ಸ್ವೀಕರಿಸುವುದು), ಐಫೋನ್‌ 14 ಪ್ರೊ 6.1 ಇಂಚು ಹಾಗೂ ಪ್ರೊ ಮ್ಯಾಕ್ಸ್‌ 6.7 ಇಂಚಿನ ಡಿಸ್‌ಪ್ಲೇ ಹೊಂದಿವೆ. ಇವುಗಳಲ್ಲೂ ಆಯಪಲ್‌ 13 ಪ್ರೊನಂತೆ ಎ 15 ಪ್ರೊಸೆಸರ್‌ ಇದೆ.

ಅಮೆರಿಕದಲ್ಲಿ ಇಂದು ಮುಂಜಾನೆ 10 ಗಂಟೆಗೆ ನಡೆಯಲಿರುವ ಕಾರ್ಯಕ್ರಮವನ್ನು ಭಾರತದಲ್ಲಿ ನಾವು ರಾತ್ರಿ 10.30ಕ್ಕೆ ನೋಡಬಹುದು. ಆಪಲ್‌ನ ಸಿಇಒ ಟಿಮ್‌ ಕುಕ್‌ ಐಫೋನ್‌ನ 14ನೇ ಆವೃತ್ತಿಯ ತೆರೆ ಸರಿಸಲಿರುವ ವ್ಯಕ್ತಿ. ಆಪಲ್‌ನ ಸೋಶಿಯಲ್‌ ಮೀಡಿಯಾ ಅಕೌಂಟ್‌ಗಳ ಮೂಲಕ ಇದನ್ನು ವೀಕ್ಷಿಸಬಹುದು. ಭಾರತದ ಗ್ರಾಹಕರಿಗೆ ಐಫೋನ್‌ 14 (ಪ್ರೊ) ಬೆಲೆ 79,900 ರೂ. ಆಗಲಿದೆ. ಹಾಗೆಯೇ, ಐಫೋನ್‌ 14 ಪ್ಲಸ್‌ಗೆ (ಪ್ರೊ ಮ್ಯಾಕ್ಸ್‌) 89,900 ರೂ. ಆಗಲಿದೆ. ಐಫೋನ್‌ 14 ಸೆಪ್ಟೆಂಬರ್‌ 16ರಿಂದ ಭಾರತದ ಮಾರುಕಟ್ಟೆಯಲ್ಲಿ ಲಭ್ಯವಿದ್ದರೆ, ಐಫೋನ್‌ 14 ಪ್ಲಸ್‌ ಅಕ್ಟೋಬರ್‌ 7ರಿಂದ ಲಭ್ಯವಾಗಲಿದೆ.